Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬ್ರೇಕ್‌ಫಾಸ್ಟ್‌ಗೆ ಹೊಸ ತಿಂಡಿ: ಗೋಧಿ ಹಿಟ್ಟಿನ ಮಸಾಲ ತಿಂಡಿ ಸವಿದು ನೋಡಿ!
ಬೆಳಗ್ಗಿನ ಹೊತ್ತು ಸವಿಯಲು ವಿವಿಧ ಬಗೆಯ ತಿಂಡಿಗಳ ಮಾಡುವುದು ಸಾಮಾನ್ಯ. ಅದ್ರಲ್ಲು ಸುಲಭವಾಗಿ ಮಾಡಬಹುದಾದ ಮಾಡುವಂತಹ ಖಾದ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಆದ್ರೆ ನಿತ್ಯ ಒಂದೇ ರೀತಿಯ ತಿಂಡಿ ಅಂದರೆ ಎಲ್ಲರಿಗೂ ಬೇಸರ ತರಿಸಲಿದೆ. ಹೀಗಾಗಿ ನಾವಿಂದು ಸುಲಭವಾಗಿ ಹಾಗೆ ವಿಭಿನ್ನ ರುಚಿಯ ಖಾದ್ಯ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಅದ್ರಲ್ಲೂ ನೀವು ಗೋಧಿ ಹೊಟ್ಟಿನಿಂದ ಮಾಡುವ ಹಲವು ರೀತಿಯ ತಿಂಡಿಗಳ ಸವಿದಿರುತ್ತೀರಿ. ಅದ್ರಲ್ಲೂ ಚಪಾತಿ, ದೋಸೆಯಂತು ಬಹಳಷ್ಟು ಜನರ ಮನೆಯಲ್ಲಿ ಮಾಡುವ ಬ್ರೇಕ್ ಫಾಸ್ಟ್ ಪಟ್ಟಿಯಲ್ಲಿ ನೋಡಬಹುದು. ಗೋಧಿ ಹಿಟ್ಟಿನಿಂದ ಮಾಡುವ ಎಲ್ಲಾ ಖಾದ್ಯಗಳು ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮಾಗಿರಲಿದೆ. ಇದರಲ್ಲಿನ ಹೆಚ್ಚು ಫೈಬರ್ ಅಂಶ ನಿಮ್ಮ ಜೀರ್ಣಕ್ರಿಯೆ ಉತ್ತೇಜಿಸಲಿದೆ.

ಹೀಗಾಗಿ ತೂಕ ಇಳಿಸಲು ಮುಂದಾಗುವವರು ಹೆಚ್ಚು ಹೆಚ್ಚು ಚಪಾತಿ ಮಾಡಿ ಸವಿಯುತ್ತಾರೆ. ಅವರ ಊಟದೊಂದಿಗೆ ಚಪಾತಿ ಇರುವುದು ನೋಡಬಹುದು. ಇನ್ನು ಇಂದು ಗೋಧಿ ಹಿಟ್ಟಿನಲ್ಲಿ ಈ ರೀತಿ ಹೊಸ ರುಚಿಯ ಮಸಾಲ ತಿಂಡಿ ಮಾಡುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಇದಕ್ಕೆ ಹಲವು ವಸ್ತುಗಳ ಹಾಕಿ ಅದರ ರುಚಿ ದುಪ್ಪಟ್ಟಾಗಿಸಿ ಸವಿದು ನೋಡಿ.
ಈ ಗೋಧಿ ಬಿಟ್ಟಿನಿಂದ ಮಾಡುವ ಹೊಸ ರೀತಿಯ ತಿಂಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗೋಧಿ ಹಿಟ್ಟಿನ ಮಸಾಲ ತಿಂಡಿ ಮಾಡಲು ಬೇಕಾಗುವ ವಸ್ತುಗಳು
- ಗೋಧಿ ಹಿಟ್ಟು
- ಈರುಳ್ಳಿ
- ಕ್ಯಾರೆಟ್
- ಕ್ಯಾಪ್ಸಿಕಂ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಸಾಸಿವೆ
- ಹಸಿ ಮೆಣಸು
- ಕರಿಬೇವು
- ಕೊತ್ತಂಬರಿ ಸೊಪ್ಪು
- ಉಪ್ಪು
- ದನಿಯಾ ಪುಡಿ
- ಖಾರದ ಪುಡಿ
- ಗರಂ ಮಸಾಲೆ
- ಜೀರಿಗೆ ಪುಡಿ
ಗೋಧಿ ಹಿಟ್ಟಿನ ಮಸಾಲ ತಿಂಡಿ ಮಾಡುವುದು ಹೇಗೆ?
ಮೊದಲು ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ, ಎಲೆಕೋಸನ್ನು ಸಣ್ಣದಾಗಿ ಹೆಚ್ಚಿಕೊಂಡು ಒಂದು ದೊಡ್ಡ ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಹಸಿ ಮೆಣಸು, ಕರಿಬೇವು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೊತ್ತಂಬರಿ ಸೊಪ್ಪು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ಈಗ ಇದಕ್ಕೆ ಒಂದು ಚಮಚ ಖಾರದ ಪುಡಿ, ಅರ್ಧ ಚಮಚ ಕೊತ್ತಂಬರಿ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ ಸಹ ಹಾಕಿಕೊಂಡು ಬಳಿಕ ಒಂದು ಕಪ್ ಗೋಧಿ ಹಿಟ್ಟು ಹಾಕಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಕಲಸಿಕೊಳ್ಳಿ. ಈ ಹಿಟ್ಟು ಕೈಗೆ ಹಿಡಿಯದೆ ಗಟ್ಟಿಯಾಗಿ ಬರುವಂತೆ ಮಾಡಿಕೊಳ್ಳಬೇಕು.
ಈ ಹಿಟ್ಟು ಮೆತ್ತಗಿರಬೇಕು, ಈ ಹದದಲ್ಲಿ ಮಿಶ್ರಣ ಮಾಡಿಕೊಳ್ಳಿ, ಹಿಟ್ಟು ರೆಡಿಯಾದ ತಕ್ಷಣ ವಡೆಯ ಗಾತ್ರದಲ್ಲಿ ಹಿಟ್ಟನ್ನು ತೆಗೆದುಕೊಂಡು ಚಪಾತಿ ರೀತಿ ಲಟ್ಟಿಸಿಕೊಳ್ಳಬೇಕು. ಬಹಳ ತೆಳ್ಳಗೆ ಲಟ್ಟಿಸಿಕೊಳ್ಳಲು ಆಗುವುದಿಲ್ಲ, ದಪ್ಪವಾಗಿ ಲಟ್ಟಿಸಿಕೊಂಡ ಬಳಿಕ ಇದನ್ನು ಕಾವಲಿಗೆ ಹಾಕಿ ಬೇಯಿಸಿಕೊಳ್ಳಿ. ಚಪಾತಿ ಬೇಯಿಸಿಕೊಂಡಂತೆಯೇ ಇದನ್ನು ಕೂಡ ಬೇಯಿಸಿ. ಕಾಯಿಸುವಾಗ ಎಣ್ಣೆ ಹಾಕಿಕೊಂಡು ಎರಡೂ ಕಡೆಗೂ ಬೇಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಹೊಸ ರೀತಿಯ ತಿಂಡಿಯೊಂದು ರೆಡಿಯಾಗುತ್ತದೆ.
ಈ ತಿಂಡಿಯನ್ನು ಹೊಸ ರುಚಿಯಲ್ಲಿ ಮಾಡಿ ಸವಿಯಬಹುದು. ಎಲ್ಲರಿಗೂ ಇದು ಇಷ್ಟವಾಗುತ್ತೆ. ಹಾಗೆ ಮತ್ತೆ ಮತ್ತೆ ಮಾಡಿ ಸವಿಯಲು ಮನಸ್ಸಾಗುತ್ತೆ. ನೀವು ಕೂಡ ಬ್ರೇಕ್ ಫಾಸ್ಟ್‌ಗೆ ಈ ರೆಸಿಪಿ ಟ್ರೈ ಮಾಡಿ ನೋಡಿ.



Click it and Unblock the Notifications
