Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮೂರೇ ಮ್ಯಾಂಗೋ ಸಾಕು! ಗುಜರಾತ್ ಸ್ಟೈಲ್ ಆಮ್ರಾಸ್ ಪುರಿ ರೆಡಿ.. ಮಕ್ಕಳು ಫಿದಾ ಆಗ್ತಾರೆ
ಮನೆಯಲ್ಲಿ ಮೂರು ಮಾವಿನಹಣ್ಣು ಇದ್ದರೆ ಸಾಕು! ಗುಜರಾತಿ ಶೈಲಿಯ ಆಮ್ರಾಸ್ ಪುರಿ ಮಾಡಬಹುದು. ಇದರ ತಂಪು ಮತ್ತು ರುಚಿಯ ಸಂಯೋಜನೆಗೆ ಮಕ್ಕಳು ಹುಚ್ಚರಾಗುತ್ತಾರೆ. ಹೌದು, ನಿಮ್ಮ ಮಕ್ಕಳಿಗೆ ಮನೆಯಲ್ಲಿಯೇ ಸಿಹಿ ಮತ್ತು ತಂಪಾಗಿರುವ ಏನನ್ನಾದರೂ ಮಾಡಲು ಬಯಸಿದರೆ, ಆಮ್ರಾಸ್ ಪುರಿ (Aamras Puri) ನಿಮಗೆ ಉತ್ತಮ ಆಯ್ಕೆ. ಇದನ್ನು ಮಾಡುವುದು ತುಂಬಾನೇ ಸುಲಭ. ಅರೆ, ಏನಿದು ಆಮ್ರಾಸ್ ಅಂತ ಯೋಚನೆ ಮಾಡ್ತಾ ಇದ್ದೀರಾ? ಆಮ್ರಾಸ್ ಎಂದರೆ ಮಾವಿನ ರಸ ಅಥವಾ ಮಾವಿನ ಹಣ್ಣಿನಿಂದ (Mango) ತಯಾರಿಸಿದ ಪಾನೀಯ. ನಾವಿಂದು ಈ ಲೇಖನದಲ್ಲಿ ಆಮ್ರಾಸ್ ಪುರಿ ತಯಾರಿಸುವ ವಿಧಾನವನ್ನು (Aamras Puri Recipe) ತಿಳಿಸಿಕೊಡಲಿದ್ದೇವೆ.
ಆಮ್ರಾಸ್ ಪುರಿ ಒಂದು ಸಾಂಪ್ರದಾಯಿಕ ಭಾರತೀಯ ಖಾದ್ಯ. ವಿಶೇಷವಾಗಿ, ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಇದು ಹೆಚ್ಚು ಜನಪ್ರಿಯವಾಗಿದೆ. ಇದನ್ನು ಬೇಸಿಗೆಯಲ್ಲಿ ಬಹಳ ಉತ್ಸಾಹದಿಂದ ತಿನ್ನಲಾಗುತ್ತದೆ. ಇದನ್ನು ತಾಜಾ ಮಾವಿನ ಹಣ್ಣಿನ ತಿರುಳಿನಿಂದ ತಯಾರಿಸಲಾಗುತ್ತದೆ. ಬಿಸಿ ಪೂರಿಗಳೊಂದಿಗೆ ಸವಿಯುತ್ತಾರೆ. ಇದರ ರುಚಿ ಬಲು ಸಿಹಿಯಾಗಿರುತ್ತದೆ. ಮಕ್ಕಳಿಂದ ವಯಸ್ಕರವರೆಗೆ ಎಲ್ಲರನ್ನೂ ಆಕರ್ಷಿಸುತ್ತದೆ. ಇದು ಕೇವಲ ಮಾವಿನ ಹಣ್ಣುಗಳನ್ನು ರುಬ್ಬಿ ತಯಾರಿಸಿದ ಖಾದ್ಯವಲ್ಲ ಅಥವಾ ರಸವಲ್ಲ. ಇದು ವಿಶೇಷ ರುಚಿ ಮತ್ತು ಸುವಾಸನೆಯನ್ನು ಹೊಂದಿರುತ್ತದೆ. ಇದನ್ನು ತಯಾರಿಸಲು ಕೆಲವು ಸ್ಪೆಷಲ್ ಟಿಪ್ಸ್ ಫಾಲೋ ಮಾಡಬೇಕಾಗುತ್ತದೆ. ಆಮ್ರಾಸ್ ತಯಾರಿಸಲು ಸಾಮಾನ್ಯವಾಗಿ, ಅಲ್ಫೋನ್ಸೊ (ಹಫಸ್), ಕೇಸರ್ ಅಥವಾ ಬಾದಾಮಿ ವಿಧದ ಮಾವಿನಹಣ್ಣುಗಳನ್ನು ಬಳಸಲಾಗುತ್ತದೆ. ಏಕೆಂದರೆ ಅವುಗಳ ತಿರುಳು ತುಂಬಾ ಪರಿಮಳಯುಕ್ತ ಮತ್ತು ಸಿಹಿಯಾಗಿರುತ್ತದೆ.

ಆಮ್ರಾಸ್ ಪುರಿ ತಯಾರಿಸಲು ಬೇಕಾಗುವ ಪದಾರ್ಥಗಳು
• ಮಾವಿನಹಣ್ಣುಗಳು - ಮಾಗಿದ 3 ರಿಂದ 4 (ಕೇಸರ್ ಅಥವಾ ಹಫಸ್)
• ಗೋಧಿ ಹಿಟ್ಟು - 2 ಕಪ್
• ಏಲಕ್ಕಿ ಪುಡಿ - ಅರ್ಧ ಸ್ಪೂನ್
• ಕೇಸರಿ - ಸ್ವಲ್ಪ
• ಹಾಲು ಅಥವಾ ನೀರು - 1/4 ಕಪ್
• ಸಕ್ಕರೆ - ರುಚಿಗೆ ತಕ್ಕಷ್ಟು (ಮಾವಿನಹಣ್ಣು ಕಡಿಮೆ ಸಿಹಿಯಾಗಿದ್ದರೆ)
• ಉಪ್ಪು - ರುಚಿಗೆ ತಕ್ಕಷ್ಟು
• ಅಡುಗೆ ಎಣ್ಣೆ - ಹುರಿಯಲು
• ನೀರು - ಸ್ವಲ್ಪ (ಹಿಟ್ಟನ್ನು ಬೆರೆಸಲು)
ಆಮ್ರಾಸ್ ಪುರಿ ಮಾಡುವ ಸುಲಭ ವಿಧಾನ
ಆಮ್ರಾಸ್ ಪುರಿ ಮಾಡುವ ಮೊದಲು, ಮಾವಿನಹಣ್ಣನ್ನು ಚೆನ್ನಾಗಿ ತೊಳೆಯಬೇಕು. ಅದರ ಸಿಪ್ಪೆ ಸುಲಿದು, ತಿರುಳನ್ನು ತೆಗೆಯಬೇಕು. ಈಗ ಮಾವಿನ ತಿರುಳನ್ನು ಮಿಕ್ಸರ್ ನಲ್ಲಿ ಹಾಕಿ. ಸ್ವಲ್ಪ ಹಾಲು ಅಥವಾ ನೀರು, ಏಲಕ್ಕಿ ಪುಡಿ ಮತ್ತು ಸಕ್ಕರೆ ಹಾಕಬೇಕು. ಅದು ನಯವಾಗುವ ತನಕ ಚೆನ್ನಾಗಿ ಮಿಕ್ಸ್ ಮಾಡಬೇಕು. ಇದರ ಮೇಲೆ ಸ್ವಲ್ಪ ಕೇಸರಿ ಹಾಕಿ ಮತ್ತು ಅದನ್ನು 1 ಗಂಟೆ ಫ್ರಿಜ್ ನಲ್ಲಿಡಬೇಕು. ಏಕೆಂದರೆ, ಅದು ತಣ್ಣಗಾಗಬೇಕು. ಈಗ ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು ಹಾಕಿ. ನೀರು ಹಾಕಿಕೊಂಡು ಗಟ್ಟಿಯಾದ ಹಿಟ್ಟನ್ನು ತಯಾರಿಸಿ. ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ಅವುಗಳನ್ನು ದುಂಡಗಿನ ಪೂರಿ ಮಾಡಲು ಸುತ್ತಿಕೊಳ್ಳಿ.

ಈಗ ಗ್ಯಾಸ್ ಆನ್ ಮಾಡಿ. ಬಾಣಲೆಯಲ್ಲಿ ಅಡುಗೆ ಎಣ್ಣೆ ಹಾಕಿ, ಬಿಸಿ ಮಾಡಿ. ಬಳಿಕ ಪೂರಿಗಳನ್ನು ಅದರಲ್ಲಿ ಹಾಕಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ. ಬಳಿಕ ಅವುಗಳನ್ನು ತೆಗೆದು ಪಾತ್ರೆಗೆ ಹಾಕಿ. ಇಷ್ಟು ಮಾಡಿದರೆ ಸಾಕು. ಈಗ ತಣ್ಣಗಾದ ಮಾವಿನ ರಸವನ್ನು ಒಂದು ಬಟ್ಟಲಿನಲ್ಲಿ ಹಾಕಿ. ಬಿಸಿ ಬಿಸಿ ಪೂರಿಗಳ ಜೊತೆಗೆ ಇದನ್ನು ಬಡಿಸಬಹುದು. ಕೆಲವರು ಮಾವಿನ ರಸದೊಂದಿಗೆ ಸ್ವಲ್ಪ ತುಪ್ಪ ಅಥವಾ ಹಾಲನ್ನು ಬೆರೆಸಿ ಸೇವಿಸುತ್ತಾರೆ. ಇದರಿಂದ ಅದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.



Click it and Unblock the Notifications
