Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಹೋಟೆಲ್ ರೀತಿ ಮನೆಯಲ್ಲೇ ವಾಂಗಿಬಾತ್ ಮಾಡಿ..! ಹೇಗೆ ಮಾಡೋದು?
ನೀವು ನಿತ್ಯ ಬೆಳಗ್ಗೆ ತಿಂಡಿಗಾಗಿ ವಿವಿಧ ರುಚಿಯ ಖಾದ್ಯಗಳ ಮಾಡಿ ಸವಿಯಲು ಮುಂದಾಗುವವರಾಗಿದ್ದರೆ ಬೆಳಗ್ಗೆ ಎದ್ದಾಗ ಈ ದಿನ ತಿಂಡಿಗೆ ಏನು ಮಾಡಬೇಕು ಎಂಬ ಪ್ರಶ್ನೆ ಮೂಡುವುದು ಸಹಜ. ಹಾಗೆ ಯಾವ ತಿಂಡಿ ಮಾಡಿದರೆ ಮನೆ ಮಂದಿಯಲ್ಲ ಕುಳಿತು ಸವಿಯುತ್ತಾರೆ ಅನ್ನೋದು ಕುಡ ಮುಖ್ಯವಾಗುತ್ತೆ. ಅದರಲ್ಲೂ ಹೋಟೆಲ್ ರುಚಿಯ ಖಾದ್ಯ ಮನೆಯಲ್ಲೇ ರೆಡಿಯಾದರೆ ಹೇಗೆ.
ಹೌದು ಹೋಟೆಲ್ನಲ್ಲಿ ನೀಡುವಂತಹ ರುಚಿ ರುಚಿ ವಾಂಗಿಬಾತ್ ಮನೆಯಲ್ಲೇ ಮಾಡಿ ಸವಿದರೆ ಅದರ ರುಚಿಗೆ ಎಲ್ಲರು ಫಿದಾ ಆಗುತ್ತಾರೆ. ಅದರಲ್ಲೂ ಈ ವಾಂಗಿಬಾತ್ ಅಂದರೆ ಎಲ್ಲರಿಗೂ ಇಷ್ಟ. ಬೆಳಗ್ಗೆ ತಿಂಡಿ ಮಾತ್ರವಲ್ಲ ಮಧ್ಯಾಹ್ನದ ಊಟದ ಸಮಯದಕ್ಕೆ ಬಾಕ್ಸ್ನಲ್ಲಿ ಹಾಕಿಕೊಂಡು ಸವಿಯಬಹುದು, ಮಕ್ಕಳಿಗೂ ಕೂಡ ಇಷ್ಟವಾಗುವಂತಹ ಖಾದ್ಯ ಇದು.

ಹಾಗಾದ್ರೆ ನಾವಿಂದು ಹೋಟೆಲ್ ಸ್ಟೈಲ್ನಲ್ಲಿ ಈ ವಾಂಗಿಬಾತ್ ಮಾಡುವುದನ್ನು ತಿಳಿದುಕೊಳ್ಳೋಣ. ಮನೆಯಲ್ಲಿಯೇ ಬ್ರೇಕ್ಫಾಸ್ಟ್ಗೆ ವಾಂಗಿಬಾತ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವಾಂಗಿಬಾತ್ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ
- ಬಿಳಿ ಬದನೆಕಾಯಿ
- ಈರುಳ್ಳಿ
- ಮೆಂತ್ಯ ಸೊಪ್ಪು
- ತೆಂಗಿನಕಾಯಿ ತುರಿ
- ಮೆಂತ್ಯ
- ಹಸಿ ಬಟಾಣಿ
- ಒಣ ಮೆಣಸಿನಕಾಯಿ
- ಟೊಮೆಟೋ
- ಏಲಕ್ಕಿ
- ಲವಂಗ
- ದಾಲ್ಚಿನ್ನಿ
- ಕಲ್ಲು ಹೂವು
- ಶುಂಠಿ
- ಧನಿಯಾ ಕಾಳು
- ಸೋಂಪಿನ ಕಾಳು
- ಅರಿಶಿನ ಪುಡಿ
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ವಾಂಗಿಬಾತ್ ಮಾಡುವ ವಿಧಾನವೇನು?
ಬಳಿ ಬದನೆಕಾಯಿಯನ್ನು ಕತ್ತರಿಸಿಕೊಂಡು ನೀರಿನಲ್ಲಿ ಹಾಕಿಡಿ. ಬಾಣಲೆ ಪಲೆ ಮೇಲೆ ಇಟ್ಟು ಅದಕ್ಕೆ ಈರುಳ್ಳಿ, ಮೆಣಸು, ಬೆಳ್ಳುಳ್ಳಿ ಶುಂಠಿ, ಧನಿಯಾ ಕಾಳು, ಅರಶಿಣ ಪುಡಿ, ಇಂಗು, ಏಲಕ್ಕಿ, ಮೊಗ್ಗು, ಲವಂಗ, ದಾಲ್ಚಿನ್ನಿ ಹಾಕಿಕೊಂಡು ಸೋಂಕಾಳು ಸಹ ಸ್ವಲ್ಪ ಹಾಕಿ ಎಣ್ಣೆ ಹಾಕಿ ಒಲೆ ಹಚ್ಚಿಕೊಂಡು ನಿಧಾನವಾಗಿ ಹುರಿದುಕೊಳ್ಳಿ. 2 ರಿಂದ 3 ನಿಮಿಷ ಹುರಿದ ಬಳಿಕ ಇದಕ್ಕೆ ತೆಂಗಿನಕಾಯಿ ತುರಿ ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ.
ಈ ಪದಾರ್ಥಗಳು ತಣ್ಣಗಾಗಲು ಬಿಟ್ಟು ಮಿಕ್ಸಿ ಜಾರ್ಗೆ ಹಾಕಿಕೊಂಡು ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು. ಈ ಪೇಸ್ಟ್ ರೆಡಿ ಆದ ಬಳಿಕ ಬೌಲ್ಗೆ ಹಾಕಿಡಿ. ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ, ಎಣ್ಣೆ ಹೆಚ್ಚಾಗಿ ಹಾಕಿಕೊಳ್ಳಿ. ಇದಕ್ಕೆ ಚಕ್ಕೆ ಲವಂಗ, ಮೊಗ್ಗು, ಸೋಂಕಾಲು, ಮೆಂತ್ಯ ಸೊಪ್ಪು ಸಹ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಈರುಳ್ಳಿ ಹಾಕಿ 4 ನಿಮಿಷ ಫ್ರೈ ಮಾಡಿ.
ಈಗ ಟೊಮೆಟೋ ಕೂಡ ಹಾಕಿ 2 ನಿಮಿಷ ಫ್ರೈ ಮಾಡಿ. ನಂತರ ಇದಕ್ಕೆ ಕತ್ತರಿಸಿಕೊಂಡಿರುವ ಬಿಳಿ ಬದನೆಕಾಯಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಹಸಿ ಬಟಾಣಿ ಮಿಕ್ಸ್ ಮಾಡಿ ಈಗ ಮಸಾಲೆ ಪೇಸ್ಟ್ ಅನ್ನು ಇದಕ್ಕೆ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಅಕ್ಕಿ ತೆಗೆದುಕೊಂಡ ಅಳತೆ ಕಪ್ನಲ್ಲಿ ನೀರು ಹಾಕಿಕೊಳ್ಳಬೇಕು. 1 ಕಪ್ ಅಕ್ಕಿ ತೆಗೆದುಕೊಂಡರೆ 3 ಕಪ್ ನೀರು ಹಾಕಿ.
ನೀರು ಹಾಕಿದ ಬಳಿಕ ನಂತರ ತೊಳೆದು ನೆನೆಸಿಟ್ಟಿರುವ ಅಕ್ಕಿಯನ್ನು ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ರುಚಿಗೆ ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 2 ಸೀಟಿ ಹೊಡೆಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ವಾಂಗಿಬಾತ್ ರೆಡಿಯಾಗುತ್ತದೆ. ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಂಡು ಸವಿಯಲು ನೀಡಿ.



Click it and Unblock the Notifications
