Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹೋಟೆಲ್ ರೀತಿ ಸ್ಪೆಷಲ್ ಮೊಸರು ವಡೆ ಮಾಡಿ! ಅತ್ಯುತ್ತಮ ರುಚಿ ತಿಂಡಿ!
ನೀವು ಬೆಳಗ್ಗೆ ತಿಂಡಿ ಸವಿಯಲು ಹೋಟೆಲ್ಗೆ ಭೇಟಿ ನೀಡಿದ್ರೆ ಹತ್ತಾರು ಬಗೆಯ ಖಾದ್ಯಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ಆದ್ರೆ ನೀವು ಬಾಯಿ ರುಚಿಗೆ ಯಾವುದಾದರು ತಿಂಡಿ ಸವಿಯಲು ಇಷ್ಟಪಡುವುದಾದರೆ ದೋಸೆ, ವಡೆ, ಬನ್ಸ್, ಪೂರಿ ಹೀಗೆ ಕರಿದ ತಿಂಡಿಗಳ ಸವಿಯುತ್ತೀರಿ. ಹಾಗೆ ಹಲವು ಬಗೆಯ ವಿಶೇಷ ಖಾದ್ಯಗಳ ಸವಿದು ನೋಡಲು ಮುಂದಾಗುವುದು ಕೂಡ ನೋಡಬಹುದು. ಇನ್ನು ಹಲವರು ಹೋಟೆಲ್ ರುಚಿಯಲ್ಲಿ ಸವಿಯಲು ಆಯ್ಕೆ ಮಾಡುವ ಒಂದು ಖಾದ್ಯ ಅಂದ್ರೆ ಅದು ಮೊಸರು ವಡೆ.
ಬೆಂಗಳೂರು ಸೇರಿ ಹಲವು ಕಡೆಗಳಲ್ಲಿ ಇದನ್ನು ದಹಿ ವಡಾ ಅಂತಲೂ ಕರೆಯುತ್ತಾರೆ. ಹೋಟೆಲ್ನಲ್ಲಿ ಈ ಮೊಸರು ವಡೆ ಸವಿಯೋದು ಬಹಳ ರುಚಿಯಾಗಿರುತ್ತೆ. ಬಹುತೇಕರು ಮೊಸರು ವಡೆ ಹಾಗೂ ಖಾರ ಖಾರದ ಸೇವ್ ಜೊತೆಗೆ ಅದನ್ನು ಸವಿಯಲು ಮುಂದಾಗುವುದು ನೋಡಬಹುದು. ಆದ್ರೆ ಹೋಟೆಲ್ ಹೊರತುಪಡಿಸಿ ನಾವಿಂದು ಮನೆಯಲ್ಲೇ ಈ ಮೊಸರು ವಡೆ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.

ಮೊಸರು ವಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಢುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊಸರು ವಡೆ ಮಾಡಲು ಬೇಕಾಗುವ ಪದಾರ್ಥಗಳು
- ಉದ್ದಿನ ಬೇಳೆ
- ಹಸಿ ಮೆಣಸು
- ಕರಿಬೇವು
- ಸಕ್ಕರೆ
- ಉಪ್ಪಿ
- ಮೊಸರು
- ಶುಂಠಿ
- ತೆಂಗಿನ ಕಾಯಿ
- ಕಾಳು ಮೆಣಸು
- ಇಂಗು
- ಜೀರಿಗೆ
- ಸಾಸಿವೆ
ಮೊಸರು ವಡೆ ಮಾಡುವ ವಿಧಾನವೇನು?
ಮೊದಲು ಒಂದು ಕಪ್ ಉದ್ದನ್ನು ತೊಳೆದು 5 ಗಂಟೆಯಾದರು ನೆನೆಸಿಡಬೇಕು. 5 ಗಂಟೆಯ ಬಳಿಕ ನೆನೆಸಿಟ್ಟ ಉದ್ದನ್ನು ಮಿಕ್ಸಿ ಜಾರ್ಗೆ ಹಾಕಿ ರುಬ್ಬಿಕೊಳ್ಳಬೇಕು. ಬಹಳ ನುಣ್ಣಗೆ ರುಬ್ಬಬೇಕಾದ ಕಾರಣ ಸ್ವಲ್ಪ ನೀರು ಕೂಡ ಹಾಕಿಕೊಂಡು ರುಬ್ಬಿಕೊಳ್ಳಿ. ಚೆನ್ನಾಗಿ ರುಬ್ಬಿದ ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಈ ಹಿಟ್ಟು ಗಟ್ಟಿಯಾಗಿರಲಿ. ನಂತರ ಜೀರಿಗೆ, ಕಾಳು ಮೆಣಸು ಕುಟ್ಟಿ ಇದಕ್ಕೆ ಹಾಕಿಕೊಳ್ಳಿ. ಹಾಗೆ ಕರಿಬೇವು, ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಹಾಕಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಳ್ಳಿ. ಈಗ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 3 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ತೆಂಗಿನಕಾಯಿ ಇದ್ದರೆ ಚಿಕ್ದದಾಗಿ ಕತ್ತರಿಸಿಕೊಂಡು ಹಾಕಿಕೊಳ್ಳಬಹುದು. ಚೆನ್ನಾಗಿ ಮೃದುವಾಗಿ ಹಿಟ್ಟನ್ನು ಹದ ಮಾಡಿಕೊಳ್ಳಿ. ಈಗ ಹಿಟ್ಟನ್ನು ಉಂಡೆ ಮಾಡಿಕೊಂಡು ಮಧ್ಯದಲ್ಲಿ ತೂತು ಮಾಡಿಕೊಂಡು ಬಾಣಲೆಯಲ್ಲಿ ಎಣ್ಣೆ ಕಾದಿದ್ದರೆ ಅದಕ್ಕೆ ಹಾಕಿಕೊಳ್ಳಿ. ಒಂದು ಬಾರಿಗೆ ಎರಡರಿಂದ ಮೂರು ವಡೆಯನ್ನು ಹಾಕಿಕೊಳ್ಳಿ. ಈ ವಡೆ ಚೆನ್ನಾಗಿ ಕರಿಯಬೇಕು. ಒಳಗೆ ಹಸಿ ಇರಬಾರದು ಹಾಗೆ ಕರಿದುಕೊಳ್ಳಬೇಕು.
ಈಗ ಈ ವಡೆಗಳನ್ನು ತೆಗೆದು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿಕೊಳ್ಳಬೇಕು. ಈಗ ಒಂದು ಬೌಲ್ಗೆ ಅರ್ಧ ಲೀಟರ್ ಮೊಸರು, 2 ಸ್ಪೂನ್ ಸಕ್ಕರೆ, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಮಿಕ್ಸ್ ಮಾಡಿದ ಬಳಿಕ ಇದಕ್ಕೆ ಸ್ವಲ್ಪ ನೀರು ಹಾಕಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಅದಕ್ಕೆ, ಸಾಸಿವೆ, ಜೀರಿಗೆ, ಶುಂಠಿ, ಹಸಿ ಮೆಣಸು, ಕರಿಬೇವು, ಇಂಗು ಹಾಕಿಕೊಂಡು ಅದನ್ನು ಮೊಸರಿಗೆ ಸೇರಿಸಿಕೊಂಡು ಮಿಕ್ಸ್ ಮಾಡಿ. ಈಗ ನೆನೆಸಿರುವ ಉದ್ದಿನ ವಡೆಯನ್ನು ಈ ಮೊಸರಿಗೆ ಹಾಕಿಕೊಳ್ಳಿ. ಈ ವಡೆ ಮೊಸರಿನೊಂದಿಗೆ ಚೆನ್ನಾಗಿ ಬೆರೆಯಬೇಕು. ಸುಮಾರು ಅರ್ಧ ಗಂಟೆಯಾದರು ಹಾಗೆಯೆ ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಈ ಮೊಸರು ವಡೆ ರೆಡಿಯಾಗುತ್ತದೆ. ನೀವು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಿ.



Click it and Unblock the Notifications
