Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಾಯಿ ಟೊಮೆಟೋ ಚಟ್ನಿ ಸವಿದಿದ್ದೀರಾ..? ಈ ರುಚಿ ಚಟ್ನಿ ಮತ್ತೊಂದಿಲ್ಲ..!
ಬೆಳಗ್ಗೆ ತಿಂಡಿಗೆ ಊಟಕ್ಕೆ ನೀವು ಹಲವು ರೀತಿಯ ಚಟ್ನಿ ಮಾಡಿ ಸವಿದಿರುತ್ತೇವೆ. ಚಟ್ನಿಯಲ್ಲಿ ನೀವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ವಿಧಗಳಿವೆ. ಒಂದೊಂದು ಚಟ್ನಿಯೂ ಒಂದೊಂದು ರೀತಿಯ ರುಚಿ ನೀಡಲಿದೆ. ಹಾಗಾದ್ರೆ ನಾವಿಂದುಜ ವಿಶೇಷವಾದ ಚಟ್ನಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ನೀವು ಟೊಮೆಟೋದಿಂದ ಮಾಡುವಂತಹ ರುಚಿ ರುಚಿಯ ಚಟ್ನಿಯನ್ನು ಸವಿದಿರುತ್ತೀರಿ, ಅದೆ ರೀತಿ ಹಸಿ ಟೊಮೆಟೋ ಚಟ್ನಿ ಎಂದಾದ್ರು ಸವಿದಿದ್ದೀರಾ?
ಹೌದು ಹಸಿ ಟೊಮೆಟೋದಿಂದ ಅದ್ಭುತ ರುಚಿಯ ಚಟ್ನಿ ಮಾಡಬಹುದು. ಈ ಚಟ್ನಿಯನ್ನು ನೀವು ಊಟ ತಿಂಡಿಗೂ ಸವಿಯಬಹುದು. ಹಸಿ ಟೊಮೆಟೋ ಬಹಳ ಹುಳಿಯಾಗಿರುತ್ತೆ. ಹುಳಿ ಹುಳಿಯಾದ ಈ ಚಟ್ನಿ ನೀವು ಸವಿಯುತ್ತಿದ್ದರೆ ಬಾಯಲ್ಲಿ ನೀರು ತರಿಸುತ್ತದೆ. ಈ ಚಟ್ನಿಯನ್ನ ಸುಲಭವಾಗಿ, ಕಡಿಮೆ ಸಮಯದಲ್ಲಿ ಮಾಡಬಹುದು.

ಹಾಗಾದ್ರೆ ಈ ಹಸಿ ಟೊಮೆಟೋ ಚಟ್ನಿ ಮಾಡುವುದು ಹೇಗೆ? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಯಾವೆಲ್ಲಾ ವಸ್ತುಗಳ ಬಳಸಿ ಈ ಹಸಿ ಟೊಮೆಟೋ ಚಟ್ನಿ ಮಾಡಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಸಿ ಅಥವಾ ಕಾಯಿ ಟೊಮೆಟೋ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಕಾಯಿ ಟೊಮೆಟೋ - 10
- ಈರುಳ್ಳಿ
- ಕಡಲೆ ಬೀಜ
- ಎಣ್ಣೆ
- ಒಣ ಮೆಣಸು
- ಸಾಸಿವೆ
- ಉಪ್ಪು
- ಅರಶಿಣ
- ಕರಿಬೇವು
- ಕಡಲೆ ಬೇಳೆ
- ಉದ್ದಿನ ಬೇಳೆ
ಹಸಿ ಟೊಮೆಟೋ ಚಟ್ನಿ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಕಡಲೆ ಬೀಜ ಹಾಕಿ ಫ್ರೈ ಮಾಡಿಕೊಳ್ಳಿ. ಅದರ ಸಿಪ್ಪೆ ಬಿಡುವಷ್ಟು ಹುರಿದುಕೊಳ್ಳಿ. ನಂತರ ಕಡಲೆ ಬೀಜ ತೆಗೆದಿಟ್ಟುಕೊಂಡು ಅದೇ ಪಾತ್ರೆಗೆ 4 ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ.
ಅನಂತರ ಇದಕ್ಕೆ ಸಿಪ್ಪೆ ತೆಗೆದ ಬೆಳ್ಳುಳ್ಳಿಯನ್ನು ಹಾಕಿ, ಹಾಗೆ ಒಣ ಮೆಣಸು ಹಾಕಿ, ಅನಮತರ ಇದಕ್ಕೆ ಹೆಚ್ಚಿಕೊಂಡಿರುವ ಕಾಯಿ ಟೊಮೆಟೋವನ್ನು ಹಾಕಿ, 10 ಟೊಮೆಟೋ ಇದ್ದರೆ ಸಾಕಾಗುತ್ತದೆ. ಟೊಮೆಟೋ ಹಾಕಿ ಉಪ್ಪು, ಅರಶಿಣ, ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 3ರಿಂದ 4 ನಿಮಿಷ ಫ್ರೈ ಆಗಲು ಬಿಡಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಮೊದಲು ಹುರಿದುಕೊಂಡ ಕೆಡಲೆ ಬೀಜ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು.
ನಂತರ ಅದೇ ಜಾರ್‌ಗೆ ಒಲೆ ಮೇಲೆ ಬೇಯಿಸಿಕೊಂಡ ಟೊಮೆಟೋಗಳನ್ನು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಈ ಚಟ್ನಿ ತೆಗೆದು ಒಂದು ಬೌಲ್‌ಗೆ ಹಾಕಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ನಂತರ ಸಾಸಿವೆ, ಕರಿಬೇವು, ಕಡಲೆಬೇಳೆ, ಉದ್ದಿನ ಬೇಳೆ ಹಾಕಿ ಫ್ರೈ ಮಾಡಿಕೊಳ್ಳಿ. ಹಾಗೆ ಇದಕ್ಕೆ ಒಣ ಮೆಣಸು ಕೂಡ ಹಾಕಿ ಒಗ್ಗರಣೆ ಮಾಡಿ ಚಟ್ನಿಗೆ ಹಾಕಿ ಮಿಕ್ಸ್ ಮಾಡಿ.
ಇಷ್ಟಾದರೆ ನಿಮ್ಮ ಮುಂದೆ ಕಾಯಿ ಟೊಮೆಟೋ ಚಟ್ನಿ ರೆಡಿಯಾಗುತ್ತದೆ. ಇದರ ಹುಳಿ ಹುಳಿ ಅಂಶ ನಿಮಗೆ ಮಾವಿನ ಕಾಯಿ ಚಟ್ನಿಯ ಅನುಭವ ನೀಡಲಿದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೊಡಿ.



Click it and Unblock the Notifications
