Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹೋಟೆಲ್, ಬೇಕರಿ ರುಚಿಯ ಫ್ರೆಂಚ್ ಫ್ರೈಸ್ ಮನೆಯಲ್ಲಿ ಮಾಡಿ! ಇಲ್ಲಿದೆ ಸಿಂಪಲ್ ಟಿಪ್ಸ್!
ಸಂಜೆಯ ಸ್ನ್ಯಾಕ್ಸ್‌ಗಳು ಸವಿಯುವ ಅಭ್ಯಾಸ ನಿಮಗೂ ಇರಬಹುದು. ಟೀ-ಕಾಫಿಯ ಜೊತೆಗೆ ನೀವು ಬಿಸ್ಕೆಟ್, ಅವಲಕ್ಕಿ, ಕಡಲೆಗಳು, ಚಿಪ್ಸ್ ಹೀಗೆ ನಾನಾ ತಿಂಡಿಯನ್ನ ಸವಿದಿರುತ್ತೀರಿ. ಕೆಲವೊಮ್ಮೆ ಸ್ನ್ಯಾಕ್ಸ್ ಅನ್ನ ಮನೆಯಲ್ಲೇ ಮಾಡಿ ಸವಿಯುತ್ತಿರಿ. ಮಕ್ಕಳಿಗಂತು ಕರಿದ ತಿಂಡಿಗಳೆಂದರೆ ಅಚ್ಚು ಮೆಚ್ಚು. ಆಧ್ರೆ ಬೇಕರಿಯಿಂದ ಇಲ್ಲವೆ ಅಂಗಡಿಯಿಂದಲೇ ನಿತ್ಯ ತಿಂಡಿ ತಂದು ಸವಿಯಲು ಸಾಧ್ಯವಾಗುವುದಿಲ್ಲ.
ಹೀಗಾಗಿ ಮನೆಯಲ್ಲೇ ಕೆಲವೊಂದು ತಿಂಡಿಗಳ ಮಾಡಿ ಸವಿಯಬಹುದು. ಹಾಗಾದ್ರೆ ಮನೆಯಲ್ಲಿ ಮಾಡುವ ತಿಂಡಿಯಲ್ಲಿ ಫ್ರೆಂಚ್ ಫ್ರೈಸ್ ಸಹ ಒಂದಾಗಿದೆ. ಆಲೂಗಡ್ಡೆಯಿಂದ ಮಾಡುವ ಸಿಂಪಲ್ ಆದ ತಿಂಡಿ ಅದಾಗಿದೆ. ಬಹಳ ಸುಲಭವಾಗಿ ಮನೆಯಲ್ಲಿ ರೆಸ್ಟೋರೆಂಟ್ ರುಚಿಯಲ್ಲಿ ಇದನ್ನು ಮಾಡಬಹುದು.

ಈ ಫ್ರೆಂಚ್‌ಪ್ರೈಸ್‌ಗೆ ಹೋಟೆಲ್‌ನಲ್ಲಿ ದುಬಾರಿ ಬೆಲೆ ನೀಡಬೇಕು. ಕೆಲವೊಂದು ಕಡೆ ಈ ಫ್ರೆಂಚ್‌ಫ್ರೈಸ್ ಸಿಕ್ಕಾಪಟ್ಟೆ ಫೇಮಸ್ ಆದ್ರೆ ದುಬಾರಿ ಬೆಲೆ. ಮತ್ತೆ ಕೆಲವರಿಗೆ ಫ್ರೆಂಚ್ ಫ್ರೈಸ್ ಅಂದ್ರೆ ಅಚ್ಚು ಮೆಚ್ಚು. ಹಾಗಾದ್ರೆ ಮನೆಯಲ್ಲಿ ಮಾಡುವುದು ಹೇಗೆ?
ಫ್ರೆಂಚ್ ಫ್ರೈಸ್ ಅನ್ನ ಮನೆಯಲ್ಲೇ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಫ್ರೆಂಚ್ ಫ್ರೈಸ್ ಮಾಡಲು ಬೇಕಾಗುವ ಪದಾರ್ಥಗಳು
- ಆಲೂಗಡ್ಡೆ- 2
- ಖಾರದ ಪುಡಿ - 1/2 ಟೀಸ್ಪೂನ್
- ಅರಿಶಿನ ಪುಡಿ - 1/2 ಟೀಸ್ಪೂನ್
- ಗರಂ ಮಸಾಲಾ - 1/2 ಟೀಸ್ಪೂನ್
- ಕೊತ್ತಂಬರಿ ಪುಡಿ - 1/2 ಟೀಸ್ಪೂನ್
- ಅಕ್ಕಿ ಹಿಟ್ಟು - 1 ಟೀಸ್ಪೂನ್
- ಕಾನ್‌ಫ್ಲೋರ್ - 1 tbsp
- ರುಚಿಗೆ ಉಪ್ಪು
- ಕೊತ್ತಂಬರಿ ಸೊಪ್ಪು
- ಕರಿಬೇವು
- ಎಣ್ಣೆ
ಫ್ರೆಂಚ್ ಫ್ರೈಸ್ ಮಾಡುವುದು ಹೇಗೆ?
ಎರಡು ಆಲೂಗಡ್ಡೆ ಸಿಪ್ಪೆ ತೆಗೆದು ಬೌಲ್‌ಗೆ ನೀರು ಹಾಕಿ ಅದರೊಳಗೆ ಇಡಬೇಕು. 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಬಳಿಕ ಅದನ್ನು ಕತ್ತರಿಸಿಕೊಳ್ಳಬೇಕು. ನೇರ ಕಡ್ಡಿಯ ಆಕಾರದಲ್ಲಿ ಸಣ್ಣದಾಗಿ ಒಂದೇ ರೀತಿ ಎರಡೂ ಆಲೂಗಡ್ಡೆಯನ್ನ ಕತ್ತರಿಸಿಕೊಳ್ಳಿ. ಬಳಿಕ ಅದನ್ನು ನೀರಿಗೆ ಹಾಕಿ ಚೆನ್ನಾಗಿ ತೊಳೆದುಕೊಳ್ಳಿ.
ತೊಳೆದಿರುವ ಆಲೂಗಡ್ಡೆಯಿಂದ ನೀರು ತೆಗೆಯಬೇಕು. ಅದನ್ನು ಒಂದು ಬಟ್ಟೆಯ ಮೇಲೆ ಹಾಕಿ ಚೆನ್ನಾಗಿ ಒತ್ತಿಕೊಂಡು ಡ್ರೈ ಮಾಡಿಕೊಳ್ಳಿ, ಸಮಯವಿದ್ದರೆ ಅದನ್ನು ಫ್ಯಾನ್ ಗಾಳಿಗೆ ಹಿಡಿದು ಒಣಗಿಸಿ. ಇದಾದ ಬಳಿಕ ಒಂದು ಬೌಲ್‌ಗೆ ಹಾಕಿಕೊಳ್ಳಿ.
ಬೌಲ್‌ಗೆ ಹಾಕಿದ ಆಲೂಗಡ್ಡೆಗೆ ಈಗ ಖಾರದ ಪುಡಿ, ಗರಂ ಮಸಾಲೆ, ಉಪ್ಪು, ಅರಶಿನ, ಧನಿಯಾ, ಚಾಟ್ ಮಸಾಲೆ, ಕೊತ್ತಂಬರಿ ಸೊಪ್ಪು ಕರಿಬೇವಿನ ಸೊಪ್ಪು, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಆಲೂಗಡ್ಡೆಗೆ ಈ ಎಲ್ಲಾ ಮಸಾಲೆ ಹಿಡಿಯಬೇಕು ಹಾಗೆ ಕೈಯಿಂದ ಮಿಕ್ಸ್ ಮಾಡಿ 5 ನಿಮಿಷ ಬದಿಗಿಡಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಮಸಾಲೆ ಹಚ್ಚಿ ಇಟ್ಟಿರುವ ಆಲೂಗಡ್ಡೆಯನ್ನು ಒಂದೊಂದಾಗಿ ಬಿಡಿ. ಚೆನ್ನಾಗಿ ತಿರುಗಿಸುತ್ತಾ ಇರಿ. ಆಲೂಗಡ್ಡೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಗರಿ ಗರಿಯ ಫ್ರೆಂಚ್ ಫ್ರೈಸ್ ರೆಡಿಯಾಗುತ್ತದೆ.
ಹೊರಗಡೆ ಮಾಡಿ ಸವಿಯುವುದಕ್ಕಿಂತ ಮನೆಯಲ್ಲೇ ಮಾಡಿ ಸವಿದರೆ ಅದರ ರುಚಿಯೇ ಬೇರೆಯಾಗುತ್ತದೆ. ಹೀಗಾಗಿ ನೀವು ಸಹ ಒಮ್ಮೆ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications
