Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಹೊಟ್ಟೆ ಹಸಿವಾಗಲು ಈ ಸೂಪ್ ಮಾಡಿ ಕುಡಿಯಿರಿ..! ಮಕ್ಕಳ ಆರೋಗ್ಯಕ್ಕೆ ಅತ್ಯುತ್ತಮ..!!
ಸೂಪ್ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಮಕ್ಕಳಿಗೂ ಸೂಪ್ ಅಂದ್ರೆ ಪಂಚಪ್ರಾಣ ಅವರು ಊಟಕ್ಕೂ ಮುನ್ನ ಸೂಪ್ ಕುಡಿಯುವುದು, ಸ್ನ್ಯಾಕ್ಸ್ ಸಮಯದಲ್ಲಿ ಸೂಪ್ ಕುಡಿಯಲು ಇಷ್ಟಪಡುತ್ತಾರೆ. ಇನ್ನು ಈಗ ಬಿಸಿ ನೀರಿಗೆ ಸೇರಿಸಿ ಥಟ್ ಅಂತ ಕುಡಿಯುವ ಸೂಪ್ಗಳು ಮರುಕಟ್ಟೆಗೆ ಬಂದಿವೆ. 5 ನಿಮಿಷದಲ್ಲಿ ಸೂಪ್ ರೆಡಿ ಮಾಡಬಹುದು. ರೆಡಿ ಮೇಡ್ ಸೂಪ್ಗಳಿಗಿಂತ ಈಗ ಮನೆಯಲ್ಲಿ ಮಾಡಿ ಸವಿಯುವಂತಹ ಸೂಪ್ ಕುರಿತು ತಿಳಿದುಕೊಳ್ಳೋಣ.
ಅದರಲ್ಲೂ ಶೀತ, ಕೆಮ್ಮು, ಅಥವಾ ಗಂಟಲು ನೋವಿನಂತಹ ಕಿರಿ ಕಿರಿ ನೀವು ಅನುಭವಿಸುತ್ತಿದ್ದರೆ ಈ ರೀತಿಯ ಸೂಪ್ ಮಾಡಿ ಸವಿದು ನೋಡಿ. ಇದು ರುಚಿಯ ಜೊತೆಗೆ ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ ಎಂದಾಗಲಿದೆ. ಹಾಗೆ ಈ ಸೂಪ್ ಮಾಡೋದು ಕೂಡ ಬಹಳ ಸುಲಭ. ನೀವು ಕೂಡ ಒಮ್ಮೆ ಈ ಸೂಪ್ ಮನೆಯಲ್ಲಿ ಮಾಡುವುದು ಹೇಗೆ ಅನ್ನೋದನ್ನು ತಿಳಿಯಿರಿ.

ಈ ಸೂಪ್ಗೆ ಕಾಳು ಮೆಣಸು, ಬೆಳ್ಳುಳ್ಳಿ ಸೇರಿ ಹಲವು ಆರೋಗ್ಯಕರ ಅಂಶಗಳ ಸೇರಿಸುವುದರಿಂದ ಇದು ನಿಮ್ಮ ಆರೋಗ್ಯಕ್ಕೆ ಬೆಂಬಲ ನೀಡುವ ಸೂಪ್ ಆಗಿರಲಿದೆ. ಹೀಗಾಗಿ ನಿಮ್ಮ ಬಾಯಿ ರುಚಿ ಹೆಚ್ಚಿಸುವ ಜೊತೆಗೆ ಇದು ಆರೋಗ್ಯಕ್ಕೂ ಅತ್ಯುತ್ತಮ ಎನಿಸಿದೆ. ಹಾಗೆ ಮಕ್ಕಳು ಸಹ ಇಷ್ಟಪಟ್ಟು ಸವಿಯಬಹುದಾಗಿದೆ. ಹಾಗಾದ್ರೆ ಈ ರುಚಿಯ ಸೂಪ್ ಮನೆಯಲ್ಲೇ ಮಾಡೋದು ಹೇಗೆ?
ಆರೋಗ್ಯಕ್ಕೆ ಬೂಸ್ಟ್ ನೀಡುವ ಈ ಸೂಪ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸೂಪ್ ಮಾಡಲು ಬೇಕಾಗುವ ಪದಾರ್ಥಗಳು
- ಕಾಳು ಮೆಣಸು
- ಶುಂಠಿ
- ಬೆಳ್ಳುಳ್ಳಿ
- ತುಪ್ಪ
- ಎಲೆಕೋಸು
- ಕ್ಯಾರೆಟ್
- ಕಾರ್ನ್ ಫ್ಲೋರ್
- ನಿಂಬೆ ರಸ
- ರುಚಿಗೆ ಉಪ್ಪು
ಈ ಶುಂಠಿ ಬೆಳ್ಳುಳ್ಳಿ ಸೂಪ್ ಮಾಡುವುದು ಹೇಗೆ?
ಮೊದಲಿಗೆ ಕಾಳು ಮೆಣಸುಗಳನ್ನು ಕುಟ್ಟಿ ಪುಡಿ ಮಾಡಿ ಇಟ್ಟುಕೊಳ್ಳಿ. ಆದರೆ ಸಂಪೂರ್ಣ ಪುಡಿ ಮಾಡಬೇಡಿ. ಅದರ ಪೀಸ್ಗಳು ಕೈಗೆ ಸಿಗುವಂತೆ ಇರಲಿ. ಹಾಗೆ ಪೆಪ್ಪರ್ ಪೌಡರ್ ಬಳಸಬೇಡಿ ಕಾಳು ಮೆಣಸನ್ನೇ ಪುಡಿ ಮಾಡಿದರೆ ಉತ್ತಮ. ಹಾಗೆ ಬೆಳ್ಳುಳ್ಳಿಯನ್ನು ಸಹ ಜಜ್ಜಿಕೊಂಡು ಇಟ್ಟುಕೊಳ್ಳಿ. ಈಗ ಒಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟುಕೊಂಡು ಅದಕ್ಕೆ ತುಪ್ಪ ಹಾಕಿಕೊಳ್ಳಿ. ಬೇಕಿದ್ದರೆ ಎಣ್ಣೆ ಕೂಡ ಹಾಕಿಕೊಳ್ಳಬಹುದು.
ಇದನ್ನು ಸಣ್ಣ ಉರಿಯಲ್ಲಿ ಇಟ್ಟುಕೊಂಡು ಜಜ್ಜಿಕೊಂಡಿರುವ ಬೆಳ್ಳುಳ್ಳಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 2 ಸ್ಪೂನ್ ಎಲೆಕೋಸು, ಕ್ಯಾರೆಟ್ ಸಣ್ಣದಾಗಿ ಹೆಚ್ಚಿಕೊಂಡು ಹಾಕಿಕೊಳ್ಳಿ. 2 ನಿಮಿಷ ಸನ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 2 ಕಪ್ ನೀರು ಹಾಕಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಮಧ್ಯ ಉರಿಯಲ್ಲಿ ಇಟ್ಟು ಕುದಿಬರಲು ಬಿಡಿ.
ಈಗ ಒಂದು ಸಣ್ಣ ಬೌಲ್ಗೆ ಕಾರ್ನ್ ಫ್ಲೋರ್ ಹಾಕಿಕೊಂಡು ಅದಕ್ಕೆ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. 1 ಸ್ಪೂನ್ ಬಳಸಿದರೆ ಸಾಕು. ಈಗ ಕುದಿಯುತ್ತಿರುವ ಸೂಪ್ಗೆ ಕುಟ್ಟಿ ಪುಡಿ ಮಾಡಿರುವ ಕಾಳು ಮೆಣಸನ್ನು ಸಹ ಹಾಕಿಕೊಳ್ಳಿ. ನಂತರ ಮಿಕ್ಸ್ ಮಾಡಿದ ಕಾರ್ನ್ ಫ್ಲೋರ್ ನೀರು ಸಹ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 2 ನಿಮಿಷ ಕುದಿಯಲು ಬಿಡಿ. 3ರಿಂದ 4 ನಿಮಿಷ ಬಿಟ್ಟು ಬೇಕಿದ್ದರೆ ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಂಡು ಬಿಸಿ ಬಿಸಿಯಾಗಿದ್ದಾಗಲೆ ಸವಿಯಲು ನೀಡಿ.



Click it and Unblock the Notifications