Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೆಸರುಕಾಳಿನ ಮಸಾಲೆ ಪಲ್ಯ ನೀವೊಮ್ಮೆ ಟೇಸ್ಟ್ ಮಾಡಿ ನೋಡಿ..!
ಊಟದ ಹಾಗೂ ತಿಂಡಿಯ ಜೊತೆಗೆ ಒಂದು ಮಸಾಲೆ ಭರಿತ ಪಲ್ಯ ಇದ್ದರೆ ಆ ಊಟ ಬೊಂಬಾಟ್ ರುಚಿ ಬರುತ್ತೆ. ನಾವು ಊಟದ ಜೊತೆಗೆ ಮಾಸಲೆ ಭರಿತ ಕಾಳು ಪಲ್ಯ ಮಾಡುವುದು ಹೇಗೆ ಎಂಬುದನ್ನು ಈ ಮೊದಲೇ ತಿಳಿಸಿದ್ದೆವು. ಇನ್ನು ಇಂದು ನಾವು ಹೆಸರು ಕಾಳಿಗೆ ಮಸಾಲೆಗಳ ಹಾಕಿ ಮಾಡುವಂತಹ ಅದ್ಭುತ ರುಚಿಯ ಒಂದು ಪಲ್ಯ ಮಾಡುವ ಕುರಿತಂತೆ ತಿಳಿದುಕೊಳ್ಳೋಣ.
ಈ ಹೆಸರು ಕಾಳಿನಲ್ಲಿ ಹಲವು ರೀತಿಯ ಪಲ್ಯ, ಸಾರು, ಖಾದ್ಯ ಮಾಡಬಹುದಾಗಿದೆ. ಅದರಲ್ಲೂ ಆರೋಗ್ಯಕ್ಕೆ ಬಹಳ ಉತ್ತಮವಾದ ಈ ಹೆಸರು ಕಾಳಿನ ಮಸಾಲೆ ಪಲ್ಯ ಮಾಡುವ ಕುರಿತಂತೆ ನಾವಿಂದು ತಿಳಿದುಕೊಳ್ಳೋಣ.

ಮಸಾಲೆ ಭರಿತ ಈ ಹೆಸರು ಕಾಳಿನ ಪಲ್ಯ ಮಾಡುವುದು ಹೇಗೆ?, ಹೆಸರು ಕಾಳಿನ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳ ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೆಸರು ಕಾಳಿನ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಹೆಸರು ಕಾಳು- 200 ಗ್ರಾಮ್
- ತುರಿದ ತೆಂಗಿನಕಾಯಿ - 1/2 ಕಪ್
- ಹಸಿ ಮೆಣಸಿನಕಾಯಿ - 5
- ಶುಂಠಿ
- ಲವಂಗ - 5
- ಕೊತ್ತಂಬರಿ ಸೊಪ್ಪು
- ಎಣ್ಣೆ - 2 tbs
- ಸಾಸಿವೆ
- ಈರುಳ್ಳಿ - 2
- ಕರಿಬೇವಿನ ಎಲೆಗಳು
- ಉಪ್ಪ
ಹೆಸರು ಕಾಳಿನ ಪಲ್ಯ ಮಾಡುವ ವಿಧಾನವೇನು?
ಮೊದಲು ಕುಕ್ಕರ್ ಅನ್ನು ಒಲೆ ಮೇಲೆ ಇಟ್ಟು ಅದಕ್ಕೆ ನೆನೆಸಿಟ್ಟಿರುವ ಹೆಸರು ಕಾಳನ್ನು ಹಾಕಿಕೊಳ್ಳಿ. 2ರಿಂದ 3 ಗಂಟೆ ನೆನೆಸಿಟ್ಟರೆ ಸಾಕು. ಹೆಸರು ಕಾಳು ಮುಳುಗುವಷ್ಟು ನೀರು ಹಾಕಿ ಇದಕ್ಕೆ ಉಪ್ಪು ಹಾಕಿ ಮುಚ್ಚಳ ಮುಚ್ಚಿ 1 ಸೀಟಿ ಹೊಡೆಯಲು ಬಿಡಿ.
ಈಗ ಮಿಕ್ಸಿ ಜಾರ್ ತೆಗೆದುಕೊಂಡು ಇದಕ್ಕೆ ಕಾಯಿ ತುರಿ, ಹಸಿ ಮೆಣಸು, ಶುಂಠಿ, ಚಕ್ಕೆ, ಲವಂಗ, ಕೊತ್ತಂಬರಿ ಸೊಪ್ಪು ಸ್ವಲ್ಪ ನೀರು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ನಂತರ ಈ ಮಸಾಲೆ ಎತ್ತಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಬಳಿಕ ಸಾಸಿವೆ, ಈರುಳ್ಳಿ, ಕರಿಬೇವು, ಈರುಳ್ಳಿ, ಹಾಕಿ ಕೊಂಡ ಬಳಿಕ ಮಿಕ್ಸಿಯಲ್ಲಿ ನಾವು ತರಿತರಿಯಾಗಿ ರುಬ್ಬಿಕೊಂಡಿದ್ದ ಮಸಾಲೆಯನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ. ತಳ ಹಿಡಿಯದಂತೆ ಮಿಕ್ಸ್ ಮಾಡುತ್ತಾ ಇರಿ. 4 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಬೇಯಿಸಿರುವ ಹೆಸರು ಕಾಳನ್ನು ಇದಕ್ಕೆ ಹಾಕಿಕೊಳ್ಳಿ.
ಚೆನ್ನಾಗಿ ಮಿಕ್ಸ್ ಮಾಡಿ ಉಪ್ಪು ಹಾಕಿ 4 ನಿಮಿಷ ಮತ್ತೆ ಬೇಯಲು ಬಿಡಿ. ಅದರಲ್ಲಿ 2 ನಿಮಿಷ ಮುಚ್ಚಳ ಮುಚ್ಚಿ ಬೇಯಲು ಬಿಡಿ. ಕೊನೆಯದಾಗಿ ನಿಂಬೆ ರಸ, ಕಾಯಿ ತುರಿ, ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಮಸಾಲೆ ಭರಿತ ಹೆಸರುಕಾಳಿನ ಪಲ್ಯ ರೆಡಿಯಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನು ಸವಿದು ನೋಡಿ.



Click it and Unblock the Notifications
