Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಗರಂ ಗರಂ ಎನ್ನುವ ಹೆಸರು ಕಾಳಿನ ವಡೆ..! ಒಮ್ಮೆ ಸವಿದರೆ ಪದೇ ಪದೇ ಮಾಡ್ತಿರ..!
ನಾವು ತಿಂಡಿ ತಿನ್ನಲು ಹೋಟೆಲ್ಗೆ ಹೋದರೆ ಮೊದಲು ನೆನಪಾಗೋದು ಇಡ್ಲಿ ವಡೆ, ದಕ್ಷಿಣ ಭಾರತದಲ್ಲಿ ಇಡ್ಲಿ ವಡೆ ಬೆಳಗ್ಗೆಯ ಫೇಮಸ್ ಖಾದ್ಯ, ಎಲ್ಲಾ ಹೋಟೆಲ್ನಲ್ಲೂ ಇಡ್ಲಿ ವಡೆ ಇದ್ದೇ ಇರುತ್ತೆ. ಆದ್ರೆ ಥಟ್ ಅಂತ ಮನೆಯಲ್ಲೇ ಮಾಡುವುದು ಹೇಗೆ ಎಂಬುದು ನಿಮಗೆ ಗೊತ್ತಾ? ನೀವು ಹೋಟೆಲ್ನಲ್ಲಿ ಬಾಯಿ ಚಪ್ಪರಿಸಿ ಮಸಾಲಾ ವಡೆ ತಿಂದಿರಬಹುದು, ಆದ್ರೆ ಅದನ್ನು ಮಾಡುವುದು ಹೇಗೆ ಅನ್ನೋದು ನಿಮಗೆ ತಿಳಿದಿರುವುದಿಲ್ಲ.
ಸಂಜೆ ವೇಳೆ ಕಾಫಿ, ಟೀ ಜೊತೆ ಈ ಮಸಾಲ ವಡೆ ಸೇವಿಸುತ್ತಾರೆ, ಜೊತೆಗೆ ಬೆಳಗ್ಗೆಯ ತಿಂಡಿಗೂ ಈ ವಡೆ ಹೆಚ್ಚಾಗಿ ಬಳಸುತ್ತಾರೆ. ಇನ್ನು ಈ ವಡೆಯಲ್ಲಿ ಹತ್ತಾರು ವಿಧದಲ್ಲಿ ಮಾಡಬಹುದು. ಹಲವು ರುಚಿಯಲ್ಲಿ ಈ ವಡೆ ಮಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಹುರಿಗಡಲೆ, ಕಡಲೇ ಬೇಳೆ ಹಾಕಿ ಮಾಡುವ ವಡೆ ತುಂಬಾನೆ ಫೇಮಸ್. ಆದ್ರೆ ಹೆಸರು ಕಾಳಿನಿಂದ ಮಾಡುವ ಈ ವಡೆ ಮಾತ್ರ ನಿಮ್ಮ ಬಾಯಲ್ಲಿ ನೀರು ತರಿಸೋದು ಗ್ಯಾರಂಟಿ.

ಹಾಗಾದ್ರೆ ಹೆಸರು ಕಾಳಿನ ವಡೆ ಮಾಡುವುದಾದ್ರು ಹೇಗೆ? ಹೆಸರು ಕಾಳಿನ ವಡೆ ಆರೋಗ್ಯಕ್ಕೂ ಉತ್ತಮವಾಗಿದೆ. ಕಡಿಮೆ ಎಣ್ಣೆಯ ಬಳಸಿ ಮಾಡಬಹುದು. ಈ ಹೆಸರು ಕಾಳಿನ ವಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಹಿಟ್ಟು ಮಾಡಿಕೊಳ್ಳುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೆಸರು ಕಾಳಿನ ವಡೆ ಮಾಡಲು ಬೇಕಾಗುವ ಪದಾರ್ಥಗಳು
- ಹೆಸರು ಕಾಳು- 1 ಬೌಲ್
- ಅಕ್ಕಿ ಹಿಟ್ಟು
- ಅರಶಿನ
- ಲವಂಗ
- ಜೀರಿಗೆ
- ಒಣ ಮೆಣಸು
- ಶುಂಠಿ
- ಬೆಳ್ಳುಳ್ಳಿ
- ಈರುಳ್ಳಿ
- ಚಕ್ಕೆ
- ಕಾಳು ಮೆಣಸು
- ಎಣ್ಣೆ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
ಹೆಸರು ಕಾಳಿನ ವಡೆ ಮಾಡುವುದು ಹೇಗೆ?
ಒಂದು ಬೌಲ್ಗೆ ಹೆಸರುಕಾಳು ಹಾಕಿ ತೊಳೆದುಕೊಂಡು ಅದರಿಂದ ನೀರು ತೆಗೆಯಿರಿ, ಬಳಿಲ ತಣ್ಣೀರಿನಲ್ಲಿ ನೆನೆಸಿಡುವುದಾದರೆ 4ರಿಂದ 5 ಗಂಟೆ ನೆನೆಸಿಡಿ, ಅಥವಾ ಬಿಸಿ ನೀರಿನಲ್ಲಿ ನೆನೆಸಿಟ್ಟರೆ 1 ಗಂಟೆ ನೆನೆಸಿಡಬೇಕು.
ನಂತರ ಮಿಕ್ಸಿ ಜಾರ್ಗೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ,, ಒಣ ಮೆಣಸು, ಜೀರಿಗೆ, ಚಕ್ಕೆ, ಲವಂಗ, ಅರಶಿನ, ಕಾಳು ಮೆಣಸು ನೀರು ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಸ್ವಲ್ಪವೇ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ನಂತರ ಇದಕ್ಕೆ ನೆನೆಸಿಟ್ಟಿರುವ ಹೆಸರು ಕಾಳಿನಲ್ಲಿ ಸ್ವಲ್ಪ ಹೆಸರು ಕಾಳನ್ನು ಅದೇ ಮಿಕ್ಸಿಗೆ ಹಾಕಿ ಮತ್ತೆ ರುಬ್ಬಿಕೊಳ್ಳಿ, ಇದು ಸಹ ತರಿತರಿಯಾಗಿ ಇರಲಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಈಗ ಉಳಿದಿರುವ ಹೆಸರು ಕಾಳನ್ನು ಸಹ ಮತ್ತೆ ಮುಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.
ಈ ರುಬ್ಬಿಕೊಂಡ ಎಲ್ಲಾ ವಸ್ತುವನ್ನು ಒಂದು ಬೌಲ್ಗೆ ಹಾಕಿಕೊಳ್ಳಿ, ನಂತರ ಈ ಹಿಟ್ಟಿಗೆ ಈರುಳ್ಳಿ. ಕೊತ್ತಂಬರಿ ಸೊಪ್ಪು, ಚಿಕ್ಕದಾಗಿ ಕತ್ತರಿಸಿಕೊಂಡ ಕರಿಬೇವಿನ ಸೊಪ್ಪು, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಇದಕ್ಕೆ ಸ್ವಲ್ಪ ಅಕ್ಕಿ ಹಿಟ್ಟನ್ನು ಸಹ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಈ ಹಿಟ್ಟು ಗಟ್ಟಿ ಗಟ್ಟಿಯಾಗಿರಲಿ, ಯಾವುದೇ ಕಾರಣಕ್ಕೂ ನೀರು ಹಾಕಿ ಮಿಕ್ಸ್ ಮಾಡಬೇಡಿ.
ಈಗ ಹಿಟ್ಟನ್ನು ತೆಗೆದುಕೊಂಡು ಸಣ್ಣ ಪ್ಲಾಸ್ಟಿಕ್ ಮೇಲೆ ತಟ್ಟಿಕೊಳ್ಳಿ. ಬಳಿಕ ಒಲೆ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿ ವಡೆಯನ್ನು ಇಳಿಬಿಡಬೇಕು. ಸಣ್ಣ ಉರಿಯಲ್ಲಿ ವಡೆಯನ್ನು ಫ್ರೈ ಮಾಡಿಕೊಳ್ಳಿ. ಸ್ವಲ್ಪವೇ ಎಣ್ಣೆ ಇದ್ದರೆ ಸಾಕು. ವಡೆ ಮುಳುಗುವಷ್ಟು ಎಣ್ಣೆ ಹಾಕಿಕೊಂಡರೆ ಸಾಕಾಗುತ್ತದೆ. ವಡೆ ಎರಡೂ ಕಡೆ ಚೆನ್ನಾಗಿ ಕರಿದುಕೊಳ್ಳಿ. ಬಳಿಕ ಒಲೆ ಆಫ್ ಮಾಡಿಕೊಂಡು ವಡೆಯನ್ನು ತೆಗೆದಿಡಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಹೆಸರು ಕಾಳಿನ ವಡೆ ರೆಡಿಯಾಗುತ್ತದೆ.



Click it and Unblock the Notifications
