Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಹೆಸರು ಬೇಳೆ, ಹೀರೆಕಾಯಿ ತೊವ್ವೆ ಮಾಡೋದು ಹೇಗೆ? ಇಲ್ಲಿದೆ ಸುಲಭದ ರೆಸಿಪಿ!
ಊಟದ ಜೊತೆಗೆ ನೀವು ಬಹಳ ರುಚಿಯಾದ ಸಾಂಬಾರ್, ಗ್ರೇವಿ ಮಾಡುತ್ತೀರಿ. ಅದೇ ರೀತಿ ರೊಟ್ಟಿ, ದೋಸೆ ಸವಿಯಲು ಹಾಗೆ ಊಟದ ಜೊತೆಗೆ ರುಚಿ ಹೆಚ್ಚಿಸಲು ನೀವು ತೊವ್ವೆ ಅಥವಾ ಪಪ್ಪು ಮಾಡುವುದು ನೋಡಬಹುದು. ಪಪ್ಪು ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಬಹಳ ಫೇಮಸ್ ಖಾದ್ಯ. ಅವರು ಊಟದ ಜೊತೆಗೆ ವಿವಿಧ ರೀತಿಯ ತಿಂಡಿಯೊಂದಿಗೆ ಇದನ್ನು ಸವಿಯುತ್ತಾರೆ.
ಈ ತೊವ್ವೆಯಲ್ಲೂ ಹಲವು ರೀತಿಯ ವಿಧಗಳಿವೆ. ಒಂದೊಂದು ವಿಧಾನವು ಒಂದೊಂದು ಬಗೆ ರುಚಿ ನೀಡಲಿದೆ. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭವಾಗಿರಲಿದೆ. ಇದರ ರುಚಿ ನೀವು ಒಂದು ಬಾರಿ ಸವಿದರೆ ಯಾವಾಗಲು ಇದನ್ನು ಮಾಡಿ ಸವಿಯಲು ನೀವು ಮುಂದಾಗುತ್ತೀರಿ. ಅದ್ರಲ್ಲೂ ವಿಶೇಷ ರುಚಿಯ ಈ ಪಪ್ಪು ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ಉತ್ತರ ಕರ್ನಾಟಕ ಭಾಗದಲ್ಲೂ ಕೂಡ ಈ ತೊವ್ವೆ ಹೆಚ್ಚು ಬಳಕೆಯಲ್ಲಿದೆ. ರೊಟ್ಟಿಯೊಂದಿಗೆ, ಅನ್ನದೊಂದಿಗೆ ಸವಿಯಲು ಈ ತೊವ್ವೆ ಅದ್ಭುತ ರುಚಿ ನೀಡಲಿದೆ. ಹಾಗಾದ್ರೆ ಈ ತೊವ್ವೆ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೆಸರು ಬೇಳೆ, ಹೀರೆಕಾಯಿ ತೊವ್ವೆ ಮಾಡಲು ಯಾವೆಲ್ಲಾ ವಸ್ತುಗಳು
ಬೇಕು?
- ಹೆಸರು ಬೇಳೆ
- ಹೀರೆಕಾಯಿ
- ಅರಶಿಣ
- ಎಣ್ಣೆ
- ಉಪ್ಪು
- ಹಸಿ ಮೆಣಸು
- ಶುಂಠಿ
- ತೆಂಗಿನಕಾಯಿ ತುರಿ
- ಜೀರಿಗೆ
- ಸಾಸಿವೆ
- ಒಣ ಮೆಣಸು
- ಕರಿಬೇವು
ಹೆಸರು ಬೇಳೆ, ಹೀರೆಕಾಯಿ ತೊವ್ವೆ ಮಾಡುವುದು ಹೇಗೆ?
ಮೊದಲು ಕಾಲು ಕಪ್ ಹಸರು ಬೇಳೆ ತೊಳೆದುಕೊಂಡು ಅದನ್ನು ಕುಕ್ಕರ್ಗೆ ಹಾಕಿ ಅರಶಿಣ, ಎಣ್ಣೆ ಹಾಕಿ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಬೇಕು. 2 ಸೀಟಿ ಹೊಡೆಸಿಕೊಂಡರು ಸಾಕು. ನಂತರ ಈಗ ಒಂದು ಹೀರೆಕಾಯಿಯನ್ನು ಸಣ್ಣಗೆ ಹೆಚ್ಚಿಕೊಂಡು ಅದನ್ನು ಕೂಡ ಕುಕ್ಕರ್ಗೆ ಹಾಕಿ, ಬಳಿಕ ಉಪ್ಪು, ಹಸಿ ಮೆಣಸು, ಶುಂಠಿ, ಮುಚ್ಚುವಷ್ಟು ನೀರು ಹಾಕಿ ಮತ್ತೆ ಬೇಯಲು ಬಿಡಿ. ಸೀಟಿ ಹೊಡೆಸಿಕೊಳ್ಳುವ ಅಗತ್ಯವಿಲ್ಲ.
ಈಗ ಒಂದು ಮಿಕ್ಸಿ ಜಾರ್ನಲ್ಲಿ ತೆಂಗಿನಕಾಯಿ ತುರಿ, ಸಾಸಿವೆ, ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಹೀರೆಕಾಯಿ ಚೆನ್ನಾಗಿ ಕುದಿಬಂದು ಬೆಂದ ಬಳಿಕ ಈ ರುಬ್ಬಿಕೊಂಡಿದ್ದ ಪೇಸ್ಟ್ ಅನ್ನು ಇದಕ್ಕೆ ಹಾಕಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಂಡು ಕುದಿಯಲು ಬಿಡಬೇಕು.
ಬಹಳ ತೆಳುವಾಗಿ ಮಾಡಿಕೊಳ್ಳಬೇಡಿ, ಹಾಗೆ ದಪ್ಪವೂ ಮಾಡಬೇಡಿ. ಕುದಿಬರಲು ಬಿಡಬೇಕು. ಆಗಾಗ ಮಿಕ್ಸ್ ಮಾಡುತ್ತಾ ಇರಿ. 5 ನಿಮಿಷ ಕುದಿ ಬಂದ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ, ಕರಿಬೇವು, ಸಾಸಿವೆ, ಜೀರಿಗೆ, ಒಣ ಮೆಣಸು ಹಾಕಿ ಒಂದು ಒಗ್ಗರಣೆ ರೆಡಿ ಮಾಡಿಕೊಂಡು ಈ ತೊವ್ವೆಗೆ ಹಾಕಿ ಮಿಕ್ಸ್ ಮಾಡಿಕೊಂಡರೆ ಮುಗೀತು.
ಇಷ್ಟಾದರೆ ನಿಮ್ಮ ಮುಂದೆ ಹೀರೆಕಾಯಿ ಹೆಸರು ಬೇಳೆ ತೊವ್ವೆ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಊಟಕ್ಕೆ, ತಿಂಡಿಗೆ ಇದನ್ನು ಮಾಡಿ ಸವಿದು ನೋಡಿ. ಇದರಿಂದ ನಿಮ್ಮ ಊಟದ ರುಚಿ ಇನ್ನಷ್ಟು ಹೆಚ್ಚಾಗೋದು ಖಚಿತ.



Click it and Unblock the Notifications