Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
1 ಕಪ್ ಹಿಟ್ಟು ಸಾಕು! ಹೊವಿನಂತೆ ಮೃದುವಾದ ಧೋಕ್ಲಾ ರೆಡಿ.. ಮಾಡೋದು ಹೇಗೆ?
10 ನಿಮಿಷಗಳಲ್ಲಿ ರುಚಿಯಾದ ಬ್ರೇಕ್‌ಫಾಸ್ಟ್! ನೀವು ಬೆಳಗಿನ ಟಿಫನ್‌ಗೆ ಆರೋಗ್ಯಕರ ಮತ್ತು ಸರಳವಾದ ಆಯ್ಕೆಯನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ, ಪ್ರಸಿದ್ಧ ಗುಜರಾತಿ ಉಪಹಾರವಾದ ಧೋಕ್ಲಾ (dhokla) ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಇದು ಕೇವಲ ರುಚಿಕರವಾಗಿರುವುದು ಮಾತ್ರವಲ್ಲದೆ, ಕಡಿಮೆ ಎಣ್ಣೆಯಲ್ಲಿ ಹಬೆಯಲ್ಲಿ ಬೇಯಿಸುವುದರಿಂದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ಲೇಖನದಲ್ಲಿ ಧೋಕ್ಲಾದ ಆರೋಗ್ಯ ಪ್ರಯೋಜನಗಳು ಮತ್ತು ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸುವ ಸುಲಭ ವಿಧಾನದ (dhokla recipe) ಬಗ್ಗೆ ತಿಳಿಸಲಾಗಿದೆ.
ಧೋಕ್ಲಾ ಕೇವಲ ರುಚಿಕರವಾದ ಖಾದ್ಯವಲ್ಲ, ಇದು ಹಲವು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಕಡಲೆ ಹಿಟ್ಟಿನಿಂದ ಮಾಡಿರುವ ಕಾರಣ ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಮತ್ತು ಫೈಬರ್ ಇರುತ್ತದೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದನ್ನು ಎಣ್ಣೆಯಲ್ಲಿ ಕರಿಯುವ ಬದಲು, ಹಬೆಯಲ್ಲಿ ಬೇಯಿಸುವುದರಿಂದ ಕೊಬ್ಬಿನಾಂಶ ಕಡಿಮೆ ಇರುತ್ತದೆ ಮತ್ತು ಇದು ಸುಲಭವಾಗಿ ಜೀರ್ಣವಾಗುತ್ತದೆ. ಬೆಳಗ್ಗೆ ಹೊಟ್ಟೆ ತುಂಬುವ ಮತ್ತು ಆರೋಗ್ಯಕರ ಉಪಾಹಾರಕ್ಕೆ ಇದು ಹೇಳಿ ಮಾಡಿಸಿದ ಖಾದ್ಯವಾಗಿದೆ.

ಧೋಕ್ಲಾ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಕಡಲೆ ಹಿಟ್ಟು
• ರವೆ
• ನೀರು
• ಎಣ್ಣೆ
• ನಿಂಬೆ ರಸ
• ಸಕ್ಕರೆ
• ಶುಂಠಿ-ಹಸಿ ಮೆಣಸಿನ ಪೇಸ್ಟ್
• ಅರಿಶಿನ ಪುಡಿ
• ರುಚಿಗೆ ತಕ್ಕಷ್ಟು ಉಪ್ಪು
• ಅಡುಗೆ ಸೋಡಾ
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು
• ಎಣ್ಣೆ
• ಸಾಸಿವೆ
• ಜೀರಿಗೆ
• ಎಳ್ಳು
• ಹಸಿ ಮೆಣಸು
• ಇಂಗು
• ಕರಿಬೇವಿನ ಎಲೆ
• ನೀರು
• ಸಕ್ಕರೆ

ಧೋಕ್ಲಾ ಮಾಡುವ ಸಲಭ ವಿಧಾನ
ಮೊದಲಿಗೆ, ಒಂದು ದೊಡ್ಡ ಪಾತ್ರೆಯಲ್ಲಿ ಕಡಲೆ ಹಿಟ್ಟು, ರವೆ, ಅರಿಶಿನ ಪುಡಿ, ಉಪ್ಪು, ಶುಂಠಿ-ಮೆಣಸಿನ ಪೇಸ್ಟ್, ಸಕ್ಕರೆ, ನಿಂಬೆ ರಸ ಮತ್ತು ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ನೀರನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ಗಂಟುಗಳಿಲ್ಲದ ನಯವಾದ, ಸ್ವಲ್ಪ ದಪ್ಪನೆಯ ಹಿಟ್ಟನ್ನು ತಯಾರಿಸಿ. ಈ ಹಿಟ್ಟು ಅತಿಯಾಗಿ ತೆಳ್ಳಗಿರಬಾರದು.
ಧೋಕ್ಲಾ ಹಿಟ್ಟನ್ನು ಬೇಯಿಸುವ ಮೊದಲು, ಅಡಿಗೆ ಸೋಡಾವನ್ನು ಹಾಕಿ. ಅಡುಗೆ ಸೋಡಾವನ್ನು ಸೇರಿಸಿದ ನಂತರ, ಹಿಟ್ಟನ್ನು ಹೆಚ್ಚು ಮಿಕ್ಸ್ ಮಾಡಬೇಡಿ, ನಿಧಾನವಾಗಿ ಕಲಸಿ. ಸೋಡಾ ಸೇರಿಸಿದ ತಕ್ಷಣ ಹಿಟ್ಟು ಉಬ್ಬಿ ಹಗುರವಾಗುತ್ತದೆ. ಹೀಗೆ ಮಾಡಿದರೆ ಧೋಕ್ಲಾ ಮೃದು ಮತ್ತು ಸ್ಪಂಜಿನಂತೆ ಬರುತ್ತದೆ.
ಸ್ಟೀಮರ್ ಪ್ಲೇಟ್ ಅಥವಾ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ. ಕೂಡಲೇ ಸೋಡಾ ಹಾಕಿದ ಹಿಟ್ಟನ್ನು ಈ ತಟ್ಟೆಗೆ ಸುರಿದು, ಸಮವಾಗಿ ಹರಡಿ. ಈಗಾಗಲೇ ಬಿಸಿ ಇರುವ ಸ್ಟೀಮರ್ ಅಥವಾ ದೊಡ್ಡ ಪಾತ್ರೆಯಲ್ಲಿ ನೀರನ್ನು ಹಾಕಿ.ಈ ತಟ್ಟೆಯನ್ನು ಇರಿಸಿ, ಮುಚ್ಚಿ. ಸುಮಾರು 15 ರಿಂದ 20 ನಿಮಿಷಗಳ ಕಾಲ ಬೇಯಿಸಿ. ಒಂದು ಚಾಕುವನ್ನು ಚುಚ್ಚಿ ತೆಗೆದಾಗ ಅದು ಸ್ವಚ್ಛವಾಗಿ ಬರಬೇಕು.

ಧೋಕ್ಲಾ ಬೇಯುತ್ತಿರುವಾಗ, ಒಗ್ಗರಣೆ ತಯಾರಿಸಿ. ಒಂದು ಸಣ್ಣ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಎಳ್ಳು, ಇಂಗು, ಕರಿಬೇವಿನ ಎಲೆ ಮತ್ತು ಸೀಳಿದ ಹಸಿ ಮೆಣಸು ಹಾಕಿ. ಸಾಸಿವೆ ಸಿಡಿಯಲು ಪ್ರಾರಂಭಿಸಿದಾಗ, ಅದಕ್ಕೆ ನೀರು ಮತ್ತು ಸಕ್ಕರೆ ಹಾಕಿ. ಸಕ್ಕರೆ ಕರಗುವವರೆಗೆ ಬಿಸಿ ಮಾಡಿ.
ಬೇಯಿಸಿದ ಧೋಕ್ಲಾವನ್ನು ಸ್ಟೀಮರ್‌ನಿಂದ ತೆಗೆದು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಅದನ್ನು ಚೌಕಾಕಾರದ ತುಂಡುಗಳಾಗಿ ಕತ್ತರಿಸಿ. ಅದರ ಮೇಲೆ ತಯಾರಿಸಿದ ಒಗ್ಗರಣೆಯನ್ನು ಸಮವಾಗಿ ಹರಡಿ. ಇಷ್ಟು ಮಾಡಿದರೆ ಬಿಸಿ ಬಿಸಿಯಾದ ಧೋಕ್ಲಾ ಸಿದ್ಧ. ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿದರೆ ಅದರ ರುಚಿ ಇನ್ನಷ್ಟು ಅದ್ಭುತ.



Click it and Unblock the Notifications
