Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಪಿಂಕ್ ಪಿಂಕ್ ಇಡ್ಲಿ! ಬೀಟ್ರೂಟ್ ಇಡ್ಲಿ ಮಾಡಿ ನೋಡಿ.. ಬೆಣ್ಣೆಯಂತೆ ಮೃದು, ಹೆಲ್ದಿ & ಟೇಸ್ಟಿ
ನಿಮ್ಮ ಮಕ್ಕಳು ಬೀಟ್ರೂಟ್ ತಿನ್ನಲು ಹಿಂಜರಿಯುತ್ತಾರೆಯೇ? ಚಿಂತಿಸಬೇಡಿ, ಬೀಟ್ರೂಟ್ ಇಡ್ಲಿ (Beetroot Idli) ಮಾಡಿದರೆ ಅವರು ಇಷ್ಟಪಟ್ಟು ತಿನ್ನುತ್ತಾರೆ. ಹೌದು, ಬೀಟ್ರೂಟ್ ಇಡ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ಇಡ್ಲಿಗೆ ಆರೋಗ್ಯಕರ ಹೊಸ ಆಯಾಮ ನೀಡುತ್ತದೆ. ಸಾಮಾನ್ಯವಾಗಿ ಬೆಳಗಿನ ತಿಂಡಿ ಅಥವಾ ಲಘು ಭೋಜನಕ್ಕೆ ಈ ಇಡ್ಲಿ ತಯಾರಿಸಲಾಗುತ್ತದೆ. ಈ ಇಡ್ಲಿಗಳು ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತವೆ. ಹಾಗಾದ್ರೆ, ಮನೆಯಲ್ಲಿಯೇ ಈ ಕಲರ್ ಕಲರ್ ಮತ್ತು ಟೇಸ್ಟಿ ಬೀಟ್ರೂಟ್ ಇಡ್ಲಿಯನ್ನು ಹೇಗೆ ಮಾಡುವುದು (Beetroot Idly Recipe) ಎಂದು ತಿಳಿಯೋಣ ಬನ್ನಿ.
ಸಾಮಾನ್ಯವಾಗಿ ಇಡ್ಲಿ ಸೇವಿಸುವುದು ಸಾಮಾನ್ಯ. ಆದರೆ, ಬೀಟ್ರೂಟ್ ಇಡ್ಲಿ ಬಹುತೇಕರ ತಿಂದಿಲ್ಲ. ಇದು ಕೇವಲ ಕಣ್ಣಿಗೆ ಆಕರ್ಷಕವಾಗಿ ಕಾಣಿಸುವುದು ಮಾತ್ರವಲ್ಲದೆ, ರುಚಿಯಲ್ಲಿಯೂ ಅತ್ಯುತ್ತಮವಾಗಿರುತ್ತದೆ. ಸಾಮಾನ್ಯವಾಗಿ ನಾವು ಬೀಟ್ರೂಟ್ನಿಂದ ಪಲ್ಯ, ಕರಿ ಅಥವಾ ಸಾರು ಮಾಡುತ್ತೇವೆ. ಆದರೆ, ಇಡ್ಲಿ ಪ್ರಯತ್ನಿಸಿರುವುದಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಈ ಇಡ್ಲಿಯನ್ನು ಇಷ್ಟಪಡುತ್ತಾರೆ. ಬೀಟ್ರೂಟ್ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ವಾರಕ್ಕೊಮ್ಮೆ ಬೀಟ್ರೂಟ್ ಇಡ್ಲಿಯನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ.

ಬೀಟ್ರೂಟ್ ಇಡ್ಲಿ ತಯಾರಿಸಲು ಬೇಕಾದ ಸಾಮಗ್ರಿಗಳು
• ಬೀಟ್ರೂಟ್ - 1
• ರವೆ - 1 ಕಪ್
• ಉದ್ದಿನ ಬೇಳೆ - 1/2 ಕಪ್
• ಶುಂಠಿ - 1/2 ಇಂಚು
• ಹಸಿ ಮೆಣಸಿನಕಾಯಿ - 1 ಅಥವಾ 2
• ಎಣ್ಣೆ - 1 ಚಮಚ (ಅಗತ್ಯವಿರುವಷ್ಟು)
• ಸಾಸಿವೆ ಕಾಳುಗಳು - 1 ಚಮಚ
• ಕರಿಬೇವಿನ ಎಲೆಗಳು - ಸ್ವಲ್ಪ
• ಉಪ್ಪು - ರುಚಿಗೆ ತಕ್ಕಷ್ಟು

ಬೀಟ್ರೂಟ್ ಇಡ್ಲಿ ತಯಾರಿಸುವ ವಿಧಾನ
ಮೊದಲಿಗೆ ಉದ್ದಿನ ಬೇಳೆ ಮತ್ತು ರವೆಯನ್ನು ನೀರಿನಲ್ಲಿ ನೆನೆಸಿ. ನಂತರ ನಯವಾದ ಹಿಟ್ಟಾಗಿ ರುಬ್ಬಿಕೊಳ್ಳಿ. ಇದನ್ನು ಹುದುಗಲು ಬಿಡಿ. ಈಗ ಬೀಟ್ರೂಟ್ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಶುಂಠಿ ಮತ್ತು ಹಸಿ ಮೆಣಸಿನಕಾಯಿಯನ್ನು ನಯವಾದ ಪ್ಯೂರಿಯಾಗಿ ರುಬ್ಬಿಕೊಳ್ಳಿ. ಈ ಪ್ಯೂರಿಯನ್ನು ಹುದುಗಿಸಿದ ಹಿಟ್ಟಿಗೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಮತ್ತು ಪಕ್ಕಕ್ಕಿಡಿ. ಇದಾದ ಬಳಿಕ ಎಣ್ಣೆ, ಸಾಸಿವೆ ಮತ್ತು ಕರಿಬೇವಿನ ಎಲೆಗಳನ್ನು ಬಳಸಿ ಒಗ್ಗರಣೆ ತಯಾರಿಸಿ. ಇದನ್ನು ಇಡ್ಲಿ ಹಿಟ್ಟಿಗೆ ಮಿಕ್ಸ್ ಮಾಡಿ ಮತ್ತು ಇಡ್ಲಿಗಳನ್ನು ಬೇಯಿಸಿ. ಇಡ್ಲಿಗಳು ತಣ್ಣಗಾಗುವವರೆಗೆ ಕಾಯಿರಿ, ನಂತರ ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಬಿಸಿಯಾಗಿ ಬಡಿಸಿ.

ಈ ರೀತಿಯೂ ಇಡ್ಲಿ ಮಾಡಬಹುದು
ಮೊದಲಿಗೆ,ಬೀಟ್ರೂಟ್ ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. ನಂತರ, ಇದನ್ನು ಮಿಕ್ಸಿ ಜಾರ್ಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಇಡ್ಲಿ ಹಿಟ್ಟನ್ನು ತೆಗೆದುಕೊಂಡು, ಅದಕ್ಕೆ ಬೀಟ್ರೂಟ್ ಪೇಸ್ಟ್ ಮತ್ತು ಸ್ವಲ್ಪ ಉಪ್ಪು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಹಿಟ್ಟನ್ನು ಮಿಶ್ರಣ ಮಾಡುವಾಗಲೇ ಅದರ ಬಣ್ಣ ಬದಲಾಗುತ್ತದೆ. ಈಗ, ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಬಿಸಿ ಮಾಡಿ. ಇಡ್ಲಿ ತಟ್ಟೆಗಳಿಗೆ ಎಣ್ಣೆ ಸವರಿ, ಅದಕ್ಕೆ ಬೀಟ್ರೂಟ್ ಹಿಟ್ಟನ್ನು ಹಾಕಿ. ಇಡ್ಲಿ ಪಾತ್ರೆಯಲ್ಲಿ 10 ನಿಮಿಷಗಳ ಕಾಲ ಇಡ್ಲಿಯನ್ನು ಬೇಯಿಸಿ. ಬೆಂದ ಬಳಿಕ, ಇಡ್ಲಿಯನ್ನು ತೆಗೆದು ಚಟ್ನಿಯೊಂದಿಗೆ ಬಡಿಸಿ.
ಈ ವಿಶಿಷ್ಟವಾದ ಬೀಟ್ರೂಟ್ ಇಡ್ಲಿ ಆರೋಗ್ಯಕ್ಕೂ ಒಳ್ಳೆಯದು. ಬೀಟ್ರೂಟ್ನಲ್ಲಿ ಪೊಟ್ಯಾಸಿಯಮ್, ವಿಟಮಿನ್ ಎ, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಬೀಟ್ರೂಟ್ ಇಡ್ಲಿಯನ್ನು ಬೆಳಗಿನ ಉಪಹಾರ ಮಾತ್ರವಲ್ಲದೆ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೂ ಮಾಡಿ ಸವಿಯಬಹುದು. ತೆಂಗಿನಕಾಯಿ ಚಟ್ಟಿಯೊಂದಿಗೆ ತಿನ್ನಲು ಬಹಳ ರುಚಿಕರ ಆಗಿರುತ್ತದೆ.



Click it and Unblock the Notifications
