Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ತೂಕ ಇಳಿಸುವ ರುಚಿ ರುಚಿಯ ಸೂಪ್ ಇದು..! ಮಾಡೋಕೆ ನಿಮಿಷಗಳು ಸಾಕು..!
ಇತ್ತೀಚಿಗೆ ಎಲ್ಲರು ತಮ್ಮ ಆರೋಗ್ಯ ಮೇಲೆ ಹೆಚ್ಚು ಗಮನ ಇಡುತ್ತಾರೆ, ಅದರಲ್ಲೂ ನಾವು ಸೇವಿಸುವ ಆಹಾರದ ಮೇಲೆ ಹೆಚ್ಚು ಕಾಳಜಿ ಇಡುತ್ತಾರೆ. ಬೀದಿ ಬದಿಯ ತಿಂಡಿ, ಕರಿದ ತಿಂಡಿಗಳ ಸೇವೆನೆ ಮಾಡುವ ಹೆಚ್ಚು ಎಚ್ಚರಿಕೆಯಿಂದ ಇರುತ್ತಾರೆ. ಹಾಗೆ ಹೋಟೆಲ್ ಖಾದ್ಯ ಸೇವನೆಯು ಕೂಡ ಹಲವರಿಗೆ ಈಗ ಆಗಿಬರುವುದಿಲ್ಲ.
ಇನ್ನು ಊಟ ತಿಂಡಿ ಅಂದ ಕೂಡಲೆ ತೂಕ ಹೆಚ್ಚಳದ ಆತಂಕವೂ ಇದ್ದೇ ಇರುತ್ತೆ. ನಮಗೆ ಇಷ್ಟವಾದ ಸಿಹಿ ತಿಂಡಿ, ಖಾದ್ಯ ಸವಿಯಲು ಕೆಲವರು ಹಿಂದೇಟು ಹಾಕುತ್ತಾರೆ. ಏಕೆಂದರೆ ಎಲ್ಲಿ ತೂಕ ಹೆಚ್ಚಳವಾಗಿತ್ತದೆಯೋ ಎಂಬ ಆತಂಕ ಅವರಲ್ಲಿ ಇದ್ದೇ ಇರುತ್ತದೆ. ತೂಕ ಹೆಚ್ಚಳ ಆಗದಂತೆ ನೋಡಿಕೊಳ್ಳಲು ಹಲವರು ಹಲವು ರೀತಿಯ ಡಯೆಟ್ ಮಾಡುವುದನ್ನು ನಾವು ನೋಡಿದ್ದೇವೆ.

ಕೆಲವರು ಜಿಮ್, ಕಸರತ್ತು, ಓಟ, ವಾಕಿಂಗ್, ಊಟ ಬಿಡಿವುದು ಹೀಗೆ ಹತ್ತಾರು ರೀತಿಯಲ್ಲಿ ತೂಕ ಇಳಿಸಲು ಮುಂದಾಗುತ್ತಾರೆ. ಆದ್ರೆ ನಾವಿಂದು ಸರಳ ಹಾಗೂ ಅತ್ಯಂತ ರುಚಿಕರ ಸೂಪ್ ಸವಿಯುವುದರ ಮೂಲಕ ತೂಕ ಇಳಿಸುವ ಕುರಿತು ತಿಳಿದುಕೊಳ್ಳೋಣ. ಮಿಕ್ಸ್ ತರಕಾರಿ ಹಾಕಿ ಮಾಡುವ ಈ ಸೂಪ್ ಖಂಡಿತ ತೂಕ ಇಳಿಸುವ ಒಂದು ಪರಿಹಾರೋಪಾಯವಾಗಿದೆ.
ಹಾಗಾದ್ರೆ ಈ ಸೂಪ್ ಮಾಡುವುದು ಹೇಗೆ? ಮಿಕ್ಸ್ ತರಕಾರಿ ಸೂಪ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೂಕ ಇಳಿಸುವ ಮಿಕ್ಸ್ ತರಕಾರಿ ಸೂಪ್ ಮಾಡಲು ಬೇಕಾಗುವ ಪದಾರ್ಥಗಳು
- ಈರುಳ್ಳಿ ಹೂವ
- ಎಲೆಕೋಸು
- ಜೋಳ
- ದೊಣ್ಣಮೆಣಸಿನಕಾಯಿ
- ಈರುಳ್ಳಿ 1
- ಬೆಣ್ಣೆ
- ಹಸಿರು ಬಟಾಣಿ
- ಕ್ಯಾರೆಟ್
- ಬೀನ್ಸ್
- ಬೆಳ್ಳುಳ್ಳಿ ಎಸಳು 5
- ಶುಂಠಿ
- ಪಲಾವ್ ಎಲೆ
- ಕರಿ ಕಾಳು ಮೆಣಸಿನ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
ತೂಕ ಇಳಿಸುವ ಮಿಕ್ಸ್ ತರಕಾರಿ ಸೂಪ್ ಮಾಡುವುದು ಹೇಗೆ?
ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಸ್ಪೂನ್ ಬೆಣ್ಣೆ ಹಾಕಿಕೊಳ್ಳಿ. ನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿಯನ್ನು ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಒಂದು ಪಲಾವ್ ಎಲೆ, ಬೆಳ್ಳುಳ್ಳಿ, ತರಿದುಕೊಂಡಿರುವ ಶುಂಠಿ, ಬೀನ್ಸ್, ಕ್ಯಾರೇಟ್, ಎಲೆ ಕೋಸು, ಜೋಳ, ಹಸಿ ಬಟಾಣಿ ( ಈ ಎಲ್ಲಾ ತರಕಾರಿಯನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಳ್ಳಿ, ಎಲ್ಲವನ್ನು ಚಿಕ್ಕದಾಗಿ ಹೆಚ್ಚಿಕೊಂಡಿರಿ)
ಈ ಎಲ್ಲಾ ತರಕಾರಿ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 2 ಅಥವಾ 3 ಗ್ಲಾಸ್ ನೀರು ಹಾಕಿ ಉಪ್ಪು ಸೇರಿಸಿ 5 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ. 5 ನಿಮಿಷದ ಬಳಿಕ ಇದಕ್ಕೆ ಈರುಳ್ಳಿ ಹೂವು, ದಪ್ಪ ಮೆಣಸು ಹಾಕಿ 2 ನಿಮಿಷ ಕುದಿಸಿಕೊಳ್ಳಿ. ನಂತರ ಒಂದು ಸಣ್ಣ ಬೌಲ್ ತೆಗೆದುಕೊಂಡು ಅದಕ್ಕೆ ಕಾರ್ನ್ ಫ್ಲೋರ್ ಹಾಕಿ ಸ್ವಲ್ಪ ನೀರು ಹಾಕಿ ಕಲಸಿಕೊಳ್ಳಬೇಕು.
ಈಗ ಕಲಸಿಕೊಂಡ ಈ ಕಾರ್ನ್ ಫ್ಲೋರ್ ನೀರನ್ನು ಬದಿಗಿಟ್ಟುಕೊಳ್ಳಿ. ಈಗ ಒಲೆ ಮೇಲಿರುವ ತರಕಾರಿ ಮಿಕ್ಸ್‌ಗೆ ಕಾಳು ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ. ಬೇಕಾದರೆ ನೀರು ಮತ್ತೆ ಹಾಕಿಕೊಳ್ಳಿ. ಈಗ ಕಾರ್ನ್ ಫ್ಲೋರ್ ಅನ್ನು ಈ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಸುಮಾರು 4 ನಿಮಿಷ ಕುದಿಸಿಕೊಳ್ಳಬೇಕು.
ಈಗ ಕುದಿಯುವಾಗ ಗಟ್ಟಿಯಾದರೆ ನೀರು ಹಾಕಿಕೊಳ್ಳಿ, ತೆಳುವಾಗಿದೆ ಎನಿಸಿದರೆ ಇನ್ನು ಸ್ವಲ್ಪ ಕಾರ್ನ್ ಫೋರ್ ಹಾಕಿ ಕುದಿಸಿಕೊಳ್ಳಿ, ಈ ಸೂಪ್ ಬಿಸಿಯಾಗಿದ್ದಾಗಲೇ ಸವಿಯಲು ಬಹಳ ರುಚಿ ನೀಡಲಿದೆ. ಇದು ತೂಕ ಇಳಿಸಲು ಸಹ ನೆರವಾಗಲಿದೆ. ನೀವು ಸಹ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
