Latest Updates
-
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್!
ರಾಮನವಮಿಗೆ ಹೆಸರು ಬೇಳೆ ಪಾಯಸ..! 15 ನಿಮಿಷದಲ್ಲಿ ರೆಡಿ
ಯುಗಾದಿ ಹೊಸ ವರ್ಷದ ಪ್ರಾರಂಭದ ಸಂಕೇತ. ದೇಶದ ಜನತೆಗೆ ಯುಗಾದಿ ತುಂಬಾ ವಿಶೇಷವಾದ ಹಬ್ಬವಾಗಿದೆ. ಹೊಸ ಯುಗದ ಪ್ರಾರಂಭಕ್ಕಾಗಿ ಹೊಸ ಕಾರ್ಯಗಳನ್ನು ಮಾಡುತ್ತೇವೆ ಈ ಸಮಯದಲ್ಲಿ ಇದನ್ನು ಸಿಹಿಯಿಂದ ಆಚರಿಸುವುದು ವಾಡಿಕೆ. ಆದ್ದರಿಂದಲೇ ಯುಗಾದಿಯ ಮೆನು ಪಟ್ಟಿಯಿಂದ ಸಿಹಿಯನ್ನು ನಮಗೆ ಕೈಬಿಡಲಾಗುವುದಿಲ್ಲ.
ವಿವಿಧ ಬಗೆಯ ಪಾಯಸ, ಕೀರು, ನೀರೂರಿಸುವ ಮೈಸೂರು ಪಾಕು, ಒಬ್ಬಟ್ಟು ಮುಂತಾದ ಸಿಹಿಗಳು ನಿಮ್ಮ ನಾಲಗೆಯನ್ನು ತಣಿಸಲಿದೆ. ಹಾಗಿದ್ದರೆ ಇನ್ನೇಕೆ ತಡ? ಈ ಪಟ್ಟಿ ಮಾಡಿರುವ 10 ಸಿಹಿ ತಿಂಡಿಗಳನ್ನು ಈ ಯಗಾದಿಗಾಗಿ ವಿಶೇಷವಾಗಿ ತಯಾರಿಸಿ. ಮತ್ತು ವರ್ಷದ ಪ್ರಾರಂಭವನ್ನು ಸಿಹಿಯೊಂದಿಗೆ ಆರಂಭಿಸಲಾಗುತ್ತದೆ.

ಹೀಗಾಗಿ ನಾವು ಸಹ ಇಂದು ರುಚಿ ರುಚಿಯಾದ ಪಾಯಸ ಮಾಡುವ ಕುರಿತು ತಿಳಿದುಕೊಳ್ಳೋಣ. ಪಾಯಸದಲ್ಲೂ ಹತ್ತು ಹಲವು ವಿಧಗಳಿವೆ. ಶಾವಿಗೆ, ಸಬ್ಬಕ್ಕಿ, ಅನ್ನದ ಪಾಯಸ, ಗೋಧಿ ಕಡಿ ಪಾಯಸ, ಗಸೆಗಸೆ ಪಾಯಸ, ರವೆ ಪಾಯಸ, ಪಾಸ್ತಾ ಪಾಯಸ ಹೀಗೆ ಹತ್ತಾರು ವಿಧಗಳಿವೆ. ಆದ್ರೆ ಹಬ್ಬದ ವಿಶೇಷವಾಗಿ ನಾವಿಂದು ಹೆಸರು ಬೇಳೆ ಪಾಯಸ ಮಾಡೋಣ. ಈ ಪಾಯಸ ರುಚಿಯ ಜೊತೆಗೆ ಬೇಸಿಗೆಯಲ್ಲಿ ತಂಪು ನೀಡಲಿದೆ.
ಹಾಗಾದ್ರೆ ಹೆಸರು ಬೇಳೆ ಪಾಯಸ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಹೆಸರು ಬೇಳೆ ಪಾಯಸ ಮಾಡುವ ಸರಿಯಾದ ಪಾಕವಿಧಾನವೇನು? ಎಂಬುದನ್ನು ನಾವಿಂದು ಇಲ್ಲಿ ತಿಳಿದುಕೊಳ್ಳೋಣ.
ಹೆಸರು ಬೇಳೆ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು
- ಹೆಸರು ಬೇಳೆ - 100 ಗ್ರಾಮ್
- ಹಾಲು- ಅರ್ಧ ಕಪ್
- ಗೋಡಂಬಿ-
- ದ್ರಾಕ್ಷಿ
- ಏಲಕ್ಕಿ ಪುಡಿ
- ಬಾದಾಮಿ
- ಬಾದಾಮಿ ಪೌಡರ್ ಮಿಕ್ಸ್
- ತೆಂಗಿನ ಕಾಯಿ
- ಬೆಲ್ಲ ಅಥವಾ ಸಕ್ಕರೆ
ಹೆಸರು ಬೇಳೆ ಪಾಯಸ ಮಾಡುವ ವಿಧಾನ
ಮೊದಲು ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ ಹೆಸರು ಬೇಳೆ ಹಾಕಿ. ಯಾವ ಕಪ್ನಲ್ಲಿ ಹೆಸರು ಬೇಳೆ ತೆಗೆದುಕೊಂಡಿದ್ದೀರೋ ಅದೇ ಕಪ್ನಲ್ಲಿ ಎರಡು ಕಪ್ ನೀರು ಹಾಕಿಕೊಳ್ಳಿ. ಬಳಿಕ ಒಂದು ಸೀಟಿ ಬರುವವರೆಗೆ ಬಿಡಿ. ಈ ಬೇಳೆ ಬೇಯುವ ನಡುವೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ಹಾಕಿ ರುಬ್ಬಿಕೊಳ್ಳಿ. ರುಬ್ಬುವ ವೇಳೆ ನೀರು ಬಳಸಬೇಡಿ. ಅಥವಾ ನುಣ್ಣಗೆ ರುಬ್ಬಿಕೊಳ್ಳಬೇಡಿ ಸ್ವಲ್ಪ ತರಿತರಿಯಾಗಿರಲಿ.
ನಂತರ ಒಂದು ಸೀಟಿ ಹೊಡೆಸಿದ ಬಳಿಕ ಕುಕ್ಕರ್ ಮುಚ್ಚಳ ತೆಗೆದು ಹಾಲು ಮತ್ತು ಬೆಲ್ಲ ಅಥವಾ ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇನ್ನೊಂದೆಡೆ ಎಲ್ಲಾ ಡ್ರೈ ಫ್ರೂಟ್ಸ್ಗಳನ್ನು ತುಪ್ಪದಲ್ಲಿ ಹುರಿದು ಅಥವಾ ಹಾಗೆಯೇ ಹಾಕಿಕೊಳ್ಳಬಹುದು. ಹೀಗೆ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಹಾಕಿ ಮಿಕ್ಸ್ ಮಾಡಿ.
ಹೀಗೆ ಮಿಕ್ಸ್ ಮಾಡಿದ ಬಳಿಕ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಕುದಿಯಲು ಬಿಡಿ. 5 ನಿಮಿಷ ಕುದಿಸಿದ ಬಳಿಕ ಅದಕ್ಕೆ ಬಾದಾಮಿ ಪೌಡರ್ ಮಿಕ್ಸ್ ಅನ್ನು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ದಪ್ಪ ಆಗುವವರೆಗೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಇರಿ. ಕೊನೆಯಲ್ಲಿ ಗೋಡಂಬಿ ಇದ್ದರೆ ಹಾಕಿಕೊಂಡರೆ ನಿಮ್ಮ ಮುಂದೆ ಹೆಸರು ಬೇಳೆ ಪಾಯಸ ಸವಿಯಲು ರೆಡಿಯಾಗಿರುತ್ತದೆ.
ಈ ಪಾಯಸವನ್ನು ಕುಕ್ಕರ್ ಬಳಸದೆ ಹಾಗೆ ಪಾತ್ರೆಯಲ್ಲಿ ಬೇಳೆಯನ್ನು ಬೇಯಿಸಿಕೊಂಡು ಸಹ ಮಾಡಬಹುದು. ಇನ್ನು ಈ ಪಾಯಸ ಹೆಚ್ಚು ದಪ್ಪವಾಗಬೇಕಾದರೆ ಕೆಲವರು ಶಾವಿಗೆ ಹುರಿದುಕೊಂಡು ಅದನ್ನು ಸಹ ಬೇಳೆ ಜೊತೆ ಬೇಯಿಸಿ ಈ ಪಾಯಸ ಮಾಡುತ್ತಾರೆ. ನಿಮಗೆ ಬೆಲ್ಲ ಸಿಗದಿದ್ದರೆ ಸಿಹಿಗೆ ಸಕ್ಕರೆ ಸೇರಿಸಿಯೂ ಇದನ್ನು ಮಾಡಬಹುದು.



Click it and Unblock the Notifications
