Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಆಹಾ.. ಹತ್ತಿಯಂತೆ ಮೃದು ಇಡ್ಲಿ! ಒಮ್ಮೆ ಪಾಲಕ್ ರವಾ ಇಡ್ಲಿ ಟ್ರೈ ಮಾಡಿ
ಕೇವಲ 30 ನಿಮಿಷ ಸಾಕು! ಹತ್ತಿಯಂತೆ ಮೃದುವಾದ ಇಡ್ಲಿ ಮಾಡಬಹುದು. ಅದುವೇ ಆರೋಗ್ಯಕರ ಪಾಲಕ್ ರವಾ ಇಡ್ಲಿ (Palak Rava Idli). ನಿಮ್ಮ ಮನೆಯಲ್ಲಿ ಅತಿಥಿಗಳು ಇದ್ದರೆ ಅಥವಾ ನಿಮಗೆ ರುಚಿಯಾಗಿ ಏನನ್ನಾದರೂ ತಿನ್ನಬೇಕು ಅಂತ ಅನಿಸಿದರೆ, ಥಟ್ಟನೆ ಮನಸ್ಸಿಗೆ ಬರುವುದು ಹೊರಗಿನಿಂದ ಏನನ್ನಾದರೂ ಆರ್ಡರ್ ಮಾಡಿ ತಿನ್ನಬಾರದೇಕೆ ಅನ್ನೋದು. ಆದರೆ, ಹೊರಗಿನ ತಿಂಡಿ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಗಂಡಾಂತರ ಕಟ್ಟಿಟ್ಟ ಬುತ್ತಿ. ಹಾಗಾದ್ರೆ, ಮನೆಯಲ್ಲಿಯೇ ಆರೋಗ್ಯಕ್ಕೆ ಒಳ್ಳೆಯದು ಮತ್ತು ರುಚಿಕರವಾದ ತಿಂಡಿ ಏಕೆ ಮಾಡಬಾರದು? ನೀವು ಮನೆಯಲ್ಲಿ ಆರೋಗ್ಯಕರ ಪಾಲಕ್ ರವಾ ಇಡ್ಲಿ ತಯಾರಿಸುವುದು ಉತ್ತಮ.
ಎಲ್ಲರ ಮನೆಯಲ್ಲೂ ಇದೇ ಸಮಸ್ಯೆ. ಬೆಳಗ್ಗೆ ಎದ್ದ ಕೂಡಲೇ ಬಹುತೇಕರು ಟಿಫನ್ಗೆ ಏನು ಮಾಡಬೇಕು ಅಂತ ತಿಳಿಯದೆ ಪೇಚಿಗೆ ಸಿಲುಕುತ್ತಾರೆ. ಈ ಸಮಯದಲ್ಲಿ ಯಾರಿಗಾದರೂ ಸಹ ಏನು ಮಾಡಬೇಕೆಂದು ತಕ್ಷಣ ನಿರ್ಧರಿಸಲು ಸಾಧ್ಯವಾಗಲ್ಲ. ಬಹುತೇಕರು ಮಕ್ಕಳ ಊಟದ ಡಬ್ಬಿಯಲ್ಲಿ ಬೆಳಗ್ಗೆ ಯಾವ ಟಿಫನ್ ಹಾಕಬೇಕು ಎಂಬುದೇ ದೊಡ್ಡ ಚಿಂತೆ. ಇನ್ನೂ ಕೆಲವರು ಬೆಳಗ್ಗಿನ ಉಪಹಾರ ಅಥವಾ ಅತಿಥಿಗಳಿಗಾಗಿ ಆರೋಗ್ಯಕರ ಮತ್ತು ರುಚಿಕರವಾಗಿರುವ ಯಾವ ತಿಂಡಿ ಮಾಡಬೇಕು? ಎಂದು ಸಮಯ ಎಣಿಸುತ್ತಾರೆ. ನೀವು ಈ ಬಗ್ಗೆ ಚಿಂತಿಸಬೇಕಾಗಿಲ್ಲ. ನಾವು ಈ ಲೇಖನದಲ್ಲಿ ಪಾಲಕ್ ಮತ್ತು ರವೆಯನ್ನು ಬಳಸಿ ಆರೋಗ್ಯಕರವಾದ ಇಡ್ಲಿ (Idli) ಹೇಗೆ ತಯಾರಿಸಬೇಕು ಎಂದು ನಿಮಗೆ ತಿಳಿಸುತ್ತೇವೆ.

ಪಾಲಕ್ ರವಾ ಇಡ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
ರವೆ - 1 ಕಪ್
ಪಾಲಕ್ ಸೊಪ್ಪು - 1 ಕಪ್ (ನುಣ್ಣಗೆ ತುರಿದ)
ಮೊಸರು - 1 ಕಪ್
ಇನೋ ಅಥವಾ ಅಡುಗೆ ಸೋಡಾ - ½ ಟೀಚಮಚ
ಶುಂಠಿ - ½ ಸ್ಪೂನ್ (ತುರಿದ)
ಅಡುಗೆ ಎಣ್ಣೆ - 1 ಚಮಚ
ಸಾಸಿವೆ - ½ ಸ್ಪೂನ್
ಕರಿಬೇವು - 6 ರಿಂದ 7 ಎಲೆಗಳು
ಹಸಿ ಮೆಣಸಿನಕಾಯಿ (ಸಣ್ಣಗೆ ಕತ್ತರಿಸಿದ)
ರುಚಿಗೆ ತಕ್ಕಷ್ಟು ಉಪ್ಪು
ಇಂಗು - ಒಂದು ಚಿಟಿಕೆ
ನೀರು - ಅಗತ್ಯಕ್ಕೆ ತಕ್ಕಂತೆ ಬಳಸಿ
ಪಾಲಕ್ ರವಾ ಮಾಡುವ ವಿಧಾನ
ಇನ್ನೇಕೆ ತಡ.. ಬನ್ನಿ, ಪಾಲಕ್ ರವಾ ಮಾಡುವುದು ಹೇಗೆ ತಿಳಿಯೋಣ. ಇದನ್ನು ಮಾಡಲು, ಮೊದಲು ನಾವು ಪಾಲಕ್ ಪ್ಯೂರಿಯನ್ನು ತಯಾರಿಸಬೇಕು. ಈಗ ಪಾಲಕ್ ಸೊಪ್ಪನ್ನು 2 ನಿಮಿಷ ಕುದಿಸಿ ತಣ್ಣಗಾಗಲು ಬಿಡಬೇಕು. ಬಳಿಕ ಅದರ ಪೇಸ್ಟ್ ಅನ್ನು ತಯಾರಿಸಿ. ಈಗ ಒಂದು ಬಟ್ಟಲಿನಲ್ಲಿ ರವೆ ತೆಗೆದುಕೊಳ್ಳಿ. ರವೆಗೆ ಪಾಲಕ್ ಪ್ಯೂರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸಿನಕಾಯಿ, ಶುಂಠಿ ಪೇಸ್ಟ್, ಇನೋ ಅಥವಾ ಅಡಿಗೆ ಸೋಡಾ ಹಾಕಬೇಕು. ಬಳಿಕ ಚೆನ್ನಾಗಿ ಬೆರಸಿ. ಇದಾದ ನಂತರ ಅದನ್ನು ಮುಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು.
ಈಗ ಇಡ್ಲಿ ಸ್ಟ್ಯಾಂಡ್ ಅನ್ನು ನೀರಿನಲ್ಲಿ ತೊಳೆಯಬೇಕು. ಅದು ಒಣಗಲು ಬಿಡಿ. ಬಳಿಕ ನೀವು ಇಡ್ಲಿ ಸ್ಟ್ಯಾಂಡ್ಗೆ ಅಡುಗೆ ಎಣ್ಣೆ ಹಚ್ಚಬೇಕು. ಈಗ ಇಡ್ಲಿ ಸ್ಟ್ಯಾಂಡ್ಗೆ ರವೆ ದ್ರಾವಣವನ್ನು ಹಾಕಬೇಕು. ಬಳಿಕ ಅದನ್ನು ಮುಚ್ಚಿ 15 ರಿಂದ 20 ನಿಮಿಷಗಳ ಕಾಲ ಬೇಯಿಸಬೇಕು. ಅದು ಸ್ವಲ್ಪ ತಣ್ಣಗಾದ ಬಳಿಕ ಅದನ್ನು ಓಪನ್ ಮಾಡಬೇಕು. ಹೀಗೆ ಮಾಡಿದರೆ ಸಾಕು, ಹತ್ತಿಯಂತೆ ಮೃದುವಾದ ಆರೋಗ್ಯಕರ ಪಾಲಕ್ ರವಾ ಇಡ್ಲಿ ಸಿದ್ಧವಾಗುತ್ತದೆ. ಬಳಿಕ, ಚಟ್ನಿ ಅಥವಾ ಸಾಂಬಾರ್ ಜೊತೆ ಅತಿಥಿಗಳಿಗೆ ಬಡಿಸಬಹುದು.



Click it and Unblock the Notifications
