Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಊಟ, ತಿಂಡಿಯೊಂದಿಗೆ ರುಚಿ ಹೆಚ್ಚಿಸುವ ಹೆಸರುಕಾಳಿನ ದಾಲ್: ಮಾಡುವ ವಿಧಾನವಿದು!
ಊಟದೊಂದಿಗೆ ಹಾಗೆ ತಿಂಡಿಗೆಯೊಂದಿಗೆ ನೀವು ಚಟ್ನಿ, ಪಲ್ಯ ಸೇರಿದಂತೆ ಹಲವು ರೀತಿಯ ತಿನಿಸುಗಳ ಸವಿಯಲು ಇಷ್ಟಪಡುತ್ತೀರಿ. ಅದ್ರಲ್ಲೂ ವಿಶೇಷ ರುಚಿಯ ಹಲವು ಖಾದ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ತಿಂಡಿಯೊಂಡಿಗೆ ಸವಿಯುವ ಖಾದ್ಯವೂ ಊಟದೊಂದಿಗೂ ರುಚಿ ನೀಡುವಂತಿದ್ದರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಊಟದೊಂದಿಗೆ ದಾಲ್ ರೆಸಿಪಿಗಳು ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುವುದು ಸಹಜ.
ಕಾಳುಗಳ ಬಳಸಿಕೊಂಡು ಮಾಡುವ ಹಲವು ವಿಧವಾದ ದಾಲ್ ಅಂದ್ರೆ ಎಲ್ಲರ ಬಾಯಲ್ಲಿ ನೀರು ಬರುತ್ತೆ. ಸಾಮಾನ್ಯವಾಗಿ ಹೆಸರು ಬೇಳೆ ಬಳಸಿ ಮಾಡುವ ದಾಲ್ ರುಚಿ ರುಚಿಯಾಗಿ ಎಲ್ಲಾ ಖಾದ್ಯದೊಂದಿಗೂ ಸವಿಯಬಹುದು. ನಾವಿಂದು ಈ ರುಚಿಯಾದ ದಾಲ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಊಟದೊಂದಿಗೆ ಮಾತ್ರವಲ್ಲ ತಿಂಡಿಯೊಂದಿಗೂ ಕೂಡ ಈ ದಾಲ್ ಸವಿಯಬಹುದು.

ರುಚಿ ರುಚಿಯ ದಾಲ್ ಎಲ್ಲಾ ಅಡುಗೆಯ ರುಚಿ ದುಪ್ಪಟ್ಟಾಗಿಸಲಿದೆ. ಹೀಗಾಗಿ ನಾವಿಂದು ಸುಲಭವಾಗಿ ಮಾಡಿ ಸವಿಯಬಹುದಾದ ಹೆಸರುಕಾಳಿನ ದಾಲ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಇದನ್ನು ನೀವು ಊಟದೊಂದಿಗೆ, ಚಪಾತಿ, ದೋಸೆ, ಪೂರಿ ಹೀಗೆ ಯಾವ ತಿಂಡಿಯೊಂದಿಗಾದರು ಸವಿಯಬಹುದು. ಹಾಗಾದ್ರೆ ಈ ಹೆಸರುಕಾಳಿನ ದಾಲ್ ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಯಾವೆಲ್ಲಾ ವಸ್ತುಗಳನ್ನು ಬಳಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಹೆಸರು ಕಾಳಿನ ದಾಲ್ ಮಾಡಲು ಅಗತ್ಯ ವಸ್ತುಗಳು
- ಹೆಸರು ಕಾಳು
- ಅರಶಿಣ ಪುಡಿ
- ಕರಿಬೇವು
- ಸಾಸಿವೆ
- ಈರುಳ್ಳಿ
- ಉಪ್ಪು
- ತೆಂಗಿನಕಾಯಿ ತುರಿ
- ಕೊತ್ತಂಬರಿ ಸೊಪ್ಪು
- ತರಕಾರಿಗಳು
- ಎಣ್ಣೆ
ಹೆಸರು ಕಾಳಿನ ದಾಲ್ ಮಾಡುವ ಸುಲಭದ ವಿಧಾನವೇನು?
ಮೊದಲು ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಎಣ್ಣ ಬಿಸಿಯಾದ ಬಳಿಕ ಇದಕ್ಕೆ ಸಾಸಿವೆ, ಈರುಳ್ಳಿ ಹಾಕಿ ಫ್ರೈ ಮಾಡಿ 1 ನಿಮಿಷ ಬಿಟ್ಟು ಇದಕ್ಕೆ ಟೊಮೆಟೋ ಸಹ ಹಾಕಿ 2 ನಿಮಿಷ ಫ್ರೈ ಮಾಡಿ. ಅನಂತರ ಇದಕ್ಕೆ ಅರಶಿಣ ಪುಡಿ, ಕರಿಬೇವು ಹಾಕಿಕೊಳ್ಳಿ. ಈಗ ತೊಳೆದುಕೊಂಡಿರುವ ಹೆಸರು ಕಾಳನ್ನು ಇದಕ್ಕೆ ಹಾಕಿಕೊಳ್ಳಿ. ಹೆಸರು ಕಾಳನ್ನು ನೆನೆಸುವ ಅಗತ್ಯವಿಲ್ಲ.
ಈಗ ಇದರ ಜೊತೆಗೆ ಯಾವುದಾದರು ತರಕಾರಿಯನ್ನು ಸೇರಿಸಬಹುದು. ಆಲೂಗಡ್ಡೆ, ಗೆಡ್ಡೆಕೋಸು, ಬೀನ್ಸ್, ಕ್ಯಾರೆಟ್ ಈ ರೀತಿ ಯಾವುದಾದರು ತರಕಾರಿ ಬಳಸಬಹುದು. ಅನಂತರ 2 ನಿಮಿಷ ಫ್ರೈ ಮಾಡಿಕೊಂಡು ಇದಕ್ಕೆ ಸಾಂಬಾರ್ ಪುಡಿ ಸೇರಿಸಿಕೊಂಡು ಮಿಶ್ರಣ ಮಾಡಿಕೊಳ್ಳಿ. ಈಗ ಈ ಎಲ್ಲಾ ಪದಾರ್ಥಗಳು ಮುಳುಗುವಷ್ಟು ನೀರು ಹಾಕಿಕೊಂಡು ಉಪ್ಪು, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ.
ಮೂರು ಸೀಟಿ ಹೊಡೆದ ಬಳಿಕ ಗ್ಯಾಸ್ ಹೋದಾಗ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಯಾವುದೇ ಒಗ್ಗರಣೆ ಮಾಡಿಕೊಳ್ಳುವ ಅಗತ್ಯವಿಲ್ಲ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಈ ದಾಲ್ ಸಿದ್ದವಾಗುತ್ತೆ. ಇದು ಅನ್ನದೊಂದಿಗೆ ಮಾತ್ರವಲ್ಲದೆ ಯಾವುದೇ ತಿಂಡಿಯೊಂದಿಗೆ ಕೂಡ ಸವಿಯಲು ಬಳಸಬಹುದು. ನೀವು ಸಹ ಮನೆಯಲ್ಲಿ ಈ ಹೆಸರುಕಾಳಿನ ದಾಲ್ ಮಾಡಿ ಸವಿದು ನೋಡಿ. ದೋಸೆ, ಚಪಾತಿಯೊಂದಿಗೆ ಇದು ಬಹಳ ರುಚಿಕರವಾದ ಖಾದ್ಯ ಆಗಿರಲಿದೆ.



Click it and Unblock the Notifications
