Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಹೆಲ್ದಿ & ಟೇಸ್ಟಿ.. ಶುಗರ್ ಕಂಟ್ರೋಲ್ಗೆ ಬೆಸ್ಟ್! ಈ ಮಸಾಲ ಓಟ್ಸ್ ತಪ್ಪದೆ ಟ್ರೈ ಮಾಡಿ
ಮಧುಮೇಹ ರೋಗಿಗಳಿಗೆ ಆರೋಗ್ಯಕರ ಆಯ್ಕೆ.. ಈ ಮಸಾಲ ಓಟ್ಸ್ ಉತ್ತಪ್ಪಮ್ (Oats Uttapam). ಬೆಳಗ್ಗಿನ ಉಪಹಾರಕ್ಕೆ ಅಥವಾ ಸಂಜೆಯ ಸ್ನ್ಯಾಕ್ಸ್ಗೆ ಸೂಕ್ತವಾಗಿದೆ. ಹೌದು, ಪ್ರಸ್ತುತ ಜಗತ್ತಿನಲ್ಲಿ ಓಟ್ಸ್ ಒಂದು ಪೌಷ್ಟಿಕ ಆಹಾರವಾಗಿ ಗುರುತಿಸಲ್ಪಟ್ಟಿದೆ. ಇದು ನಾಲಿಗೆಗೆ ಅದ್ಭುತ ರುಚಿ ನೀಡುವುದರ ಜೊತೆಗೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಓಟ್ಸ್ನಲ್ಲಿ ಫೈಬರ್, ಪ್ರೋಟೀನ್, ವಿಟಮಿನ್ಗಳು, ಮೆಗ್ನೀಸಿಯಮ್, ಕಬ್ಬಿಣ, ಸತುವು ಮುಂತಾದ ಖನಿಜಗಳಿವೆ. ಓಟ್ಸ್ ತಿನ್ನಲು ಇಷ್ಟಪಡುವವರು ಇದರಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ನಾವಿಂದು ಸಾಂಪ್ರದಾಯಿಕ ರುಚಿಗೆ ಆರೋಗ್ಯಕರವಾದ ಮಸಾಲಾ ಓಟ್ಸ್ ಉತ್ತಪ್ಪವನ್ನು ತಯಾರಿಸುವುದು ಹೇಗೆ (Oats Uttapam Recipe) ಎಂದು ನಿಮಗೆ ತಿಳಿಸಲಿದ್ದೇವೆ.
ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಆಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಜೊತೆಗೆ ರುಚಿಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ರುಚಿಕರವಾದ ಮತ್ತು ಆರೋಗ್ಯಕರವಾದ ಉಪಹಾರವನ್ನು ಸೇವಿಸಲು ಬಯಸಿದರೆ, ಓಟ್ಸ್ನಿಂದ ತಯಾರಿಸಿದ ಮಸಾಲಾ ಓಟ್ಸ್ ಉತ್ತಪ್ಪವನ್ನು ಒಮ್ಮೆ ಟ್ರೈ ಮಾಡಿ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಬೆಳಗಿನ ಉಪಹಾರಕ್ಕೆ ಅಥವಾ ಸಂಜೆಯ ಸ್ನ್ಯಾಕ್ಸ್ಗೆ ಸೂಕ್ತವಾಗಿದೆ. ಮಕ್ಕಳಿಂದ ಹಿಡಿದು ಮತ್ತು ದೊಡ್ಡವರವರೆಗೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ.

ಓಟ್ಸ್ನಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭ?
ನಮ್ಮ ದೇಹದ ಆರೋಗ್ಯಕ್ಕೆ ಮಸಾಲಾ ಓಟ್ಸ್ ಉತ್ತಪ್ಪ ತುಂಬಾ ಒಳ್ಳೆಯದು. ಓಟ್ಸ್ನಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪ್ರೋಟೀನ್ ಸ್ನಾಯುಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ. ವಿಟಮಿನ್ಗಳು ಮತ್ತು ಖನಿಜಗಳು ದೇಹಕ್ಕೆ ಅಗತ್ಯವಾದ ಪೋಷಣೆ ನೀಡುತ್ತವೆ. ಈ ಉತ್ತಪ್ಪವನ್ನು ಉಪಹಾರವಾಗಿ ಸೇವಿಸುವುದರಿಂದ ನೀವು ದಿನವಿಡೀ ಶಕ್ತಿಯುತವಾಗಿರಬಹುದು.
ಮಸಾಲಾ ಓಟ್ಸ್ ಉತ್ತಪ್ಪ ತಯಾರಿಸಲು ಬೇಕಾಗುವ ಪದಾರ್ಥಗಳು
• ಓಟ್ಸ್ (ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ)
• ಸೇಮೋಲಿನಾ (ಉಪ್ಮಾ ರವೆ)
• ಮೊಸರು
• ನೀರು
• ಉಪ್ಪು
• ಇನೋ ಅಥವಾ ಅಡುಗೆ ಸೋಡಾ
• ಈರುಳ್ಳಿ
• ಟೊಮೆಟೊ
• ಹಸಿ ಮೆಣಸಿನಕಾಯಿ
• ಕ್ಯಾಪ್ಸಿಕಂ
• ಕೊತ್ತಂಬರಿ ಸೊಪ್ಪು
• ಚಾಟ್ ಮಸಾಲಾ
• ಎಣ್ಣೆ

ಮಸಾಲಾ ಓಟ್ಸ್ ಉತ್ತಪ್ಪ ತಯಾರಿಸುವ ವಿಧಾನ
ಮಸಾಲಾ ಓಟ್ಸ್ ಉತ್ತಪ್ಪವನ್ನು ಸುಲಭವಾಗಿ ತಯಾರಿಸಬಹುದು. ಈಗ ತಯಾರಿಸುವ ವಿಧಾನವನ್ನು ತಿಳಿಯೋಣ. ಮೊದಲಿಗೆ ಒಂದು ಪಾತ್ರೆಯಲ್ಲಿ 1 ಕಪ್ ಓಟ್ಸ್ ಪುಡಿ, ಅರ್ಧ ಕಪ್ ಸೇಮೋಲಿನಾ, ಅರ್ಧ ಕಪ್ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ದಪ್ಪಗಿನ ಹಿಟ್ಟಿನಂತೆ ಕಲಸಿಕೊಳ್ಳಿ. ಈ ಮಿಶ್ರಣವನ್ನು ಮುಚ್ಚಿ 15 ರಿಂದ 20 ನಿಮಿಷಗಳ ಕಾಲ ಪಕ್ಕಕ್ಕೆ ಇಡಿ. ಆಗ ಹಿಟ್ಟು ಚೆನ್ನಾಗಿ ನೆನೆಯುತ್ತದೆ.
ಈ ಸಮಯದಲ್ಲಿ ಸಣ್ಣಗೆ ಹೆಚ್ಚಿದ 1 ಈರುಳ್ಳಿ, ಸಣ್ಣಗೆ ಹೆಚ್ಚಿದ 1 ಟೊಮೆಟೊ, ಸಣ್ಣಗೆ ಹೆಚ್ಚಿದ 1 ಕ್ಯಾಪ್ಸಿಕಂ ಮತ್ತು ಹಸಿ ಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಬೇಕಿದ್ದರೆ ಕ್ಯಾರೆಟ್ ಅಥವಾ ಬೇಯಿಸಿದ ಮೆಕ್ಕೆಜೋಳದ ಕಾಳುಗಳನ್ನು ಸಹ ಬಳಸಬಹುದು. ಗ ಓಟ್ಸ್ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಇನೋ ಅಥವಾ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ. ಇನೋ ಹಾಕಿದ ತಕ್ಷಣ ಹಿಟ್ಟು ಉಬ್ಬುತ್ತದೆ.

ಮಧ್ಯಮ ಉರಿಯಲ್ಲಿ 2 ರಿಂದ 3 ನಿಮಿಷ ಬೇಯಿಸಿ
ಈ ಒಲೆ ಮೇಲೆ ತವಾ ಇಟ್ಟು ಬಿಸಿ ಮಾಡಿ. ತವಾ ಬಿಸಿಯಾದ ನಂತರ ಸ್ವಲ್ಪ ಎಣ್ಣೆ ಹಾಕಿ, ಒಂದು ಚಮಚ ಹಿಟ್ಟನ್ನು ಗುಂಡಗೆ ಹಾಕಿ. ಹಿಟ್ಟಿನ ಮೇಲೆ ಹೆಚ್ಚಿದ ತರಕಾರಿಗಳನ್ನು ಹಾಕಿ, ಸ್ವಲ್ಪ ಚಾಟ್ ಮಸಾಲಾ ಉದುರಿಸಿ. ತವಾಕ್ಕೆ ಮುಚ್ಚಳವನ್ನು ಮುಚ್ಚಿ, ಮಧ್ಯಮ ಉರಿಯಲ್ಲಿ 2 ರಿಂದ 3 ನಿಮಿಷ ಬೇಯಿಸಿ. ಉತ್ತಪ್ಪವನ್ನು ತಿರುವಿ ಹಾಕಿ ಎರಡೂ ಕಡೆ ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿ. ಇಷ್ಟು ಮಾಡಿದರೆ, ರುಚಿಕರವಾದ ಮಸಾಲಾ ಓಟ್ಸ್ ಉತ್ತಪ್ಪ ಸಿದ್ಧವಾಗುತ್ತದೆ.
ಮಸಾಲಾ ಓಟ್ಸ್ ಉತ್ತಪ್ಪವನ್ನು ತೆಂಗಿನಕಾಯಿ ಚಟ್ನಿ, ಕೊತ್ತಂಬರಿ ಚಟ್ನಿ ಅಥವಾ ಟೊಮೆಟೊ ಸಾಸ್ನೊಂದಿಗೆ ಬಡಿಸಬಹುದು. ಇದು ಮಕ್ಕಳ ಟಿಫಿನ್ಗೆ, ಡಯಟ್ ಮಾಡುವವರಿಗೆ ಅಥವಾ ಮಧುಮೇಹ ಇರುವವರಿಗೂ ಆರೋಗ್ಯಕರ ಆಯ್ಕೆ. ಈ ರೀತಿಯಾಗಿ ಮಸಾಲಾ ಓಟ್ಸ್ ಉತ್ತಪ್ಪವನ್ನು ರುಚಿಕರವಾದ ಮತ್ತು ಆರೋಗ್ಯಕರವಾದ ಉಪಹಾರವಾಗಿ ಸವಿಯಬಹುದು.



Click it and Unblock the Notifications