Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕ್ಯಾಂಟೀನ್ ರುಚಿಯಲ್ಲಿ ರಾಗಿ ದೋಸೆ ಮಾಡಿ..! ದೇಹಕ್ಕೆ ಬಹಳ ತಂಪು ನೀಡುವ ಬ್ರೇಕ್ಫಾಸ್ಟ್
ನೀವು ಬ್ರೇಕ್ಫಾಸ್ಟ್ಗೆ ವಿಶೇಷವಾಗಿ ಆರೋಗ್ಯಕರ ತಿಂಡಿ ಸವಿಯಲು ಮುಂದಾಗುವ ಆಲೋಚನೆಯಲ್ಲಿ ಹಲವು ಬಾರಿ ಹಣ್ಣು, ಲಘು ಉಪಹಾರ, ಜ್ಯೂಸ್ ಹೀಗೆ ವಿಶೇಷ ಖಾದ್ಯ ಮಾಡಿ ಸವಿದಿರುತ್ತೀರಿ. ಹಾಗೆ ವಿಶೇಷ ಸಿರಿಧಾನ್ಯಗಳ ಮೂಲಕ ಮಾಡಿದ ಖಾದ್ಯಗಳು ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ ಆಗಿರುತ್ತವೆ, ಅಂತಹ ಖಾದ್ಯದಲ್ಲಿ ಹೋಟೆಲ್ಗಳಲ್ಲಿ ಸಿಗುವಂತಹ ರಾಗಿ ದೋಸೆ ಎಂದಾದರು ಟ್ರೈ ಮಾಡಿದ್ದೀರಾ?
ಬೆಳಗ್ಗೆ ಈ ರಾಗಿಯಿಂದ ಮಾಡಿರುವ ದೋಸೆ ಸವಿಯಲು ಬಹಳ ರುಚಿ ನೀಡಲಿದೆ. ರಾಗಿ ಬಹಳ ತಂಪಿನ ಆಹಾರ, ರಾಗಿ ಗಂಜಿ, ಅಂಬಲಿ ಮಾಡಿ ಕುಡಿದರೆ ದೇಹಕ್ಕೆ ಬಹಳ ತಂಪಾಗುತ್ತದೆ. ಹೀಗಾಗಿ ರಾಗಿ ನಮ್ಮ ದೇಹಕ್ಕೆ ಬಹಳ ಉತ್ತಮ ಆಹಾರ ಪದಾರ್ಥವಾಗಿದೆ. ಅದರಲ್ಲೂ ರಾಗಿ ಗಂಜಿ ಸೇವನೆ ಹಲವು ರೀತಿಯ ಉಪಯೋಗಕರವಾಗಿದೆ. ರಾಗಿಯಲ್ಲಿ ಕ್ಯಾಲ್ಸಿಯಂ ಹಾಗೂ ಮೆಗ್ನೀಷಿಯಂ ಅಂಶ ಹೆಚ್ಚಾಗಿರುವ ಕಾರಣ ಮೂಳೆ ಆರೋಗ್ಯ ಹಾಗೆ ಜೀರ್ಣಕ್ರಿಯೆಗೆ ಬಹಳ ಸಹಕಾರಿ.

ಹೀಗಾಗಿ ರಾಗಿ ಮುದ್ದೆ ಬಹಳ ಬೇಡಿಕೆ ಇದೆ. ರಾಗಿ ಮುದ್ದೆಯ ಪ್ರಯೋಜನ ತಿಳಿದು ಅದನ್ನು ಸವಿಯುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹಾಗೆ ರಾಗಿಯಿಂದ ಯಾವುದೇ ಖಾದ್ಯ ಮಾಡಿ ಸವಿದರು ಕೂಡ ಅದರ ರುಚಿ ಅದ್ಭುತವಾಗಿರುತ್ತೆ. ಈ ರಾಗಿ ದೋಸೆ ಕೂಡ ಅದ್ಭುತ ರುಚಿ ಹಾಗೆ ಆರೋಗ್ಯಕ್ಕೂ ಬಹಳ ಉತ್ತಮವಾಗಿದೆ. ಹಾಗಾದ್ರೆ ರಾಗಿ ದೋಸೆ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಈ ಹೋಟೆಲ್ ಶೈಲಿಯ ರಾಗಿ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಾಗಿ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ರಾಗಿ ಹಿಟ್ಟು- 250 ಗ್ರಾಮ್
- ಅಕ್ಕಿ ಹಿಟ್ಟು
- ಸೋಡಾ
- ಚಿರೋಟಿ ರವೆ
- ಮೊಸರು
- ಎಣ್ಣೆ
- ಉಪ್ಪು
ರಾಗಿ ದೋಸೆ ಮಾಡುವ ಸುಲಭದ ವಿಧಾನವೇನು?
ಒಂದು ಒಂದು ಬೌಲ್ಗೆ ರಾಗಿ ಹಿಟ್ಟು ಹಾಕಿಕೊಂಡು ಅದಕ್ಕೆ, ಸ್ವಲ್ಪ ಅಕ್ಕಿ ಹಿಟ್ಟು, ರವೆ, ಸೋಡಾ, ಉಪ್ಪು ಎಲ್ಲಾ ಹಾಕಿ ಮೊದಲು ಡ್ರೈ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ಕಪ್ನಲ್ಲಿ ಮೊಸರು ಹಾಕಿಕೊಂಡು ಮಿಕ್ಸ್ ಮಾಡಿ. ಹಾಗೆ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ದೋಸೆ ಹಿಟ್ಟಿನ ಹದ ಬರುವಂತೆ ಇದನ್ನು ರೆಡಿ ಮಾಡಿಕೊಳ್ಳಿ.
ಚೆನ್ನಾಗಿ ನೆನೆಯಬೇಕು. ಗಂಟು ಗಂಟು ಇರದಂತೆ ಹಿಟ್ಟು ರೆಡಿಮಾಡಿಕೊಂಡು 15 ನಿಮಿಷ ಹಾಗೆಯೇ ಬಿಡಬೇಕು. ನಂತರ ಮತ್ತೊಮ್ಮೆ ಕಲಸಿಕೊಂಡು ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಹಾಕಿ ನೀರಾಗಿದ್ದರೆ ಅಕ್ಕಿ ಹಿಟ್ಟು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಒಂದು ಕಾವಲಿ ಇಟ್ಟು ಬಿಸಿಯಾಗಲು ಬಿಡಬೇಕು. ಕಾವಲಿ ಬಿಸಿಯಾದ ಬಳಿಕ ಹಿಟ್ಟನ್ನು ತೆಗೆದುಕೊಂಡು ನಿಮಗೆ ದೋಸೆ ದಪ್ಪ ಬೇಕಿದ್ದರೆ ಮಧ್ಯದಲ್ಲಿ ಹಾಕಿ ಸೆಟ್ ದೋಸೆ ರೀತಿ ಮಾಡಬಹುದು. ತೆಳುವಾಗಿ ಬೇಕಿದ್ದರೆ ಸ್ವಲ್ಪವೇ ಹಿಟ್ಟು ಹಾಕಿ ಕಾವಲಿ ಮೇಲೆ ಹರಡಬಹುದು. ತೆಳುವಾಗಿ ಮಾಡಿದರೆ ರಾಗಿ ದೋಸೆ ಬಹುಬೇಗ ಬೇಯುತ್ತದೆ. ಹಾಗೆ ರುಚಿಯೂ ಅದ್ಭುತವಾಗಿರುತ್ತೆ.



Click it and Unblock the Notifications
