Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಫಟಾಫಟ್ ಎಂದು ಮಾಡಿ ನೆಲಗಡಲೆ ಚಟ್ನಿ..! ಇಡ್ಲಿ..ದೋಸೆಗೆ ಇದು ಬೆಸ್ಟ್..!
ನೀವು ತಿಂಡಿಯ ಸಮಯಕ್ಕೆ ಹಲವು ಬಗೆಯ ಚಟ್ನಿಯನ್ನು ಮಾಡಿ ಸವಿಯಲು ಮುಂದಾಗುತ್ತೀರಿ. ಅದರಲ್ಲು ವಿಶೇಷವಾಗಿ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡುವಂತಹ ಚಟ್ನಿಯನ್ನೇ ಮಾಡಿ ಮುಗಿಸಲು ಮುಂದಾಗುತ್ತೀರಿ. ಬ್ರೇಕ್ಫಾಸ್ಟ್ ಜೊತೆಗೆ ಚಟ್ನಿ ಇದ್ದರೇನೆ ಅದಕ್ಕೊಂದು ರುಚಿ. ಆದ್ರೆ ಯಾವ ಚಟ್ನಿ ಮಾಡಬೇಕು ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಚಟ್ನಿ ಅಂದ ಕೂಡಲೆ ತೆಂಗಿನ ಕಾಯಿ ಹುರಿಗಡಲೆ ಚಟ್ನಿಯನ್ನು ಹೆಚ್ಚಾಗಿ ಮಾಡುತ್ತಾರೆ. ಏಕೆಂದರೆ ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿ ಮಾಡಬಹುದು. ಹಾಗೆ ನಾವಿಂದು ನೆಲಗಡಲೆಯಲ್ಲಿ ಮಾಡುವಂತಹ ಅತ್ಯಂತ ಸುಲಭದ ಹಾಗೆ, ಕಡಿಮೆ ವಸ್ತು ಬಳಸಿ ಮಾಡುವಂತಹ ಚಟ್ನಿ ಕುರಿತು ತಿಳಿದುಕೊಳ್ಳೋಣ. ಈ ನೆಲಗಡಲೆ ಚಟ್ನಿಯು ಉತ್ತರ ಕರ್ನಾಟಕ ಭಾಗದಲ್ಲಿ ಬಹಳ ಫೇಮಸ್.

ಈ ಚಟ್ನಿ ಚಳಿಗಾಲಕ್ಕೆ ಹೇಳಿ ಮಾಡಿಸಿದಂತಿರುತ್ತೆ. ಖಾರ ಖಾರವಾಗಿ ಎಲ್ಲಾ ತಿಂಡಿಗಳಿಗೂ ಅದ್ಭುತ ರುಚಿ ನೀಡಲಿದೆ. ಇಡ್ಲಿ, ದೋಸೆಗಂತು ಈ ಚಟ್ನಿ ಮತ್ತಷ್ಟು ರುಚಿ ತರಲಿದೆ. ಕೆಲವೊಂದು ಹೋಟೆಲ್ ಹಾಗೂ ಕ್ಯಾಂಟೀನ್ನಲ್ಲಿ ಈ ಚಟ್ನಿ ಸವಿದಿರಬಹುದು. ಅದರಲ್ಲೂ ಉತ್ತರ ಕರ್ನಾಟಕ ಶೈಲಿಯ ಹೋಟೆಲ್ನಲ್ಲಿ ಇದು ಇದ್ದೇ ಇರುತ್ತೆ.
ಹಾಗಾದ್ರೆ ಈ ನೆಲಗಡಲೆಯ ಅದ್ಭುತ ರುಚಿ ಚಟ್ನಿ ಮಾಡುವುದು ಹೇಗೆ?, ಈ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನೆಲಗಡಲೆಯ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ನೆಲಗಡಲೆ - 1/4 ಕಪ್
- ಜೀರಿಗೆ
- ಈರುಳ್ಳಿ
- ಒಣ ಮೆಣಸು
- ಶುಂಠಿ
- ಬೆಳ್ಳುಳ್ಳಿ
- ಟೊಮೆಟೊ
- ಹುಣಸೆ ಹುಳಿ
- ಕೊತ್ತಂಬರಿ ಸೊಪ್ಪು
- ಸಾಸಿವೆ ವ
- ಕರಿಬೇವು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ನೆಲಗಡಲೆಯ ಚಟ್ನಿ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆಗೆ ನೆಲಗಡಲೆ ಅಥವಾ ಕಡಲೆ ಬೀಜ ಹಾಕಿಕೊಂಡು ಹುರಿದುಕೊಳ್ಳಬೇಕು. ಈ ಕಡ್ಲೆಯ ಸಿಪ್ಪೆ ಬಳಸಬೇಡಿ ಅದು ಕಹಿಯಾಗಿರುವ ಕಾರಣ ಹುರಿದುಕೊಂಡು ಬರಿ ಬಿಳಿ ಬಣ್ಣದ ಕಡಲೆ ಬಳಸಿ. ಹೀಗಾಗಿ ಸಿಪ್ಪೆಯನ್ನು ಬಿಡಿಸಲು ಮಧ್ಯಮ ಉರಿಯಲ್ಲಿ ಚೆನ್ನಾಗಿ ಕಡಲೆಯನ್ನು ಫ್ರೈ ಮಾಡಿಕೊಳ್ಳಿ. ನಂತರ ಒಂದು ಪ್ಲೇಟ್ಗೆ ಹಾಕಿ ತಣ್ಣಗಾಗಲು ಬಿಡಿ. ಇದು ತಣ್ಣಗಾದ ಬಳಿಕ ಸಿಪ್ಪೆ ತೆಗೆಯಬೇಕು. ಕೈಯಿಂದ ಉಜ್ಜಿದರೆ ಸಾಕು ಸಿಪ್ಪೆ ಬಿಟ್ಟುಕೊಳ್ಳುತ್ತೆ.
ಈಗ ಒಲೆ ಮೇಲಿನ ಬಾಣಲೆಗೆ ಎಣ್ಣೆ ಹಾಕಿ ಬಳಿಕ ಜೀರಿಗೆ, ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ, ನಂತರ ಒಣ ಮೆಣಸು, ಬೆಳ್ಳುಳ್ಳಿ, ಶುಂಠಿ ಹಾಕಿ ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಇದಕ್ಕೆ ಚಿಕ್ಕ ಟೊಮೆಟೋ ಸಣ್ಣದಾಗಿ ಹೆಚ್ಚಿ ಹಾಕಿ, ಹಾಗೆ ಗೋಲಿ ಗಾತ್ರದ ಹುಣಸೆಹಣ್ಣನ್ನು ಕೂಡ ಇದಕ್ಕೆ ಹಾಕಿಕೊಂಡಿ ಫ್ರೈ ಮಾಡಿ.
ಒಂದು 3ರಿಂದ 4 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಕೊನೆಯದಾಗಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿ ಹಾಗೆ ಸಿಪ್ಪೆ ಬಿಡಿಸಿದ ಕಡಲೆ ಬೀಜವನ್ನು ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ. ಇದು ಪೂರ್ಣ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ್ಪ ನೀರು ಹಾಕಿಕೊಳ್ಳಿ. ನಂತರ ಒಂದು ಬೌಲ್ಗೆ ಈ ಚಟ್ನಿ ಹಾಕಿಟ್ಟುಕೊಳ್ಳಿ.
ಈಗ ಚಟ್ನಿಗೆ ಒಂದು ಒಗ್ಗರಣೆ ಮಾಡಿಕೊಳ್ಳಿ, ಜೀರಿಗೆ, ಸಾಸಿವೆ, ಕರಿಬೇವು ಒಣ ಮೆಣಸಿನ ಒಂದು ಒಗ್ಗೆರಣೆ ರೆಡಿ ಮಾಡಿ ಅದೇ ಪಾತ್ರೆಗೆ ಚಟ್ನಿ ಹಾಕಿಕೊಂಡು ಚೆನ್ನಾಗಿ ಒಮ್ಮೆ ಮಿಕ್ಸ ಮಾಡಿಕೊಂಡರೆ ನಿಮ್ಮ ಮುಂದೆ ಈ ನೆಲಗಡಲೆ ಚಟ್ನಿ ರೆಡಿಯಾಗುತ್ತೆ.



Click it and Unblock the Notifications
