Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಹಬ್ಬದ ದಿನ ಹೋಟೆಲ್ ಶೈಲಿಯಲ್ಲಿ ಸಖತ್ ರುಚಿಯ ದೋಸೆ ಮಾಡಿ..!
ಹಬ್ಬದ ದಿನದಂದು ಬೆಳಗ್ಗೆ ತಿಂಡಿಗೆ ಯಾವ ಖಾದ್ಯ ಮಾಡಬೇಕೆಂಬ ನಿಮ್ಮ ಯೋಚನೆ ಇದ್ದೇ ಇರುತ್ರೆ. ಯಾಕಂದ್ರೆ ಹಬ್ಬದಂದು ಬೆಳಗ್ಗೆ ರದಾಗ ಏನು ಮಾಡಬೇಕು ಎಂಬ ಪ್ರಶ್ನೆಯಂತು ನಿಮಗೆ ಕಾಡಿಯೇ ಕಾಡುತ್ತೆ. ಅದ್ರಲ್ಲೂ ಹಬ್ಬದಂದು ಸಿಕ್ಕಾಪಟ್ಟೆ ಕೆಲಸ ಇರೋದ್ರಿಂದ ತಿಂಡಿ ಮಾಡೋಕು ನಿಮಗೆ ಸಮಯ ಸಿಗಲ್ಲ.
ಆದ್ರೆ ಹಬ್ಬ ಆರಂಭವಾಗೋದೇ ಬೆಳಗ್ಗಿನ ತಿಂಡಿ ಸವಿಯೋದ್ರಿಂದ. ಹೀಗಾಗಿ ಬೆಳಗ್ಗೆ ಸವಿಯಲು ದೋಸೆ ಇದ್ದರೆ ಆ ದಿನ ಹಬ್ಬದ ವಾತಾವರಣಕ್ಕೆ ಬಹಳ ಉತ್ತಮ. ಹೀಗಾಗಿ ನಾವಿಂದು ಹಬ್ಬಕ್ಕೆ ಸವಿಯಲು ಒಂದೊಳ್ಳೆ ದೋಸೆ ಮಾಡುವುದನ್ನು ತಿಳಿದುಕೊಳ್ಳೋಣ.

ಅದ್ರಲ್ಲೂ ಹೋಟೆಲ್ ಶೈಲಿಯಲ್ಲಿ ಖಾಲಿ ದೋಸೆ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಈ ಖಾಲಿ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು? ಮಾಡಲು ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಖಾಲಿ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ - ಒಂದೂವರೆ ಕಪ್
- ಉದ್ದಿನ ಬೇಳೆ- ಅರ್ಧ ಕಪ್
- ಅವಲಕ್ಕಿ - ಒಂದು ಮುಷ್ಟಿ
- ಕಡಲೆ ಬೇಳೆ - ಸ್ವಲ್ಪ
- ಕ್ಯಾರೆಟ್ - 2
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಉಪ್ಪು
ಖಾಲಿ ದೋಸೆ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ನಲ್ಲಿ ಒಂದೂವರೆ ಕಪ್ ಅಕ್ಕಿ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ಉದ್ದಿನ ಬೇಳೆ ಹಾಕಿಕೊಳ್ಳಿ. ಜೊತೆಗೆ ಅವಲಕ್ಕಿ, ಕಡಲೆ ಬೇಳೆ, ಮೆಂತ್ಯ ಹಾಕಿಕೊಂಡು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿಡಬೇಕು. 6 ಗಂಟೆಗಳ ಕಾಲ ನೆನೆಸಿಡಬೇಕು.
ನಂತರ ಒಂದು ಮಿಕ್ಸಿ ಜಾರ್ಗೆ ಇದೆಲ್ಲವನ್ನು ಸ್ವಲ್ಪ ಸ್ವಲ್ಪ ಹಾಕಿಕೊಂಡು ರುಬ್ಬಿಕೊಳ್ಳಬೇಕು. ರುಬ್ಬುವಾಗ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ರುಬ್ಬಿಕೊಳ್ಳಿ. ರುಬ್ಬುವಾಗ ಬಿಸಿ ನೀರು ಹಾಕಿ ರುಬ್ಬಿದರೆ ಇನ್ನು ಉತ್ತಮ. ಬಳಿಕ ಈ ಹಿಟ್ಟನ್ನು ದೊಡ್ಡ ಪಾತ್ರೆಗೆ ಹಾಕಿ ಇಟ್ಟುಕೊಳ್ಳಿ. ಇದನ್ನು ಹಿಂದಿನ ದಿನ ರಾತ್ರಿಯೇ ಮಾಡಿಟ್ಟುಕೊಳ್ಳಿ, ಮಾರನೆ ದಿನಕ್ಕೆ ಇಟ್ಟು ಮಾಡಿಕೊಳ್ಳಬೇಕು.
ಈಗ ಬೆಳಗ್ಗೆ ಹಿಟ್ಟಿಗೆ ಉಪ್ಪು ಹಾಕಿಕೊಂಡು ಚೆನ್ನಾಗಿ ಕೈನಿಂದ ಮಿಕ್ಸ್ ಮಾಡಿಕೊಳ್ಳಿ. ನಂತರ ಒಲೆ ಮೇಲೆ ದೋಸೆ ಕಾವಲಿ ಇಟ್ಟು ಕಾಯಲು ಬಿಡಿ. ಅದಕ್ಕೆ ಎಣ್ಣೆ ಹಚ್ಚಿಕೊಂಡು ಅದರ ಮೇಲೆ ಹಿಟ್ಟು ಹಾಕಿ ಹರಡಿ, ಈ ಹಿಟ್ಟಿನ ಮೇಲೆ ತುರಿದುಕೊಂಡ ಕ್ಯಾರೆಟ್, ಕೊತ್ತಂಬರಿ ಸೊಪ್ಪನ್ನು ಸ್ವಲ್ಪವೇ ಹಾಕಿಕೊಂಡು ಕಾಯಲು ಬಿಡಿ. ಈ ದೋಸೆಯನ್ನು ಒಂದು ಬದಿ ಮಾತ್ರ ಕಾಯಿಸಿಕೊಳ್ಳಿ. ಚೆನ್ನಾಗಿ ರೋಸ್ಟ್ ಮಾಡಿಕೊಳ್ಳಿ.
ಇಷ್ಟು ಮಾಡಿದರೆ ನಿಮ್ಮ ಮುಂದೆ ರುಚಿಕರ ಖಾಲಿ ದೋಸೆ ರೆಡಿಯಾಗುತ್ತೆ. ಅದರಲ್ಲೂ ಮನೆಯಲ್ಲಿ ಹಬ್ಬದ ದಿನ ಈ ದೋಸೆ ಮಾಡಿದರೆ ಅದರ ರುಚಿಯೇ ಬೇರೆಯಾಗಿರುತ್ತೆ, ಈ ಖಾಲಿ ದೋಸೆ ಬೇಯಿಸುವುದು ಬಹಳ ಸುಲಭ.



Click it and Unblock the Notifications
