Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಸಖತ್ ರುಚಿಯ ಹುರುಳಿಕಾಳಿನ ಸಾರು ಮಾಡಿ..! ಆರೋಗ್ಯಕ್ಕೆ ಅದ್ಭುತ ರೆಸಿಪಿ
ನೀವು ಊಟಕ್ಕೆ ಹತ್ತು ಹಲವು ಬಗೆಯ ಸಾಂಬಾರ್ ಮಾಡಿ ಸವಿದಿರುತ್ತೇವೆ. ಹಾಗೆ ನೀವು ಹುರುಳಿಕಾಳಿನಿಂದ ವಿವಿಧ ರೀತಿಯ ಖಾದ್ಯ ಮಾಡಿ ಸವಿದಿರಬಹುದು. ಅದರಲ್ಲೂ ಹುರಳಿ ಕಾಳುಗಳು ಹೆಚ್ಚಿನ ಫೈಬರ್ ಹೊಂದಿರುವ ಕಾರಣ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಕಿಡ್ನಿ ಕಲ್ಲಿನ ಸಮಸ್ಯೆ ದೂರ ಮಾಡುತ್ತದೆ ಎನ್ನಲಾಗಿದೆ. ಆಯುರ್ವೇದದಲ್ಲಿ ಹುರುಳಿಕಾಳಿಗೆ ಬಹಳ ಮಹತ್ವವಿದೆ.
ಹುರುಳಿಕಾಳು ಮಧುಮೇಹ, ಹೃದ್ರೋಗ, ಮೂತ್ರಪಿಂಡದ ಕಲ್ಲುಗಳು, ಅಸ್ತಮಾ, ಬೊಜ್ಜು, ಶೀತ ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರವಾಗಿದೆ. ನಾವು ಹೆಚ್ಚಾಗಿ ಈ ಹುರುಳಿ ಕಾಳಿನ ಪಲ್ಯ ಮಾಡಿ ಸವಿದಿರುತ್ತೇವೆ. ಅದರ ಕಾಳಿನಲ್ಲಿ ಅದ್ಭುತ ರುಚಿ ಇರುವ ಕಾರಣ ಎಷ್ಟು ಬೇಕಾದರು ಸವಿಯುತ್ತೇವೆ. ಈ ಹುರುಳಿ ಕಾಳು ಬೇಯಿಸಿ ಅದಕ್ಕೆ ತೆಂಗಿನ ಕಾಯಿ ತುರಿ ಹಾಕಿ ಒಂದು ಒಗ್ಗರಣೆ ಹಾಕಿ ಮಾಡುವ ಪಲ್ಯ ಸಿಕ್ಕಾಪಟ್ಟೆ ರುಚಿ ನೀಡುತ್ತೆ.

ಆದ್ರೆ ಈ ಹುರುಳಿ ಕಾಳಿನಿಂದ ಮಾಡುವಂತಹ ಸಾಂಬಾರ್ ಸವಿದಿದ್ದೀರಾ? ಹುರುಳಿ ಕಾಳಿನ ಸಾಂಬಾರ್ ನೀವು ಎಲ್ಲಿಯೂ ಸವಿಯದ ರುಚಿ ನೀಡುತ್ತೆ. ಅದರ ರುಚಿಗೆ ನೀವು ಮತ್ತೆ ಮತ್ತೆ ಈ ಸಾಂಬಾರ್ ಮಾಡಲು ಮುಂದಾಗುತ್ತೀರಿ. ಹಾಗೆ ನಾವು ಮೇಲೆ ಹೇಳಿದಂತೆ ನಿಮ್ಮ ಆರೋಗ್ಯಕ್ಕೂ ಬಹಳ ಉತ್ತಮ. ಹೀಗಾಗಿ ನಾವಿಂದು ಈ ಹುರುಳಿ ಕಾಳಿನ ಸಾಂಬಾರ್ ಮಾಡುವ ಕುರಿತಂತೆ ತಿಳಿದುಕೊಳ್ಳೋಣ.
ಹುರುಳಿ ಕಾಳಿನ ಸಾಂಬಾರ್ ಮಾಡುವುದು ಹೇಗೆ? ಹುರುಳಿ ಕಾಳಿನ ಸಾಂಬಾರ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತ ಮಾಹಿತಿ ನಾವಿಂದು ತಿಳಿದುಕೊಳ್ಳೋಣ.
ಹುರುಳಿ ಕಾಳಿನ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಮೊಳಕೆ ಬರಿಸಿದ ಹುರುಳಿ ಕಾಳು
- ಟೊಮೆಟೋ
- ಈರುಳ್ಳಿ
- ಶುಂಠಿ
- ಬೆಳ್ಳುಳ್ಳಿ
- ಒಣ ಮೆಣಸು
- ಅರಶಿಣ
- ತೆಂಗಿನಕಾಯಿ ತುರಿ
- ಧನಿಯಾ ಪುಡಿ
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
- ಚಕ್ಕೆ
- ಲವಂಗ
- ಸೋಂಕಾಳು
ಹುರುಳಿ ಕಾಳಿನ ಸಾರು ಮಾಡುವ ವಿಧಾನವೇನು?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ ನಂತರ ಇದಕ್ಕೆ ಈರುಳ್ಳಿ, ಒಣ ಮೆಣಸು ಹಾಕಿಕೊಂಡು ಫ್ರೈ ಮಾಡಿ. ನಂತರ ಇದಕ್ಕೆ ಚಕ್ಕೆ, ಗಸೆಗಸೆ, ಲವಂಗ, ಸೋಂಕಾಳು ಹಾಕಿಕೊಂಡು ಉರಿದುಕೊಳ್ಳಿ. ನಂತರ ಶುಂಠಿ, ಬೆಳ್ಳುಳ್ಳಿ, ಧನಿಯಾ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಆಫ್ ಮಾಡಿಕೊಂಡು ಮಸಾಲೆ ತಣ್ಣಗಾಗಲು ಬಿಡಿ.
ನಂತರ ಈ ಮಸಾಲೆಯನ್ನು ಮಿಕ್ಸಿ ಜಾರ್ಗೆ ಹಾಕಿ ಇದಕ್ಕೆ ತೆಂಗಿನ ಕಾಯಿ ತುರಿ, ಟೊಮೆಟೋ, ಕೊತ್ತಂಬರಿ ಸೊಪ್ಪು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಈಗ ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕರಿವೇವು ಹಾಕಿಕೊಂಡು ನಂತರ ಮೊಳಕೆ ಬರಿಸಿರುವ ಹುರುಳಿ ಕಾಳನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಇದಕ್ಕೆ ನಿಮ್ಮ ಇಷ್ಟದ ಯಾವುದಾದರು ತರಕಾರಿ ಹಾಕಿಕೊಳ್ಳಬಹುದು. ಹಾಗದೆ ಇದ್ದರೂ ನಡೆಯುತ್ತದೆ. ಇದಕ್ಕೆ ಅರಶಿಣ, ಉಪ್ಪು ಹಾಕಿಕೊಂಡು ಬೇಯಲು ಬಿಡಿ. 3 ನಿಮಿಷದ ಬಳಿಕ ಇದಕ್ಕೆ ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿಕೊಂಡು ನೀರು ಹಾಕಿ ಬೇಯಲು ಬಿಡಿ. ಕುದಿಬಂದ ಬಳಿಕ ಕೈ ಆಡಿಸಿ ಮತ್ತೆ ಬೇಕಾದರೆ ನೀರು ಹಾಕಿಕೊಳ್ಳಿ. ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ಮುಚ್ಚಳ ಮುಚ್ಚಿ ಮೂರು ಸೀಟಿ ಹೊಡೆಸಿಕೊಳ್ಳಿ.
ನಂತರ ತಣ್ಣಗಾದ ಬಳಿಕ ಮತ್ತೆ ಬೇಕಾದರೆ ಕುದಿಸಿಕೊಳ್ಳಿ. ಇಲ್ಲವೆ ಒಲೆ ಆಫ್ ಮಾಡಿಕೊಂಡು ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಹುರುಳಿಕಾಳಿನ ಸಾರು ರೆಡಿಯಾಗುತ್ತದೆ. ನೀವು ಸಹ ಈ ರೆಸಿಪಿಯನ್ನು ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications
