Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸಖತ್ ರುಚಿಯ ಹೀರೇಕಾಯಿ ರೈಸ್ ಮಾಡಿ ನೋಡಿ..! ಸಿಂಪಲ್ ರೆಸಿಪಿ.!
ಬೆಳಗ್ಗೆಯ ತಿಂಡಿಗೆ ನೀವು ವಿವಿಧ ರೀತಿಯ ತಿಂಡಿಗಳ ಮಾಡಿರುತ್ತೀರಿ, ಅದರಲ್ಲೂ ರೈಸ್ ನಲ್ಲಿಯೇ ಹತ್ತಾರು ವಿಧದ ತಿಂಡಿಗಳ ಮಾಡುವುದು ನಿಮಗೆ ತಿಳಿದಿರುತ್ತೆ. ಚಿತ್ರಾನ್ನ, ಪುಳಿಯೋಗರೆ, ಮೊಸರನ್ನ, ಪಲಾವ್, ವಾಂಗೀಬಾತ್, ಟೊಮೆಟೊ ಬಾತ್ ಹೀಗೆ ಇದರ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ.
ಆದರೆ ನೀವು ಎಂದಾದ್ರು ಹೀರೆಕಾಯಿ ರೈಸ್ ಮಾಡಿ ಸವಿದಿದ್ದೀರಾ? ಹೌದು ಪಲಾವ್‌ಗೆ ತರಕಾರಿ ಹಾಕುವಂತೆಯೇ ಈ ಹೀರೇಕಾಯಿ ಬಳಸಿ ಉತ್ತಮ ರುಚಿಯ ರೈಸ್ ಮಾಡಬಹುದು. ಈ ರೈಸ್ ಮಾಡುವುದು ಎಷ್ಟು ಸುಲಭವೋ ಅಷ್ಟೇ ರುಚಿಕರವೂ ಹೌದು. ಹೀರೇಕಾಯಿ ಆರೋಗ್ಯಕ್ಕೂ ಸಹ ಅಷ್ಟೇ ಉತ್ತಮ ತರಕಾರಿಯಾಗಿದೆ. ತಮ್ಮ ತಮ್ಮ ಮನೆಯಲ್ಲೇ ಕೆಲವರು ಹೀರೇಕಾಯಿ ಬೆಳೆಯುತ್ತಾರೆ.

ಆದರೆ ಈ ಹೀರೇಕಾಯಿ ರೈಸ್ ಅನ್ನು ನೀವು ಹೋಟೆಲ್‌ನಲ್ಲಾಗಲಿ ಕ್ಯಾಂಟೀನ್‌ನಲ್ಲಾಗಲಿ ನೋಡಲು ಸಾಧ್ಯವಿಲ್ಲ. ಏಕೆಂದರೆ ಇದೊಂದು ವಿಶೇಷ ರೆಸಿಪಿಯಾಗಿದೆ. ಹಾಗಾದರೆ ನಾವಿಂದು ಈ ವಿಶಿಷ್ಟ ರೆಸಿಪಿಯಾದ ಹೀರೇಕಾಯಿ ರೈಸ್ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಹೀರೇಕಾಯಿ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈ ಖಾದ್ಯ ಮಾಡುವುದು ಹೇಗೆ? ಎಷ್ಟು ಸಮಯ ತೆಗೆದುಕೊಳ್ಳಲಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.
ಹೀರೇಕಾಯಿ ರೈಸ್ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ - 250 ಗ್ರಾಂ
- ಹೀರೇಕಾಯಿ (ಚೌಕವಾಗಿ) - 150 ಗ್ರಾಂ
- ಈರುಳ್ಳಿ (ಕತ್ತರಿಸಿದ) - 1
- ಟೊಮೆಟೊ (ಕತ್ತರಿಸಿದ) - 1
- ಜೀರಿಗೆ - 1/2 ಟೀಸ್ಪೂನ್
- ಸಾಸಿವೆ - 1/2 ಟ್ಯಾಪ್
- ಲವಂಗ-3
- ಸೋಂಕಾಳು - 1/4 ಟೀಸ್ಪೂನ್
- ಏಲಕ್ಕಿ-2
- ದಾಲ್ಚಿನ್ನಿ - 2 ಪಿಸಿಗಳು
- ಹಸಿರು ಮೆಣಸಿನಕಾಯಿ - 3
- ಶುಂಠಿ ಬೆಳ್ಳುಳ್ಳಿ (ಪುಡಿಮಾಡಿದ) - 1 tbs
- ಕರಿಬೇವಿನ ಎಲೆಗಳು - 2 tbs
- ಕೆಂಪು ಮೆಣಸಿನ ಪುಡಿ - 1/4 ಟೀಸ್ಪೂನ್
- ಅರಿಶಿನ ಪುಡಿ - 1/4 ಟೀಸ್ಪೂನ್
- ಗರಂ ಮಸಾಲಾ ಪುಡಿ - 1/4 ಟೀಸ್ಪೂನ್
- ಕೊತ್ತಂಬರಿ ಪುಡಿ-1/2 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 2 ಚಮಚ
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಹೀರೇಕಾಯಿ ರೈಸ್ ಮಾಡುವ ವಿಧಾನ
ಒಂದು ಪಾತ್ರೆಗೆ ಎಣ್ಣೆ ಹಾಕಿಕೊಂಡಿ ಅದಕ್ಕೆ ಸಾವಿಗೆ, ಜೀರಿಗೆ, ಸೋಂಕಾಳು, ಏಲಕ್ಕಿ, ಲವಂಗ ಹಾಕಿಕೊಂಡು ಫ್ರೈ ಮಾಡಿ. ಇದಕ್ಕೆ ಈರುಳ್ಳಿ ಹಾಕಿಕೊಂಡು ಫ್ರೈ ಮಾಡುವಾಗ ಹೀರೇಕಾಯಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಅದಕ್ಕೆ ಹಾಕಿ. ಈಗಲೆ ಉಪ್ಪು ಹಾಕಿಕೊಂಡಿ 4 ನಿಮಿಷ ಫ್ರೈ ಮಾಡಿ.
ಇದಕ್ಕೆ ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ ಹಾಕಿ 5 ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ಒಂದು ಟೊಮೆಟೊ ಹಾಕಿಕೊಂಡು ಫ್ರೈ ಮಾಡಿ. ಇದಕ್ಕೆ ಅರಶಿಣ, ಖಾರದ ಪುಡಿ, ಗರಂ ಮಸಾಲ ಹಾಕಿ ಫ್ರೈ ಮಾಡಿಕೊಳ್ಳಿ. ಇದೆಲ್ಲಾ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ಬೇಯಲು ಬಿಡಿ.
ಇನ್ನೊಂದೆಡೆ ಅನ್ನ ತೆಗೆದುಕೊಂಡು ಹುಡಿಮಾಡಿಕೊಳ್ಳಬೇಕು. ಗೊಜ್ಜು ರೆಡಿಯಾದ ಬಳಿಕ ಇದಕ್ಕೆ ಅನ್ನವನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಉರಿ ಸಣ್ಣದಾಗಿ ಇಟ್ಟುಕೊಂಡು ಅನ್ನ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿಕೊಂಡು ಇಳಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಹೀರೇಕಾಯಿ ರೈಸ್ ರೆಡಿಯಾಗಿರುತ್ತೆ. ಇದನ್ನು ಲಂಚ್ ಬಾಕ್ಸ್‌ಗೂ ಬಳಸಬಹುದು. ಜೊತೆಗೆ ತಿಂಡಿಗೂ ಸವಿಯಬಹುದು.



Click it and Unblock the Notifications
