Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹೋಟೆಲ್ ಸ್ಟೈಲ್ನ ದೊಡ್ಡ ಉದ್ದಿನ ವಡೆ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
ನೀವು ಬೆಳಗ್ಗೆ ತಿಂಡಿಗೆ ಹೋಟೆಲ್ ತಿಂಡಿಗಳ ಸವಿಯಲು ಇಷ್ಟಪಡುವವರಾಗಿದ್ದರೆ ಇಡ್ಲಿ, ವಡೆ, ಮಸಾಲೆ ದೋಸೆ ಹೀಗೆ ಹಲವು ಬಗೆಯ ಖಾದ್ಯ ಸವಿಯಲು ಮುಂದಾಗುತ್ತೀರಿ. ಕೆಲವೊಮ್ಮೆ ಹೋಟೆಲ್ ರುಚಿಯಲ್ಲಿ ಮನೆಯಲ್ಲೇ ಮಾಡಿ ಸವಿಯುವುದು ಕೂಡ ಉಂಟು. ಅದರಲ್ಲೂ ಇಡ್ಲಿ, ದೋಸೆಯನ್ನು ಯಾವಾಗಲು ಹೋಟೆಲ್ನಲ್ಲಿ ಸವಿಯುವುದಿಲ್ಲ, ಮನೆಯಲ್ಲೂ ಕೂಡ ಮಾಡಿ ಸವಿಯುವುದು ನೋಡಬಹುದು.
ಆದ್ರೆ ಮನೆಯಲ್ಲೇ ಸವಿಯಲು ನಾವು ಇಡ್ಲಿ, ದೋಸೆಯ ಜೊತೆಗೆ ಈ ವಡೆಯನ್ನು ಕೂಡ ಮಾಡುವುದು ಅತ್ಯುತ್ತಮ ರುಚಿ ನೀಡುತ್ತೆ. ಮನೆಯಲ್ಲಿ ಹೋಟೆಲ್ ಶೈಲಿಯ ದೊಡ್ಡದಾದ ವಡೆ ಮಾಡಿದರೆ ಮನೆ ಮಂದಿಯಲ್ಲ ಕುಳಿತು ಸವಿಯುತ್ತಾರೆ, ಹಾಗೆ ಯಾವಾಗಲು ಈ ವಡೆ ಮಾಡಿ ಸವಿಯಲು ಇಷ್ಟಪಡುತ್ತಾರೆ. ನಾವಿಂದು ಹೋಟೆಲ್ ಶೈಲಿಯ ಈ ದೊಡ್ಡದಾದ ಉದ್ದಿನ ವಡೆ ಮಾಡುವ ಕುರಿತಂತೆ ತಿಳಿಯೋಣ.

ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಈ ಉದ್ದಿನ ವಡೆಯನ್ನು ಇಷ್ಟಪಡದವರಿಲ್ಲ. ಎಲ್ಲರಿಗೂ ಈ ವಡೆ ಅಂದರೆ ಅಷ್ಟು ಇಷ್ಟವಿರುತ್ತೆ. ನಾವು ಕೂಡ ಈ ವಡೆಯನ್ನು ಸವಿಯಲು ಇಂದು ಮಾಡುವ ವಿಧಾನ ಕುರಿತು ತಿಳಿದುಕೊಳ್ಳೋಣ. ಹಾಗೆ ಬೆಳಗ್ಗೆ ತಿಂಡಿ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಹೋಟೆಲ್ ಶೈಲಿಯ ಈ ಉದ್ದಿನ ವಡೆ ಮಾಡಲು ಏನೆಲ್ಲಾ ಬೇಕು? ಉದ್ದಿನ ವಡೆಗೆ ಹಿಟ್ಟು ಯಾವ ರೀತಿ ರೆಡಿ ಮಾಡಿಕೊಳ್ಳಬೇಕು?, ವಡೆ ಮಾಡುವ ವಿಧಾನವೇನು? ಯಾವೆಲ್ಲಾ ತಯಾರಿ ಬೇಕು ಎಂಬ ಕುರಿತು ನಾವಿಲ್ಲಿ ತಿಳಿದುಕೊಳ್ಳೋಣ.
ಉದ್ದಿನ ವಡೆ ಮಾಡಲು ಆಗತ್ಯವಿರುವ ವಸ್ತುಗಳು
- ಉದ್ದು - 2 ಕಪ್
- ಅಕ್ಕಿ
- ಶುಂಠಿ
- ಕಾಳು ಮೆಣಸು
- ಹಸಿ ಮೆಣಸು
- ಕರಿಬೇವು
- ಕೊತ್ತಂಬರಿ ಸೊಪ್ಪು
- ಅಡುಗೆ ಸೋಡಾ
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಉದ್ದಿನ ವಡೆ ಮಾಡುವ ವಿಧಾನ ಇದು
2 ಕಪ್ ಉದ್ದಿನ ಬೇಳೆಯನ್ನು ನೀರಿನಲ್ಲಿ ತೊಳೆದು ಬಳಿಕ ನೆನೆಸಿಡಬೇಕು. ಅರ್ಧ ಕೆಜಿ ಉದ್ದಿನ ಬೇಳೆ ಇರಲಿ, ಹಾಗೆ 100 ಗ್ರಾಮ್ ಅಕ್ಕಿಯನ್ನು ಕೂಡ ತೊಳೆದು ಅದನ್ನು ಕೂಡ ನೆನೆಹಾಕಿಟ್ಟುಕೊಳ್ಳಿ. 2 ಗಂಟೆ ನೆನೆಸಿಟ್ಟ ಬಳಿಕ ನಂತರ ಮಿಕ್ಸಿ ಜಾರ್ಗೆ ಉದ್ದು ಹಾಗೂ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಹಾಕಿಟ್ಟುಕೊಳ್ಳಿ. ಹಿಟ್ಟು ಗಟ್ಟಿಯಾಗಿರಬೇಕು ನೀರು ಹೆಚ್ಚಿಗೆ ಬಳಸಬೇಡಿ.
ನಂತರ ಹಿಟ್ಟಿಗೆ ಉಪ್ಪು ಹಾಗೂ 2 ಚಿಟಿಕೆ ಸೋಡಾ ಕೂಡ ಹಾಕಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಅಂಟು ಅಂಟಾದ ಹಿಟ್ಟಿನ ಮಾದರಿಗೆ ಅದು ಬರಬೇಕು. ಅಂದರೆ ನೀರಿನಲ್ಲಿ ಹಿಟ್ಟನ್ನು ಬಿಟ್ಟರೆ ಅದು ಕರಗಬಾರದು. ಈಗ ಈ ಹಿಟ್ಟಿಗೆ ಸಣ್ಣದಾಗಿ ಹೆಚ್ಚಿರುವ ಶುಂಠಿ, 7 ರಿಂದ 10 ಕಾಳು ಮೆಣಸು, ಹಸಿ ಮೆಣಸು, ಕರಿಬೇವು, ಕೊತ್ತಂಬರಿ ಸಣ್ಣದಾಗಿ ಹೆಚ್ಚಿ ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಕೈಯನ್ನು ನೀರಿನಲ್ಲಿ ಅದ್ದಿಕೊಂಡು ನಿಮಗೆ ಎಷ್ಟು ದೊಡ್ಡ ಗಾತ್ರದಲ್ಲಿ ಬೇಕೋ ಅಷ್ಟು ಹಿಟ್ಟು ತೆಗೆದುಕೊಂಡು ಮಧ್ಯದಲ್ಲಿ ನಿಮ್ಮ ಹೆಬ್ಬೆರಳ ಬಲಸಿ ತೂತು ಮಾಡಿ ಎಣ್ಣೆಯಲ್ಲಿ ಬಿಡಬೇಕು. ಎಣ್ಣೆಯಲ್ಲಿ 2ರಿಂದ 3 ನಿಮಿಷ ಕಾಯಿಸಿದ ಬಳಿಕ ಮತ್ತೊಂದು ಭಾಗ ಕರಿದುಕೊಳ್ಳಿ. ನಂತರ ಎಣ್ಣೆಯಿಂದ ಮೇಲೆತ್ತು ಎಣ್ಣೆ ಇಳಿಯಲು ಬಿಟ್ಟು ಸವಿಯಲು ನೀಡಿ. ಇದು ಹೋಟೆಲ್ ರುಚಿಯ ವಡೆಯಂತೆ ನಿಮ್ಮ ನಾಲಿಗೆಗೆ ರುಚಿ ನೀಡಲಿದೆ.



Click it and Unblock the Notifications
