Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಟಾಣಿ ಗ್ರೇವಿ ಹೀಗೆ ಮಾಡಿದರೆ ಸೂಪರ್ ಆಗಿರುತ್ತದೆ?
Recipes
oi-Reena TK
Posted By: Reena TK
ಬಟಾಣಿ ಗ್ರೇವಿ ಅನ್ನಕ್ಕಾದರೂ, ಘೀರೈಸ್, ಚಪಾತಿ, ಪರೋಟಾ ಹೀಗೆ ಯಾವುದೇ ಬಗೆಯ ಆಹಾರಕ್ಕಾದರೂ ಸೂಪರ್ ಕಾಂಬಿನೇಷನ್. ಫ್ರೋಝನ್ ಬಟಾಣಿ ಅಥವಾ ಹಸಿ ಬಟಾಣಿ ಗ್ರೇವಿ ಮಾಡುವ ರೆಸಿಪಿ ಇಲ್ಲಿ ನೀಡಲಾಗಿದೆ. ಈ ಗ್ರೇವಿ ತುಂಬಾ ಚೆನ್ನಾಗಿರುತ್ತದೆ, ಈ ಗ್ರೇವಿ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
1 ಚಮಚ ಎಣ್ಣೆ
1 ಚಮಚ ಕಾಶ್ಮೀರಿ ಖಾರದ ಪುಡಿ
ಅರ್ಧ ಚಮಚ ಗರಂ ಮಸಾಲ ಪುಡಿ
1 ಚಮಚ ಕೊತ್ತಂಬರಿ ಪುಡಿ
ರುಚಿಗೆ ತಕ್ಕ ಉಪ್ಪು
4-5 ಟೊಮೆಟೊ
1-2 ಈರುಳ್ಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ( ಪೇಸ್ಟ್ ಇಲ್ಲದಿದ್ದರೆ ಜಜ್ಜಿದ ಶುಂಠಿ,
ಬೆಳ್ಳುಳ್ಳಿ ಬಳಸಹುದು)
ಗೋಡಂಬಿ 8-10
ಮೊಸರು 1/4 ಕಪ್
ಒಗ್ಗರಣೆಗೆ
1 ಚಮಚ ಎಣ್ಣೆ
ಸ್ವಲ್ಪ ಕರಿಬೇವು
ಲವಂಗ 2 ' 1/2 ಚಮಚ ಜೀರಿಗೆ
ಮಾಡುವ ವಿಧಾನ
- ಗೋಡಂಬಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ಸ್ವಲ್ಪ ಮೊಸರು ಹಾಕಿ ಪೇಸ್ಟ್ ಮಾಡಿ
- ಈಗ ಕುಕ್ಕರ್‌ಗೆ 2 ಚಮಚ ಎಣ್ಣೆ ಹಾಕಿ
- ನಂತರ ಸ್ವಲ್ಪ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಈರುಳ್ಳಿ ಹಾಕಿ
- ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅಥವಾ ಜಜ್ಜಿ ಹಾಕಿ
- ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿ.
- ನಂತರ ಅದನ್ನು ತೆಗೆದು ಮಿಕ್ಸಿ ಜಾರ್‌ಗೆ ಹಾಕಿ ತಣ್ಣಗಾದ ಮೇಲೆ ರುಬ್ಬಿ
- ನಂತರ ಅದೇ ಕುಕ್ಕರ್‌ಗೆ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಸ್ವಲ್ಪ ಕರಿಬೇವು ಹಾಕಿ, 2ಲವಂಗ , ಒಂದು ಇಂಚಿನಷ್ಟು ಚಕ್ಕೆ, 1 ಏಲಕ್ಕಿ, 1 ಚಮಚ ಜೀರಿಗೆ ಹಾಕಿ, ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ಮತ್ತೊಂದು ಈರುಳ್ಳಿ ಹಾಕಿ, ನಂತರ ಗೋಡಂಬಿ ಪೇಸ್ಟ್ ಹಾಕಿ, ನಂತರ ಟೊಮೆಟೊ ಪೇಸ್ಟ್ ಹಾಕಿ.
- ನಂತರ ಸ್ವಲ್ಪ ನೀರು ಹಾಕಿ ಕಾಶ್ಮೀರಿ ಪುಡಿ, 1 ಚಮಚ ಮಸಾಲ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ
- ನಂತರ ಮಸಾಲೆ ಕುದಿ ಬರಲಿ
- ನಂತರ ಅರ್ಧ ಅಥವಾ ಒಂದು ಕಪ್ ಬಟಾಣಿ ಹಾಕಿ, ನಂತರ ಕುಕ್ಕರ್ ವಿಶಲ್ ಹಾಕಿ ಒಂದು ವಿಶಲ್ ಬರುವವರೆಗೆ ಬೇಯಿಸಿ.
- ಎರಡು ವಿಶಲ್ ಬರುವವರೆಗೆ ಬೇಯಿಸಿದರೆ ತುಂಬಾ ಮೆತ್ತಗಾಗುವುದು.
- ಹಾಗಾಗಿ ಒಂದು ವಿಶಲ್ ಬರುವವರೆಗೆ ಬೇಯಿಸಿ
- ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ
ಬಟಾಣಿ: ನೀವು ಫ್ರೋಝನ್ ಹಾಕಿ ಅಥವಾ ಹಸಿ ಬಟಾಣಿ ಹಾಕಿ
ನೀವು ಗ್ರೇವಿ ಮಾಡಲು ಚಕ್ಕೆ, ಏಲಕ್ಕಿ, ಲವಂಗ, ಪಲಾವ್ ಎಲೆ ಆಥವಾ ಕರಿಬೇವು ಸೇರಿಸಿ
ಟೊಮಟೊವನ್ನು ಪೇಸ್ಟ್ ಮಾಡದೆ ಕೂಡ ಬಳಸಬಹುದು, ಸೌಟ್‌ನಲ್ಲಿಯೇ ಪೇಸ್ಟ್ ಮಾಡಬಹುದು.
Comments
[ of 5 - Users]
Story first published: Saturday, December 7, 2024, 11:20 [IST]
Other articles published on Dec 7, 2024



Click it and Unblock the Notifications
