Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಮದುವೆ ಮನೆ ರುಚಿಯ ಗೀರೈಸ್ ಮನೆಯಲ್ಲೇ ಮಾಡಿ..! ಇಲ್ಲಿದೆ ಸಿಂಪಲ್ ವಿಧಾನ!
ಮಾಂಸಹಾರದಲ್ಲಿ ಮಾತ್ರ ಡಿಲೀಶಿಯಸ್ ಫುಡ್ ಮಾಡಲು ಸಾಧ್ಯ ಅನ್ನೋದು ಸುಳ್ಳು ಯಾಕಂದ್ರೆ ವೆಜ್‌ನಲ್ಲಿಯೂ ಕೂಡ ಅತ್ಯಂತ ಕ್ರಿಸ್ಪಿ, ರುಚಿಕರ, ಖಾರ ಖಾರವಾದ ಅತ್ಯಂತ ರುಚಿಯ ಖಾದ್ಯ ಮಾಡಬಹುದಿದೆ. ಅದ್ರಲ್ಲಿ ಮುಖ್ಯವಾಗಿ ಪಲಾವ್, ಗೀರೈಸ್ ಕೂಡ ಬಹಳ ರುಚಿಕರ ಖಾದ್ಯಗಳಾಗಿವೆ. ಅದರಲ್ಲಿ ವೆಜ್ ಬಿರಿಯಾನಿ ಹಾಗೆ ಕುರ್ಮ, ಕುಷ್ಕ ಈ ಎಲ್ಲಾ ಖಾದ್ಯಗಳಿಗೆ ಫಿದಾ ಆಗದವರೇ ಇಲ್ಲ ಎನ್ನಬಹುದು.
ಹಾಗೆ ಗೀರೈಸ್ ಮಾಡಿದರೆ ಕೂಡ ಮನೆ ಮಂದಿ ಎಲ್ಲ ಕುಳಿತು ಬಹಳ ಇಷ್ಟಪಟ್ಟು ಸವಿಯುತ್ತಾರೆ. ಗೀರೈಸ್ ಕೂಡ ಎಲ್ಲಾ ದಿನದಲ್ಲು ಸವಿಯಬಹುದಾದ ಖಾದ್ಯ, ಗೀರೈಸ್ ಮಾಡಿ ಜೊತೆಗೊಂದು ತರಕಾರಿಯ ಕುರ್ಮ ಮಾಡಿದರೆ ಅದರ ರುಚಿ ದುಪ್ಪಟ್ಟಾಗುತ್ತೆ. ಬೆಳಗ್ಗೆ ತಿಂಡಿಗೆ, ಮಧ್ಯಾಹ್ನ ಹಾಗೆ ರಾತ್ರಿ ಊಟದ ಸಮಯದಲ್ಲಿಯೂ ಈ ಗೀರೈಸ್ ಊಟ ಬಹಳ ರುಚಿಕರ.

ಮನೆಯಲ್ಲಿ ಯಾವುದಾದರು ಶುಭ ಕಾರ್ಯ ಇದ್ದಾಗ, ಅತಿಥಿಗಳು ಬಂದಾಗ, ಇಲ್ಲವೆ ವಿಶೇಷ ದಿನದಲ್ಲಿ, ಹಬ್ಬದಲ್ಲಿ ಈ ಗೀರೈಸ್ ಮಾಡಿದರೆ ಅದಕ್ಕೊಂದು ರುಚಿ ಸಿಗುವುದು ಪಕ್ಕಾ. ಹಾಗಾದ್ರೆ ಮನೆ ಮಂದಿಯಲ್ಲ ಕುಳಿತು ಸವಿಯಬಹುದಾದಂತಹ ಗೀರೈಸ್ ಮನೆಯಲ್ಲಿ ಮಾಡುವ ಸುಲಭ ವಿಧಾನವನ್ನು ನಾವಿಂದು ತಿಳಿದುಕೊಳ್ಳೋಣ.
ಈ ಗೀರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಕ್ಕಿ
- ತೆಂಗಿನ ಕಾಯಿ ಹಾಲು
- ತುಪ್ಪ
- ಚಕ್ಕೆ
- ಲವಂಗ
- ಏಲಕ್ಕಿ
- ಪಲಾವ್ ಎಲೆ
- ಗೋಡಂಬಿ
- ಹಸಿ ಮೆಣಸು
- ಮರಾಠಿ ಮೊಗ್ಗು
- ಸೋಂಪು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಉಪ್ಪು
- ಎಣ್ಣೆ
ಈ ಗೀರೈಸ್ ಮಾಡುವ ವಿಧಾನವೇನು?
ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎರಡು ಸ್ಪೂನ್ ಎಣ್ಣೆ ಅಥವಾ ತುಪ್ಪ ಹಾಕಿಕೊಂಡು ಇದರ ಜೊತೆಗೆ ಎಣ್ಣೆ ಕೂಡ ಹಾಕಿಕೊಳ್ಳಬಹುದು. ಇದು ಬಿಸಿಯಾಗಲು ಬಿಡಿ. ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಗೋಡಂಬಿ ಹಾಕಿಕೊಂಡು ಮಿಕ್ಸ್ ಮಾಡಿ ಹುರಿದುಕೊಳ್ಳಿ, ಗೋಡಂಬಿ ತೆಗೆದು ಬದಿಗಿಟ್ಟುಕೊಳ್ಳಿ. ಈಗ ಪತ್ತೆ ಅದೇ ಪಾತ್ರೆಗೆ ಸೋಂಪು, ಮರಾಠಿ ಮೊಗ್ಗು ಚಕ್ಕೆ, ಪಲಾವ್ ಎಲೆ, ಲವಂಗ, ಏಲಕ್ಕಿ, ಹಸಿ ಮೆಣಸು ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
1 ನಿಮಿಷ ಬಿಸಿ ಮಾಡಿದ ಬಳಿಕ ಒಂದು ಸಣ್ಣ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಇದಕ್ಕೆ ಹಾಕಿಕೊಳ್ಳಿ. ಹಾಗೆ ಇದಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ತೆಂಗಿನಕಾಯಿಯಿಂದ ತೆಗೆದಿರುವ ಹಾಲನ್ನು ಇದಕ್ಕೆ ಹಾಕಿಕೊಳ್ಳಬೇಕು, ನೀವು ಕಾಯಿಯನ್ನು ತುರಿದು ಮಿಕ್ಸಿಗೆ ಹಾಕಿ ಅದರಿಂದ ಹಾಲು ತೆಗೆದುಕೊಳ್ಳಬೇಕು, ಒಂದರಿಂದ 2 ಗ್ಲಾಸ್ ಹಾಲು ಬಂದರೆ ಸಾಕು. ಈ ಹಾಲನ್ನು ಕೂಡ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುದಿಯಲು ಬಿಡಿ.
ಹಾಲು ಕುದಿಯಲು ಆರಂಭಿಸಿದಾಗ ನೆನೆಸಿಟ್ಟಿರುವ ಅಕ್ಕಿಯನ್ನು ಇದಕ್ಕೆ ಹಾಕಿಕೊಳ್ಳಬೇಕು. ನೀವು ಸಾಮಾನ್ಯ ಅಕ್ಕಿಯನ್ನೂ ಬಳಸಬಹುದು. ಇಲ್ಲವೆ ಬಾಸ್ಮತಿ ರೈಸ್ ಕೂಡ ಬಳಸಿ ಮಾಡಬಹುದು. ಈ ರೈಸ್ ಹಾಕಿದ ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಬೇಕು.
2 ಸೀಟಿ ಹೊಡೆದರೆ ಅನ್ನ ಬೆಂದಿರುವತ್ತದೆ. ನಂತರ ಮುಚ್ಚಳ ತೆಗೆದು ಒಮ್ಮೆ ಕಲಸಿಕೊಂಡು ಮೇಲಕ್ಕೆ ಬೇಕಾದರೆ ಒಂದೂ ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಬಹುದು. ಇಷ್ಟಾದರೆ ನಿಮ್ಮ ಮುಂದೆ ಘಮ ಘಮಿಸುವ ಗೀರೈಸ್ ರೆಡಿಯಾಗುತ್ತದೆ. ನೀವು ಮನೆಯಲ್ಲಿ ಈ ವಿಧಾನ ಬಳಸಿ ಗೀರೈಸ್ ಮಾಡಿದ್ರೆ ಒಂದೇ ಹೊತ್ತಲ್ಲಿ ಎಲ್ಲವೂ ಖಾಲಿಯಾಗೋದು ಪಕ್ಕ.



Click it and Unblock the Notifications