Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ತೂಕ ಇಳಿಸುವ ಜೊತೆಗೆ ಚರ್ಮದ ಕಾಂತಿ ಹೆಚ್ಚಿಸುವ ಸೊಪ್ಪಿನ ಜ್ಯೂಸ್! ತೂಕ ಇಳಿಸೋದು ಚಿಟಿಕೆ ಹೊಡೆದಷ್ಟೇ ಸುಲಭ!
ಇತ್ತೀಚಿನ ದಿನಗಲ್ಲಿ ತೂಕ ಹೆಚ್ಚಾಗುವುದು ಹಾಗೆ ಆ ತೂಕವನ್ನು ಇಳಿಸಿಕೊಳ್ಳಲು ಜನರು ಹರಸಾಹಸ ಮಾಡುವುದು ಸಾಮಾನ್ಯ ಎನ್ನುವಂತಾಗಿದೆ. ಸಣ್ಣ ವಯಸ್ಸಿನಲ್ಲಿ ತೂಕ ಹೆಚ್ಚಳದಿಂದ ಸಮಸ್ಯೆಗೆ ಒಳಗಾಗಿರುವವರು ಬಹಳ ಕಷ್ಟಪಟ್ಟು ತೂಕ ಇಳಿಸಲು ಮುಂದಾಗುವುದು ನೋಡಬಹುದು. ಹಾಗೆ ಜೀವನ ಶೈಲಿಯ ಕಾರಣದಿಂದ ಈ ತೂಕ ಹೆಚ್ಚಳವನ್ನು ನಿಯಂತ್ರಿಸುವುದು ಸಹ ಕಷ್ಟವಾಗುತ್ತೆ.
ಆದ್ರೆ ನಾವಿಂದು ಮನೆಯಲ್ಲೇ ಅತ್ಯಂತ ಸುಲಭವಾಗಿ ತೂಕ ಇಳಿಸುವ ಜೊತೆಗೆ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುವಂತಹ ಜ್ಯೂಸ್ ಅನ್ನು ಮಾಡುವ ಕುರಿತು ತಿಳಿದುಕೊಳ್ಳೋಣ. ಯಾವುದೇ ಡಯೆಟ್ ಇಲ್ಲದೆ, ಜಿಮ್ ಹೋಗದೆ ಸರಳ ವ್ಯಾಯಾಮ ಹಾಗೆ ಸುಲಭದ ಜ್ಯೂಸ್ ಮೂಲಕ ತೂಕ ಇಳಿಸಿಕೊಳ್ಳುತ್ತಾ ಚರ್ಮದ ಕಾಂತಿಯನ್ನು ಸಹ ಹೆಚ್ಚಿಸಿಕೊಳ್ಳುವ ಉಪಾಯವನ್ನು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ತೂಕ ಇಳಿಸುವಾಗೆಲ್ಲಾ ಡಯೆಟ್ ಮಾಡುವುದು, ಸಸ್ಯಹಾರ ಸೇವನೆ, ಗಂಟೆಗಳ ಕಾಲ ಓಡುವುದು, ನಡೆಯುವುದು ಮಾಡಬೇಕಾಗುತ್ತದೆ. ಆದ್ರೆ ಯಾವಾಗಲು ಇದನ್ನು ಮಾಡಲಾಗದು. ಹೀಗಾಗಿ ಮನೆಯಲ್ಲಿ ಈ ಸುಲಭದ ಜ್ಯೂಸ್ ತಯಾರಿಸಿ ಸೇವಿಸಿದರೆ ಸುಲಭವಾಗಿ ತೂಕ ಇಳಿಸುವ ಜೊತೆಗೆ ಚರ್ಮದ ಕಾಂತಿ ಕೂಡ ಹೆಚ್ಚಾಗುವುದು ನೋಡಬಹುದು. ಹಾಗಾದ್ರೆ ಈ ಸೊಪ್ಪುಗಳಿಂದ ಜ್ಯೂಸ್ ತಯಾರಿಸುವುದು ಹೇಗೆ? ಈ ಜ್ಯೂಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ತೂಕ ಇಳಿಸುವ ಸೊಪ್ಪಿನ ಜ್ಯೂಸ್ ಮಾಡಲು ಅಗತ್ಯ ವಸ್ತುಗಳು
- ಮೆಂತ್ಯ ಸೊಪ್ಪು
- ಪುದಿನ ಎಲೆ
- ಕೊತ್ತಂಬರಿ ಸೊಪ್ಪು
- ಪಾಲಕ್ ಸೊಪ್ಪು
- ಕ್ಯಾರೆಟ್
- ಸೀಬೆ ಹಣ್ಣು
- ಶುಂಠಿ
ತೂಕ ಇಳಿಸುವ ಸೊಪ್ಪಿನ ಜ್ಯೂಸ್ ಮಾಡುವ ಸುಲಭದ ವಿಧಾನವೇನು?
ಮೊದಲು ಎಲ್ಲಾ ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿ ಇಟ್ಟುಕೊಳ್ಳಿ. ಹಾಗೆ ಒಂದು ಕ್ಯಾರೆಟ್ ಅನ್ನು ತುರಿದುಕೊಳ್ಳಿ. ಹಾಗೆ ಶುಂಠಿಯನ್ನು ಸಹ ತುರಿದು ಅಥವಾ ಸಣ್ಣದಾಗಿ ಹೆಚ್ಚಿ ಇಟ್ಟುಕೊಳ್ಳಿ. ಹಾಗೆ ಸೀಬೆ ಹಣ್ಣು ಅಥವಾ ಪೇರಲೆ ಹಣ್ಣಿನ ಅರ್ಧ ಭಾಗದಲ್ಲಿ ಸ್ವಲ್ಪ ತುರಿದುಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎಲ್ಲಾ ವಸ್ತುಗಳನ್ನು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಗಟ್ಟಿಯಾಗಿದ್ದರೆ ನೀರು ಸೇರಿಸಬಹುದು. ಹಾಗೆ ಇದನ್ನು ಒಂದು ಗ್ಲಾಸ್‌ಗೆ ಜರಡಿ ಹಿಡಿದು, ಬಳಿಕ ಅದಕ್ಕೆ ಒಂದು ನಿಂಬೆ ಹಣ್ಣನ್ನು ಹಿಂಡಿಕೊಳ್ಳಿ. ಸಿಹಿ ಬೇಕಿದ್ದರೆ ಜೇನು ತುಪ್ಪ ಸ್ವಲ್ಪ ಬಳಸಬಹುದು. ಆದ್ರೆ ಜೇನು ತುಪ್ಪ ಬಳಸದೆಯೇ ಸವಿಯುವುದು ಮತ್ತಷ್ಟು ಫಲಿತಾಂಶ ಉತ್ತಮವಾಗಲು ಸಹಕಾರಿಯಾಗಲಿದೆ.
ಈ ಜ್ಯೂಸ್ ಅನ್ನು ನಿತ್ಯ ಸೇವಿಸಿದರೆ ನಿಮ್ಮ ತೂಕ ದ್ವಿಗುಣ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಹಾಗೆ ನಿಮ್ಮ ಚರ್ಮದ ಕಾಂತಿ ಕೂಡ ಹೆಚ್ಚಾಗುವುದು ನೋಡಬಹುದು. ನೀವು ತೂಕ ಇಳಿಸಲು ಹತ್ತಾರು ರೀತಿಯ ಶ್ರಮ ಹಾಕುತ್ತಿದ್ದರೆ ಅದನೆಲ್ಲಾ ಬಿಟ್ಟು ಈ ಒಂದು ಜ್ಯೂಸ್ ಸೇವಿಸಿ ಫಲಿತಾಂಶ ಸಹ ನೋಡಬಹದು. ನಿಮಗೂ ತೂಕ ಇಳಿಸಿಕೊಳ್ಳುವ ಹಾಗೆ ಚರ್ಮದ ಆರೋಗ್ಯಕ್ಕೆ ಉತ್ತಮ ಜ್ಯೂಸ್ ಬೇಕಿದ್ದರೆ ಈ ಸೊಪ್ಪು ಮಿಶ್ರಿತ ಜ್ಯೂಸ್ ಅನ್ನು ಪ್ರಯತ್ನಿಸಿ. ಕೆಲವೇ ವಾರದಲ್ಲಿ ಇದರ ಫಲಿತಾಂಶ ಕೂಡ ನೀವು ನೋಡಬಹುದು.



Click it and Unblock the Notifications
