Latest Updates
-
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಸಬ್ಬಕ್ಕಿ-ಆಲೂಗಡ್ಡೆ ಬೋರಾಯಿತಾ? ಬೀಟ್ರೂಟ್ನಿಂದ ಈ ಸೂಪರ್ ತಿಂಡಿ ಮಾಡಿ.. ದೇಹಕ್ಕೆ ಶಕ್ತಿ ನೀಡುತ್ತೆ
ಆಲೂಗಡ್ಡೆ-ಸಬ್ಬಕ್ಕಿ ಬೋರಾಯಿತಾ? ನವರಾತ್ರಿ ಉಪವಾಸಕ್ಕೆ ಬೀಟ್ರೂಟ್ ಟಿಕ್ಕಿ (Beetroot Tikki) ಮಾಡಿ. ನವರಾತ್ರಿ ಉಪವಾಸ (Navratri Vrat) ಎಂದರೆ ಆಲೂಗಡ್ಡೆ, ಸಬ್ಬಕ್ಕಿ (ಸಾಬುದಾನಿ), ಗೆಣಸು ಅಥವಾ ಹಾಲು ಉತ್ಪನ್ನಗಳಿಂದ ತಯಾರಿಸಿದ ತಿಂಡಿಗಳೇ ಹೆಚ್ಚು. ಆದರೆ, ಪ್ರತಿವರ್ಷವೂ ಒಂದೇ ರೀತಿಯ ಆಹಾರವನ್ನು ಪದೇ ಪದೆ ತಿನ್ನುವುದರಿಂದ ಬೇಸರವಾಗುವುದು ಸಹಜ. ಇದೇ ಕಾರಣಕ್ಕೆ ಅನೇಕರು ವ್ರತದ ಸಮಯದಲ್ಲಿ ಹೊಸ ಹಾಗೂ ಪೌಷ್ಟಿಕಾಂಶಯುಕ್ತ ರೆಸಿಪಿಗಳನ್ನು ಹುಡುಕುತ್ತಾರೆ. ಈ ಬಾರಿ ರುಚಿಕರ ಬೀಟ್ರೂಟ್ ಟಿಕ್ಕಿಯನ್ನು ಪ್ರಯತ್ನಿಸಿ. ಇದು ವ್ರತದ ಸಮಯದಲ್ಲಿ ಹೊಸ ರುಚಿಯ ಅನುಭವ ನೀಡುತ್ತದೆ.
ಬೀಟ್ರೂಟ್ ವಿಟಮಿನ್ ಸಿ, ಖನಿಜಗಳು, ಪೊಟ್ಯಾಸಿಯಂ, ಆಂಟಿ ಆಕ್ಸಿಡೆಂಟ್ಸ್ ಮತ್ತು ಕಬ್ಬಿಣಾಂಶದಿಂದ ಸಮೃದ್ಧವಾಗಿದೆ. ಈ ಟಿಕ್ಕಿ ನವರಾತ್ರಿ ವ್ರತದ ಸಮಯದಲ್ಲಿ ಶಕ್ತಿ ನೀಡುವುದರ ಜೊತೆಗೆ, ನಿಮ್ಮ ಹೊಟ್ಟೆಯನ್ನು ಹಗುರವಾಗಿಡಲು ಸಹಾಯ ಮಾಡುತ್ತದೆ. ಇದು ದೇಹಕ್ಕೆ ಶಕ್ತಿ, ತಾಜಾ ಅನುಭವ ಮತ್ತು ರಕ್ತದೊತ್ತಡ ನಿಯಂತ್ರಣ ನೀಡಲು ಸಹಕಾರಿಯಾಗುತ್ತದೆ. ಸಂಜೆಯ ತಿಂಡಿಯಾಗಿ ಅಥವಾ ವ್ರತ ಮುಗಿಸುವಾಗ ಇದನ್ನು ತಯಾರಿಸಬಹುದು. ಮನೆಯಲ್ಲಿಯೇ ಬೀಟ್ರೂಟ್ ಟಿಕ್ಕಿ ತಯಾರಿಸುವ ವಿಧಾನವನ್ನು ಈಗ ತಿಳಿಯೋಣ ಬನ್ನಿ.

ಬೀಟ್ರೂಟ್ ಟಿಕ್ಕಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಬೀಟ್ರೂಟ್ - 2 (ತುರಿದದ್ದು)
• ಆಲೂಗಡ್ಡೆ - 2 (ಬೇಯಿಸಿದ್ದು)
• ಕುಟ್ಟೂ ಹಿಟ್ಟು / ಸಿಂಘಾಡೆ ಹಿಟ್ಟು - 3 ಚಮಚ
• ಹಸಿಮೆಣಸು - 1
• ಶುಂಠಿ - ½ ಚಮಚ
• ಸೇಂದಾ ಉಪ್ಪು - ರುಚಿಗೆ ತಕ್ಕಷ್ಟು
• ಕಾಳುಮೆಣಸಿನ ಪುಡಿ - ½ ಚಮಚ
• ಕೊತ್ತಂಬರಿ ಸೊಪ್ಪು - ಸ್ವಲ್ಪ
• ತುಪ್ಪ / ಎಣ್ಣೆ - ಕರಿಯಲು ಬೇಕಾದಷ್ಟು
ಬೀಟ್ರೂಟ್ ಟಿಕ್ಕಿ ತಯಾರಿಸುವ ವಿಧಾನ
ಮೊದಲಿಗೆ, ಬೇಯಿಸಿದ ಆಲೂಗಡ್ಡೆ ಮತ್ತು ತುರಿದ ಬೀಟ್ರೂಟ್ ಅನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ತುರಿದ ಬೀಟ್ರೂಟ್ನಲ್ಲಿ ಏನಾದರೂ ಹೆಚ್ಚುವರಿ ತೇವಾಂಶ ಇದ್ದರೆ, ಅದನ್ನು ಹಿಂಡಿ ತೆಗೆಯಿರಿ. ಇಲ್ಲದಿದ್ದರೆ ಟಿಕ್ಕಿ ಒಡೆಯುವ ಸಾಧ್ಯತೆ ಇರುತ್ತದೆ. ನಂತರ, ಅದಕ್ಕೆ ಹಸಿಮೆಣಸು, ಶುಂಠಿ, ಸೇಂದಾ ಉಪ್ಪು, ಕಾಳುಮೆಣಸು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ, ಕುಟ್ಟೂ ಹಿಟ್ಟು ಅಥವಾ ಸಿಂಘಾಡೆ ಹಿಟ್ಟು ಹಾಕಿ. ಬಳಿಕ ಮಿಶ್ರಣವನ್ನು ಚೆನ್ನಾಗಿ ಬಂಧಿಸಲು ಅನುಕೂಲವಾಗುವಂತೆ ಮಿಕ್ಸ್ ಮಾಡಿ. ಈ ಮಿಶ್ರಣದಿಂದ ಸಣ್ಣ, ದುಂಡನೆಯ ಟಿಕ್ಕಿಗಳನ್ನು ತಯಾರಿಸಿ. ಈಗ ಒಂದು ತವಾ ಅಥವಾ ನಾನ್-ಸ್ಟಿಕ್ ಪ್ಯಾನ್ಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ. ತಯಾರಿಸಿದ ಟಿಕ್ಕಿಗಳನ್ನು ಹಾಕಿ, ಎರಡೂ ಕಡೆ ಚಿನ್ನದ ಬಣ್ಣ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ ಬೇಯಿಸಿ. ಕಡಿಮೆ ತುಪ್ಪ ಬಳಸುವುದರಿಂದ ಇದು ಹೆಚ್ಚು ಆರೋಗ್ಯಕರವಾಗಿರುತ್ತದೆ.

ಇಷ್ಟು ಮಾಡಿದರೆ, ಬಿಸಿ ಬಿಸಿಯಾದ ಬೀಟ್ರೂಟ್ ಟಿಕ್ಕಿ ಸವಿಯಲು ಸಿದ್ದ. ಇದನ್ನು ಮೊಸರು ಅಥವಾ ಹಸಿ ಚಟ್ನಿಯೊಂದಿಗೆ ತಿನ್ನಬಹುದು. ಇದು ವ್ರತದ ಸಮಯದಲ್ಲಿ ನಿಮ್ಮ ಹಸಿವನ್ನು ನೀಗಿಸಲು ಉತ್ತಮ ಆಯ್ಕೆಯಾಗಿದೆ. ನೀವು ವ್ರತ ಕೈಗೊಂಡಿದ್ದರೆ, ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ.
ಸಾಮಾನ್ಯವಾಗಿ ನವರಾತ್ರಿ ಉಪವಾಸದ ಒಂಬತ್ತು ದಿನಗಳಲ್ಲಿ, ಭಕ್ತುರು ಈರುಳ್ಳಿ ಮತ್ತು ಬೆಳ್ಳುಳ್ಳಿ ರಹಿತ ಆಹಾರ ಸೇವಿಸುತ್ತಾರೆ. ಆಲೂಗಡ್ಡೆ, ಸಾಬುದಾನಿ, ಗೆಣಸು ಅಥವಾ ಸುವರ್ಣಗಡ್ಡೆಯಿಂದ ಮಾಡಿದ ಖಾದ್ಯವೇ ಹೆಚ್ಚು. ಇವೆಲ್ಲವೂ ರುಚಿಕರವಾಗಿದ್ದರೂ, ಒಂದೇ ರೀತಿಯ ಆಹಾರವನ್ನು ಪದೇ ಪದೆ ತಿನ್ನುವುದು ಕೆಲವೊಮ್ಮೆ ಬೇಸರ ತರಿಸಬಹುದು. ಒಂದು ವೇಳೆ ನೀವೂ ಸಹ ಈ ವ್ರತದಲ್ಲಿ ಹೊಸ ಹಾಗೂ ಪೌಷ್ಟಿಕಾಂಶ ಭರಿತ ಅಡುಗೆ ಮಾಡಲು ಬಯಸುವುದಾದರೆ, ಬೀಟ್ರೂಟ್ ಟಿಕ್ಕಿ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ.



Click it and Unblock the Notifications