Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
5 ನಿಮಿಷದಲ್ಲಿ ಬ್ರೇಕ್ಫಾಸ್ಟ್ ಮಾಡಬೇಕಾ...?ಇಲ್ಲಿದೆ ಟೇಸ್ಟಿ ಹುಳಿ ಅವಲಕ್ಕಿ!
ಬೆಳಗ್ಗೆ ತಿಂಡಿಗೆ ನಾವು ಹಲವು ರೀತಿಯ ಖಾದ್ಯಗಳ ಮಾಡಿ ಸವಿಯುವುದು ನೋಡಬಹುದು. ಅದ್ರಲ್ಲೂ ಸುಲಭವಾಗಿ ಕಡಿಮೆ ಸಮಯದಲ್ಲಿ 5 ನಿಮಿಷದೊಳಗೆ ರೆಡಿ ಮಾಡುವಂತಹ ಖಾದ್ಯ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಬೆಳಗ್ಗೆ ಸಮಯದಲ್ಲಿ ಗಡಿಬಿಡಿ ಇದ್ದಾಗ ಸುಲಭದಲ್ಲಿ ಯಾವುದಾದರು ತಿಂಡಿಯನ್ನು ಮಾಡಿ ಸವಿಯಲು ಇಷ್ಟಪಡುವವರು ಅವಲಕ್ಕಿಯಿಂದ ಮಾಡುವ ಹಲವು ಖಾದ್ಯ ಮಾಡುವುದು ನೋಡಬಹುದು.
ಅದ್ರಲ್ಲೂ ನಾವಿಂದು ಹುಳಿ ಅವಲಕ್ಕಿ ಮಾಡುವ ಕುರಿತು ತಿಳಿದುಕೊಳ್ಳೋಣ. ಅವಲಕ್ಕಿಯಲ್ಲಿ ಹಲವು ರೀತಿಯ ಖಾದ್ಯ ಮಾಡಿ ಸವಿಯುವುದು ಕಾಮನ್. ಅವಲಕ್ಕಿ ಒಗ್ಗರಣೆ, ಅವಲಕ್ಕಿ ಗೊಜ್ಜು, ಅವಲಕ್ಕಿ ಹುಸ್ಲಿ, ಮೊಸರು ಅವಲಕ್ಕಿ ಹೀಗೆ ಹತ್ತು ಹಲವು ರೀತಿಯಾಗಿ ಅವಲಕ್ಕಿ ಖಾದ್ಯ ಸವಿಯಬಹುದು. ಆದ್ರೆ ನಾವಿಂದು ಕಡಿಮೆ ಸಮಯದಲ್ಲಿ ಹುಳಿ ಅವಲಕ್ಕಿ ಮಾಡುವ ಕುರಿತು ತಿಳಿಯೋಣ.

ಈ ರೀತಿ ಅವಲಕ್ಕಿಯ ತಿಂಡಿ ಮನೆಯವರಿಗೆಲ್ಲ ಇಷ್ಟವಾಗುತ್ತೆ. ಮಕ್ಕಳು ಕೂಡ ಇದನ್ನ ಇಷ್ಟಪಟ್ಟು ಸವಿಯುತ್ತಾರೆ. ಹಾಗೆ ನೀವು ಗಡಿಬಿಡಿಯ ಸಮಯದಲ್ಲೂ ಇದನ್ನು ನಿಮಿಷದಲ್ಲಿ ರೆಡಿ ಮಾಡಬಹುದು. ಹಾಗಾದ್ರೆ ಈ ಅವಲಕ್ಕಿ ಹುಳಿ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿಯೋಣ. ಹುಳಿ ಅವಲಕ್ಕಿ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿಯಿರಿ.
ಹುಳಿ ಅವಲಕ್ಕಿ ಮಾಡಲು ಬೇಕಾಗುವ ಪದಾರ್ಥಗಳು
- ಅವಲಕ್ಕಿ
- ಕೆಡಲೆ ಬೇಳೆ
- ಉದ್ದಿನ ಬೇೆಳೆ
- ಇಂಗು
- ಸಾಸಿವೆ
- ಒಣ ಮೆಣಸು
- ಅರಶಿಣ
- ಉಪ್ಪು
- ಬೆಲ್ಲ
- ಎಣ್ಣೆ
- ಕರಿಬೇವು
- ಶೇಂಗಾ
- ಕೊತ್ತಂಬರಿ ಸೊಪ್ಪು
- ತೆಂಗಿನಕಾಯಿ ತುರಿ
ಹುಳಿ ಅವಲಕ್ಕಿ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದು ಬಿಸಿಯದಾಗ 5 ಒಣ ಮೆಣಸು, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಎಣ್ಣೆ ಬಳಸದೆಯೇ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದು ಫ್ರೈ ಮಾಡಿದ ಬಳಿಕ ಒಲೆ ಆಫ್ ಮಾಡಿಕೊಂಡು ತಣ್ಣಗಾಲು ಬಿಡಿ. ಸ್ವಲ್ಪ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಈ ಎಲ್ಲಾ ಪದಾರ್ಥಗಳ ಹಾಕಿ ರುಬ್ಬಿಕೊಳ್ಳಬೇಕು. ಇದು ಮಸಾಲ ಪುಡಿಯಂತೆ ತರಿತರಿಯಾಗಿರಲಿ.
ಈಗ 2 ಕಪ್ ಗಟ್ಟಿ ಅವಲಕ್ಕಿಯನ್ನು ಒಂದು ಪಾತ್ರೆಗೆ ಹಾಕಿ ನೀರಿನಲ್ಲಿ ನೆನೆಸಿಡಬೇಕು. 10 ನಿಮಿಷ ನೆನೆಸಿಡಬೇಕು. ಈಗ ಒಲೆ ಮೇಲೆ ಇಟ್ಟಿರುವ ಬಾಣಲೆಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಶೇಂಗಾ ಹಾಕಿ ಹುರಿದುಕೊಳ್ಳಬೇಕು. ನಿಮಿಷ ಬಿಟ್ಟು ಒಂದೊಂದು ಚಮಚ ಕಡಲೆ ಬೇಳೆ, ಸಾಸಿವೆ, ಉದ್ದಿನ ಬೇಳೆ, ಒಣ ಮೆಣಸು ಹಾಕಿ.
ಬಳಿಕ ಇದಕ್ಕೆ ಕರಿಬೇವು, ಅರಿಶಿಣ ಪುಡಿ, ಇಂಗು ಕೂಡ ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಬಳಿಕ ಇದಕ್ಕೆ ಉಪ್ಪು, ಬೆಲ್ಲ ಹಾಗೆ ನೆನೆಸಿಟ್ಟಿರುವ ಹುಣಸೆ ಹುಳಿಯ ನೀರು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಮೊದಲು ನೆನೆಸಿಟ್ಟಿದ್ದ ಅವಲಕ್ಕಿಯನ್ನು ನೀರಿನಿಂದ ತೆಗೆದು ಈ ಬಾಣಲೆಗೆ ಹಾಕಿಕೊಳ್ಳಿ.
ಹಾಗೆ ಮುಚ್ಚಳ ಮುಚ್ಚಿ 2 ನಿಮಿಷ ಬಿಡಿ. ನಂತರ ಮುಚ್ಚಳ ತೆಗೆದು ರುಬ್ಬಿಕೊಂಡಿದ್ದ ಮಸಾಲೆ ಸೇರಿಸಿಕೊಂಡು ಹಾಗೆ ತೆಂಗಿನಕಾಯಿ ತುರಿ ಹಾಗೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಈ ಹುಳಿ ಅವಲಕ್ಕಿ ರೆಡಿಯಾಗುತ್ತದೆ. ನೀವು ಕೂಡ ಬ್ರೇಕ್ ಫಾಸ್ಟ್ಗೆ ಈ ರೆಸಿಪಿ ಟ್ರೈ ಮಾಡಿ ನೋಡಿ. ಇದನ್ನು ಸಂಜೆಯ ಸ್ನ್ಯಾಕ್ಸ್ ಆಗಿಯೂ ಕೂಡ ಸವಿಯಬಹುದು.



Click it and Unblock the Notifications
