Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಹೋಟೆಲ್‌ನಲ್ಲಿ ನೀಡುವ ಪೇಪರ್‌ನಂತ ಪೂರಿ ಇದು..! ಕೇವಲ 2 ವಸ್ತು ಇದ್ರೆ ಸಾಕು.!!
ಬೆಳಗ್ಗೆ ತಿಂಡಿಗೆ ರುಚಿ ರುಚಿಯಾದ ಗರಿ ಗರಿಯಾದ ಪೂರಿ ಸವಿಯುವುದು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತೆ. ಪೂರಿ ಮಾಡಿ ಅದರ ಜೊತೆಗೆ ಸಟ್ನಿ ಅಥವಾ ಸಾಗು ಮಾಡಿಕೊಂಡು ಸವಿಯುವುದು ಬಹಳ ರುಚಿ ನೀಡುತ್ತೆ. ಹೋಟೆಲ್‌ಗಳಲ್ಲಿ ನೀಡುವಂತೆ ಪೂರಿ ಮಾಡಿ ಸವಿಯುವುದು ಕೂಡ ಬೆಳಗ್ಗಿನ ತಿಂಡಿಯ ಆಧ್ಯತೆಗಳಲ್ಲಿ ಒಂದಾಗಿರಲಿದೆ. ಆದ್ರೆ ಪೂರಿ ಮಾಡುವುದು ಕೂಡ ಒಂದು ಕಲೆಯಾಗಿದೆ. ಪೂರಿ ಮೃದುವಾಗಿ ಉಬ್ಬಿ ಬರಬೇಕು ಅಂದ್ರೆ ಕೆಲವೊಂದು ಟಿಪ್ಸ್‌ಗಳಿವೆ.
ಆದ್ರೆ ನಾವಿಂದು ಈ ಟಿಪ್ಸ್ ಹೇಳುತ್ತಿಲ್ಲ ಬದಲಿಗೆ ಸುಲಭವಾಗಿ ಕೇವಲ ಎರಡು ವಸ್ತುಗಳ ಬಳಸಿ ಮೃದುವಾದ, ಉಬ್ಬಿ ಬರುವಂತಹ ಹೋಟೆಲ್ ಪೂರಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ನೀವು ಹೋಟೆಲ್‌ಗಳಲ್ಲಿ ಪೂರಿ ಸವಿಯಲು ಮುಂದಾದರೆ ಅಲ್ಲಿ ದೊಡ್ಡದಾದ ಮೃದು ಪೇಪರ್‌ನಂತ ಪೂರಿ ಬಡಿಸುವುದು ನೋಡಿದ್ದೀರಿ, ಈ ಪೂರಿಯನ್ನು ಹೇಗೆ ಮಾಡ್ತಾರೆ ಅನ್ನೋದು ನಿಮಗೆ ಗೊತ್ತಾ?

ಒಂದು ಪೂರಿ ತಿಂದರೆ ಹೊಟ್ಟೆ ಭರ್ತಿಯಾಗುತ್ತೆ. ಅಂತಹ ವಿಶೇಷ ಹಾಗೂ ದೊಡ್ಡದಾದ ಪೂರಿ ಇದಾಗಿರುತ್ತೆ. ಹಾಗಾದ್ರೆ ಈ ಪೂರಿಯನ್ನು ಯಾವೆಲ್ಲಾ 2 ವಸ್ತು ಹಾಕಿ ಮಾಡುತ್ತಾರೆ, ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಪೂರಿ ಮಾಡಲು ಬೇಕಾಗುವ ಪದಾರ್ಥಗಳು ಯಾವುದು? ಮಾಡುವ ವಿಧಾನವೇಣು? ಈ ಪೂರಿ ಮಾಡಲು ಹಿಟ್ಟು ಹೇಗೆ ರೆಡಿ ಮಾಡಬೇಕು ಎಂಬುದನ್ನು ಇಲ್ಲಿ ತಿಳಿಯೋಣ.
ಪೇಪರ್‌ನಂತಹ ಪೂರಿ ಮಾಡಲು ಬೇಕಾಗುವ ವಸ್ತುಗಳು
- ಬಾಂಬೆ ರವೆ- 200 ಗ್ರಾಮ್
- ಮೈದಾ ಹಿಟ್ಟು
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ಪೇಪರ್‌ನಂತಹ ಪೂರಿ ಮಾಡುವ ಸುಲಭದ ವಿಧಾನವಿದು
ಮೊದಲು ಬಾಂಬೆ ರವೆಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಹಿಟ್ಟು ಮಾಡಿಕೊಳ್ಳಿ. ತೀರಾ ನುಣ್ಣಗೆ ಪುಡಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಹೀಗೆ ಪುಡಿ ಮಾಡಿದ ರವೆಯ ಪುಡಿಯನ್ನು ಒಂದು ಬೌಲ್‌ಗೆ ಹಾಕಿಡಿ. ಈ ಪುಡಿ ರಂಗೋಲಿ ಪುಡಿಯಂತೆ ಹದ ಬರಬೇಕು. ಈಗ ಈ ಹಿಟ್ಟಿಗೆ ಉಪ್ಪು, ಎರಡು ಸ್ಪೂನ್ ಎಣ್ಣೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಒಮ್ಮೆ ಡ್ರೈ ಮಿಕ್ಸ್ ಮಾಡಿದ ಬಳಿಕ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳಿತ್ತಾ ಹಿಟ್ಟು ಕಲಸಿಕೊಳ್ಳಿ. ನಿಧಾನವಾಗಿ ಕಲಸಿಕೊಂಡು ಚಪಾತಿ ಹಿಟ್ಟಿನ ಹದ್ದಕ್ಕೆ ಮಾಡಿ. ನಂತರ ಕೊನೆಯಲ್ಲಿ ಮೇಲೆ ಎಣ್ಣೆ ಸವರಿಕೊಂಡು ಹಿಟ್ಟನ್ನು ಮುಚ್ಚಳ ಮುಚ್ಚಿ 15 ನಿಮಿಷ ಹಾಗೆಯೇ ಬಿಡಿ.
15 ನಿಮಿಷದ ಬಳಿಕ ಮತ್ತೆ ಹಿಟ್ಟು ಹದ ಮಾಡಿಕೊಳ್ಳಿ. ಕಲಸಿಕೊಂಡ ಬಳಿಕ ಪೂರಿ ಮಾಡಲು ಉಂಡೆ ಕಟ್ಟಿಕೊಳ್ಳಿ. ಎಲ್ಲಾ ಹಿಟ್ಟನ್ನು ಉಂಡೆ ಕಟ್ಟಿಡಬಹುದು. ಇಲ್ಲವೆ ಒಂದೊಂದೇ ಉಂಡೆ ಕಟ್ಟಿ ಅದನ್ನು ಪೂರಿ ತಟ್ಟಿಕೊಳ್ಳಬಹುದು. ಈಗ ಮೈದಾ ಹಿಟ್ಟನ್ನು ಕೆಳಗೆ ಹಾಕಿ ಅದರ ಮೇಲೆ ಹಿಟ್ಟು ಇಟ್ಟು ತಟ್ಟಿಕೊಳ್ಳಿ. ಯಾವ ಗಾತ್ರಕ್ಕೆ ಬೇಕಾದರು ತಟ್ಟಿ.
ನಂತರ ಬಾಣಲೆಯಲ್ಲಿ ಎಣ್ಣೆ ಕುದಿಯಲು ಬಿಟ್ಟು, ಎಣ್ಣೆ ಬಿಸಿ ಆದಾಗ ಒಂದೊಂದೇ ಪೂರಿ ಎಣ್ಣೆಗೆ ಹಾಕಿಕೊಂಡರೆ ಉತ್ತಮ. ಬಹಳ ಬಿಸಿಯಾಗಿ ಎಣ್ಣೆ ಇಡಬೇಡಿ ಕರಿದು ಹೋಗುವ ಸಾಧ್ಯತೆ ಇರಲಿದೆ. ಹಾಗೆ ತಕ್ಷನ ಎರಡು ಬದಿಯನ್ನು ಕರಿದುಕೊಳ್ಳಿ. ಪೂರಿ ಉಬ್ಬಿ ಬರುತ್ತದೆ. ನಂತರ ಪೂರಿಯನ್ನು ಎಣ್ಣೆಯಿಂದ ತೆಗೆದು ಜರಡಿಯಲ್ಲಿ ಹಾಕಿಡಿ.
ಇಷ್ಟಾದರೆ ಸುಲಭದ ಪೇಪರ್‌ನಂತಹ ಪೂರಿ ರೆಡಿಯಾಗುತ್ತೆ, ಇದಕ್ಕೆ ಚಟ್ನಿ ಇದ್ದರೆ ರುಚಿ ದುಪ್ಪಟ್ಟಾಗೋದು ಖಚಿತ. ನೀವು ಕೂಡ ಮನೆಯಲ್ಲಿ ಈ ಅದ್ಭುತ ಪ್ರಕಾರದ ಪೂರಿ ಮಾಡಿ ಸವಿದು ನೋಡಿ.



Click it and Unblock the Notifications
