Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹಬ್ಬಕ್ಕೆ ರುಚಿ ರುಚಿಯ ಸಿಹಿ ಬೇಳೆ ಹೋಳಿಗೆ ಮಾಡಿ..! ರೆಸಿಪಿ ಇಲ್ಲಿದೆ..!
ಮಾರ್ಚ್ ತಿಂಗಳು ಮುಗಿದು ಏಪ್ರಿಲ್ ಆರಂಭವಾಗುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಬರಲಿವೆ. ಇದೇ ಏಪ್ರಿಲ್ 9ರಂದು ಹಿಂದೂಗಳ ಪ್ರಮುಖ ಹಬ್ಬವಾದ ಯುಗಾದಿಯೂ ಬರುತ್ತಿದೆ. ಯುಗಾದಿ ಎಂದರೆ ಹಿಂದೂಗಳಿಗೆ ಹೊಸ ವರ್ಷ ಆರಂಭದಂತೆ. ಜನವರಿಯಲ್ಲಿ ಹೊಸ ವರ್ಷ ಆಚರಿಸಿದರು ಯುಗಾದಿಯಿಂದ ಹೊಸ ವರ್ಷ ಅಂತಲೇ ಸಂಪ್ರದಾಯದ ಆಚರಣೆ ನಡೆದುಕೊಂಡು ಬಂದಿದೆ. ಹೀಗಾಗಿ ಯುಗಾದಿ ಹಿಂದೂಗಳ ಪಾಲಿನ ಪ್ರಮುಖ ಹಬ್ಬ.
ಇನ್ನು ಯುಗಾದಿ ಅಂದರೆ ಹೊಸತು ಆರಂಭ ಎಂಬ ಭಾವನೆಯೂ ಇದೆ. ಅಂದು ಹೊಸ ಬಟ್ಟೆ ಧರಿಸುವುದು, ಹೊಸ ಅಡುಗೆ, ಹೊಸ ಫಸಲಿನ ಅಡುಗೆ ಹೀಗೆ ವಿವಿಧ ರೀತಿ ಆಚರಿಸುತ್ತಾರೆ. ಇನ್ನು ಹಬ್ಬ ಎಂದ ಮೇಲೆ ಅಲ್ಲೊಂದು ಸಿಹಿ ತಿಂಡಿ ಇರಲೇಬೇಕು. ಯುಗಾದಿಯಲ್ಲಿ ಸಿಹಿ ತಿಂಡಿ ಅಂದ ತಕ್ಷಣ ನೆನಪಾಗೋದು ಒಬ್ಬಟ್ಟು ಅಥವಾ ಹೋಳಿಗೆ.

ಯುಗಾದಿಯಲ್ಲಿ ಬಹುಪಾಲು ಮನೆಗಳಲ್ಲಿ ಸಿಹಿ ಹೋಳಿಗೆ ಮಾಡಿರುತ್ತಾರೆ. ಈ ಹೋಳಿಗೆ ಎಷ್ಟು ರುಚಿಕರವಾಗಿರುತ್ತೆ ಅಂದ್ರೆ ತಿಂದವರ ಬಾಯಲ್ಲಿ ನೀರು ಬರುತ್ತೆ. ಜೊತೆಗೆ ಹೋಳಿಗೆಯಲ್ಲಿ ಹಲವು ವಿಧಗಳಿವೆ, ಕಾಯಿ ಹೋಳಿಗೆ ಬೇಳೆ ಹೋಳಿಗೆ, ತೊಗರಿ ಬೇಳೆ ಹೋಳಿಗೆ ಹೀಗೆ ವಿವಿಧ ರೀತಿಯ ಖಾದ್ಯ ಮಾಡಬಹುದು.
ನಾವಿಂದು ಬೇಳೆ ಹಾಕಿ ಮಾಡುವ ಹೂರ್ಣದ ಹೋಳಿಗೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಈ ಬೇಳೆ ಹೋಳಿಗೆ ಮಾಡಲು ಬೇಕಾಗುವ ಪದಾರ್ಥಗಳೇನು? ಹೋಳಿಗೆ ಮಾಡುವ ವಿಧಾನವೇನು? ಪಾಕವಿಧಾನವೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಬೇಳೆ ಹೋಳಿಗೆ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಬೇಳೆ
- ತೊಗರಿ ಬೇಳೆ
- ಮೈದಾ ಹಿಟ್ಟು
- ಚಿರೋಟಿ ರವೆ
- ಅರಶಿನ
- ತೆಂಗಿನಕಾಯಿ
- ಬೆಲ್ಲ
- ಗಸಗಸೆ
- ಏಲಕ್ಕಿ
- ತುಪ್ಪ
- ಎಣ್ಣೆ
- ಉಪ್ಪು
ಬೇಳೆ ಒಬ್ಬಟ್ಟು ಮಾಡುವ ವಿಧಾನ
ಮೊದಲು ಕಡಲೆ ಬೇಳೆ ಹಾಗೂ ತೊಗರಿ ಬೇಳೆಯನ್ನು ನೀರಿನಲ್ಲಿ ನೆನೆಸಿಡಬೇಕು. ಸುಮಾರು ಗಂಟೆಗೂ ಹೆಚ್ಚು ಹೊತ್ತು ನೆನೆಸಿಟ್ಟರೆ ಉತ್ತಮ. ಹೀಗೆ ನೆನೆಸಿಡುವುದರಿಂದ ಹೋಳಿಗೆ ಮೃದುವಾಗುತ್ತದೆ. ಈ ನೆನೆಸಿಟ್ಟ ಎರಡೂ ಬೇಳೆಯನ್ನು ಪಾತ್ರೆಯಲ್ಲಿ ಹಾಕಿ ಮೂರು ಕಪ್ ನೀರು ಹಾಕಿ (ಬೇಳೆ ಮೇಲೆ ನೀರು ಬರುವಷ್ಟು ಹಾಕಿ) ಬಳಿಕ ಅದನ್ನು ಬೇಯಿಸಿಕೊಳ್ಳಿ.
ಇನ್ನೊಂದು ಕಡೆ ಹಿಟ್ಟು ಮಾಡಿಕೊಳ್ಳಿ
ಮೊದಲು ಪಾತ್ರೆಯಲ್ಲಿ ಮಯದಾ ಹಿಟ್ಟು ತೆಗೆದುಕೊಂಡು ಅದಕ್ಕೆ ಅರಶಿನ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಅದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು. ಕೈಗೆ ಅಂಟು ಹಿಡಿಯಬೇಕು ಹೆಚ್ಚು ನೀರಾಗಬಾರದು, ಹೆಚ್ಚು ಗಟ್ಟಿಯೂ ಆಗಬಾರದು, ಕೈಗೆ ಅಂಟಿದ ಹಿಟ್ಟು ಬಿಡಲು ಎಣ್ಣೆ ಹಾಕಿಕೊಂಡು ಕಲಸಬೇಕು. ಈ ಹಿಟ್ಟು ಸಾಫ್ಟ್ ಆಗುವವರೆಗೂ ಕಲಸಿ. ಕಲಸಿದ ಬಳಿಕ ಅರ್ಧ ಗಂಟೆ ಬಿಡಬೇಕು.

ಇನ್ನೊಂದೆಡೆ ಬೇಳೆಯನ್ನು ಕ್ಕರ್ನಲ್ಲೂ ಹಾಕಿ ಬೇಯಿಸಬಹುದು. ಇದರಲ್ಲಿ ಒಂದು ಸೀಟಿ ಹೊಡೆಸಿದರೆ ಸಾಕು. ಪಾತ್ರೆಯಲ್ಲಾದರೆ ಸ್ವಲ್ಪ 15 ನಿಮಿಷ ಬೇಯಿಸಿಕೊಳ್ಳಿ. ಬೇಳೆಗಳು ಸ್ವಲ್ಪ ಮೃದುವಾದರೆ ಸಾಕು. ಬಳಿಕ ಬೇಯಿಸಿದ ಬೇಳೆಯನ್ನು ತೆಗೆದುಕೊಂಡು ಅದಕ್ಕೆ ಬೆಲ್ಲ ಹಾಕಿ. ಬೆಲ್ಲವನ್ನು ಕುಟ್ಟಿ ಪುಡಿ ಮಾಡಿಕೊಂಡು ಅದನ್ನು ಬೇಳೆಯೊಂದಿಗೆ ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡಿದ ಬೆಲ್ಲ ಕರಗಬೇಕಾದರೆ ಒಲೆ ಮೇಲೆ ಇಟ್ಟು 2 ನಿಮಿಷ ಕಾಯಿಸಿಕೊಳ್ಳಿ.
2 ನಿಮಿಷ ಕಾಯಿಸಿದರೆ ಬೆಲ್ಲ ಕರಗುತ್ತದೆ. ಬಳಿಕ ಈ ಮಿಕ್ಸ್ ಅನ್ನು ಮಿಕ್ಸಿ ಜಾರ್ಗೆ ಏಲಕ್ಕಿ, ಗಸಗಸೆ ಹಾಕಿಕೊಂಡು ರುಬ್ಬಿಕೊಳ್ಳಿ. ಈ ಹೂರ್ಣವು ನೈಸ್ ಆಗಬೇಕು. ಅದನ್ನು ಒಂದು ಬೌಲ್ಗೆ ಹಾಕಿಕೊಳ್ಳಿ, ಅದಕ್ಕೆ ತೆಂಗಿನ ಕಾಯಿ ತುರಿಯನ್ನು ಮಿಕ್ಸ್ ಮಾಡಿಕೊಳ್ಳಿ (ಅರ್ಧ ಹೋಳು ಕಾಯಿ ಸಾಕು) ಮಿಕ್ಸ್ ಮಾಡಿದ ಹಿಟ್ಟು ಸಾಫ್ಟ್ ಆಗಿರಲಿ. ಈ ಹಿಟ್ಟು ರೆಡಿಯಾದ ಬಳಿಕ, ಪ್ಲಾಸ್ಟಿಕ್ ಮೇಲೆ ಇಟ್ಟುಕೊಂಡು ಹಿಟ್ಟನ್ನು ಕೈಯಿಂದ ಒತ್ತಬೇಕು, ಅದರ ಮಧ್ಯ ಈ ಹೂರ್ಣ ಇಟ್ಟುಕೊಂಡು ಚೆನ್ನಾಗಿ ಮುಚ್ಚಬೇಕು. ಬಳಿಕ ಚಪಾತಿ ಲಟ್ಟಣಿಗೆಯಿಂದ ಲಟ್ಟಿಸಬೇಕು. ಬಳಿಕ ಕಾವಲಿಗೆ ಎಣ್ಣೆ ಹಚ್ಚಿ 10 ನಿಮಿಷ ಕಾದ ಬಳಿಕ ಈ ಹೋಳಿಗೆ ಹಾಕಿ ಚೆನ್ನಾಗಿ ಕಾಯಿಸಿ, ಎರಡೂ ಕಡೆ ಹೋಳಿಗೆಯನ್ನು ಕಾಯಿಸಿಕೊಳ್ಳಿ.
ಇಷ್ಟಾದರೆ ರುಚಿ ರುಚಿಯ ಹೋಳಿಗೆ ರೆಡಿಯಾಗುತ್ತದೆ. ಇದರ ಜೊತೆ ತುಪ್ಪ ಹಾಕಿಕೊಂಡು ಸವಿಯಬಹುದು. ಹಬ್ಬಕ್ಕೆ ಮಾಡಿದರೆ ಬಾಯಿ ಚಪ್ಪರಿಸಿ ಸವಿಯಬಹುದು.



Click it and Unblock the Notifications
