Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಊಟ, ತಿಂಡಿ ಘಮ ಘಮ ಎನ್ನುವ ಹೀರೆಕಾಯಿ ಗೊಜ್ಜು ಮಾಡಿ..!
ನೀವು ಊಟದ ಜೊತೆಗೆ ರುಚಿ ರುಚಿಯಾಗಿ ಯಾವುದಾದರು ತರಕಾರಿ ಗೊಜ್ಜು ಸವಿಯಲು ಇಷ್ಟಪಡುವರಾಗಿದ್ದರೆ ಇಂದು ನಾವು ಹೊಸ ರೀತಿಯಲ್ಲಿ ನೀವೆಂದು ಸವಿಯದೇ ಇರುವಂತಹ ಹೀರೆಕಾಯಿ ಗೊಜ್ಜು ಮಾಡುವ ಕುರಿತು ಹೇಳಲಿದ್ದೇವೆ. ಅದರಲ್ಲೂ ಈ ಹೀರೆಕಾಯಿ ಗೊಜ್ಜು ಸವಿಯಲು ಬಹಳ ರುಚಿಯಾಗಿರಲಿದೆ. ಹಾಗೆ ನೀವು ಸುಲಭವಾಗಿ ಮಾಡಿ ಮುಗಿಸಬಹುದಾದ ಖಾದ್ಯ ಇದು.
ಹೀರೆಕಾಯಿ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದನ್ನು ನೀವು ಕೂಡ ತಿಳಿದಿರಬಹುದು. ಅದರಲ್ಲೂ ಹೀರೆಕಾಯಿ ಚಟ್ನಿ, ಸಾಂಬಾರ್ ಎಲ್ಲರಿಗೂ ಇಷ್ಟವೆನಿಸುವ ಖಾದ್ಯ. ನೀವು ಯಾವುದೇ ಖಾದ್ಯದಲ್ಲಿ ಹೀರೆಕಾಯಿ ಸೇರಿಸಿದರೆ ಅದರ ರುಚಿ ದುಪ್ಪಟ್ಟಾಗಲಿದೆ. ಹೀರೆಕಾಯಿಯಲ್ಲಿ ವಿಟಮಿನ್ ಎ ಅಂಶ ಹೇರಳವಾಗಿದೆ. ಹಾಗೆ ಕಬ್ಬಿಣಾಂಶದಿಂದ ತುಂಬಿರುವ ಪದಾರ್ಥವಿದು ಎನ್ನಬಹುದು.

ಇಂತಹ ಹೀರೆಕಾಯಿಯಿಂದ ನೀವು ಬಹಳಷ್ಟು ರುಚಿ ರುಚಿಯ ಖಾದ್ಯಗಳ ಮಾಡಿರುಬಹುದು. ಅದ್ರಲ್ಲೂ ಮಳೆಗಾಲಕ್ಕೆ ಸವಿಯುವಂತಹ ಹೀರೆಕಾಯಿ ರೋಸ್ಟ್ ಸಹ ಮಾಡಿರಬಹುದು, ಆದ್ರೆ ನಾವಿಂದು ಊಟ ಹಾಗೂ ಚಪಾತಿ, ಪರೋಟ, ದೋಸೆ ಜೊತೆಗೆ ಸವಿಯಲು ಬೇಕಾಗುವ ಹೀರೆಕಾಯಿಯ ಹೊಸ ರೀತಿಯ ಗೊಜ್ಜು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಈ ಹೀರೆಕಾಯಿ ಗೊಜ್ಜು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೀರೆಕಾಯಿ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು
- ಹೀರೆಕಾಯಿ- ಒಂದು
- ತೆಂಗಿನಕಾಯಿ
- ಕರಿಬೇವು
- ಸಾಸಿವೆ
- ಜೀರಿಗೆ
- ಎಣ್ಣೆ
- ಈರುಳ್ಳಿ
- ಉಪ್ಪು
- ಹುಣಸೆ ಹುಳಿ
- ಹಸಿ ಮೆಣಸು
ಹೀರೆಕಾಯಿ ಗೊಜ್ಜು ಮಾಡುವುದು ಹೇಗೆ?
ಮೊದಲು ಹೀರೆಕಾಯಿಯ ಸಿಪ್ಪೆಯನ್ನು ತೆಳುವಾಗಿ ತೆಗೆದು ನಂತರ ಸಣ್ಣದಾಗಿ ಹೆಚ್ಚಿಕೊಂಡು ನಂತರ ನೀರಿನಲ್ಲಿ ಒಮ್ಮೆ ತೊಳೆದು ನಂತರ ಪಾತ್ರೆಗೆ ಹಾಕಿ ನೀರು ಹಾಕಿ ಒಲೆ ಮೇಲೆ ಇಡಿ. ಮುಚ್ಚಳ ಮುಚ್ಚಿ ಕುದಿಬರಲು ಬಿಡಿ. ಹೀರೆಕಾಯಿ ಮೆತ್ತಗಾಗಲು ಬಿಡಿ. ಈಗ ನೀರು ಇಂಗಿರುವಾಗ ಒಲೆ ಆಫ್ ಮಾಡಿ ಇದು ತಣ್ಣಗಾಗಲು ಬಿಡಿ.
ಈಗ ಮಿಕ್ಸಿ ಜಾರ್ಗೆ ತಣ್ಣಗಾದ ಹೀರೆಕಾಯಿ ಹಾಕಿಕೊಂಡು, ಹಸಿ ತೆಂಗಿನಕಾಯಿ ತುರಿ, ಹಸಿ ಮೆಣಸು, ಹುಣಸೆ ಹಣ್ಣು, ಉಪ್ಪು ಹಾಗೆ ಬೇಯಿಸಿಲು ಇಟ್ಟಿದ್ದ ನೀರು ಇದ್ದರೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ತರಿ ತರಿಯಾಗಿ ರುಬ್ಬಿಕೊಂಡು ಅದನ್ನು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಚಿಕ್ಕದಾಗಿ ಹೆಚ್ಚಿಕೊಂಡಿರುವ ಒಂದು ಈರುಳ್ಳಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಒಣ ಮೆಣಸು, ಕರಿಬೇವು ಹಾಕಿಕೊಂಡು ಚಿಕ್ಕದಾದ ಒಂದು ಒಗ್ಗರಣೆ ಮಾಡಿಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಘಮ ಘಮ ಎನ್ನುವಂತಹ ಹೀರೆಕಾಯಿ ಗೊಜ್ಜು ರೆಡಿಯಾಗುತ್ತದೆ. ನೀವು ಸುಲಭವಾಗಿ ಮಾಡಬಹುದಾದ ಹಾಗೆ ಬಹಳ ರುಚಿಯಾದ ರೆಸಿಪಿ ಇದು. ಊಟದ ಜೊತೆಗೆ ಹಾಗೆ ತಿಂಡಿಯ ಜೊತೆಗೂ ಇದನ್ನು ಸವಿಯಬಹುದು.
ಈ ಹೀರೆಕಾಯಿಯಲ್ಲಿನ ಆರೋಗ್ಯಕರ ಅಂಶವು ನಿಮಗೆ ಉತ್ತಮವಾಗಬಹುದು ಹಾಗೆ ಬೆಳಗ್ಗೆ ತಿಂಡಿಯ ಜೊತೆಗಂತು ಅದ್ಭುತ ರುಚಿ ನೀಡಲಿದೆ. ನೀವು ಸಹ ಮನೆಯಲ್ಲಿ ಒಂದೇ ಒಂದು ಹೀರೆಕಾಯಿ ಇದ್ದರೂ ಕೂಡ ಈ ರೀತಿ ಗೊಜ್ಜು ಮಾಡಿ ಸವಿದು ನೋಡಿ. ಇನ್ನು ದೋಸೆ, ಇಡ್ಲಿ, ಚಪಾತಿ ಮಾಡಿದಾಗಲಂತು ಈ ರೀತಿ ಗೊಜ್ಜು ಮಾಡಿದ್ರೆ ಆ ರುಚಿಗೆ ಆಗಾಗ ಇದನ್ನೇ ಮಾಡಿ ಸವಿಯಲು ಮುಂದಾಗುತ್ತಿರಿ.



Click it and Unblock the Notifications
