Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಶಿವರಾತ್ರಿ ಸಿಹಿ: ಬಾಯಲ್ಲಿ ನೀರು ತರಿಸುವ ಹೆಸರು ಬೇಳೆ ಪಾಯಸ ಮಾಡಿ! ಇಲ್ಲಿದೆ ಸುಲಭದ ವಿಧಾನ
ಹಬ್ಬದ ಸಮಯದಲ್ಲಿ ರುಚಿ ರುಚಿಯಾದ ಖಾದ್ಯಗಳ ಸವಿಯುವುದು ಕಾಮನ್. ಹಾಗೆ ಈ ಶಿವರಾತ್ರಿಯ ಸಂದರ್ಭದಲ್ಲಿ ಅದ್ಭುತ ರುಚಿಯ ಸಿಹಿಗಳನ್ನು ಮಾಡಿರುತ್ತೀರಿ. ಅದ್ರಲ್ಲೂ ಹಲವರು ಮನೆಯಲ್ಲೇ ಶಿವನ ಪೂಜೆ ಮಾಡುತ್ತಾರೆ. ಮತ್ತೆ ಕೆಲವರು ಶಿವನ ದೇವಾಲಯಗಳಿಗೆ ಭೇಟಿ ನೀಡುವುದು ಸಾಮಾನ್ಯ. ಹಾಗೆ ಈ ಸಮಯದಲ್ಲಿ ಬಾಯಿ ಸಿಹಿ ಮಾಡುವಂತಹ ರುಚಿಯ ತಿಂಡಿಗಳು ಸಾಮಾನ್ಯ.
ಆದ್ರೆ ಶಿವನಿಗೆ ಪ್ರಿಯವಾದ ಸಿಹಿ ಮಾಡುವುದು ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಸಿಹಿ ಪಾಯಸ ಅಂದ್ರೆ ಎಲ್ಲರ ಬಾಯಲ್ಲೂ ಒಮ್ಮೆ ನೀರು ಬರುವುದು ಖಚಿತ. ಹಾಗೆ ಅಂತಹ ಸ್ವಿಟ್ ಪಾಯಸಗಳ ಪೈಕಿ ನಾವಿಂದು ಸುಲಭವಾಗಿ ಮಾಡುವ ಹೆಸರು ಬೇಳೆ ಪಾಯಸ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ನೀವು ಕೂಡ ಹಲವು ಸಂದರ್ಭದಲ್ಲಿ ಈ ಹೆಸರು ಬೇಳೆ ಪಾಯಸ ಮಾಡಿ ಸವಿದಿರುತ್ತೀರಿ. ಹಾಗಾದ್ರೆ ಈ ಮಹಾಶಿವರಾತ್ರಿ ಅಂತಹ ಹಬ್ಬದ ಸಮಯದಲ್ಲೂ ಈ ಪಾಯಸ ಮಾಡಿ ಸವಿದು ನೋಡಿ.
ಹೆಸರು ಬೇಳೆ ಪಾಯಸ ಬಹಳ ರುಚಿ ಹಾಗೆ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು. ವಿಶೇಷ ಸಮಯದಲ್ಲಿ ಈ ಪಾಯಸ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ಶಿವರಾತ್ರಿಯ ಈ ವಿಶೇಷ ಸಮಯದಲ್ಲಿ ಹೆಸರು ಬೇಳೆಯ ಪಾಯಸ ಮಾಡುವ ಕುರಿತು ತಿಳಿದುಕೊಳ್ಳೋಣ.
ಹೆಸರು ಬೇಳೆ ಪಾಯಸ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಹೆಸರು ಬೇಳೆ ಪಾಯಸ ಮಾಡುವ ವಿಧಾನವೇನು? ಹೆಸರು ಬೇಳೆ ಪಾಯಸ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತಾದ ಮಾಹಿತಿ ಇಲ್ಲಿದೆ.
ಹೆಸರು ಬೇಳೆ ಪಾಯಸ ಮಾಡಲು ಬೇಕಾಗುವ ವಸ್ತುಗಳು
- ಹೆಸರು ಬೇಳೆ
- ಏಲಕ್ಕಿ
- ಬೆಲ್ಲ
- ತುಪ್ಪ
- ತೆಂಗಿನಕಾಯಿ ತುರಿ
- ಶಾವಿಗೆ
ಹೆಸರು ಬೇಳೆ ಪಾಯಸ ಮಾಡುವ ಸುಲಭದ ವಿಧಾನವೇನು?
ಮೊದಲಿಗೆ ಒಂದು ಕಪ್ ಹೆಸರು ಬೇಳೆಯನ್ನು ಬಾಣಲೆಗೆ ಹಾಕಿ ಹುರಿದುಕೊಳ್ಳಬೇಕು. ಹದವಾಗಿ ಹುರಿದುಕೊಂಡ ಬಳಿಕ ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಕುಕ್ಕರ್ ಒಲೆ ಮೇಲೆ ಇಟ್ಟು ಸ್ವಲ್ಪ ನೀರು ಹಾಕಿ ಬಿಸಿಯಾಗಲು ಬಿಡಿ ಈ ನಡುವೆ ಹುರಿದ ಬೇಳೆಯನ್ನು ಚೆನ್ನಾಗಿ ಎರಡರಿಂದ ಮೂರು ಬಾರಿ ತೊಳೆದುಕೊಂಡು ಅದನ್ನು ಕುಕ್ಕರ್‌ಗೆ ಸೇರಿಸಿ ಮುಚ್ಚಳ ಮುಚ್ಚಿ 4ರಿಂದ 5 ಸೀಟಿ ಹೊಡೆಯಲು ಬಿಡಿ.
ಇನ್ನೊಂದು ಕಡೆ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಅರ್ಧ ಭಾಗದ ತೆಂಗಿನಕಾಯಿ ತುರಿ ಸೇರಿಸಿಕೊಳ್ಳಿ. ನಂತರ ಏಲಕ್ಕಿ ಕಾಳು, ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಬೆಂದಿರುವ ಹೆಸರು ಕಾಳನ್ನು ಸ್ವಲ್ಪ ಪುಡಿ ಮಾಡಬೇಕು ಅಂದರೆ ಮಸೆದುಕೊಳ್ಳಬೇಕು. ಕಾಳು ಕಾಳು ಸಿಗಬಾರದು, ಇದು ನುಣ್ಣಗೆ ಇರಬೇಕು.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 1 ಕಪ್ ಬೆಲ್ಲ ಹಾಕಿಕೊಂಡು ಸ್ವಲ್ಪ ನೀರು ಹಾಕಿ ಕರಗಲು ಬಿಡಿ. ಸಣ್ಣ ಉರಿಯಲ್ಲಿ ಕರಗಿಸಿ. ಬೆಲ್ಲ ಕರಗಿದ ಬಳಿಕ ರುಬ್ಬಿದ್ದ ಹೆಸರು ಕಾಳಿನ ಪೇಸ್ಟ್ ಅನ್ನು ಹಾಕಿಕೊಂಡು ಮಿಕ್ಸ್ ಮಾಡಿ. ಹಾಗೆ ರುಬ್ಬಿದ್ದ ತೆಂಗಿನಕಾಯಿ ಪೇಸ್ಟ್ ಹಾಗೆ ಸ್ವಲ್ಪ ನೀರು ಸಹ ಸೇರಿಸಿಕೊಂಡು ಮಿಶ್ರಣ ಮಾಡಿ ಕುದಿಬರಲು ಬಿಡಿ.
ಈಗ ಇನ್ನೊಂದು ಪಾತ್ರೆಯಲ್ಲಿ 2ರಿಂದ 3 ಸ್ಪೂನ್ ತುಪ್ಪ ಹಾಕಿಕೊಂಡು ಅದಕ್ಕೆ ಸ್ವಲ್ಪ ಶಾವಿಗೆ ಹಾಕಿಕೊಂಡು ಹುರಿದುಕೊಳ್ಳಿ. ಶಾವಿಗೆ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಹಾಗೆ ಈ ಶಾವಿಗೆಯನ್ನು ಒಲೆ ಮೇಲಿನ ಪಾಯಸಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ 2 ನಿಮಿಷ ಕುದಿಬರಲು ಬಿಡಿ. ಕೊನೆಯಲ್ಲಿ ಇದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಹಾಕಿಕೊಳ್ಳಬಹುದು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಹೆಸರು ಬೇಳೆ ಪಾಯಸ ಸಿದ್ದವಾಗುತ್ತೆ.



Click it and Unblock the Notifications

