Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಈ ರೀತಿ ಚಿಕನ್ ಮಸಾಲ ಫ್ರೈ ಮಾಡಿದ್ರೆ ಹೋಟೆಲ್ ಹೋಗೋದೆ ಬೇಡ..!
ಚಿಕನ್ ಹಾಗೂ ಮಟನ್ ಖಾದ್ಯಗಳು ಅಂದ್ರೆ ಮಾಂಸಾಹಾರಿಗಳ ಬಾಯಲ್ಲಿ ನೀರು ಬರುವುದು ಸಹಜ. ಅದ್ರಲ್ಲೂ ಶನಿವಾರ, ಭಾನುವಾರ ಅಂದ್ರೆ ಚಿಕನ್, ಮಟನ್ ಇದ್ದೇ ಇರುತ್ತೆ. ಕೆಲವರು ಹೊರಗಡೆ ಹೋಟೆಲ್‌ಗಳಲ್ಲಿ ಸವಿಯಲು ಇಷ್ಟಪಡುತ್ತಾರೆ, ಹಾಗೆ ಮತ್ತೆ ಕೆಲವರು ಮನೆಯಲ್ಲೇ ಅದ್ಭುತ ರುಚಿಯ ಚಿಕನ್ ಹಾಗೂ ಮಟನ್ ಐಟಂ ಮಾಡಿ ಬಾಯಿ ಚಪ್ಪರಿಸಿ ಸವಿಯುತ್ತಾರೆ.
ಚಿಕನ್ ಅಂದ್ರೆ ಅದರಲ್ಲಿ ಹತ್ತಾರು ವಿಧ ಇರುವುದು ಕೂಡ ಬಾಯಿ ರುಚಿ ಹೆಚ್ಚಿಸುತ್ತೆ. ಚಿಕನ್‌ನಲ್ಲಿ ಹೆಚ್ಚಾಗಿ ಗ್ರೇವಿ, ಕರಿ, ಫ್ರೈ, ತಂದೂರಿಯಂತಹ ಅದ್ಭುತ ರುಚಿ ಖಾದ್ಯ ಮಾಡೋದು ಇದೆ. ಇದರ ಜೊತೆಗೆ ಸ್ಪೆಷಲ್ ಆಗಿಯೂ ಇನ್ನಷ್ಟು ಖಾದ್ಯ ಸಿದ್ದ ಮಾಡಬಹುದು. ಹಾಗಾದ್ರೆ ಚಿಕನ್‌ನಿಂದ ಈ ವಾರಾಂತ್ಯಕ್ಕೆ ಸ್ಪೆಷಲ್ ಅಡುಗೆ ಟ್ರೈ ಮಾಡಿ ನೋಡಿ. ಅದರಲ್ಲೂ ಹೋಟೆಲ್ ರುಚಿಯ ಮಸಾಲ ಗ್ರೇವಿ ಮೊಡಿ ನೋಡಿ.

ಹೋಟೆಲ್, ಡಾಬಾದಲ್ಲಿ ನೀಡುವಂತೆ ಮಸಾಲ ಚಿಕನ್ ಫ್ರೈ ಊಟ ಹಾಗೆ ಎಲ್ಲಾ ತಿಂಡಿಯ ಜೊತೆಗೂ ಸವಿಯಲು ಅದ್ಭುತವಾಗಿರುತ್ತೆ. ಒಮ್ಮೆ ಈ ರೀತಿ ಮಸಾಲೆಗಳ ಬಳಸಿ ಸವಿದರೆ ಪದೇ ಪದೇ ಸವಿಯಬೇಕು ಅಂದುಕೊಳ್ಳುತ್ತೀರಿ. ಹಾಗಾದ್ರೆ ಈ ಸ್ಪೆಷಲ್ ಚಿಕನ್ ಮಸಾಲ ಫ್ರೈ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಹೋಟೆಲ್ ಸ್ಟೈಲ್‌ನ ಮಸಾಲ ಚಿಕನ್ ಫ್ರೈ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಖಾದ್ಯ ತಯಾರಿಗೆ ಎಷ್ಟು ಸಮಯ ಹಿಡಿಯಲಿದೆ? ಎಷ್ಟು ಪ್ರಮಾಣದ ಮಸಾಲೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಮಸಾಲ ಚಿಕನ್ ಫ್ರೈ ಮಾಡಲು ಯಾವೆಲ್ಲಾ ಪದಾರ್ಥ ಬೇಕು?
- ಕೋಳಿ ಮಾಂಸ
- ಈರುಳ್ಳಿ
- ಟೊಮೆಟೋ- 2
- ಮೊಸರು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕೊತ್ತಂಬರಿ ಪುಡಿ
- ಕರಿಮೆಣಸಿನ ಪುಡಿ
- ಚಿಕನ್ ಮಸಾಲ ಪುಡಿ
- ಗರಂ ಮಸಾಲ
- ಕೊತ್ತಂಬರಿ ಸೊಪ್ಪು
- ಪುದೀನ ಸೊಪ್ಪು
- ಕೆಂಪು ಮೆಣಸಿನ ಪುಡಿ
- ಅರಿಶಿನ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ಮಸಾಲ ಚಿಕನ್ ಫ್ರೈ ಮಾಡುವ ವಿಧಾನವೇನು?
ಮೊದಲು ಒಂದು ದೊಡ್ಡ ಬೌಲ್‌ನಲ್ಲಿ ಚಿಕನ್ ತೆಗೆದುಕೊಂಡು ಅದಕ್ಕೆ ಧನಿಯಾ ಪುಡಿ, ಖಾರದ ಪುಡಿ, ಅರಶಿಣ, ಗರಂ ಮಸಾಲೆ, ಚಿಕನ್ ಮಸಾಲೆ ಪುಡಿ, ಕಾಳು ಮೆಣಸಿನ ಪುಡಿ, ಉಪ್ಪು ಹಾಕಿಕೊಂಡು ಮೊದಲು ಡ್ರೈ ಮಿಕ್ಸ್ ಮಾಡಿ. ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಸರು, ಪುದಿನ, ಕೊತ್ತಂಬರಿ ಸೊಪ್ಪು ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈಗ ಟೊಮೆಟೋ ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪೇಸ್ಟ್ ಮಾಡಿಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಸಣ್ಣದಾಗಿ ಹೆಚ್ಚಿಕೊಂಡು ಹಾಕಿ ಫ್ರೈ ಮಾಡಿಕೊಳ್ಳಿ. 3 ನಿಮಿಷ ಫ್ರೈ ಮಾಡಿದ ಬಳಿಕ ಈ ಬಾಣಲೆಗೆ ಚಿಕನ್ ಹಾಕಿಕೊಂಡು ಮಿಕ್ಸ್ ಮಾಡಿ ಸ್ವಲ್ಪ ನೀರು ಹಾಕಿ ಬಿಡಿ. ಸುಮಾರು 5 ನಿಮಿಷ ಮುಚ್ಚಳ ಮುಚ್ಚಿ ಕಾಯಲು ಬಿಡಿ. ಆಗಾಗ ನಡುವೆ ಮಿಕ್ಸ್ ಮಾಡುತ್ತಾ ಇರಿ. ಇಲ್ಲದಿದ್ರೆ ತಳ ಹಿಡಿಯಬಹುದು.
5 ನಿಮಿಷ ಬೇಯಿಸಿದ ಬಳಿಕ ಮುಚ್ಚಳ ತೆಗೆದು ಚೆನ್ನಾಗಿ ಮಿಕ್ಸ್ ಮಾಡಿ ರುಚಿ ನೋಡಿಕೊಳ್ಳಿ, ಉಪ್ಪು ಕಡಿಮೆ ಇದ್ದರೆ ಉಪ್ಪು ಹಾಕಿ ಹಾಗೆ ನೀರು ಬೇಕಿದ್ದರೆ ನೀರನ್ನು ಕೂಡ ಹಾಕಿಕೊಂಡು ತಿರುಗಿಸಿಕೊಳ್ಳಿ. 2 ನಿಮಿಷ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ರುಚಿ ರುಚಿಯ ಈ ಚಿಕನ್ ಮಸಾಲ ಫ್ರೈ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications