Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೋಳಿಗೆಯಂತೆ ಮೃದುವಾದ ಅಕ್ಕಿ ರೊಟ್ಟಿ ಮಾಡಿ; ಹೊಸ ರೀತಿ ವಿಧಾನ ಟ್ರೈ ಮಾಡಿ!
ಬೆಳಗ್ಗೆ ತಿಂಡಿಗೆ ನೀವು ವಿವಿಧ ಬಗೆಯ ತಿಂಡಿಗಳ ಮಾಡಿ ಸವಿಯುವ ಅಭ್ಯಾಸ ಇಟ್ಟುಕೊಂಡಿರುವ ಮಂದಿ ಆಗಿರಬಹುದು. ಹಾಗೆ ನಿಮಗೆ ರೊಟ್ಟಿ, ಚಪಾತಿಯಂತಹ ಖಾದ್ಯಗಳು ಅಂದ್ರೆ ಬಹಳ ಇಷ್ಟವಾಗಬಹುದು. ರೊಟ್ಟಿ ಸವಿಯಲು ಇಷ್ಟಪಡುವ ಮಂದಿಗೆ ಅಕ್ಕಿರೊಟ್ಟಿ, ಗೋಧಿ, ಜೋಳ, ರಾಗಿ ಹಿಟ್ಟನ್ನು ಬಳಸಿ ಮಾಡುವ ರೊಟ್ಟಿ ಅಂದ್ರೆ ಎಲ್ಲರು ಇಷ್ಟಪಡುತ್ತಾರೆ. ಹಾಗೆ ಹೋಟೆಲ್, ಕ್ಯಾಂಟೀನ್‌ಗಳಲ್ಲಿಯೂ ಇದನ್ನು ಸವಿಯಲು ಮುಂದಾಗುವ ಮಂದಿ ಇದ್ದಾರೆ.
ಹಾಗೆ ಬೆಳಗ್ಗೆ ತಿಂಡಿಗೆ ನೀವು ರೊಟ್ಟಿ ಮಾಡಿ ಸವಿಯುವ ಆಲೋಚನೆಯಲ್ಲಿದ್ದರೆ ಅದ್ರಲ್ಲೂ ಅಕ್ಕಿ ಹಿಟ್ಟಿನ ರೊಟ್ಟಿ ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಅಕ್ಕಿ ಹಿಟ್ಟಿನ ಫೈಬರ್ ಅಂಶವು ನಿಮ್ಮ ಜೀರ್ಣಕ್ರಿಯೆ ಸಂಬಂಧವಾಗಿ ಉತ್ತಮ ಅಂಶಗಳ ಹೊಂದಿದೆ. ಆದ್ರೆ ಹಲವರಿಗೆ ಈ ಅಕ್ಕಿ ರೊಟ್ಟಿ ಸವಿಯೋದು ಬಹಳ ಇಷ್ಟ, ಮಾಡುವ ವಿಧಾನ ತಿಳಿಯದೆ ಇರುವುದರಿಂದ ಅದನ್ನು ಪ್ರಯತ್ನಿಸಿರುವುದಿಲ್ಲ.

ಹೀಗಾಗಿ ನಾವಿಂದು ಮನೆಯಲ್ಲಿ ಸುಲಭವಾಗಿ ಈ ಅಕ್ಕಿ ಹಿಟ್ಟಿನಿಂದ ಮಾಡುವ ಸುಲಭದ ರೊಟ್ಟಿಯನ್ನು ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಈ ಅಕ್ಕಿ ಹಿಟ್ಟಿನ ರೊಟ್ಟಿ ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ? ಮಾಡಲು ಹೇಗೆ ತಯಾರಿ ಮಾಡಿಕೊಳ್ಳಬೇಕು. ಇದಕ್ಕೆ ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಅನ್ನೋದನ್ನು ತಿಳಿದುಕೊಳ್ಳೋಣ.
ಮೃದುವಾದ ಅಕ್ಕಿ ರೊಟ್ಟಿ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ ಹಿಟ್ಟು
- ಉಪ್ಪು
- ಎಣ್ಣೆ
- ಮೈದಾ ಹಿಟ್ಟು
ಮೃದುವಾದ ಅಕ್ಕಿ ರೊಟ್ಟಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಅಳತೆ ಕಪ್‌ನಲ್ಲಿ 3 ಕಪ್ ನೀರು ಹಾಕಿ ಬಿಸಿ ಮಾಡಿಕೊಳ್ಳಿ. ಇದಕ್ಕೆ ಉಪ್ಪು ಸಹ ಹಾಕಿಕೊಳ್ಳಿ. ನೀರು ಕುದಿಯಲು ಆರಂಭಿಸಿದಾಗ ಇದಕ್ಕೆ ಅಳತೆ ಕಪ್‌ನಲ್ಲಿ 2 ಕಪ್ ಅಕ್ಕಿ ಹಿಟ್ಟು ಹಾಕಿಕೊಳ್ಳಿ. ನಿಧಾನವಾಗಿ ಮಿಕ್ಸ್ ಮಾಡುತ್ತಾ ಇರಿ. ಹಾಗೆ ಮಿಕ್ಸ್ ಮಾಡುತ್ತಾ ಇರಬೇಕು.
ಈ ಸಮಯದಲ್ಲಿ ಗ್ಯಾಸ್ ಆಫ್ ಮಾಡಿಕೊಂಡು ಗಂಟುಗಳ ಇಲ್ಲದಂತೆ ಮಿಕ್ಸ್ ಮಾಡಿ. ಅನಂತರ ಮುಚ್ಚಳ ಮುಚ್ಚಿ ಇಡಿ. ಈಗ ಒಂದು ಪಾತ್ರೆಗೆ ಒಂದೂವರೆ ಕಪ್ ಮೈದಾ ಹಿಟ್ಟು ಉಪ್ಪು ಹಾಕಿ ಮಿಶ್ರಣ ಮಾಡಿ, ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿ. ಹಾಗೆ 1 ಸ್ಪೂನ್ ಎಣ್ಣೆ ಸಹ ಹಾಕಿ ಮಿಶ್ರಣ ಮಾಡಿ. ಇದು ಹೋಳಿಗೆ ಹೂರ್ಣದಂತೆ ಬರಬೇಕು. ಆ ರೀತಿ ಮಿಶ್ರಣ ಮಾಡಿ. ಮೃದುವಾದ ಹಿಟ್ಟು ಬಂದ ಬಳಿಕ ಮುಚ್ಚಳ ಮುಚ್ಚಿ ಹಾಗೆಯೇ ಬಿಡಿ.
ಅನಂತರ ಅಕ್ಕಿ ಹಿಟ್ಟನ್ನು ಉಂಡೆ ಕಟ್ಟಿಕೊಂಡು ಇಟ್ಟುಕೊಳ್ಳಿ. ಹೋಳಿಗೆ ಕಟ್ಟುವಂತೆ ಉಂಡೆ ಕಟ್ಟಿಕೊಂಡು ಇಟ್ಟುಕೊಳ್ಳಿ. ಹಾಗೆ ಮೈದಾ ಹಿಟ್ಟನ್ನು ಸಹ ಉಂಡೆ ಮಾಡಬೇಕು. ಆದ್ರೆ ಅಕ್ಕಿ ಹಿಟ್ಟಿಗಿಂತ ಸಣ್ಣದಾಗಿ ಈ ಮೈದಾ ಉಂಡೆ ಮಾಡಿಕೊಳ್ಳಿ. ಈಗ ಮೊದಲು ಮೈದಾ ಉಂಡೆಯನ್ನು ಚಪಾತಿಯಂತೆ ಲಟ್ಟಿಸಿಕೊಳ್ಳಿ. ಅನಂತರ ಮಧ್ಯದಲ್ಲಿ ಅಕ್ಕಿ ಉಂಡೆ ಇಟ್ಟು ಉಂಡೆ ಕಟ್ಟಿ ಮತ್ತೆ ತೆಳುವಾಗಿ ಲಟ್ಟಿಸಿಕೊಳ್ಳಬೇಕು. ಇದನ್ನು ತೆಳುವಾಗಿ ಲಟ್ಟಿಸಿಕೊಳ್ಳಿ. ಅನಂತರ ಕಾವಲಿ ಮೇಲೆ ಹಾಕಿ ಕಾಯಿಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಹೋಳಿಯಂತಹ ಅಕ್ಕಿ ರೊಟ್ಟಿ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಈ ರೀತಿ ವಿಧಾನವನ್ನು ಬಳಸಿ ಅಕ್ಕಿ ರೊಟ್ಟಿ ಮಾಡಿ ಸವಿದು ನೋಡಿ. ಎಲ್ಲರಿಗೂ ಇದು ಇಷ್ಟವಾಗುತ್ತೆ. ಹಾಗೆ ಮೃದುವಾಗಿರೋದ್ರಿಂದ ಎಲ್ಲರು ಸುಲಭವಾಗಿ ಸವಿಯಬಹುದು.



Click it and Unblock the Notifications
