Latest Updates
-
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್?
ಹೋಟೆಲ್ ರುಚಿಯಲ್ಲಿ ರವಾ ಫಿಶ್ ಫ್ರೈ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ರೆಸಿಪಿ
ಮೀನು ಫೋಷಕಾಂಶಗಳ ತನ್ನಲ್ಲಿಟ್ಟುಕೊಂಡಿರುವ ಆಹಾರ. ಅದ್ರಲ್ಲೂ ಮೀನು ಫ್ರೈ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮನೆಯಲ್ಲಾಗಲಿ, ಹೋಟೆಲ್ನಲ್ಲಾಗಲಿ ಮೀನು ಫ್ರೈ ಸವಿದರೆ ಅದರ ರುಚಿಯೇ ಬೇರೆ. ಯಾಕಂದ್ರೆ ಮೀನು ಫ್ರೈ ಊಟದ ಜೊತೆಗಿದ್ದರೆ ಊಟ ಚೆನ್ನಾಗಿ ಸೇರುತ್ತೆ. ಮೀನು ಎಲ್ಲರಿಗೂ ಅತ್ಯುತ್ತಮ ಪೋಷಕಾಂಶ ಭರಿತ ಆಹಾರವಾಗಿದೆ. ಪ್ರೋಟೀನ್ ತುಂಬಿರುವ ಮೀನು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಇನ್ನು ಹೋಟೆಲ್ನಲ್ಲಿ ಸಿಗುವ ಬಂಗುಡ ಮೀನಿ ರವಾ ಫ್ರೈ ಸವಿಯುತ್ತಿದ್ದರೆ ಅದರ ರುಚಿಯೇ ಬೇರೆ. ಮೀನಿನ ಈ ಫ್ರೈ ರುಚಿ ನೋಡಿದರೆ ನೀವೆಂದು ಮತ್ತೆ ಬೇರೆ ನಾನ್ ವೆಜ್ ಕಡೆ ಮುಖ ಮಾಡುವುದಿಲ್ಲ. ಚಿಕನ್ ಸವಿಯುದಕ್ಕಿಂತೂ ಮೀನ ರುಚಿ ನಿಮ್ಮ ನಾಲಗೆಗೆ ಹಿಡಿದು ಮನೆಯಲ್ಲೂ ಮಾಡಿಸಿ ಸವಿಯಲು ಮುಂದಾಗುತ್ತೀರಿ.

ಕರಾವಳಿ, ಮಲೆನಾಡು ಭಾಗದಲ್ಲಿ ಮಾಡುವ ಮೀನಿನ ಫ್ರೈ ಸಿಕ್ಕಾಪಟ್ಟೆ ಫೇಮಸ್ ನಾವು ಸಹ ಇಂದು ಮನೆಯಲ್ಲೇ ಈ ರೀತಿಯ ಮೀನಿನ ಫ್ರೈ ಮಾಡಿ ಸವಿಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಬಂಬುಡ ಮೀನ ರವಾ ಫ್ರೈ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ಸರಿಯಾದ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೀನಿನ ಫ್ರೈ ಮಾಡಲು ಬೇಕಾಗುವ ವಸ್ತುಗಳು
- ಮೀನು- 2
- ಖಾರದ ಪುಡಿ - 2 ಸ್ಪೂನ್
- ಧನಿಯಾ ಪುಡಿ - ಕಾಲು ಚಮಚ
- ಅರಶಿನ - ಕಾಲು ಚಮಚ
- ಕಾಳು ಮೆಣಸಿನ ಪುಡಿ - ಕಾಲು ಚಮಚ
- ಉಪ್ಪು
- ಒಂಕಾಳು
- ಕಾರ್ನ್ ಫ್ಲೋರ್ ಅಥವಾ ಅಕ್ಕಿ ಹಿಟ್ಟು
- ನಿಂಬೆ ಹಣ್ಣಿನ ರಸ
- ಮೀನ ಫ್ರೈ ಮಾಡುವುದು ಹೇಗೆ?
ಮೊದಲು ಫ್ರೈಗೆ ಮೀನು ಹೇಗೆ ಕತ್ತರಿಸಿಕೊಳ್ಳಬೇಕು ಎಂಬುದು ಗೊತ್ತಿರಲಿ. ಬಳಿಕ ತಣ್ಣೀರಿನಲ್ಲಿ ಮೀನನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಒಂದು ಬೌಲ್ಗೆ ಖಾರದ ಪುಡಿ, ಧನಿಯಾ ಪುಡಿ, ಅರಶಿನ, ಕಾಳು ಮೆಣಸಿನ ಪುಡಿ, ಉಪ್ಪು, ಒಂಕಾಳು, ಕಾರ್ನ್ ಫ್ಲೋರ್ ಅಥವಾ ಅಕ್ಕಿ ಹಿಟ್ಟು, ನಿಂಬೆ ಹಣ್ಣಿನ ರಸ ಹಾಕಿಕೊಂಡು ಮಿಕ್ಸ್ ಮಾಡಿ.
ಬಳಿಕ ನೀರು ಹಾಕಿಕೊಳ್ಳುತ್ತಾ ಚೆನ್ನಾಗಿ ಹಿಟ್ಟು ಮಾಡಿಕೊಳ್ಳಿ, ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ. ಈ ಮಸಾಲೆ ದಪ್ಪವಾಗಿ ಮೀನಿಗೆ ಹಿಡಿಯುವಂತೆ ಇರಲಿ. ಈಗ ಮೀನ ಎರಡೂ ಭಾಗಲ್ಲೂ ಈ ಮಸಾಲೆಯನ್ನು ಹಚ್ಚಿಕೊಳ್ಳಿ, ಮೀನಿನ ಮಧ್ಯ ಭಾಗಕ್ಕೂ ಈ ಮಸಾಲೆಯನ್ನು ಚೆನ್ನಾಗಿ ಹಚ್ಚಿಕೊಳ್ಳಬೇಕು.
ನಂತ ಮೀನನ್ನು ಖಾರ ಒಣಗಲು ಬಿಟ್ಟು, ಈಗ ಒಂದು ಪ್ಲೇಟ್ಗೆ ರವೆ, ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಇದನ್ನು ತೆಗೆದುಕೊಂಡು ಮೀನಿನ ಮೇಲೆ ಹಾಕಬೇಕು. ಇದರಿಂದ ಮೀನು ರೋಸ್ಟ್ ಆಗುತ್ತದೆ.
ಈಗ ಒಲೆ ಮೇಲೆ ಪಾತ್ರೆ ಇಟ್ಟು ಅಥವಾ ಕಾವಲಿ ಇಟ್ಟು ಎಣ್ಣೆ ಹಚ್ಚಿಡಿ. ಕಾವಲಿ ಕಾದ ಬಳಿಕ ಮೀನನ್ನು ಅದರ ಮೇಲೆ ಇಡಿ. 10 ನಿಮಿಷ ಬಿಟ್ಟು ಇನ್ನೊಂದು ಕಡೆ ಮತ್ತೆ ಬೇಯಿಸಿಕೊಳ್ಳಿ. ಈ ಮೀನು ಚೆನ್ನಾಗಿ ರೋಸ್ಟ್ ಆಗುವವರೆಗೂ ಫ್ರೈ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿಕರ ಬಂಬುಡ ಫ್ರೈ ರೆಡಿಯಾಗುತ್ತೆ. ನೀವು ಮನೆಯಲ್ಲಿ ಊಟಕ್ಕೆ ಈ ಫ್ರೈ ಮಾಡಿದರೆ ಅದರ ರುಚಿಯೇ ಬೇರೆ. ಮೀವು ಸಹ ಈ ವಿಧಾನದಲ್ಲಿ ಒಮ್ಮೆ ಫ್ರೈ ಮಾಡಿ ನೋಡಿ.



Click it and Unblock the Notifications
