Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಹೋಟೆಲ್ ರುಚಿಯ ಬೀನ್ಸ್ ಪಲ್ಯ ಮಾಡಿ..! ಸಿಂಪಲ್ ರೆಸಿಪಿ ಇಲ್ಲಿದೆ!
ಊಟದ ಜೊತೆ ಯಾವುದಾದರು ತರಕಾರಿಯ ಒಂದು ಪಲ್ಯ ಇದ್ದರೆ ಅದರ ರುಚಿಯೇ ಬೇರೆ. ಹೀಗಾಗಿ ಶುಭ ಸಮಾರಂಭಗಳಲ್ಲಿ ಊಟದ ಜೊತೆ ಪಲ್ಯ ಇರುವುದು ನಿಯಮದಂತೆ ಬಂದುಬಿಟ್ಟಿದೆ. ಇನ್ನು ಹೋಟೆಲ್ನಲ್ಲೂ ಇದೇ ರೀತಿ ನೀವು ಊಟಕ್ಕೆ ಆರ್ಡರ್ ಮಾಡಿದರೆ ಎರಡು ಮೂರು ರೀತಿಯ ಪಲ್ಯಗಳ ಕೊಡುತ್ತಾರೆ. ಈ ಪಲ್ಯಗಳು ತಿನ್ನಲು ಬಹಳ ರುಚಿಯಾಗಿರುತ್ತೆ.
ಹೀಗೆ ಊಟಕ್ಕೆ ಪಲ್ಯ ಇದ್ದರೆ ಆ ಊಟಕ್ಕೆ ಒಂದು ರುಚಿ ಬರಲಿದೆ. ಹೀಗಾಗಿ ನಾವಿಂದು ಊಟದ ಜೊತೆ ಸವಿಯಲು ಬೀನ್ಸ್ ಪಲ್ಯ ಮಾಡುವ ಕುರಿತು ತಿಳಿಯೋಣ. ಆದ್ರೆ ಇದು ಸಾಮಾನ್ಯವಾಗಿ ನಾವು ನಿತ್ಯ ಮಾಡುವ ಪಲ್ಯದಂತೆ ಇರುವುದಿಲ್ಲ,. ಬದಲಿಗೆ ಹೋಟೆಲ್ನಲ್ಲಿ ನೀಡಲಾಗುವ ವಿಶೇಷ ರುಚಿಯ ವಿಭಿನ್ನ ಬೀನ್ಸ್ ಪಲ್ಯ ಮಾಡಿ ನೋಡೋಣ.

ತರಕಾರಿಗಳಲ್ಲಿ ಬೀನ್ಸ್ ಸಾಂಬಾರ್ ಹಾಗೂ ಪಲ್ಯ ಎರಡೂ ಮಾಡಿದರೂ ಅದು ರುಚಿ ನೀಡಲಿದೆ. ಹಾಗಾದ್ರೆ ನಾವಿಂದು ಹೋಟೆಲ್ ರುಚಿಯ ಬೀನ್ಸ್ ಪಲ್ಯ ಮಾಡುವುದು ಹೇಗೆ?, ಬೀನ್ಸ್ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳೇನು? ಬೀನ್ಸ್ ಪಲ್ಯಕ್ಕೆ ಏನೆಲ್ಲಾ ಹಾಕಬೇಕು? ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡೋಣ.
ಬೀನ್ಸ್ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಬೀನ್ಸ್
- ಹುರುಳಿಕಾಯಿ 1/2 ಕೆಜಿ
- ಈರುಳ್ಳಿ- 1
- ತೆಂಗಿನಕಾಯಿ ತುರಿ- ಅರ್ಧ ಕಪ್
- ಒಣ ಮೆಣಸಿನಕಾಯಿ - 10
- ಎಣ್ಣೆ
- ಸಾಸಿವೆ
- ಇಂಗು
- ಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಜೀರಿಗೆ
- ಅರಿಶಿನ
- ಬೆಲ್ಲ- ಸಣ್ಣ ಉಂಡೆ
- ಶುಂಠಿ
- ಉಪ್ಪು
ಬೀನ್ಸ್ ಪಲ್ಯ ಮಾಡುವ ವಿಧಾನ
ಮೊದಲು ಬೀನ್ಸ್ ಅನ್ನು ಸಣ್ಣದಾಗಿ ಕತ್ತರಿಸಿಕೊಂಡು ತೊಳೆದುಕೊಂಡು ಒಂದು ಕುಕ್ಕರ್ಗೆ ಹಾಕಿ. ಇದಕ್ಕೆ ಉಪ್ಪು, ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಅರಶಿನ ಪುಡಿ ಹಾಕಿ ಮುಚ್ಚಳ ಮುಚ್ಚಿ ಬೇಯಲು ಇಡಿ. ಒಂದು ಸೀಟಿ ಹೊಡೆಯಲು ಬಿಡಿ. ಒಂದು ಸೀಟಿ ಬಳಿಕ ಕುಕ್ಕರ್ ಆಫ್ ಮಾಡಿ ತಣ್ಣಗಾಗಲು ಇಡಿ. ಈ ಸಮಯದಲ್ಲಿ ಪಲ್ಯಕ್ಕೆ ಬೇಕಾದ ಮಸಾಲ ತಯಾರು ಮಾಡಿ.
ಒಂದು ಮಿಕ್ಸಿ ಜಾರ್ಗೆ ಒಣ ಮೆಣಸಿನಕಾಯಿ, ಜೀರಿಗೆ, ಸಾಸಿವೆ, ಬೆಲ್ಲ, ಶುಂಠಿ, ಕರಿವೇವು, ಅರಶಿನ ಪುಡಿ ಹಾಕಿಕೊಂಡಿ ತರಿ ತರಿಯಾಗು ಹುಡಿ ಮಾಡಿಕೊಳ್ಳಬೇಕು. ಚಟ್ನಿ ಪುಡಿಯಂತೆ ಮಾಡಿಕೊಳ್ಳಿ. ಬಳಿಕ ಜಾರ್ಗೆ ತೆಂಗಿನ ತುರಿ ಹಾಕಿಕೊಂಡು ಮತ್ತೆ ರುಬ್ಬಿಕೊಳ್ಳಿ.
ಈಗ ಕುಕ್ಕರ್ ಮುಚ್ಳ ತೆಗೆದು ಅದರಲ್ಲಿರುವ ನೀರನ್ನು ಬೇರ್ಪಡಿಸಿಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಇಂಗು, ಕರಬೇವು, ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಮಿಕ್ಸಿ ಜಾರ್ನಲ್ಲಿ ರುಬ್ಬಿಕೊಂಡ ಮಸಾಲೆಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 3 ನಿಮಿಷ ಫ್ರೈ ಮಾಡಿಕೊಳ್ಳಿ. ಈ ವೇಳೆ ನೀರು ಹಾಕಿಕೊಳ್ಳಬೇಡಿ.
ಈಗ ಬೇಯಿಸಿದ ಬೀನ್ಸ್ ಅನ್ನು ಈ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. 3 ನಿಮಿಷ ಫ್ರೈ ಮಾಡಿದ ಬಳಿಕ ಕೊನೆಯಲ್ಲಿ ಅದಕ್ಎಕ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿಕರ ಬೀನ್ಸ್ ಪಲ್ಯ ರೆಡಿಯಾಗುತ್ತದೆ. ಇದನ್ನು ನೀವು ಊಟ, ಚಪಾತಿ ಹೀಗೆ ಹಲವು ಖಾದ್ಯದ ಜೊತೆಗೆ ಸವಿಯಬಹುದು. ಈ ರೆಸಿಪಿಯನ್ನ ಮಾಡುವುದು ಸಹ ತುಂಬಾನೆ ಸುಲಭವಾಗಿದೆ.



Click it and Unblock the Notifications
