Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮದುವೆ ಮನೆ ರುಚಿಯ ಹೂವಿನಂತೆ ಕೇಸರಿಬಾತ್ ಮಾಡಿ..! ಸಿಂಪಲ್ ರೆಸಿಪಿ
ಸಿಂಪಲ್ ಆಗಿ ಕಡಿಮೆ ಸಮಯದಲ್ಲಿ ಬಹಳ ಬೇಗ ಮಾಡಬಹುದಾದ ತಿಂಡಿ ಅಂದ್ರೆ ಅದು ಕೇಸರಿಬಾತ್, ಮನೆಗೆ ಯಾರಾದ್ರು ಅತಿಥಿಗಳು ಬಂದಾಗ ಮೊದಲು ತಲೆಗೆ ಬರುವುದೇ ಕೇಸರಿಬಾತ್, ಒಂದೆರಡು ವಸ್ತುಗಳಿದ್ದರೂ ಸಾಕು ಸುಲಭವಾಗಿ ಕೇಸರಿಬಾತ್ ಮಾಡಿ ಸವಿಯಬಹುದು. ಕೇಸರಿಬಾತ್‌ನಲ್ಲೂ ಹಲವು ವಿಧಾನಗಳಿವೆ.
ಕೇಸರಿಬಾತ್ ಅನ್ನು ರವೆ ಉಪಯೋಗಿಸಿ ಸಿಂಪಲ್ ಆಗಿ ಮಾಡುತ್ತಾರೆ. ಅನಾನಸ್ ಕೇಸರಿಬಾತ್ ತುಂಬಾ ರುಚಿಯ ಫೇಮಸ್ ಕೇಸರಿಬಾತ್ ಆಗಿದೆ. ಕೆಲವು ಬಾರಿ ಕೇಸರಿ ಬಾತ್ ಮಾಡಿದ ಬಳಿಕ ಗಟ್ಟಿಯಾಗುತ್ತೆ. ಹಾಗಾದ್ರೆ ಮೃದುವಾಗಿ ಮದುವೆ ಮನೆ ಶೈಲಿಯಲ್ಲಿ ಕೇಸರಿ ಬಾತ್ ಮಾಡುವುದು ಹೇಗೆ?, ಕೇಸರಿಬಾತ್ ಅಂದ್ರೆ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಎಲ್ಲರು ಇಷ್ಟಪಡುತ್ತಾರೆ. ಯಾಕಂದ್ರೆ ಕೇಸರಿಬಾತ್ ಮೃದುಗಾಗಿ ತುಂಬಾ ಸಿಹಿಯಾಗಿರುತ್ತೆ.

ಮೃದುವಾಗಿ ಹೂವಿನಂತಹ ಕೇಸರಿಬಾತ್ ಮಾಡುವುದು ಹೇಗೆ?, ಕೇಸರಿಬಾತ್ ಮಾಡಲು ಬೇಕಾಗುವ ವಸ್ತುಗಳೇನು?, ಕೇಸರಿಬಾತ್ ಮಾಡುವ ವಿಧಾನವೇನು?, ಮಾಡುವುದು ಹೇಗೆ ಎಂಬುದನ್ನು ನಾವಿಂದು ನೋಡೋಣ.
ಕೇಸರಿ ಬಾತ್ ಮಾಡಲು ಬೇಕಾಗುವ ವಸ್ತುಗಳೇನು?
- ರವೆ (ಮೀಡಿಯಂ) -200 ಗ್ರಾಮ್
- ತುಪ್ಪ
- ಎಣ್ಣೆ
- ಸಕ್ಕರೆ
- ಏಲಕ್ಕಿ ಪುಡಿ
- ಕೇಸರಿ
- ನೀರು
- ಉಪ್ಪು
- ಒಣದ್ರಾಕ್ಷಿ
- ಗೋಡಂಬಿ
ಕೇಸರಿ ಬಾತ್ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಮೂರು ಸ್ಪೂನ್ ತುಪ್ಪ ಹಾಗೂ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಹಾಗೂ ತುಪ್ಪ ಹೆಚ್ಚು ಬಳಸಬೇಕು. ಬಳಿಕ ಅದರಲ್ಲಿ ಸ್ವಲ್ಪ ಎಣ್ಣೆ ತುಪ್ಪ ತೆಗೆದಿಟ್ಟುಕೊಳ್ಳಿ. ಬಳಿಕ ಇದಕ್ಕೆ ಗೋಡಂಬಿ, ದ್ರಾಕ್ಷಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಮೀಡಿಯಂ ರವೆ ಹಾಕಿಕೊಳ್ಳಿ. ಬಳಿಕ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಸುಮಾರು 4ರಿಂದ 5 ನಿಮಿಷ ಹುರಿದುಕೊಳ್ಳಿ. ಉರಿ ಸಣ್ಣದಾಗಿ ಇಟ್ಟುಕೊಳ್ಳಿ. ಬಳಿಕ ಇದಕ್ಕೆ ಸಕ್ಕರೆ ಹಾಕಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ಕೇಸರಿ ಹೂವು ಅಥವಾ ಕೇಸರಿ ಬಣ್ಣ ಹಾಕಿಕೊಳ್ಳಿ. ಈಗ ಇನ್ನೊಂದು ಪಾತ್ರೆಯಲ್ಲಿ 2 ಗ್ಲಾಸ್ ನೀರು ಹಾಕಿ ಕುದಿಯಲು ಇಡಿ. ಈ ಕುದಿಯುವ ನೀರನ್ನು ಕೇಸರಿಬಾತ್‌ಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. 1 ಗ್ಲಾಸ್ ರವೆಗೆ ಎರಡೂವರೆ ಗ್ಲಾಸ್ ನೀರು ಹಾಕಬೇಕು.
ಬಳಿಕ ಏಲಕ್ಕಿ ಪುಡಿ, ಹಾಗೂ ಮೊದಲು ತೆಗೆದಿಟ್ಟ ಎಣ್ಣೆ ಹಾಗೂ ತುಪ್ಪದ ಮಿಶ್ರಣವನ್ನು ಹಾಕಿಕೊಂಡು 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಕೇಸರಿಬಾತ್ ರೆಡಿಯಾಗಿರುತ್ತದೆ. ಈ ಕೇಸರಿ ಬಾತ್ ಮಾಡುವಾಗ ರವೆ ಹಾಗೂ ನೀರಿನ ಅಳತೆ ಸರಿಯಾಗಿ ತೆಗೆದುಕೊಳ್ಳಬೇಕು. ಜೊತೆಗೆ ತುಪ್ಪ ಸ್ವಲ್ಪ ಹೆಚ್ಚು ಬಳಸಬೇಕು. ಇದು ಮತ್ತಷ್ಟು ಮೃದುವಾಗಿಸುತ್ತದೆ.
ಕೇಸರಿಬಾತ್ ಬೆಳಗ್ಗೆ ತಿಂಡಿಗೆ ಅಥವಾ ಸಂಜೆ ಸವಿಯಬಹುದು. ಅಲ್ಲದೆ ಅತಿಥಿಗಳು ಬಂದಾಗ ತಕ್ಷಣವೇ ಯಾವುದಾದರು ಸಿಹಿ ಮಾಡಬೇಕು ಎಂದುಕೊಂಡರೆ ಈ ಕೇಸರಿಬಾತ್ ಹೇಳಿ ಮಾಡಿಸಿದ ಖಾದ್ಯವಾಗಲಿದೆ. ಮಧುಮೇಹಿಗಳು ಮಾತ್ರವೇ ಈ ಕೇಸರಿಬಾತ್‌ನಿಂದ ದೂರವಿರುವುದು ಒಳಿತು. ಯಾಕಂದ್ರೆ ಇದರಲ್ಲಿ ಸಿಹಿ ಹೆಚ್ಚು.



Click it and Unblock the Notifications
