Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸಾಂಪ್ರದಾಯಿಕ ಶೈಲಿಯಲ್ಲಿ ಹೆಸರು ಕಾಳಿನ ಉಂಡೆ ಮಾಡಿ..! ಇಲ್ಲಿದೆ ಆರೋಗ್ಯ ಬೂಸ್ಟರ್ ರೆಸಿಪಿ!
ಉತ್ತರ ಕರ್ನಾಟಕ ಭಾಗದಲ್ಲಿ ಬೇಳೆ ಕಾಳುಗಳಿಂದ ಮಾಡುವ ಉಂಡೆಗಳು ಅಂದರೆ ಬಹಳ ಫೇಮಸ್. ಪ್ರತಿಯೊಬ್ಬರ ಮನೆಯಲ್ಲೂ ಈ ರೀತಿಯ ಒಂದಲ್ಲಾ ಒಂದು ಉಂಡೆಯನ್ನು ಮಾಡಿ ಸವಿಯುವುದು ನೋಡಬಹುದು. ಅದ್ರಲ್ಲೂ ಕೆಲವೊಂದು ಉಂಡೆ ನಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮವಾಗಿರಲಿದೆ. ಅದ್ರಲ್ಲಿ ನಾವಿಂದು ಹೆಸರು ಕಾಳಿನಿಂದ ಮಾಡುವ ಆರೋಗ್ಯಕರ ಲಡ್ಡು ಕುರಿತಾಗಿ ತಿಳಿದುಕೊಳ್ಳೋಣ.
ಹೆಸರು ಕಾಳನ್ನು ಹಲವು ರೀತಿಯ ಖಾದ್ಯಗಳಿಗೆ ಬಳಸುತ್ತೀರಿ. ಮೊಳಕೆ ಬರಿಸಿದ ಹೆಸರು ಕಾಳು ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದನ್ನು ನಾವು ತಿಳಿದಿದ್ದೇವೆ. ಇನ್ನು ಹೆಸರು ಕಾಳಿನ ಉಂಡೆ ಅತ್ಯಂತ ರುಚಿಕರ ಹಾಗೆ ಆರೋಗ್ಯಕರವಾದ ಖಾದ್ಯ ಎನ್ನಬಹುದು. ಹೆಸರುಕಾಳಿನಲ್ಲಿರುವ ಪ್ರೋಟೀನ್, ಫೈಬರ್, ಫೋಲೇಟ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿ ಅಂಶವು ನಮ್ಮ ಆರೋಗ್ಯಕ್ಕೆ ಬಹಳ ಉತ್ತಮವಾಗಿರಲಿದೆ.

ಹೆಸರು ಕಾಳು ನಮ್ಮ ಜೀರ್ಣಕ್ರಿಯೆಗೆ ಬಹಳ ಉತ್ತಮ. ಹಾಗೆ ಇದು ತೂಕ ಇಳಿಸಿಕೊಳ್ಳಲು ಕೂಡ ಬಹಳ ಸಹಕಾರಿಯಾಗಿದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಹಾಗೆ ಹೆಚ್ಚಿನ ಫೈಬರ್ ಇರಲಿದೆ. ಹಾಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಸುಧಾರಣೆಗೂ ಕೂಡ ಇದು ಬಹಳ ಉತ್ತಮ ಆಹಾರ ಎನ್ನಬಹುದು. ಹೀಗಾಗಿ ಪ್ರತಿಯೊಂದು ಖಾದ್ಯದಲ್ಲೂ ಹೆಸರು ಕಾಳು ಬಳಸುವುದು ಉತ್ತಮ.
ಇನ್ನು ಹೆಸರು ಕಾಳಿನಿಂದ ಮಾಡುವಂತಹ ರುಚಿ ರುಚಿಯ ಉಂಡೆ ಕುರಿತು ತಿಳಿಯೋಣ. ಈ ಹೆಸರು ಕಾಳಿನ ಉಂಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು.? ಮಾಡುವುದು ಹೇಗೆ? ಅದನ್ನು ಶೇಖರಿಸಿ ಇಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಹೆಸರು ಕಾಳಿನ ಉಂಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಹೆಸರು ಕಾಳು- 1 ಕೆ.ಜಿ
- ಸಕ್ಕರೆ
- ತುಪ್ಪ
ಹೆಸರು ಕಾಳಿನ ಉಂಡೆ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆಯಲ್ಲಿ ಹೆಸರು ಕಾಳನ್ನು ಹಾಕಿಕೊಂಡು ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ಇದು ಬಣ್ಣ ಬದಲಿಸುವಂತೆ ಮಾಡಬೇಕು ಸುಮಾರು 30 ನಿಮಿಷಕ್ಕೂ ಹೆಚ್ಚು ಸಮಯ ಹುರಿದುಕೊಳ್ಳಬೇಕು. ನಂತರ ಒಲೆ ಆಫ್ ಮಾಡಿಕೊಂಡು ಈ ಕಾಳನ್ನು ಬದಿಗಟ್ಟುಕೊಳ್ಳಿ. ಈಗ ಹೆಸರು ಕಾಳನ್ನು ಒಂದು ಮಿಕ್ಸಿ ಜಾರ್ಗೆ ಹಾಕಿ 1 ಸುತ್ತು ಬರುವಂತೆ ಮಾಡಿಕೊಳ್ಳಿ. ಏಕೆಂದರೆ ಈ ರೀತಿ ಮಾಡಿ ಸಿಪ್ಪೆಯನ್ನು ತೆಗೆದುಕೊಳ್ಳಬೇಕು. ಜರಡಿ ಹಿಡಿದು ಇಲ್ಲವೆ ಗಾಳಿಗೆ ಹಿಡಿದು ಸಿಪ್ಪೆಯನ್ನು ಬೇರ್ಪಡಿಸಿ ಕಾಳನ್ನು ಮಾತ್ರ ಇಟ್ಟುಕೊಳ್ಳಿ.
ಈಗ ಈ ಕಾಳನ್ನು ಸ್ವಲ್ಪ ಸ್ವಲ್ಪವೇ ಮಿಕ್ಸಿ ಜಾರ್ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಎಷ್ಟು ನುಣ್ಣಗೆ ಸಾಧ್ಯವೋ ಅಷ್ಟು ಮಾಡಿಕೊಂಡು ಮತ್ತೆ ಜರಡಿ ಹಿಡಿದು ನುಣ್ಣಗಿರುವ ಪುಡಿಯನ್ನು ಮಾತ್ರವೇ ತೆಗೆದುಕೊಳ್ಳಿ. ಈಗ ಒಂದು ಅಳತೆ ಕಪ್ನಲ್ಲಿ 4 ಕಪ್ ಹಿಟ್ಟು ತೆಗೆದುಕೊಂಡು ಅದಕ್ಕೆ ಸಕ್ಕರೆ ಪುಡಿ ಹಾಕಿಕೊಳ್ಳಿ.
ಸಕ್ಕರೆಯನ್ನು ಕೂಡ ಮಿಕ್ಸಿ ಜಾರ್ನಲ್ಲಿ ಹಾಕಿ ರುಬ್ಬಿಕೊಂಡಿರಬೇಕು. ನಿಮಗೆ ಸಿಹಿಗೆ ಎಷ್ಟು ಅಗತ್ಯವೋ ಅಷ್ಟು ಬಳಸಿ. ಸಾಮಾನ್ಯವಾಗಿ 3 ಕಪ್ ಸಕ್ಕರೆ ಪುಡಿ ಹಾಕಿ. ಹಾಗೆ ಏಲಕ್ಕಿಯನ್ನು ಜಜ್ಜಿ ಪುಡಿ ಮಾಡಿ ಇದಕ್ಕೆ ಹಾಕಿಕೊಳ್ಳಿ. ನಂತರ ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ( ಈ ಸಮಯದಲ್ಲಿ ಹಿಟ್ಟನ್ನು ಮತ್ತೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬಹುದು)
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಬಿಸಿ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಈಗ ಹಿಟ್ಟು ಇರುವ ಪಾತ್ರೆಗೆ ಸ್ವಲ್ಪ ಸ್ವಲ್ಪವೇ ತುಪ್ಪ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ. ತುಪ್ಪ ಹಿಟ್ಟಿನೊಂದಿಗೆ ಚೆನ್ನಾಗಿ ಬೆರೆಯುವಂತೆ ಮಿಕ್ಸ್ ಮಾಡಬೇಕು. ಹಿಟ್ಟು ಉಂಡೆ ಕಟ್ಟುವಷ್ಟು ಹದ ಆಗಬೇಕು.
ಈಗ ಗಟ್ಟಿಯಾಗಿ ಒತ್ತಿಕೊಳ್ಳುತ್ತಾ ಉಂಡೆ ಕಟ್ಟಿಕೊಳ್ಳಲು ಮುಂದಾಗಿ. ಚೆನ್ನಾಗಿ ಗಟ್ಟಿಯಾಗಿ ಒತ್ತಿ ಗೆರೆಗಳು, ಒಡಕು ಇಲ್ಲದಂತೆ ಉಂಡೆ ಕಟ್ಟಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಹೆಸರು ಕಾಳಿನ ಉಂಡೆ ರೆಡಿಯಾಗುತ್ತದೆ. ನೀವು ಸಹ ಈ ರೀತಿಯಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಹೆಸರು ಕಾಳಿನ ಉಂಡೆ ಕಟ್ಟಿ ನೋಡಿ.



Click it and Unblock the Notifications
