Latest Updates
-
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್! -
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ!
ಕರಿಬೇವು ಪಲಾವ್.. ವಾಸನೆಗೆ ಹೊಟ್ಟೆ ತುಂಬುತ್ತೆ! ಹೀಗೆ ಮಾಡಿದರೆ ರುಚಿ ಸೂಪರ್
ಪಲಾವ್ ಎಂದರೆ ಬಾಯಲ್ಲಿ ನೀರೂರಲು ಆರಂಭವಾಗುತ್ತದೆ. ಅದರ ಪರಿಮಳ ಮೂಗಿಗೆ ಬಡಿದರೆ ತಟ್ಟೆ ಹಿಡಿದು ಓಡಬೇಕೆನಿಸುತ್ತದೆ. ನೀವು ಎಂದಾದರೂ ಕರಿಬೇವಿನ ಪುಲಾವ್ (Curry Leaves Pulao) ತಿಂದಿದ್ದೀರಾ? ಈರುಳ್ಳಿ, ಬೆಳ್ಳುಳ್ಳಿ ಇಲ್ಲದೆಯೇ ತಯಾರಿಸುವ ಕರಿಬೇವಿನ ಪಲಾವ್ ದಕ್ಷಿಣ ಭಾರತದಲ್ಲಿ ಬಹಳ ಪ್ರಸಿದ್ಧವಾದ, ರುಚಿಕರವಾದ ಖಾದ್ಯವಾಗಿದೆ. ಕಡಿಮೆ ಸಮಯದಲ್ಲಿ ತಯಾರಾಗುವ ಈ ಪುಲಾವ್ನಲ್ಲಿ ಕರಿಬೇವಿನ ಎಲೆಗಳ ವಿಶೇಷ ಪರಿಮಳ ಮತ್ತು ರುಚಿ ಇರುತ್ತದೆ. ಇದು ಎಲ್ಲರಿಗೂ ಇಷ್ಟವಾಗುತ್ತದೆ. ಇದನ್ನು ಮೊಸರು, ರೈತಾ ಅಥವಾ ನಿಮಗೆ ಇಷ್ಟವಾದ ಸಬ್ಜಿಯೊಂದಿಗೆ ಸವಿಯಬಹುದು. ಇದು ರುಚಿಕರವಾಗಿರುತ್ತದೆ. ಕರಿಬೇವಿನ ಪುಲಾವ್ (Curry Leaves Pulao Recipe) ಅನ್ನು ಮನೆಯಲ್ಲಿಯೇ ಸುಲಭವಾಗಿ ಹೇಗೆ ತಯಾರಿಸುವುದು ಎಂದು ಇಲ್ಲಿ ತಿಳಿಸಲಾಗಿದೆ.
ಕರಿಬೇವು ಸೊಪ್ಪಿನ ಪಲಾವ್ಗೆ ನಮ್ಮ ಅಡುಗೆಗಳಲ್ಲಿ ವಿಶೇಷವಾದ ಸ್ಥಾನವಿದೆ. ಇದು ಬಹಳ ಜನಪ್ರಿಯವಾದ ಮತ್ತು ಸುಲಭವಾಗಿ ತಯಾರಿಸಬಹುದಾದಂತಹ ಒಂದು ಖಾದ್ಯ. ಇದು ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ಕರಿಬೇವಿನ ಸೊಪ್ಪು ತನ್ನ ವಿಶಿಷ್ಟ ಪರಿಮಳ ಮತ್ತು ರುಚಿಯಿಂದಾಗಿ ಹೆಸರುವಾಸಿಯಾಗಿದೆ. ಮಧ್ಯಾಹ್ನದ ಊಟಕ್ಕೆ ಅಥವಾ ರಾತ್ರಿಯ ಊಟಕ್ಕೆ ಇದನ್ನು ಸಲೀಸಾಗಿ ಮಾಡಬಹುದು. ಕರಿಬೇವು ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಇದರಿಂದ ಕರಿಬೇವಿನ ಎಲೆಗಳನ್ನು ವಿವಿಧ ಆರೋಗ್ಯ ಚಿಕಿತ್ಸೆಗೆ ಸಾಂಪ್ರದಾಯಿಕ ಔಷಧವಾಗಿ ಬಳಸಲಾಗುತ್ತದೆ.

ಕರಿಬೇವಿನ ಪಲಾವ್ ತಯಾರಿಸಲು ಬೇಕಾಗುವ ಪದಾರ್ಥಗಳು
• ಕರಿಬೇವು
• ಬಾಸುಮತಿ ಅಕ್ಕಿ
• ಈರುಳ್ಳಿ
• ಕಡಲೆ ಬೇಳೆ
• ಉದ್ದಿನ ಬೇಳೆ
• ಎಣ್ಣೆ
• ಸಾಸಿವೆ
• ಒಣ ಮೆಣಸಿನಕಾಯಿ
• ಕಾಳುಮೆಣಸು
• ಗೋಡಂಬಿ
• ಇಂಗು
• ನೀರು
• ಜೀರಿಗೆ
• ಗರಂ ಮಸಾಲಾ
ಕರಿಬೇವಿನ ಪಲಾವ್ ತಯಾರಿಸುವ ವಿಧಾನ
ಮೊದಲಿಗೆ, ಒಂದುವರೆ ಕಪ್ ಬಾಸುಮತಿ ಅಕ್ಕಿಯನ್ನು ತೆಗೆದುಕೊಳ್ಳಿ. ಅದನ್ನು ನೀರಿನಲ್ಲಿ ಹಾಕಿ ಎರಡು ಬಾರಿ ಚೆನ್ನಾಗಿ ತೊಳೆದು ಕನಿಷ್ಠ 20 ನಿಮಿಷಗಳ ಕಾಲ ನೆನೆಸಿಡಿ. ಈಗ ಪಲಾವ್ ಮಾಡುವ ಪಾತ್ರೆ ಅಥವಾ ಪ್ರೆಶರ್ ಕುಕ್ಕರ್ ಅನ್ನು ಒಲೆಯ ಮೇಲೆ ಇಡಿ. ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ನಂತರ, ಒಂದುವರೆ ಸ್ಪೂನ್ ಕಡಲೆ ಬೇಳೆ, ಒಂದುವರೆ ಸ್ಪೂನ್ ಉದ್ದಿನ ಬೇಳೆ ಹಾಕಿ. ಇದು ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ.

ಇದಾದ ನಂತರ ಅದಕ್ಕೆ 1 ಸ್ಪೂನ್ ಸಾಸಿವೆ, 4 ಒಣ ಮೆಣಸಿನಕಾಯಿ, ಸ್ವಲ್ಪ ಕಾಳುಮೆಣಸು, 1 ಸ್ಪೂನ್ ಜೀರಿಗೆ, ಚಿಟಿಕೆ ಇಂಗು ಹಾಕಿ. ಇದನ್ನು ಹುರಿದ ನಂತರ 1 ಕಪ್ ಕರಿಬೇವು, 15 ಗೋಡಂಬಿ ಹಾಕಿ 1 ನಿಮಿಷ ಹುರಿಯಿರಿ. ಗೋಡಂಬಿ ಗೋಲ್ಡ್ ಕಲರ್ ಬರುವವರೆಗೆ ಹುರಿಯಿರಿ. ಕರಿಬೇವನ್ನು ಎಣ್ಣೆಯಲ್ಲಿ ಹುರಿಯುವುದರಿಂದ ಅದರ ಪರಿಮಳ ಪಲಾವ್ಗೆ ಬರುತ್ತದೆ.
ಈಗ ತೊಳೆದ ಒಂದುವರೆ ಕಪ್ ಬಾಸುಮತಿ ಅಕ್ಕಿ, ಸ್ವಲ್ಪ ಗರಂ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು, 3 ಕಪ್ ನೀರು ಹಾಕಿ ಚೆನ್ನಾಗಿ ಕಲಸಿ. ಮಧ್ಯಮ ಉರಿಯಲ್ಲಿ 2 ವಿಷಲ್ ಬರುವವರೆಗೆ ಬೇಯಿಸಿ. ಇದಾದ ನಂತರ ಮುಚ್ಚಳ ತೆಗೆದು ಅದಕ್ಕೆ ಬೇಕೆನಿಸಿದರೆ ಸ್ವಲ್ಪ ನಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಕಿ ಕಲಸಿ. ಇಷ್ಟು ಮಾಡಿದರೆ, ಕರಿಬೇವಿನ ಪಲಾವ್ ಸಿದ್ಧ. ಇದನ್ನು ಮೊಸರು, ರೈತಾ ಅಥವಾ ನಿಮಗೆ ಇಷ್ಟವಾದ ಸಬ್ಜಿಯೊಂದಿಗೆ ತಿನ್ನಲು ಬಲು ರುಚಿಯಾಗಿರುತ್ತದೆ.

ಕರಿಬೇವಿನ ಪಲಾವ್ ರೀತಿಯೂ ಮಾಡಿ
ಮೊದಲಿಗೆ ಕರಿಬೇವಿನ ಸೊಪ್ಪನ್ನು ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನ ಬೇಳೆ ಮತ್ತು ಜೀರಿಗೆ ಹಾಕಿ. ಸಾಸಿವೆ ಸಿಡಿದ ನಂತರ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ವಾಸನೆ ಹೋಗುವವರೆಗೆ ಹುರಿಯಿರಿ. ರುಬ್ಬಿಕೊಂಡ ಕರಿಬೇವಿನ ಸೊಪ್ಪಿನ ಪೇಸ್ಟ್, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹತ್ತು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ. ಅದಕ್ಕೆ ಬೇಯಿಸಿದ ಅನ್ನವನ್ನು ಹಾಕಿ ಕಲಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿ ಬಿಸಿಯಾಗಿ ಸವಿಯಿರಿ.



Click it and Unblock the Notifications
