Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಊಟ, ಚಪಾತಿಗೆ ಈ ಹೆಸರು ಕಾಳಿನ ಪಲ್ಯ ಬೊಂಬಾಟ್ ಟೇಸ್ಟ್.!
ಊಟ, ತಿಂಡಿ ಯಾವುದೇ ಇರಲಿ ಅಲ್ಲಿ ಸೈಡ್ ಡಿಶ್ ಅನ್ನೋದು ಇರಲೇ ಬೇಕು. ಅಂದ್ರೆ ಊಟದ ಜೊತೆ ಉಪ್ಪಿನಕಾಯಿ, ಪಲ್ಯ, ಬಜ್ಜಿ, ಬೋಂಡಾ, ಹೀಗೆ ಯಾವುದಾದ್ರು ಒಂದು ಸೈಡ್ ಡಿಶ್ ಇರಬೇಕಾಗುತ್ತದೆ. ಹಾಗೆ ಒಂದೆ ಪಲ್ಯ ಊಟಕ್ಕೆ, ತಿಂಡಿಗೆ, ಚಪಾಟಿ, ಪರೋಟ, ದೋಸೆ ಹೀಗೆ ಎಲ್ಲಾ ಖಾದ್ಯಗಳಿಗೂ ರುಚಿ ನೀಡುವುದಾದ್ರೆ ಹೇಗೆ ಅಲ್ವಾ.
ಹೌದು ಈ ರೀತಿ ಎಲ್ಲಾ ಖಾದ್ಯಕ್ಕೂ ರುಚಿ ನೀಡುವ ಪಲ್ಯ ಅಂದ್ರೆ ಅದು ಹೆಸರು ಕಾಳಿನ ಪಲ್ಯ. ಆರೋಗ್ಯದ ದಷ್ಟಿಯಿಂದಲೂ ಹೆಸರು ಕಾಳಿನ ಪಲ್ಯ ಹೆಚ್ಚು ರುಚಿಕರವಾಗಿರುತ್ತೆ. ಇದು ಚಪಾತಿ, ಊಟ, ದೋಸೆ, ಇಡ್ಲಿ ಜೊತೆ ಸವಿಯಲು ಸಿಕ್ಕಾಪಟ್ಟೆ ರುಚಿ ನೀಡುತ್ತದೆ. ಇಂದು ನಾವು ಸಹ ಈ ಹೆಸರು ಕಾಳಿನ ಪಲ್ಯ ಮಾಡುವ ಕುರಿತು ತಿಳಿದುಕೊಳ್ಳೋಣ.

ಬೇರೆ ತರಕಾರಿ, ಕಾಳುಗಳ ಪಲ್ಯ ಮಾಡುವುದಕ್ಕಿಂತ ಈ ಪಲ್ಯ ಮಾಡುವುದು ತುಂಬಾನೆ ಸುಲಭ. ಜೊತೆಗೆ ಕಡಿಮೆ ವಸ್ತುಗಳು ಬೇಕಾಗುತ್ತದೆ. ಹಾಗಾದ್ರೆ ಸುಲಭವಾಗಿ ಹೆಸರು ಕಾಳಿನ ಪಲ್ಯ ಮಾಡುವುದು ಹೇಗೆ?, ಹೆಸರು ಕಾಳಿನ ಪಲ್ಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನ ಏನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೆಸರು ಕಾಳಿನ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಹೆಸರು ಕಾಳು- ಕಾಲು ಕೆ.ಜಿ (ಮೊಳಕೆ ಬಂದಿರುವುದು)
- ಕೊಬ್ಬರಿ ತುರಿ
- ಸಬ್ಬಸಿಗೆ ಸೊಪ್ಪು
- ಕೀರೆ ಸೊಪ್ಪು- ಅರ್ಧ ಕಟ್ಟು
- ಈರುಳ್ಳಿ-3
- ಬೆಳ್ಳುಳ್ಳಿ-1
- ಇಂಗು - 2 ಪಿಂಚ್ಗಳು
- ಸಾಸಿವೆ - 1/4 ಟೀಸ್ಪೂನ್
- ಜೀರಿಗೆ - 1/4 ಟೀಸ್ಪೂನ್
- ಒಣ ಮೆಣಸು - 5
- ಕರಿಬೇವಿನ ಎಲೆಗಳು - 1 tbs
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಹೆಸರು ಕಾಳಿನ ಪಲ್ಯ ಮಾಡುವ ವಿಧಾನ
ಮೊದಲು ಸಬ್ಬಸಿಗೆ ಸೊಪ್ಪು, ಕೀರೆ ಸೊಪ್ಪನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು, ಬಳಿಕ ಅದೆರಡನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಮೊಳಗೆ ಬರಿಸಿರುವ ಹೆಸರು ಕಾಳು ಹಾಗೂ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಿ. ಸ್ವಲ್ಪ ನೀರು ಹಾಕಿಕೊಂಡು ಒಟ್ಟು 15 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ.
ಬೇಯಿಸಿಕೊಂಡ ಬಳಿಕ ಅದರಿಂದ ನೀರು ಬೇರೆ ಮಾಡಲು ಬಸಿದುಕೊಳ್ಳಿ. ಅದರಲ್ಲಿ ನೀರು ಇರದಂತೆ ಮಾಡಿ. ಬಳಿಕ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟು ಅದಕ್ಕೆ ಜೀರಿಗೆ, ಸಾಸಿವೆ ಹಾಗೂ ಒಣಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಮಿಕ್ಸ್ ಮಾಡಿ.
ಬಳಿಕ ಕರಿಬೇವು, ಇಂಗು, ಅರಶಿಣ ಬೇಕಾದರೆ ಒಂದು ಚಿಟಿಕೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದಕ್ಕೆ ನೀರಿನಿಂದ ತೆಗೆದುಕೊಂಡಿರುವ ಕಾಳು ಹಾಗೂ ಸೊಪ್ಪನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೇವಲ 2 ನಿಮಿಷ ಮಿಕ್ಸ್ ಮಾಡಿ ಬಳಿಕ ಇದಕ್ಕೆ ಕೊಬ್ಬರಿ ತುರಿ ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಬೊಂಬಾಟ್ ರುಚಿಯ ಹೆಸರು ಕಾಳಿನ ಪಲ್ಯ ರೆಡಿಯಾಗುತ್ತದೆ. ಅದನ್ನು ಊಟ, ಚಪಾತಿ, ದೋಸೆ, ಇಡ್ಲಿ ಸೇರಿ ಎಲ್ಲಾ ಖಾದ್ಯದ ಜೊತೆಯೂ ಸವಿಯಬಹುದು. ಮಾಡುವುದು ಸಹ ತುಂಬಾನೆ ಸುಲಭ. ಹೆಸರು ಕಾಳು ನಿಮ್ಮ ಚರ್ಮದ ಆರೋಗ್ಯ, ಕೂದಲು ಹಾಗೂ ಜೀರ್ಣಶಕ್ತಿಗೆ ಪೂರಕವಾದ ಅಂಶಗಳ ಹೊಂದಿರುತ್ತದೆ. ವಾರದಲ್ಲಿ ಒಮ್ಮೆಯಾದರು ಹೆಸರು ಕಾಳಿನಿಂದ ಮಾಡಿದ ಖಾದ್ಯ ಸೇವಿಸುವ ಪ್ರಯತ್ನ ಮಾಡಿ.



Click it and Unblock the Notifications