Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಹೋಟೆಲ್ ರುಚಿಯ ಸೌತೇಕಾಯಿ ಸಾಂಬಾರ್..! ಊಟದ ರುಚಿ ಹೆಚ್ಚಿಸುವ ಹುಳಿ
ಸೀಸನಲ್ ಸಾಂಬಾರ್ ಅಂದರೆ ನಮಗೆ ಹಲವು ತರಕಾರಿಗಳು ನೆನಪಿಗೆ ಬರುತ್ತವೆ. ಅದ್ರಲ್ಲಿ ಊಟದ ಜೊತೆ ಒಂದೊಳ್ಳೆ ಸಾಂಬಾರ್ ಇದ್ದರೆ ಅದರ ರುಚಿಯೇ ಬೇರೆ. ಆದ್ರೆ ಎಲ್ಲಾ ತರಕಾರಿಯ ಸಾಂಬಾರ್ ಮಾಡಲು ಎಲ್ಲರಿಗೂ ಬರುವುದಿಲ್ಲ ಜೊತೆಗೆ ರುಚಿಯೂ ಇರುವುದಿಲ್ಲ. ಮಧ್ಯಾಹ್ನದ ಊಟಕ್ಕೆ ಸೌತೇಕಾಯಿ ಸಾಂಬಾರ್ ಮಾಡಿದ್ರೆ ಅದರ ರುಚಿ ಹೇಳತೀರದು.
ಯಾಕಂದ್ರೆ ಒಗ್ಗರಣೆ ಹಾಕಿ ಮಾಡುವ ಸಾಂಬಾರ್ ತುಂಬಾನೆ ರುಚಿಯಾಗಿರುತ್ತೆ. ಅದ್ರಲ್ಲೂ ನೀವು ಉಡುಪಿ ಹೋಟೆಲ್ ಸೇರಿ ಸಸ್ಯಹಾರಿ ಹೋಟೆಲ್‌ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಈ ಸೌತೇಕಾಯಿ ಸಾಂಬಾರ್ ತುಂಬಾನೆ ಫೇಮಸ್, ಇಷ್ಟೊಂದು ರುಚಿಯ ಸಾಂಬಾರ್ ಮತ್ತೆಲ್ಲೂ ನೀವು ಸವಿಯಲು ಸಾಧ್ಯವಾಗುವುದಿಲ್ಲ.

ಹಾಗಾದ್ರೆ ಹೋಟೆಲ್‌ನಲ್ಲಿ ಸಾಂಬಾರ್ ಮಾಡಿದಂತೆ ರುಚಿ ರುಚಿಯ ಸಾಂಬಾರ್ ಮಾಡುವುದು ಹೇಗೆ?, ಈ ಸಾಂಬಾರ್‌ಗೆ ಅವರು ಏನೆಲ್ಲಾ ವಸ್ತು ಹಾಕುತ್ತಾರೆ. ಹೋಟೆಲ್‌ನಲ್ಲಿ ಸಿಗುವ ಸಾಂಬಾರ್‌ಗೆ ಅದೆಷ್ಟು ಬೇಡಿಕೆ ಇರುತ್ತೆ, ಕೆಲವರು ಹೋಟೆಲ್ ಸಾಂಬಾರ್ ಮನೆಗೆ ತಂದು ಸವಿಯುತ್ತಾರೆ.
ಹಾಗಾದ್ರೆ ಈ ಹೋಟೆಲ್ ರುಚಿಯ ಸಾಂಬಾರ್ ಮಾಡುವುದು ಹೇಗೆ?, ಇದಕ್ಕೆ ಯಾವ ವಸ್ತು ಹಾಕಬೇಕು? ಯಾವೆಲ್ಲಾ ವಸ್ತು ಹಾಕಿದರೆ ಈ ರುಚಿ ಬರುತ್ತೆ?, ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸೌತೇಕಾಯಿ ಸಾಂಬಾರ್ ಮಾಡಲು ಯಾವೆಲ್ಲಾ ವಸ್ತು ಬೇಕು?
- ಸೌತೇಕಾಯಿ
- ತೆಂಗಿನಕಾಯಿ
- ಇಂಗು
- ಎಣ್ಣೆ
- ಧನಿಯಾ
- ಬೆಲ್ಲ
- ಕಡಲೆ ಬೇಳೆ
- ಮೆಂತ್ಯ
- ಹೆಸರು ಬೇಳೆ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಉಪ್ಪು
- ಹುಣಸೆ ಹುಳಿ
- ಒಣ ಮೆಣಸು
- ಸಾಸಿವೆ
- ಜೀರಿಗೆ
ಸೌತೇಕಾಯಿ ಸಾಂಬಾರ್ ಮಾಡುವುದು ಹೇಗೆ?
ಮೊದಲು ಸೌತೇಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆತೆಗೆಯದೆ ಹೆಚ್ಚಿಕೊಳ್ಳಿ. ಸಣ್ಣದಾಗಿ ಹೆಚ್ಚಿಕೊಂಡು ಬದಿಗೆ ಇಟ್ಟುಕೊಳ್ಳಿ. ಈಗ ಅರ್ಧ ಕಪ್ ಹೆಸರು ಬೇಳೆಯನ್ನು ಕುಕ್ಕರ್‌ಗೆ ಹಾಕಿ ಒಂದು ಸೀಟಿ ಹೊಡೆಯುವಂತೆ ಬೇಯಿಸಿಕೊಂಡು ತೆಗೆದು ಇಟ್ಟುಕೊಳ್ಳಿ.
ಒಂದು ಪಾತ್ರೆಯನ್ನ ಒಲೆ ಮೇಲೆ ಇಟ್ಟು ಒಂದು ಸ್ಪೂನ್ ಎಣ್ಣೆ ಹಾಕಿ ಸೌತೇಕಾಯಿಯನ್ನ ಅದಕ್ಕೆ ಹಾಕಿ ಫ್ರೈ ಮಾಡಿ. ಒಂದು ನಿಮಿಷ ಫ್ರೈ ಮಾಡಿದರೆ ಸಾಕು. ಇದಕ್ಕೆ ಸ್ವಲ್ಪ ನೀರು ಹಾಕಿ ಸೌತೆಕಾಯಿ ಬೇಯಲು ಬಿಡಿ. ಈಗ ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿಕೊಂಡು ಅದಕ್ಕೆ ಕಡಲೆ ಬೇಳೆ, ಉದ್ದಿನ ವೇಳೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದಕ್ಕೆ ಜೀರಿಗೆ, ಒಣ ಮೆಣಸು, ಮೆಂತ್ಯೆ, ಧನಿಯಾ ಹಾಕಿಕೊಳ್ಳಿ. ಕೊನೆಯದಾಗಿ ಕರಿಬೇವು ಹಾಕಿ ಫ್ರೈ ಮಾಡಿ ಒಲೆ ಆಫ್ ಮಾಡಿಕೊಳ್ಳಿ. (ಅಗತ್ಯವಿದ್ದರೆ ಒಂದು ಚಿಟಿಗೆ ಇಂಗು ಸಹ ಹಾಕಿಕೊಳ್ಳಿ)
ಈ ಮಸಾಲೆ ತಣ್ಣಗಾದ ಬಳಿಕ ಒಂದು ಮಿಕ್ಸ್ ಜಾರ್ ತೆಗೆದುಕೊಂಡು ಇದನೆಲ್ಲಾ ಹಾಕಿ ಬಳಿಕ ಅದಕ್ಕೆ ತೆಂಗಿನಕಾಯಿ ಸಹ ಹಾಕಿ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ನುಣ್ಣಗೆ ಆಗುವವರೆಗೂ ರುಬ್ಬಿಕೊಳ್ಳಬೇಕು. ಈಗ ಒಲೆ ಮೇಲೆ ಬೇಯುತ್ತಿರುವ ಸೌತೇಕಾಯಿಗೆ ಹುಣಸೆ ಹುಳಿ ಹಾಕಿಕೊಳ್ಳಿ.
ಸೌತೇಕಾಯಿಗೆ ಬೆಲ್ಲವನ್ನೂ ಸಹ ಹಾಕಿಕೊಂಡು ಚೆನ್ನಾಗಿ ಕಲಸಿಕೊಂಡು ಬೇಯಿಸಿಕೊಂಡಿರುವ ಹೆಸರು ಬೇಳೆಯನ್ನ ಹಾಕಿ ಮಿಕ್ಸ್ ಮಾಡಿ. ಕುದಿಯಲು ಬಿಟ್ಟು ಅದಕ್ಕೆ ಉಪ್ಪು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ನಂತರ ರುಬ್ಬಿಕೊಂಡ ಮಸಾಲೆಗಳನ್ನು ಇದಕ್ಕೆ ಹಾಕಿಕೊಂಡು ಮತ್ತೆ ಕುದಿಯಲು ಬಿಟ್ಟುಬಿಡಿ. ಸುಂಆರು 10 ನಿಮಿಷ ಚೆನ್ನಾಗಿ ಕುದಿ ಬಂದರೆ ಸಾಕಾಗುತ್ತದೆ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಳ್ಳಿ.
ನಂತರ ಇದಕ್ಕೊಂದು ಒಗ್ಗರಣೆ ಹಾಕಿ. ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಕರಿಬೇವು, ಒಣ ಮೆಣಸು ಹಾಕಿ ಒಗ್ಗರಣೆಯನ್ನು ಸಾಂಬಾರ್‌ಗೆ ಹಾಕಿಕೊಂಡು ಕಲಸಿಕೊಂಡರೆ ನಿಮ್ಮ ಮುಂದೆ ಹೋಟೆಲ್ ರುಚಿಯ ಸೌತೇಕಾಯಿ ಸಾಂಬಾರ್ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications