Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬಾಯಲ್ಲಿ ನೀರು ತರಿಸುವ ಗ್ರೀನ್ ಮಸಾಲ ಚಿಕನ್ ಬಿರಿಯಾನಿ: ತಯಾರಿ ವಿಧಾನ ಇಲ್ಲಿದೆ!
ಮಾಂಸಹಾರ ಪ್ರೇಮಿಗಳು ಚಿಕನ್ ಸವಿಯಲು ಬಹಳ ಇಷ್ಟಪಡುತ್ತಾರೆ ಅದ್ರಲ್ಲೂ ಚಿಕನ್ ಬಳಸಿ ಮಾಡುವ ಪ್ರತಿಯೊಂದು ಖಾದ್ಯವೂ ಬಹಳ ರುಚಿಯಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಚಿಕನ್ ಉತ್ತಮ ಪ್ರೋಟೀನ್ ಹೊಂದಿರುವ ಪದಾರ್ಥವಾಗಿರಲಿದೆ. ಹಾಗೆ ಚಿಕನ್ ಮಸಾಲ, ಸಾಂಬಾರ್, ಚಿಕನ್ ಲೆಗ್, ಚಿಕನ್ ಕಬಾಬ್, ಚಕನ್ ಸುಕ್ಕ, ಸೇರಿ ಹತ್ತಾರು ಬಗೆಯ ಖಾದ್ಯಗಳ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುವುದು ಖಚಿತ.
ಇನ್ನು ಚಿಕನ್ ಬಿರಿಯಾನಿ ಅಂದ್ರೆ ಬಹುತೇಕರಿಗೆ ಇಷ್ಟವಾಗುತ್ತೆ. ಸೌತ್ ಇಂಡಿಯನ್ ಶೈಲಿಯ ಚಿಕನ್ ಬಿರಿಯಾನಿ ರುಚಿಯೇ ಅದ್ಭುತ. ಅದಕ್ಕೆ ಮಸಾಲವನ್ನು ಹಲವು ಬಗೆಯಲ್ಲಿ ಮಾಡಬಹುದು. ಹೀಗಾಗಿ ಚಿಕನ್ ಬಿರಿಯಾನಿಯನ್ನು ಎಲ್ಲರು ಇಷ್ಟಪಡುತ್ತಾರೆ. ನಾನ್ ವೆಜ್ ಹೋಟೆಲ್ಗಳಲ್ಲಿ ಈ ಚಿಕನ್ ಬಿರಿಯಾನಿಗೆ ಬಹಳ ಬೇಡಿಕೆ ಇರಲಿದೆ.

ಹಾಗೆ ಚಿಕನ್ ಬಿರಿಯಾನಿ ಪ್ರಿಯರು ಅದರಲ್ಲೂ ವಿವಿಧ ಬಗೆಯನ್ನು ಇಷ್ಟಪಡುತ್ತಾರೆ. ಕೆಲವರು ಖಾರವಾಗಿ ಮತ್ತೆ ಕೆಲವರು ಪುದಿನ ಮಸಾಲ ಬಿರಿಯಾನಿ, ಡ್ರೈ ಬಿರಿಯಾನಿ, ಧಮ್ ಬಿರಿಯಾನಿ, ಪನೀರ್ ಮಸಾಲ ಬಿರಿಯಾನಿ ಹೀಗೆ ಹತ್ತಾರು ಬಗೆಯ ಬಿರಿಯಾನಿ ಸವಿಯೋದು ನೋಡಿರಬಹುದು. ನಾವಿಂದು ಸುಲಭವಾಗಿ ಮಾಡುವಂತಹ ಗ್ರೀನ್ ಮಸಾಲ ಬಿರಿಯಾನಿ ಕುರಿತು ತಿಳಿಯೋಣ.
ಈ ಗ್ರೀನ್ ಮಸಾಲ ಬಿರಿಯಾನಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ನೋಡಿ.
ಗ್ರೀನ್ ಮಸಾಲ ಬಿರಿಯಾನಿ ಮಾಡಲು ಬೇಕಾಗುವ ಪದಾರ್ಥಗಳು
- ಚಿಕನ್
- ಪುದಿನ
- ಕೊತ್ತಂಬರಿ ಸೊಪ್ಪು
- ಮೆಣಸು
- ಬಿರಿಯಾನಿ ಮಸಾಲೆಗಳು
- ಮೊಸರು
- ಉಪ್ಪು
- ಎಣ್ಣ
- ಮೆಂತ್ಯ ಸೊಪ್ಪು
- ಅರಶಿಣ
ಗ್ರೀನ್ ಮಸಾಲ ಬಿರಿಯಾನಿ ಮಾಡುವುದು ಹೇಗೆ?
ಮೊದಲು ಚಿಕನ್ ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಪುದಿನ ಎಲೆಗಳು, ಕೊತ್ತಂಬರಿ ಸೊಪ್ಪು ಹಾಕಿಕೊಳ್ಳಿ. ಕೊತ್ತಂಬರಿ, ಪುದಿನ ಹೆಚ್ಚಾಗಿ ಬಳಸಿ. ಈಗ ಇದಕ್ಕೆ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನು ತೆಗೆದು 3 ಸ್ಪೂನ್ ಮಸಾಲೆಯನ್ನು ಚಿಕನ್ಗೆ ಹಾಕಿ ಮಿಕ್ಸ್ ಮಾಡಿ. ಉಳಿದ ಮಸಾಲೆ ತೆಗೆದಿಟ್ಟುಕೊಳ್ಳಿ.
ಚಿಕನ್ಗೆ ಅರಶಿಣ ಪುಡಿ, ಉಪ್ಪು ಹಾಗೆ ಈ ಗ್ರೀನ್ ಮಸಾಲೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಂದು ಗ್ಲಾಸ್ನಲ್ಲಿ ಅಳತೆಯಷ್ಟು ಅಕ್ಕಿಯನ್ನ ತೆಗೆದಿಟ್ಟುಕೊಳ್ಳಿ. ಇದನ್ನು ಚೆನ್ನಾಗಿ ತೊಳೆದು ನೀರು ಹಾಕಿ 15 ನಿಮಿಷ ನೆನೆಸಿಡಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಅನಂತರ ಇದಕ್ಕೆ ಬಿರಿಯಾನಿ ಮಸಾಲೆ ಹಾಕಿ, ಪಲಾವ್ ಎಲೆ, ಮರಾಠಿ ಮೊಗ್ಗು, ಕಾಳು ಮೆಣಸು, ಚಕ್ಕೆ, ಲವಂಗ ಹಾಕಿಕೊಳ್ಳಿ.
ನಂತರ ಇದಕ್ಕೆ 5 ಈರುಳ್ಳಿ ಹೆಚ್ಚಿ ಇದಕ್ಕೆ ಹಾಕಿ ಫ್ರೈ ಮಾಡಿ 4 ನಿಮಿಷ ಫ್ರೈ ಮಾಡಿದ ಬಳಿಕ ಮೆಂತ್ಯ ಸೊಪ್ಪು ಕತ್ತರಿಸಿಕೊಂಡು ಇದಕ್ಕೆ ಹಾಕಿ ಫ್ರೈ ಆಗಲು ಬಿಡಬೇಕು. 10 ನಿಮಿಷ ಬಿಟ್ಟು ಅನಂತರ ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿದ್ದ ಮಸಾಲೆಯನ್ನು ಹಾಕಿ ಫ್ರೈ ಮಾಡಬೇಕು. 3ರಿಂದ 4 ನಿಮಿಷದ ಬಳಿಕ 3 ಟೊಮೆಟೋ ಇದಕ್ಕೆ ಹಾಕಿಕೊಳ್ಳಬೇಕು.
ನಂತರ ಮುಚ್ಚಳ ಮುಚ್ಚಿ 2 ನಿಮಿಷ ಬಿಡಿ. ಈಗ ಇದಕ್ಕೆ ಚಿಕನ್ ಅನ್ನು ಹಾಕಿಕೊಂಡು ಮಿಕ್ಸ್ ಮಾಡಿ 5 ನಿಮಿಷ ಬೇಯಿಸಿಕೊಳ್ಳಿ. ಇದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ, ಚಿಕನ್ ಮಸಾಲ, ಬಿರಿಯಾನಿ ಮಸಾಲ ಸಹ ಹಾಕಿಕೊಳ್ಳಿ. 2 ನಿಮಿಷ ಬಿಟ್ಟು ಇದಕ್ಕೆ ಕಾಲು ಲೀಟರ್ ಮೊಸರು ಸೇರಿಸಿಕೊಳ್ಳಿ. ಹಾಗೆ ಕುದಿಬರಲು ಬಿಡಿ. ನಂತರ ಇದಕ್ಕೆ ಅಕ್ಕಿ ಅಳತೆಯಲ್ಲಿ ನೀರು ಸೇರಿಸಿಕೊಳ್ಳಬೇಕು. ಹಾಗೆ ಉಪ್ಪು ಹಾಕಿ ಈ ನೀರು ಕುದಿಯಲು ಬಿಡಿ.
ಕುದಿಯಲು ಆರಂಭಿಸಿದಾಗ ನೆನೆಸಿಟ್ಟಿದ್ದ ಅಕ್ಕಿಯನ್ನು ಇದಕ್ಕೆ ಹಾಕಿಕೊಂಡು ಮಿಶ್ರಣ ಮಾಡಿ. ನಂತರ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ಮುಚ್ಚಳ ಮುಚ್ಚಿ 15 ನಿಮಿಷ ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಗ್ರೀನ್ ಮಸಾಲ ಬಿರಿಯಾನಿ ಸಿದ್ದವಾಗುತ್ತೆ.



Click it and Unblock the Notifications