Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಹೋಟೆಲ್ ರುಚಿಯ ಮೀನಿನ ಫ್ರೈ ಮನೆಯಲ್ಲೇ ಮಾಡಿ..! ಸಿಂಪಲ್ ರೆಸಿಪಿ
ನಾನ್ ವೆಚ್ ಪ್ರಿಯರಿಗೆ ಅತ್ಯಂತ ರುಚಿಕರ ಖಾದ್ಯ ಅಂದ್ರೆ ಅದು ಮೀನು. ಸಮುದ್ರದ ಮೀನುಗಳು ಎಷ್ಟು ರುಚಿ ನೀಡುತ್ತವೆ ಅಂದ್ರೆ ಮೀನು ಊಟದ ಹೋಟೆಲ್‌ಳಿಗೆ ಜನ ಸಾಲಲ್ಲಿ ನಿಲ್ಲುತ್ತಾರೆ. ಅದರಲ್ಲೂ ಮೀನಿನ ಫ್ರೈ ಸವಿದವರಿಗೆ ಮಾತ್ರ ಅದರ ರುಚಿ ಹೇಳಲು ಸಾಧ್ಯ.
ಹೋಟೆಲ್‌ನಲ್ಲಿ ಮಾತ್ರವಲ್ಲ ಮನೆಯಲ್ಲೂ ಈ ಮೀನು ಫ್ರೈ ಮಾಡಬಹುದು. ಅದರಲ್ಲೂ ಹೋಟೆಲ್‌ನಲ್ಲಿ ನೀಡುವ ಮೀನಿನ ಫ್ರೈ ರುಚಿಯಲ್ಲೇ ಮನೆಯಲ್ಲೂ ಮಾಡಿ ಸವಿಯಬಹುದು. ಮಧ್ಯಾಹ್ನ ಇಲ್ಲವೆ ರಾತ್ರಿಯ ಊಟದ ಜೊತೆ ಒಂದು ಮೀನು ಫ್ರೈ ಇದ್ದರೆ ಅದರ ರುಚಿಯೇ ಬೇರೆ.

ಆದ್ರೆ ಎಲ್ಲರಿಗೂ ಮೀನಿನ ಫ್ತೈ ಮಾಡಲು ಬರುವುದಿಲ್ಲ. ಜೊತೆಗೆ ಹಲವರು ಇದು ಕಷ್ಟ ಎಣ್ಣೆ ಹೆಚ್ಚಿ ಬೇಕು ಎಂದು ತಿಳಿದಿರುತ್ತಾರೆ. ಆದ್ರೆ ಮೀನಿನ ಫ್ರೈ ಮಾಡೋದು ಸಾರು ಮಾಡುವುದಕ್ಕಿಂತಲೂ ಸುಲಭ. ಇದಕ್ಕೆ ಕೆಲವೇ ಕೆಲವು ವಸ್ತುಗಳಿದ್ದರೂ ಸಾಕು.
ಹಾಗಾದ್ರೆ ನಾವಿಂದು ಹೋಟೆಲ್ ರುಚಿಯ ಮೀನಿನ ಫ್ರೈ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ತಿಳಿದುಕೊಳ್ಳೋಣ.
ಮೀನು ಪ್ರೈ ಮಾಡಲು ಬೇಕಾಗುವ ವಸ್ತುಗಳು
- ಮೀನು
- ಅರಿಶಿನ ಪುಡಿ - 1/2 ಟೀಸ್ಪೂನ್
- ಕಾಶ್ಮೀರಿ ಕೆಂಪು ಮೆಣಸಿನ ಪುಡಿ - 1 ಟೀಸ್ಪೂನ್
- ಫಿಶ್ ಮಸಾಲಾ ಪುಡಿ - 1 ಟೀಸ್ಪೂನ್
- ಕರಿಮೆಣಸು ಪುಡಿ - 1/2 ಟೀಸ್ಪೂನ್
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 tbs
- ಕರಿಬೇವಿನ ಎಲೆಗಳು - 1 tbs
- ಅಕ್ಕಿ ಹಿಟ್ಟು - 2 ಚಮಚ
- ನಿಂಬೆ ರಸ - 1/4 ಟೀಸ್ಪೂನ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಮೀನು ಫ್ರೈ ಮಾಡುವ ಸುಲಭದ ವಿಧಾನ
ಮೊದಲು ಮೀನನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಿ, ಉಪ್ಪು ಹಾಗೂ ಅರಶಿಣ ಹಾಕಿಕೊಂಡು ಮೀನನ್ನು ಚೆನ್ನಾಗಿ ತೊಳೆದುಕೊಳ್ಳಿ. ಈಗ ಒಂದು ಬೌಲ್‌ಗೆ ಅರಶಿಣ, ಖಾರದ ಪುಡಿ, ಫಿಸ್ ಫ್ರೈ ಮಸಾಲ, ಕರಿ ಮೆಣಸಿನ ಪುಡಿ, ಹಾಗೂ ಕತ್ತರಿಸಿದ ಕರಿಬೇವಿನ ಎಲೆಗಳು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಳ್ಳಿ.
ಇದಕ್ಕೆ ಅಡುಗೆ ಎಣ್ಣೆ ಒಂದು ಚಮಚ ಹಾಗೂ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಹಿಟ್ಟು ಗಟ್ಟಿಯಾದರೆ ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ. ಬಳಿಕ ಮೀನುಗಳನ್ನು ತೆಗೆದುಕೊಂಡು ಈ ಮಸಾಲೆಯನ್ನು ಚೆನ್ನಾಗಿ ಮೀನುಗಳಿಗೆ ಹಚ್ಚಿಕೊಳ್ಳಿ.
ಈ ಮಸಾಲೆ ಹಚ್ಚಿಕೊಂಡ ಬಳಿಕ ಮೀನಿನ ಮೇಲೆ ನಿಂಬೆ ರಸ ಹಾಕಿ, ಇದಕ್ಕೆ ಅಕ್ಕಿ ಹಿಟ್ಟು ಮೇಲೆ ಹರಡಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹೀಗೆ ಹಚ್ಚಿಕೊಂಡ ಬಳಿಕ 1 ಗಂಟೆಗಳ ಕಾಲ ಬಿಡಿ. ಏಕೆಂದರೆ ಮೀನಿಗೆ ಉಪ್ಪು ಕಾರ ಹಿಡಿಯಬೇಕು. ಅಕ್ಕಿ ಹಿಟ್ಟು ಹಾಕಿದರೆ ಮೀನು ಚೆನ್ನಾಗಿ ಫ್ರೈ ಆಗುತ್ತದೆ.
ಹೀಗೆ ಮಸಾಲೆ ಹಚ್ಚಿನದ ಮೀನುಗಳನ್ನು ಕಡಿಮೆ ಉರಿಯಲ್ಲಿ ಇಟ್ಟು ಎಣ್ಣೆಗೆ ಬಿಟ್ಟುಕೊಳ್ಳಿ. ಮೀನು ಎರಡೂ ಕಡೆ ಚೆನ್ನಾಗಿ ಫ್ರೈ ಆಗುವಂತೆ ಮಾಡಿಕೊಳ್ಳಿ. ಉರಿ ಹೆಚ್ಚು ಇಟ್ಟು ಫ್ರೈ ಮಾಡಬೇಡಿ. ಇಷ್ಟಾದರೆ ನಿಮ್ಮ ಮುಂದೆ ಮೀನಿನ ಫ್ರೈ ರೆಡಿಯಾಗುತ್ತದೆ. ಇದನ್ನು ಊಟದ ಜೊತೆ ಸವಿಯಲು ಇಟ್ಟರೆ ಅದರ ರುಚಿ ದುಪ್ಪಟ್ಟಾಗುತ್ತದೆ.
ಮೀನಿನ ಫ್ರೈಗೆ ಅಕ್ಕಿ ಹಿಟ್ಟಿನ ಬದಲಾಗಿ ಕೆಲವರು ರವೆಯನ್ನ ಹಚ್ಚುತ್ತಾರೆ. ಹೀಗೆ ಮಾಡುವುದರಿಂದ ಮೀನು ಚೆನ್ನಾಗಿ ಫ್ರೈ ಆಗುತ್ತದೆ, ರುಚಿಯು ಹೆಚ್ಚು



Click it and Unblock the Notifications
