Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮ ಹೆಲ್ತ್ ಸೇಫ್ ಆಗಬೇಕೆ? ಈ ಮೊರಿಂಗಾ ಪರಾಠ ತಿನ್ನಿ.. ಮಾಡೋದು ಹೇಗೆ?
ನುಗ್ಗೆ ಸೊಪ್ಪಿನ ಪಲ್ಯ ಒಕೆ. ನುಗ್ಗೆ ಸೊಪ್ಪಿನ ಸಾಂಬಾರ್ ಸಹ ಒಕೆ. ಇನ್ನೂ ನುಗ್ಗೆಕಾಯಿ ಸಾಂಬರ್ ಸೂಪರ್. ಆದರೆ, ನೀವು ಎಂದಾದರೂ ನುಗ್ಗೆ ಸೊಪ್ಪಿನ ಪರಾಠ (Moringa Parata) ತಿಂದಿದ್ದೀರಾ? ಹೌದು, ಈ ನುಗ್ಗೆ ಸೊಪ್ಪಿನ ಪರಾಠವನ್ನು (ಮೊರಿಂಗಾ ಪರಾಠ) ಸುಲಭವಾಗಿ ತಯಾರಿಸಬಹುದು. ಸೊಪ್ಪು ಅಂತ ಮೂಗು ಮುರಿಯುವವರು ಸಹ ಮತ್ತೆ ಮತ್ತೆ ಬೇಕು ಅನ್ನೋದು ಗ್ಯಾರಂಟಿ. ನುಗ್ಗೆ ಸೊಪ್ಪಿನ ಪರಾಠ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ನೀವು ಮೊಸರು ಮತ್ತು ಉಪ್ಪಿನಕಾಯಿಯೊಂದಿಗೆ ಸವಿದರೆ, ಅದರ ಮಜವೇ ಬೇರೆ.
ನಾವು ಮಾಡುವ ತಿಂಡಿಗಳನ್ನು ಸ್ವಾದಿಷ್ಟ ಹಾಗೂ ರುಚಿಕರವಾಗಿರಬೇಕು. ಇದು ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳುವ ಸುಲಭ ಮಾರ್ಗ. ಎಲ್ಲರೂ ಸೊಪ್ಪು, ತರಕಾರಿಗಳನ್ನು ಹಾಗೆಯೇ ತಿನ್ನಲ್ಲ. ಅಂತಹವರಿಗೆ ಚಪಾತಿ, ರೊಟ್ಟಿ, ಪರಾಠ ಮಾಡಿ ಉಪಹಾರದ ರೂಪದಲ್ಲಿ ಕೊಡಬಹುದು. ನಾವಿಂದು ಈ ಲೇಖನದಲ್ಲಿ ಮೊರಿಂಗಾ ಪರಾಠ ಅಂದರೆ ನುಗ್ಗೆ ಸೊಪ್ಪಿನ ಪರಾಠ ಮಾಡುವುದನ್ನು ತಿಳಿಸಿಕೊಡಲಿದ್ದೇವೆ. ಇದಕ್ಕೆ ಬಳಸುವ ಸಾಮಾಗ್ರಿಗಳು ಸಹ ಇದರ ರುಚಿಯನ್ನು ದುಪ್ಪಟ್ಟು ಮಾಡುತ್ತದೆ. ಹಾಗಿದ್ರೆ, ರುಚಿಕರವಾದ ನುಗ್ಗೆ ಸೊಪ್ಪಿನ ಪರಾಠ ಮಾಡುವುದು ಹೇಗೆ? ಇಲ್ಲಿದೆ ವಿಧಾನ.

ನುಗ್ಗೆ ಸೊಪ್ಪು ಪೋಷಕಾಂಶಗಳ ಆಗರ
• ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವನ್ನು ಸೋಂಕುಗಳಿಂದ
ರಕ್ಷಿಸಲು ಸಹಾಯ ಮಾಡುತ್ತದೆ.
• ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದು ಹೃದ್ರೋಗದ ಅಪಾಯ ಕಡಿಮೆ ಮಾಡಲು ಸಹಾಯ
ಮಾಡುತ್ತದೆ.
• ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
• ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದು ಮಲಬದ್ಧತೆ ಸಮಸ್ಯೆ
ನಿವಾರಿಸುತ್ತದೆ.
ನುಗ್ಗೆ ಸೊಪ್ಪಿನ ಪರಾಠ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
• ಗೋಧಿ ಹಿಟ್ಟು - 1 ½ ಕಪ್
• ನುಗ್ಗೆ ಸೊಪ್ಪು - ¼ ಕಪ್
• ಈರುಳ್ಳಿ - ½ ಕಪ್
• ಕರಿಬೇವು - ½ ಕಪ್ (ಕತ್ತರಿಸಿದ)
• ಹಸಿ ಮೆಣಸಿನಕಾಯಿ - 1 (ಕತ್ತರಿಸಿದ)
• ಶುಂಠಿ - ½ ಚಮಚ
• ಬೆಳ್ಳುಳ್ಳಿ - ½ ಚಮಚ
• ಮೆಣಸಿನ ಪುಡಿ - ½ ಚಮಚ
• ಅರಶಿನ - ½ ಚಮಚ
• ಮ್ಯಾಂಗೊ ಪೌಡರ್ - ¼ ಚಮಚ
• ಚಾಟ್ ಮಸಾಲಾ - ¼ ಚಮಚ
• ಕೊತ್ತಂಬರಿ ಸೊಪ್ಪು - ½ ಚಮಚ
• ಕರಿಬೇವಿನ ಸೊಪ್ಪು
• ಉಪ್ಪು- ರುಚಿಗೆ ತಕ್ಕಷ್ಟು
• ನೀರು
• ತುಪ್ಪ ಅಥವಾ ಅಡುಗೆ ಎಣ್ಣೆ
ನುಗ್ಗೆ ಸೊಪ್ಪಿನ (ಮೊರಿಂಗಾ) ಪರಾಠ ಮಾಡುವ ವಿಧಾನ
ಮೊದಲು, ಒಂದು ಬಟ್ಟಲಿನಲ್ಲಿ ಅಥವಾ ಪಾತ್ರೆಗೆ ಗೋಧಿ ಹಿಟ್ಟು ಹಾಕಿಕೊಳ್ಳಿ. ಅದಕ್ಕೆ ಕತ್ತರಿಸಿದ ನುಗ್ಗೆ ಸೊಪ್ಪು, ಈರುಳ್ಳಿ, ಕರಿಬೇವಿನ ಸೊಪ್ಪು, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಹಾಕಿ ಮಿಕ್ಸ್ ಮಾಡಿ. ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಹಿಟ್ಟಿಗೆ ಸ್ವಲ್ಪ ನೀರು ಹಾಕಿಕೊಂಡು ಮೃದುವಾಗಿ ನಾದಿಕೊಳ್ಳಿ. ಜಾಸ್ತಿ ನೀರು ಹಾಕಿಕೊಳ್ಳಬೇಡಿ. ಒದ್ದೆ ಬಟ್ಟೆಯನ್ನು ನಾದಿದ ಹಿಟ್ಟನ್ನು ಮುಚ್ಚಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದಾದ ಬಳಿಕ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿ. ಪತ್ರಿ ಉಂಡೆಯನ್ನು ರೋಲಿಂಗ್ ಪಿನ್ ಅಥವಾ ಲಟ್ಟಣಿಗೆ ಬಳಸಿ ರೋಲ್ ಮಾಡಿ, ಚಪಾತಿ ತಯಾರಿಸಿಕೊಳ್ಳಿ.
ಈಗ ಗ್ಯಾಸ್ ಆನ್ ಮಾಡಿ ತವಾ ಇಡಿ. ಮಧ್ಯಮ ಉರಿಯಲ್ಲಿ ತವಾ ಬಿಸಿ ಮಾಡಿ ಹಾಗೂ ತವಾದ ಮೇಲೆ ಸ್ವಲ್ಪ ತುಪ್ಪ ಸವರಿ. ಈಗ ತವಾ ಮೇಲೆ ರೋಲ್ ಮಾಡಿದ ಪರಾಠ ಹಾಕಿ. 30 ಸೆಕೆಂಡುಗಳ ಕಾಲ ಚೆನ್ನಾಗಿ ಬೇಯಿಸಿ. ಹಾಗೆಯೇ ಪರಾಠದ ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಿ. ಬೇಯಿಸಿದ ಬದಿಯಲ್ಲಿ ಸ್ವಲ್ಪ ತುಪ್ಪ ಅಥವಾ ಎಣ್ಣೆ ಸವರಿ. ಬಳಿಕ ಮತ್ತೆ ತಿರುಗಿಸಿ. ಗೋಲ್ಡ್ ಕಲರ್ ಬರುವವರೆಗೆ ಬೇಯಿಸಿ. ಇನ್ನೊಂದು ಬದಿಯಲ್ಲೂ ಇದೇ ರೀತಿ ಮಾಡಿ. ಬಳಿಕ ಪರಾಠ ತೆಗೆದು ಪಾತ್ರೆಗೆ ಹಾಕಿ. ಇಷ್ಟು ಮಾಡಿದರೆ ಸಾಕು ಬಿಸಿಬಿಸಿ ನುಗ್ಗೆ ಸೊಪ್ಪಿನ (ಮೊರಿಂಗಾ) ಪರಾಠ ಸಿದ್ಧವಾಗುತ್ತದೆ. ಇದನ್ನು ಮೊಸರು, ಉಪ್ಪಿನಕಾಯಿ ಅಥವಾ ಒಂದು ಕಪ್ ಚಹಾ ಜೊತೆ ಸವಿಯಬಹುದು.



Click it and Unblock the Notifications
