Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಹೋಟೆಲ್ ರುಚಿಯಲ್ಲಿ ಮೂಲಂಗಿ ಸಾರು ಮನೆಯಲ್ಲೇ ಮಾಡಿ..!
ಮೂಲಂಗಿ ತರಕಾರಿ ಎಷ್ಟು ಆರೋಗ್ಯಕರ ಅಂಶಗಳನ್ನು ತನ್ನಲ್ಲಿಟ್ಟುಕೊಂಡಿದೆ ಎಂಬುದು ನಿಮಗೆಲ್ಲಾ ತಿಳಿದಿರಬಹುದು. ಮೂಲಂಗಿಯನ್ನು ಸೇವಿಸುವುದು ನಿಮ್ಮ ಗ್ಯಾಸ್ಟ್ರಿಕ್ ಸೇರಿದಂತೆ ಹಲವು ಸಮಸ್ಯೆಗಳ ದೂರ ಮಾಡುವ ಗುಣವನ್ನು ಅದು ಹೊಂದಿದೆ. ಅದ್ರಲ್ಲೂ ಚಳಿಗಾಲದಲ್ಲಿ ಮೂಲಂಗಿ ತಿನ್ಬೇಕು. ಇದರಲ್ಲಿ ವಿಟಮಿನ್ A, B, C, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣಾಂಶ ಇದ್ದು ಮೂಳೆಗಳ ಬೆಳವಣಿಗೆ ಸೇರಿ ಅದ್ಭುತ ಪ್ರಯೋಜನಗಳ ಹೊಂದಿದೆ.
ಹಾಗೆ ಮೂಲಂಗಿಯಿಂದ ಹಲವು ರೀತಿಯ ಖಾದ್ಯಗಳ ಮಾಡಿ ಸವಿಯುತ್ತೇವೆ. ಮೂಲಂಗಿ ಪಲ್ಯ, ಮೂಲಂಗಿ ಚಟ್ನಿ ಮಾಡಿರುವುದು ನೋಡಿದ್ದೇವೆ. ಈಗ ಅದ್ಭುತ ರುಚಿಯ ಮೂಲಂಗಿ ಸಾರು ಮಾಡುವುದು ಹೇಗೆ ಅನ್ನೋದನ್ನು ನಾವು ತಿಳಿದುಕೊಳ್ಳೋಣ. ಮೂಲಂಗಿ ಸಾರು ಹಲವರಿಗೆ ಇಷ್ಟವಾಗುತ್ತೆ. ಊಟದ ಜೊತೆಗೆ ಮೂಲಂಗಿ ಸಾರು ಮತ್ತಷ್ಟು ರುಚಿ ಹೆಚ್ಚಿಸುತ್ತೆ.

ಅದರಲ್ಲೂ ನಾವು ಹೋಟೆಲ್ನಲ್ಲಿ ಸವಿಯುವಂತಹ ರುಚಿ ನೀವು ಮನೆಯಲ್ಲೇ ಮಾಡಬಹುದು. ಹೋಟೆಲ್ನಲ್ಲಿ ನೀಡುವಂತಹ ಈ ಮೂಲಂಗಿ ಸಾರು ಅದ್ಭುತವಾಗಿರುತ್ತೆ. ಹಾಗಾದ್ರೆ ಈ ರುಚಿಯಲ್ಲಿ ಮನೆಯಲ್ಲೇ ಈ ಮೂಲಂಗಿ ಸಾರು ಮಾಡೋದು ಹೇಗೆ ಎನ್ನುವುದನ್ನು ನೋಡೋಣ.
ಮನೆಯಲ್ಲಿ ಮೂಲಂಗಿ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮೂಲಂಗಿ ಸಾರು ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೂಲಂಗಿ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು
- ಮೂಲಂಗಿ
- ಟೊಮೆಟೊ
- ಬೆಳ್ಳುಳ್ಳಿ
- ಕರಿಬೇವು
- ಅರಶಿಣ
- ಸಾಂಬಾರ್ ಪುಡಿ
- ಎಣ್ಣೆ
- ಖಾರದ ಪುಡಿ
- ಸಾಸಿವೆ
- ಕೊತ್ತಂಬರಿ ಸೊಪ್ಪು
- ಇಂಗು
- ಜೀರಿಗೆ
- ಕೊತ್ತಂಬರಿ
- ಹುಣಸೆ ಹುಳಿ
- ಉಪ್ಪು
ಮೂಲಂಗಿ ಸಾರು ಮಾಡುವುದು ಹೇಗೆ?
ಮೊದಲು ಮೂಲಂಗಿಯನ್ನು ತೊಳೆದುಕೊಂಡು ಮೇಲಿನ ಸಿಪ್ಪೆಯನ್ನು ತೆಗೆದು
ವೃತ್ತಾಕಾರವಾಗಿ ಕತ್ತರಿಸಿಕೊಳ್ಳಬೇಕು. ಹಾಗೆ 1 ಕಪ್ ಬೇಳೆ ತೆಗದುಕೊಂಡು ತೊಳೆದು
ನೀರಿನಲ್ಲಿ ನೆನೆಸಿಡಿ. ಈಗ ಕುಕ್ಕರ್ನಲ್ಲಿ ಬೇಳೆ ಹಾಕಿಕೊಂಡು ಎರಡು ಕಪ್ ನೀರು
ಹಾಕಿ ದೊಡ್ಡದಾಗಿ ಹೆಚ್ಚಿರುವ 2 ಟೊಮೆಟೋ, ಬೆಳ್ಳುಳ್ಳಿ, ಅರಶಿಣ, ಎಣ್ಣೆ,
ಕರಿಬೇವು ಹಾಕಿಕೊಂಡು ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಎರಡು ಸೀಟಿ ಹೊಡೆಯಲು
ಬಿಡಿ.
ಈಗ ಮತ್ತೊಂದು ಕಡೆ ಪಾತ್ರೆಯಲ್ಲಿ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಜೀರಿಗೆ, ಇಂಗು ಹಾಕಿ ಬಳಿಕ ಕರಿಬೇವು, ಈರುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಇದಕ್ಕೆ ಹೆಚ್ಚಿಕೊಂಡಿರುವ ಮೂಲಂಗಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಉಪ್ಪು ಹಾಕಿ ಒಟ್ಟು 3 ನಿಮಿಷ ಫ್ರೈ ಮಾಡಿ. ಬಳಿಕ ಇದಕ್ಕೆ ಸಾಂಬಾರ್ ಪುಡಿ ಹಾಕಿ ಮೂಲಂಗಿ ಮುಳುಗುವಷ್ಟು ನೀರು ಹಾಕಿಕೊಂಡು ಕುದಿಯಲು ಬಿಡಿ.
ಈಗ ಕುಕ್ಕರ್ 2 ಸೀಟಿ ಹೊಡೆದಿದ್ದರೆ ಅದನ್ನು ಇಳಿಸಿ ಮುಚ್ಚಳ ತೆಗೆದು ಸ್ವಲ್ಪ ಪುಡಿ ಮಾಡಿಕೊಳ್ಳಿ. ನಂತರ ಕುಕ್ಕರ್ನಲ್ಲಿರುವ ಬೇಳೆಯನ್ನೆಲ್ಲಾ ಈ ಮೂಲಂಗಿ ಹಾಕಿರುವ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹುಣಸೆ ಹುಳಿ ಹಾಕಿಕೊಂಡು ಕಲಸಿಕೊಂಡು ಕುದಿಬರಲು ಬಿಡಿ. 2 ನಿಮಿಷ ಕುದಿಬಂದರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಮೂಲಂಗಿ ಸಾರು ರೆಡಿಯಾಗುತ್ತದೆ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಳ್ಳಿ. ಇದು ಅದ್ಭುತ ರುಚಿ ನೀಡಲಿದೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ.



Click it and Unblock the Notifications
