Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸುಲೈಮನಿ ಟೀ ಮಾಡುವುದು ಹೇಗೆ? ಆರೋಗ್ಯಕ್ಕೆ ತುಂಬಾ ಒಳ್ಳೆಯದು ಟೀ
ಸುಲೈಮನಿ ಟೀ ಕೇರಳದ ಮಲಬಾರ್ ಕಡೆ ಪ್ರಸಿದ್ಧ, ಇದರ ವಿಶೇಷತೆ ಏನಪ್ಪಾ ಅಂದ್ರೆ ಇದನ್ನು ಅರಬ್ ದೇಶಗಳಲ್ಲಿ ತಯಾರಿಸಿ ಕುಡಿಯಲಾಗುತ್ತಿತ್ತು, ಅದು ಕೇರಳಕ್ಕೂ ಪರಿಚಯವಾಗಿದೆ, ಈಗ ಈ ಟೀ ತುಂಬಾನೇ ಜನಪ್ರಿಯತೆ ಗಳಿಸಿದೆ, ಅದಕ್ಕೆ ಕಾರಣ ಇದರಲ್ಲಿರುವ ಆರೋಗ್ಯವರ್ಧಕ ಗುಣಗಳು. ಜೀರ್ಣಕ್ರಿಯೆಗೆ , ತೂಕ ನಿಯಂತ್ರಣಕ್ಕೆ ಈ ಟೀ ತುಂಬಾನೇ ಒಳ್ಳೆಯದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
2 ಲವಂಗ
1/2 ಇಂಚಿನಷ್ಟು ಉದ್ದವಿರುವ ಚಕ್ಕೆ
2 ಏಲಕ್ಕಿ
1 ಚಮಚ ತುರಿದ ಶುಂಠಿ
1 ಚಮಚ ಸಕ್ಕರೆ
ಟೀ ಪುಡಿ (ಟೀ ಎಲೆ ಬಳಸಿ)
1/2 ನಿಂಬೆರಸ
2 ಕಪ್ ನೀರು
ಮಾಡುವ ವಿಧಾನ
- ಟೀ ಪಾತ್ರೆಗೆ ನೀರು ಹಾಕಿ ಅದರಲ್ಲಿ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಶುಂಠಿ ಇವುಗಳನ್ನು ಸೇರಿಸಿ.
- ನೀರು ಕುದಿ ಬರಲಾರಂಭಿಸಿದಾಗ ಸಕ್ಕರೆ ಸೇರಿಸಿ 2-3 ನಿಮಿಷ ಕುದಿಸಿ
- ಈಗ ಟೀಯನ್ನು ಸೋಸಿ ಲೋಟಕ್ಕೆ ಹಾಕಿ ಬಳಿಕ ನಿಂಬೆ ರಸ ಹಿಂಡಿ ತಕ್ಷಣವೇ ಸರ್ವ್ ಮಾಡಿ.
ಸಲಹೆ
ನೀವು ಸಕ್ಕರೆ ಹಾಕಲು ಬಳಸದಿದ್ದರೆ ಜೇನು, ಡೇಟ್ಸ್ ಸಿರಪ್ (ಖರ್ಜೂರ ರಸ) ಸೇರಿಸಿ
ಕೂಡ ಬಳಸಬಹುದು
ಇದಕ್ಕೆ ಬೇಕಾದರೆ ಒಂದೆರಡು ಎಸಳು ಕೇಸರಿ ಸೇರಿಸಿ ಕೂಡ ಮಾಡಬಹುದು.
ಸುಲೈಮನಿ ಎಂದರೇನು?
ಈ ಟೀ ಅರಬ್ ದೇಶಗಳಲ್ಲಿ ಪ್ರಸಿದ್ಧ, ಕೇರಳದ ಮಲಬಾರ್‌ನಲ್ಲಿ ಈ ಟೀ
ಪ್ರಸಿದ್ಧವಾಗಿದೆ. ಈ ಟೀಯನ್ನು ಮಸಾಲೆ ಹಾಕಿ ತಯಾರಿಸಲಾಗುವುದು. ಈ ಟೀ ಕುಡಿಯಲು
ತುಂಬಾ ಚೆನ್ನಾಗಿರುತ್ತದೆ, ಊಟ ಮಾಡಿದ ಬಳಿಕ ಈ ಟೀ ಕುಡಿದರಂತೂ ಜೀರ್ಣಕ್ರಿಯೆಗೆ
ತುಂಬಾ ಒಳ್ಳೆಯದು.
ಸುಲೈಮನಿ ಪ್ರಯೋಜನಗಳೇನು?
- ಬ್ಲ್ಯಾಕ್ ಟೀ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
- ಆಂಟಿಆಕ್ಸಿಡೆಂಟ್ ಅಧಿಕವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು
- ಈ ಟೀ ಹೃದಯದ ಆರೋಗ್ಯಕ್ಕೆ ಒಳ್ಳೆಯದು
- ತ್ವಚೆ ಆರೋಗ್ಯಕ್ಕೆ ಒಳ್ಳೆಯದು.
- ಬ್ಲ್ಯಾಕ್ ಟೀ ಕಣ್ಣಿನ ಕೆಳಗಡೆ ಹಚ್ಚಿದರೆ ಟಾರ್ಕ್ ಸರ್ಕಲ್ ಕೂ ಹೋಗಲಾಡಿಸಬಹುದು, ಆದರೆ ಈ ರೀತಿ ಮಸಾಲೆ ಹಾಕಿದ ಟೀ ಹಚ್ಚಬೇಡಿ.
ಈ ಟೀ ದಿನಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಕುಡಿಯಬಹುದು,ಆದರೆ ದಿನದಲ್ಲಿ 2ಕ್ಕಿಂತ ಹೆಚ್ಚು ಕುಡಿಯಬೇಡಿ. ಹಬ್ಬದಡುಗೆ, ರೆಸ್ಟೋರೆಂಟ್ ಅಡುಗೆ ತಿಂದಾಗ ಸೋಡಾ ಕುಡಿಯುವ ಬದಲಿಗೆ ಇದನ್ನು ಮಾಡಿ ಕುಡಿದರೆ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.
ಈ ಟೀ ಪ್ರತಿನಿತ್ಯ ಕುಡಿಯುವುದರಿಂದ ಯಾವುದೇ ಸಮಸ್ಯೆಯಿಲ್ಲ, ಬದಲಿಗೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಬ್ಲ್ಯಾಕ್ ಟೀ ಅಥವಾ ಲೆಮನ್ ಟೀಗಿಂತ ಸ್ವಲ್ಪ ಭಿನ್ನ ಟೀ, ನೀವು ಚಕ್ಕೆ ಲವಂಗ ಕಡಿಮೆ ಹಾಕಿ, ಅಲ್ಲದೆ ಈ ಟೀಯ ಸ್ವಾದ ತುಂಬಾನೇ ಇಷ್ಟವಾಗುವುದು ಕೂಡ.



Click it and Unblock the Notifications
