Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ -
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್!
10 ನಿಮಿಷ ಸಾಕು! ಹೆಲ್ದಿ ಮತ್ತು ಟೇಸ್ಟಿ ಗೋಧಿ ದೋಸೆ ರೆಡಿ.. ಮಾಡೋದು ಅಷ್ಟೇ ಸುಲಭ
10 ನಿಮಿಷದಲ್ಲಿ ರೆಡಿಯಾಗುತ್ತೆ ಈ ಗೋಧಿ ದೋಸೆ. ಬೆಳಗ್ಗಿನ ಒತ್ತಡದಲ್ಲಿ ಇದು ಗೃಹಿಣಿಯರಿಗೆ ಬೆಸ್ಟ್ ಆಯ್ಕೆ. ಹೌದು, ಮುಂಜಾನೆ ತಿಂಡಿಗೆ ಅಥವಾ ಟಿಫಿನ್ ಬಾಕ್ಸ್ಗೆ ಸಹ ಗೋಧಿ ಹಿಟ್ಟಿನಿಂದ ತಯಾರಿಸಿದ ಆರೋಗ್ಯಕರ ದೋಸೆ ಉತ್ತಮ. ದಕ್ಷಿಣ ಭಾರತದ ಇತರೆ ಸಾಂಪ್ರದಾಯಿಕ ದೋಸೆಗಿಂತ ಇದು ವಿಭಿನ್ನವಾಗಿದೆ. ನಾವು ಹೇಗೆ ದೋಸೆ, ಇಡ್ಲಿ ಮತ್ತು ವಡೆ ಮಾಡಿಕೊಂಡು ತಿನ್ನಲು ಇಷ್ಟಪಡುತ್ತೇವೆಯೋ, ಹಾಗೆಯೇ ಕೆಲವರಿಗೆ ದೋಸೆಯಲ್ಲಿ ವಿಭಿನ್ನವಾದದ್ದನ್ನ ಪ್ರಯತ್ನಿಸುವ ಆಸೆ ಇರುತ್ತದೆ. ಆದರೆ, ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಗೋಧಿ ದೋಸೆ (Wheat Dosa) ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ.
ದೋಸಾ ಬಗ್ಗೆ ಕೇಳಿದಾಗ ನಮಗೆ ದಕ್ಷಿಣ ಭಾರತ ನೆನಪಾಗುತ್ತದೆ. ಸಾಮಾನ್ಯವಾಗಿ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೆನೆಸಿ ಬಳಿಕ ದೋಸೆ ಮಾಡಬೇಕು. ಆದರೆ, ಇಂದು ನಾವು ಗೋಧಿ ದೋಸೆ ಮಾಡುವ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಇದನ್ನು ನೆನೆಸಬೇಕಾಗಿಲ್ಲ ಅಥವಾ ಪುಡಿ ಮಾಡುವ ಅಗತ್ಯವಿಲ್ಲ. ಆರೋಗ್ಯಕರ ಆಹಾರವನ್ನು ಇಷ್ಟಪಡುವವರಿಗೆ ಮತ್ತು ಗಡಿಬಿಡಿಯಲ್ಲಿ ಏನಾದರೂ ಒಳ್ಳೆಯದನ್ನು ಮಾಡಲು ಬಯಸುವವರಿಗೆ ಈ ದೋಸೆ ಅದ್ಭುತ. ಇದಲ್ಲದೆ, ನೀವು ಇದನ್ನು ಬೆಳಗಿನ ಉಪಾಹಾರ, ಮಕ್ಕಳ ಟಿಫಿನ್ ಅಥವಾ ಲಘು ಉಪಹಾರಕ್ಕೂ ಸಹ ಮಾಡಬಹುದು. ಬನ್ನಿ, ಮನೆಯಲ್ಲಿ ಸುಲಭವಾಗಿ ಗೋಧಿ ದೋಸೆ (wheat dosa recipe) ಮಾಡುವುದು ಹೇಗೆ ಎನ್ನುವುದನ್ನು ತಿಳಿಯೋಣ.

ಗೋಧಿ ದೋಸೆ ತಯಾರಿಸಲು ಬೇಕಾಗುವ ಪದಾರ್ಥಗಳು
• ಗೋಧಿ ಹಿಟ್ಟು - 1 ಕಪ್
• ಅಕ್ಕಿ ಹಿಟ್ಟು - ಅರ್ಧ ಕಪ್
• ಮೊಸರು - 2 ಸ್ಪೂನ್
• ನೀರು - ಅಗತ್ಯಕ್ಕೆ ತಕ್ಕಂತೆ
• ಹಸಿ ಮೆಣಸಿನಕಾಯಿ - 1 (ಸಣ್ಣಗೆ ಕತ್ತರಿಸಿದ)
• ಶುಂಠಿ - ಅರ್ಧ ತುಂಡು
• ಈರುಳ್ಳಿ - 1 (ಸಣ್ಣಗೆ ಕತ್ತರಿಸಿದ)
• ಕೊತ್ತಂಬರಿ ಸೊಪ್ಪು - ಸ್ವಲ್ಪ (ಸಣ್ಣಗೆ ಕತ್ತರಿಸಿದ)
• ಉಪ್ಪು - ರುಚಿಗೆ ತಕ್ಕಂತೆ
• ಜೀರಿಗೆ - ಅರ್ಧ ಸ್ಪೂನ್
• ಕರಿಬೇವಿನ ಎಲೆ - 5 ರಿಂದ 6
• ಹಿಂಗು - ಸ್ವಲ್ಪ
• ಎಣ್ಣೆ ಅಥವಾ ತುಪ್ಪ - ಹುರಿಯಲು
ಗೋಧಿ ದೋಸೆ ಮಾಡುವುದು ಹೇಗೆ?
ಗೋಧಿ ದೋಸೆ ಮಾಡುವ ಮೊದಲು, ಒಂದು ಬಟ್ಟಲು ತೆಗೆದುಕೊಳ್ಳಿ. ಅದರಲ್ಲಿ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಮೊಸರು, ಉಪ್ಪು, ಜೀರಿಗೆ, ಶುಂಠಿ, ಹಸಿ ಮೆಣಸಿನಕಾಯಿ, ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ನೀರು ಹಾಕುತ್ತಾ ತೆಳುವಾದ ಗೋದಿ ಹಿಟ್ಟು (ಬ್ಯಾಟರ್) ತಯಾರಿಸಿಕೊಳ್ಳಿ. ಈ ಹಿಟ್ಟನ್ನು 10 ರಿಂದ 15 ನಿಮಿಷಗಳ ಕಾಲ ಮುಚ್ಚಿಡಬೇಕು. ಇದಾದ ಬಳಿಕ, ಈಗ ಗ್ಯಾಸ್ ಆನ್ ಮಾಡಿ ತವಾ ಅಥವಾ ರೊಟ್ಟಿ ಹಂಚು ಬಿಸಿ ಮಾಡಿ. ಬಳಿಕ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಒರೆಸಬೇಕು.
ಈಗ ಒಂದು ಸೌಟು ಗೋದಿ ಹಿಟ್ಟು (ಬ್ಯಾಟರ್) ತೆಗೆದುಕೊಂಡು ಅದನ್ನು ಪ್ಯಾನ್ ಮೇಲೆ ಹಾಕಬೇಕು. ಇದು ವೃತ್ತಾಕಾರದಲ್ಲಿ ಇರಲಿ. ದೋಸೆಯನ್ನು ಸ್ವಲ್ಪ ದಪ್ಪವಾಗಿ ಇರಲಿ. ಈಗ ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಎರಡೂ ಬದಿಗಳು ಗೋಲ್ಡನ್ ಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಫ್ರೈ ಮಾಡಿ. ಅದು ಚೆನ್ನಾಗಿ ಬೆಂದ ಮೇಲೆ ತೆಗೆದು ಪಾತ್ರೆಗೆ ಹಾಕಿ. ಇಷ್ಟು ಮಾಡಿದರೆ 10 ನಿಮಿಷದಲ್ಲಿ ರೆಡಿಯಾಗುತ್ತೆ ಈ ಗೋಧಿ ದೋಸೆ. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಬಿಸಿ ಗೋಧಿ ದೋಸೆಯನ್ನು ಸವಿಯಬಹುದು.
ಗೋಧಿ ದೋಸೆಯ ಆರೋಗ್ಯ ಪ್ರಯೋಜನಗಳು
ಫೈಬರ್ ಸಮೃದ್ಧ: ಗೋಧಿ ದೋಸೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ನಿಮ್ನ ಗ್ಲೈಸೆಮಿಕ್ ಸೂಚ್ಯಾಂಕ: ರಕ್ತದೊತ್ತಡ ನಿಯಂತ್ರಣಕ್ಕೆ ಗೋಧಿ ದೋಸೆ
ಸಹಕಾರಿ.
ಹೊಟ್ಟೆ ತುಂಬುವ ಆಹಾರ: ಗೋಧಿ ದೋಸೆ ಸೇವನೆಯಿಂದ ದೀರ್ಘಕಾಲ ಹಸಿವಿನ
ನಿಯಂತ್ರಣವಾಗುತ್ತದೆ.



Click it and Unblock the Notifications
