Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನಿಮಿಷದಲ್ಲಿ ರೆಡಿ ಮಾಡಿ ಹುಳಿ ಅನ್ನ: ತಿಂಗಳ ಕಾಲ ಇಡಬಹುದು ಈ ಗೊಜ್ಜು!
ನೀವು ಬೆಳಗ್ಗೆ ತಿಂಡಿಗೆ ರುಚಿ ರುಚಿಯಾದ ತಿನಿಸು ಮಾಡಿ ಸವಿಯುವ ಬಯಕೆ ಹೊಂದಿದ್ದರೆ ಇದಕ್ಕಾಗಿ ಹಲವು ರೀತಿಯ ಖಾದ್ಯ ಟ್ರೈ ಮಾಡಿರುತ್ತೀರಿ. ಹಾಗೆ ರುಚಿ ರುಚಿಯಾದ ಖಾದ್ಯಗಳ ಪೈಕಿ ಹಲವರು ರೈಸ್‌ನಿಂದ ಮಾಡುವ ತಿನಿಸುಗಳ ಸವಿಯಲು ಬಯಸುವುದು ಹೆಚ್ಚು. ಅದ್ರಲ್ಲೂ ರೈಸ್‌ನಿಂದ ಮಾಡುವ ಹಲವು ಖಾದ್ಯಗಳು ಮಧ್ಯಾಹ್ನದ ಊಟದ ಸಮಯಕ್ಕೂ ಬಾಕ್ಸ್‌ಗೆ ಹಾಕಿ ಸವಿಬಹುದು. ಹಾಗೆ ಇದನ್ನು ಮಾಡಲು ಹೆಚ್ಚು ಸಮಯವೂ ಹಿಡಿಯದ ಕಾರಣ ಸುಲಭವಾಗಿ ಮಾಡಿ ಮುಗಿಸಬಹುದು.
ರೈಸ್‌ನಿಂದ ಮಾಡುವ ಪಲಾವ್, ಚಿತ್ರಾನ್ನ, ಪುಳಿಯೋಗರೆ, ವಾಂಗೀಬಾತ್, ರೈಸ್ ಬಾತ್ ಸೇರಿದಂತೆ ಹಲವು ರೀತಿಯ ಖಾದ್ಯವು ಎಲ್ಲರಿಗೂ ಇಷ್ಟವಾಗೋದು ನೋಡಬಹುದು. ಹಾಗೆ ನಾವಿಂದು ಇಂತಹ ರುಚಿಯ ಹೊಸ ಬಗೆಯ ರೈಸ್ ರೆಸಿಪಿ ಮಾಡುವ ಕುರಿತಾಗಿ ಹೇಳಲಿದ್ದೇವೆ. ಅದ್ರಲ್ಲೂ ಹುಳಿ ಅನ್ನ ಮಾಡಿದರೆ ಎಲ್ಲರಿಗೂ ಇಷ್ಟವಾಗೋದು ಖಚಿತ.

ಹೀಗಾಗಿ ನಾವಿಂದು ಸುಲಭವಾಗಿ ಮನೆಯಲ್ಲಿ ಮಾಡುವಂತಹ ರುಚಿ ರುಚಿಯ ಈ ಹುಳಿ ಅನ್ನ ಮಾಡುವ ಕುರಿತು ತಿಳಿಯೋಣ. ಈ ಹುಳಿ ಅನ್ನದ ಗೊಜ್ಜನ್ನು ಹಲವು ದಿನಗಳ ಕಾಲ ಇಟ್ಟು ಸವಿಯಬಹುದು. ಅದ್ರಲ್ಲೂ ಈ ಗೊಜ್ಜು ಬಳಸಿ ನಿಮಗೆ ಬೇಕಾದ ಸಮಯದಲ್ಲಿ ಹುಳಿ ಅನ್ನ ಮಾಡಿ ಸವಿಯಬಹುದು. ಹಾಗಾದ್ರೆ ಈ ಸುಲಭದ ಹುಳಿ ಅನ್ನ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಹುಳಿ ಅನ್ನ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಬೇಳೆ
- ಉದ್ದಿನ ಬೇಳೆ
- ಕಾಳು ಮೆಣಸು
- ಸಾಸಿವೆ
- ಜೀರಿಗೆ
- ಕರಿಬೇವು
- ಒಣ ಮೆಣಸು
- ಉಪ್ಪು ಎಣ್ಣೆ
- ಬೆಳ್ಳುಳ್ಳಿ
- ಕಡಲೆ ಬೀಜ
- ಅರಶಿಣ
- ಹುಳಿ ಅನ್ನ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಮಿಕ್ಸ್ ಮಾಡುತ್ತಾ ಹುರಿದುಕೊಳ್ಳಿ. ಇದಕ್ಕೆ ಕಾಳು ಮೆಣಸು, ಸಾಸಿವೆ, ಜೀರಿಗೆ, ಕರಿಬೇವು, ಒಣ ಮೆಣಸು ಹಾಕಿ ಹುರಿದುಕೊಳ್ಳಿ. ನಂತರ ಒಲೆ ಆಫ್ ಮಾಡಿ ತಣ್ಣಗಾಗಲು ಬಿಟ್ಟು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ತೆಗೆದಿಟ್ಟುಕೊಳ್ಳಿ.
ಈಗ ಒಂದು ಬೌಲ್‌ಗೆ ಹುಣಸೆ ಹುಳಿಯನ್ನು ನೆನೆಸಿಟ್ಟುಕೊಳ್ಳಿ. ಒಲೆ ಮೇಲ ಒಂದು ಪಾತ್ರೆ ಇಟ್ಟು ಎಣ್ಣೆ ಹಾಕಿ ಬಳಿಕ ಸಾಸಿವೆ, ಕಡಲೆ ಬೀಜ, ಕಡಲೆ ಬೇಳೆ, ಉದ್ದಿನ ಬೇಳೆ, ಒಣ ಮೆಣಸು, ಕರಿಬೇವು, ಬೆಳ್ಳುಳ್ಳಿ ಹಾಕಿ ಮಿಕ್ಸ್ ಮಾಡುತ್ತಾ ಹುರಿದುಕೊಳ್ಳಿ. ಈಗ ಹುಳಿ ನೀರನ್ನು ಇದಕ್ಕೆ ಸೇರಿಸಿಕೊಳ್ಳಿ. ಅನಂತರ 2 ನಿಮಿಷ ಕುದಿಬರಲು ಬಿಡಿ.
ಇದಕ್ಕೆ ಅರಶಿಣ, ಉಪ್ಪು ಸಹ ಸೇರಿಸಿಕೊಳ್ಳಿ. ಈಗ ಈ ಗೊಜ್ಜು ಕುದಿಬರಲು ಬಿಡಿ. ಈಗ ಮೊದಲು ಮಾಡಿದ್ದ ಪುಡಿಯನ್ನ ತೆಗೆದುಕೊಂಡು 2 ಸ್ಪೂನ್ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. 1 ನಿಮಿಷ ಬೇಯಿಸಿದ ಬಳಿಕ ಉರಿ ಸಣ್ಣ ಮಾಡಿಕೊಳ್ಳಿ. ಈಗ ಮೊದಲು ಮಾಡಿಕೊಂಡಿರುವ ಹುಡಿ ಹುಡಿಯಾದ ಅನ್ನವನ್ನು ಈ ಗೊಜ್ಜಿಗೆ ಹಾಕಿಕೊಂಡು ಮಿಶ್ರಣ ಮಾಡಿ.
ಮಸಾಲೆ ಚೆನ್ನಾಗಿ ಹಿಡಿಯುವಂತೆ ಅನ್ನವನ್ನು ಕಲಸಿಕೊಳ್ಳಿ. ಈ ಗೊಜ್ಜನ್ನು ಹೆಚ್ಚಾಗಿ ಮಾಡಿಕೊಂಡು ಇಟ್ಟುಕೊಂಡರೆ ಹಲವು ದಿನಗಳ ಕಾಲ ಸವಿಯಬಹುದು. ಈ ರೈಸ್ ಮಿಕ್ಸ್ ಮಾಡಿ ಬೆಳಗ್ಗೆ ತಿಂಡಿಗೆ ಹಾಗೆ ಬಾಕ್ಸ್‌ಗೂ ಸಹ ಇದನ್ನು ಸವಿಯಲು ನೀಡಬಹುದು. ಬಹಳ ರುಚಿಯಾದ ಪುಳಿಯೋಗರೆಯಂತಹ ರುಚಿಯನ್ನೇ ಇದು ನೀಡಲಿದೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications
