Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಗ್ರೀನ್ ಮಸಾಲ ಚಕ್ಕುಲಿ ಮಾಡೋದು ಹೇಗೆ ಗೊತ್ತಾ? 15 ನಿಮಿಷದಲ್ಲಿ ಮಾಡಬಹುದು!!
ನೀವು ಮನೆಯಲ್ಲಿ ಫ್ರೀ ಆಗಿದ್ದಾಗ ಸಂಜೆ ಸಮಯದಲ್ಲಿ ಸವಿಯಲು ಒಂದಿಷ್ಟು ತಿಂಡಿ ಮಾಡುವ ಅಭ್ಯಾಸ ಇಟ್ಟುಕೊಂಡಿರುತ್ತೀರಿ. ಹಾಗೆ ಕರಿದು ಸವಿಯುವ ಎಲ್ಲರಿಗೂ ಇಷ್ಟವಾಗುವಂತಹ ಚಕ್ಕುಲಿಯನ್ನು ಯಾವಾಗಲು ಮಾಡುತ್ತಿದ್ದರೆ ಸಂಜೆ ಸಮಯದಲ್ಲಿ ಸವಿಯಲು ಇಷ್ಟವಾಗುತ್ತೆ. ಚಕ್ಕುಲಿಗಳಲ್ಲಿಯೂ ಈಗ ಹತ್ತು ಹಲವು ಬಗೆಯನ್ನು ನಾವಿಂಗ ನೋಡಬಹುದು, ಮಾರುಕಟ್ಟೆಯಲ್ಲಿ ರುಚಿ ರುಚಿಯ ಚಕ್ಕುಲಿಗಳು ಗಮನ ಸೆಳೆಯುತ್ತವೆ.
ಮನೆಯಲ್ಲಿ ಶುಭ ಕಾರ್ಯಕ್ಕೆ, ಹಬ್ಬದ ಸಮಯದಲ್ಲಿ ಚಕ್ಕುಲಿ ಮಾಡುವುದು ಸಾಮಾನ್ಯ. ಹಬ್ಬದ ಊಟ ಅಂದ್ರೆ ಅದರಲ್ಲಿ ಚಕ್ಕುಲಿ ಇದ್ದರೆ ಬಹಳ ರುಚಿಯಾಗುತ್ತೆ. ಹಾಗೆ ಸಂಜೆ ಸಮಯದಲ್ಲಿ ಸವಿಯಲು ಕೂಡ ಚಕ್ಕುಲಿ ಇದ್ದರೆ ಟೈಮ್ ಪಾಸ್ಗೆ ಒಳ್ಳೆಯ ತಿಂಡಿ. ಮಕ್ಕಳು ಕೂಡ ಚಕ್ಕುಲಿಯನ್ನ ಇಷ್ಟಪಟ್ಟು ಸವಿಯುತ್ತಾರೆ. ಹಾಗೆ ತಿಂಗಳಗಳ ಕಾಲ ಇಟ್ಟು ಸವಿಯಬಹುದು.

ಅದರಲ್ಲೂ ಚಕ್ಕುಲಿಯನ್ನು ಸುಲಭವಾಗಿ ಮಾಡಬಹುದು. ಕೆಲವೇ ವಸ್ತುಗಳ ಬಳಸಿಕೊಂಡು ಈ ತಿಂಡಿ ಮಾಡಬಹುದು. ಹಾಗಾದ್ರೆ ಈ ಚಕ್ಕುಲಿ ಮಾಡುವುದು ಹೇಗೆ? ಮಾಡುವ ವಿಧಾನವೇನು? ಚಕ್ಕುಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಅದರಲ್ಲೂ ಕಲರ್ಫುಲ್ ಚಕ್ಕುಲಿ ಮಾಡುವುದು ಹೇಗೆ ಅನ್ನೋದನ್ನು ನೋಡೋಣ.
ಚಕ್ಕುಲಿ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ ಹಿಟ್ಟು - 1 ಕಪ್
- ಕಡಲೆ ಹಿಟ್ಟು- ಅರ್ಧ ಕಪ್
- ಮೈದಾ ಹಿಟ್ಟು - 1 ಚಮಚ
- ಜೀರಿಗೆ
- ಕಪ್ಪು ಎಳ್ಳು
- ಓಂಕಾಳು
- ಬೆಣ್ಣೆ
- ಕೊತ್ತಂಬರಿ ಸೊಪ್ಪು
- ಹಸಿ ಮೆಣಸಿನಕಾಯಿ
- ಕರಿಬೇವು
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ಚಕ್ಕುಲಿ ಮಾಡುವುದು ಹೇಗೆ?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಕೊತ್ತಂಬರಿ, ಹಸಿ ಮೆಣಸು, ಕರಿಬೇವು, ಉಪ್ಪು ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಸಾಲೆಯನ್ನು ಹಾಗೆ ಇಟ್ಟುಕೊಳ್ಳಿ. ಈಗ ಒಂದು ಬೌಲ್ಗೆ ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಸ್ವಲ್ಪ ಬೆಣ್ಣೆ, ಕಪ್ಪು ಎಳ್ಳು, ಜೀರಿಗೆ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ.
ಮೊದಲು ಡ್ರೈ ಮಿಕ್ಸ್ ಮಾಡಿಕೊಂಡು ನಂತರ ಮಿಕ್ಸಿಯಲ್ಲಿ ರುಬ್ಬಿಕೊಂಡ ಮಿಶ್ರಣವನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಕೈಯಿಂದಲೇ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟು ಹದ ಮಾಡಿಕೊಳ್ಳಿ. ಹಿಟ್ಟು ತೆಳುವಾಗದಂತೆ ನೋಡಿಕೊಳ್ಳಿ. ತೆಳುವಾದರೆ ಅಕ್ಕಿ ಹಿಟ್ಟು ಹಾಕಿಕೊಳ್ಳಿ. ಈಗ ರೆಡಿಯಾದ ಹಿಟ್ಟನ್ನು ಹದವಾಗಿಡಿ.
ನಂತರ ಚಕ್ಕುಲಿ ಅಚ್ಚನ್ನು ತೆಗೆದುಕೊಂಡು ಅದಕ್ಕೆ ತುಪ್ಪ ಅಥವಾ ಎಣ್ಣೆಯನ್ನು ಸವರಿಕೊಳ್ಳಿ. ನಂತರ ಹಿಟ್ಟನ್ನು ಒಳಗೆ ತುಂಬಿಕೊಂಡು ನಿಧಾನವಾಗಿ ಒತ್ತಿಕೊಂಡು ಚಕ್ಕುಲಿ ಹಾಕಿಕೊಳ್ಳಿ. ಒಂದು ತಟ್ಟೆಯ ಮೇಲೆ, ಪ್ಲಾಸ್ಟಿಕ್ ಮೇಲೆ ಮೊದಲು ಅಚ್ಚಿನಿಂದ ಚಕ್ಕುಲಿ ಹಾಕಿಕೊಂಡು, ಬಾಣಲೆಯಲ್ಲಿ ಎಣ್ಣೆ ಕಾದ ಬಳಿಕ ಎಣ್ಣೆಗ ಬಿಡಿ. ಸಣ್ಣ ಉರಿಯಲ್ಲಿ ಚಕ್ಕುಲಿಯನ್ನು ಕರಿಯಬೇಕು. ಇದು ಹಸಿರು ಬಣ್ಣದಲ್ಲಿ ಬರುವ ಅದ್ಭುತ ರುಚಿ ನೀಡುವ ಚಕ್ಕುಲಿಯಾಗಲಿದೆ. ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications
