Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಳೆಗಾಲಕ್ಕೆ ಬೆಸ್ಟ್! ಹೋಟೆಲ್ ಸ್ಟೈಲ್ನ ಟೇಸ್ಟಿ ಮತ್ತು ಪೌಷ್ಟಿಕ ಸೂಪ್.. ಮಾಡೋದು ಅಷ್ಟೇ ಈಸಿ
ಸ್ವಲ್ಪ ಭಿನ್ನ ವಿಧಾನದ ಸೂಪ್.. ಸವಿಯಲು ಚೆನ್ನಾಗಿರುತ್ತದೆ. ಮಾಡುವ ವಿಧಾನ ಕೂಡ ಸರಳವಾಗಿದೆ. ನೀವು ಒಮ್ಮೆ ಟ್ರೈ ಮಾಡಿ ನೋಡಿ. ಹೌದು, ತಂಪಾದ ದಿನಗಳಲ್ಲಿ ಬಿಸಿಬಿಸಿ ಕಾರ್ನ್ ಸೂಪ್ (Sweet Corn Soup) ಹೀಗೆ ಮಾಡಿ. ಫ್ರೆಶ್ ಜೋಳದಿಂದ ಸಲಭವಾಗಿ ಆರೋಗ್ಯಕರ ಸೂಪ್ ಮಾಡಬಹುದು. ಮಳೆಗಾಲದ ಸಂಜೆಗಳನ್ನು ಇನ್ನಷ್ಟು ವಾವ್ ಎನಿಸುವ ಈ ರುಚಿಕರ ಮತ್ತು ಪೌಷ್ಟಿಕ ಸೂಪ್ ಎಲ್ಲರಿಗೂ ಇಷ್ಟವಾಗುತ್ತದೆ. ತುಂತುರು ಮಳೆಯ ನಡುವೆಯೂ ಬಿಸಿ ಸಿಹಿ ಕಾರ್ನ್ ಸೂಪ್ ಸವಿಯುವ ಮಜವೇ ಬೇರೆ. ಹಾಗಿದ್ರೆ, ಸಿಹಿ ಕಾರ್ನ್ ಸೂಪ್ (Sweet Corn Soup Recipe) ತಯಾರಿಸುವ ವಿಧಾನ ತಿಳಿಯೋಣ ಬನ್ನಿ.
ತುಂತುರು ಮಳೆ ಮತ್ತು ತಂಪಾದ ಗಾಳಿಯ ಜೊತೆಗೆ ನಮಗೆ ಬಿಸಿಯಾದ ಏನನ್ನಾದರೂ ಕುಡಿಯಬೇಕು ಅಂತ ಅನಿಸುತ್ತದೆ. ನೀವು ಸಹ ಈ ಬಯಕೆ ಇದ್ದರೆ, ಸ್ವೀಟ್ ಕಾರ್ನ್ ಸೂಪ್ಗಿಂತ ಉತ್ತಮವಾದದ್ದು ಇನ್ನೊಂದಿಲ್ಲ. ನೀವು ಮನೆಯಲ್ಲಿ ರೆಸ್ಟೋರೆಂಟ್ ಶೈಲಿಯ ಹೆಲ್ದಿ ಮತ್ತು ಟೇಸ್ಟಿ ಸ್ವೀಟ್ ಕಾರ್ನ್ ಸೂಪ್ ಅನ್ನು ಸುಲಭವಾಗಿ ತಯಾರಿಸಬಹುದು. ಇದು ರುಚಿಕರ ಮಾತ್ರವಲ್ಲ ಮತ್ತು ಪೌಷ್ಟಿಕವಾಗಿದೆ. ಇನ್ನೇಕೆ ತಡ ಸಿದ್ಧರಾಗಿ, ಈ ಕ್ಲಾಸಿಕ್ ಸೂಪ್ ತಯಾರಿಸುವ ಸುಲಭ ಮತ್ತು ರುಚಿಯಾದ ವಿಧಾನವನ್ನು ನಾವಿಂದು ನಿಮಗೆ ತಿಳಿಸುತ್ತೇವೆ.

ಸಿಹಿ ಕಾರ್ನ್ ಸೂಪ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಬೇಯಿಸಿದ ಜೋಳ (ಸಿಹಿ ಕಾರ್ನ್) - 1 ಕಪ್
• ನೀರು ಅಥವಾ ತರಕಾರಿ ಸಾರು - 2 ಕಪ್
• ಸಣ್ಣಗೆ ಹೆಚ್ಚಿದ ಕ್ಯಾರೆಟ್ - ¼ ಕಪ್
• ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ - ¼ ಕಪ್
• ಸಣ್ಣಗೆ ಕತ್ತರಿಸಿದ ಬೀನ್ಸ್ - ಅರ್ಧ ಕಪ್
• ಕತ್ತರಿಸಿದ ಅಥವಾ ಸ್ಪ್ರಿಂಗ್ ಈರುಳ್ಳಿ - 2
• ಬೆಣ್ಣೆ ಅಥವಾ ಎಣ್ಣೆ - 1 ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ಕರಿಮೆಣಸಿನ ಪುಡಿ - ಅರ್ಧ ಸ್ಪೂನ್
• ಕಾರ್ನ್ಫ್ಲೋರ್ - 1 ಸ್ಪೂನ್
• ಸೋಯಾ ಸಾಸ್ - ಅರ್ಧ ಸ್ಪೂನ್
• ವಿನೆಗರ್ - ಅರ್ಧ ಟೀಸ್ಪೂನ್
• ಹಸಿ ಮೆಣಸಿನಕಾಯಿ ಪೇಸ್ಟ್ - ಸ್ವಲ್ಪ
• ಟೊಮೆಟೊ ಸಾಸ್ - 1 ಚಮಚ
• ಹಾಲು - 2 ಚಮಚ
ಸಿಹಿ ಕಾರ್ನ್ ಸೂಪ್ ತಯಾರಿಸುವ ವಿಧಾನ
ಮೊದಲು ಬೇಯಿಸಿದ ಸಿಹಿ ಜೋಳದ ಪೇಸ್ಟ್ ಮಾಡಿ. ಅರ್ಧ ಕಪ್ ಬೇಯಿಸಿದ ಸಿಹಿ ಜೋಳವನ್ನು ಮಿಕ್ಸರ್ ನಲ್ಲಿ ರುಬ್ಬಿ ಪೇಸ್ಟ್ ಮಾಡಿ. ಅರ್ಧ ಕಪ್ ಪೂರ್ತಿಯಾಗಿ ಇಡಬೇಕು. ಈಗ ತರಕಾರಿಗಳನ್ನು ಫ್ರೈ ಮಾಡಿ. ಬಾಣಲೆಗೆ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿ. ಇದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಹಾಕಿ ಸ್ವಲ್ಪ ಹುರಿಯಿರಿ. ಬಳಿಕ ಕಾರ್ನ್ ಪೇಸ್ಟ್ ಹಾಕಿ. ಈಗ ಅದಕ್ಕೆ ಸ್ವೀಟ್ ಕಾರ್ನ್ ಪೇಸ್ಟ್ ಮತ್ತು ಸಂಪೂರ್ಣ ಸ್ವೀಟ್ ಕಾರ್ನ್ ಹಾಕಬೇಕು. ಹಾಗೆಯೇ 2 ಕಪ್ ನೀರು ಅಥವಾ ತರಕಾರಿ ಸಾರು ಸೇರಿಸಿ ಕುದಿಸಿ.
ಈಗ ಕರಗಿದ ಕಾರ್ನ್ಫ್ಲೋರ್ ಅನ್ನು ನಿಧಾನವಾಗಿ ಹಾಕಿ. ಮತ್ತು ಉಂಡೆಗಳಾಗದಂತೆ ನಿರಂತರವಾಗಿ ಬೆರೆಸಿ. 3 ರಿಂದ 4 ನಿಮಿಷ ಚೆನ್ನಾಗಿ ಬೇಯಿಸಿ. ಈಗ ಮಸಾಲೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸಿನ ಪುಡಿ, ಮತ್ತು ಬೇಕಾದರೆ ಸ್ವಲ್ಪ ಸೋಯಾ ಸಾಸ್ ಮತ್ತು ವಿನೆಗರ್ ಹಾಕಬಹುದು. ಇಷ್ಟು ಮಾಡಿದರೆ ಬಿಸಿ ಬಿಸಿಯಾಗಿ ಸಿಹಿ ಕಾರ್ನ್ ಸೂಪ್ ಸಿದ್ಧವಾಗುತ್ತದೆ. ಇದನ್ನು ಒಂದು ಬಟ್ಟಲಿಗೆ ಹಾಕಿ. ಅದರ ಮೇಲೆ ಈರುಳ್ಳಿ ಹಾಕಿ ಮಕ್ಕಳಿಗೆ ಬಡಿಸಬಹುದು.



Click it and Unblock the Notifications
